ಆರೋಗ್ಯ ಸಚಿವ ಸುಧಾಕರ್ ಅಹಂಕಾರದ ಮನುಷ್ಯ: ಸೋಮಶೇಖರ ರೆಡ್ಡಿ, ಬಿಜೆಪಿ ಶಾಸಕ
ಸುಧಾಕರ ಅವರ ಆಡಳಿತ ಕೆಟ್ಟದ್ದಾಗಿದೆ, ಅವರು ನಮ್ಮ ಪಕ್ಷದ ಶಾಸಕರ ಕೈಗೂ ಸಿಗೋದಿಲ್ಲ, ಅವರೊಬ್ಬ ಅಹಂಕಾರದ ಮನುಷ್ಯ ಎಂದು ರೆಡ್ಡಿ ಹೇಳಿದರು.
ಬಳ್ಳಾರಿ ವಿಮ್ಸ್ ದುರಂತಕ್ಕೆ ಸಂಬಂಧಿಸಿದಂತೆ ವಿರೋಧ ಪಕ್ಷದಿಂದ ತೀವ್ರ ಟೀಕೆಗೆ ಗುರಿಯಾಗಬೇಕಾಗುತ್ತದೆ, ಅದನ್ನು ತಪ್ಪಿಸಿಕೊಳ್ಳಲೆಂದೇ ಆರೋಗ್ಯ ಸಚಿವ ಕೆ ಸುಧಾಕರ್ (K Sudhakar) ಅವರು ವಿಧಾನಸಭಾ ಅಧಿವೇಶನದಲ್ಲಿ ಭಾಗವಹಿಸುತ್ತಿಲ್ಲ ಎಂಬ ಚರ್ಚೆ ನಡೆದಿರುವಂತೆಯೇ ಅವರ ಪಕ್ಷದ ಶಾಸಕರೇ ಆಗಿರುವ ಗಾಲಿ ಸೋಮಶೇಖರ್ ರೆಡ್ಡಿ (G Somashekhar Reddy) ಸಚಿವರನ್ನು ತೀವ್ರ ತರಾಟೆಗೆ ತೆಗೆದುಕೊಂಡರು. ಸುಧಾಕರ ಅವರ ಆಡಳಿತ ಕೆಟ್ಟದ್ದಾಗಿದೆ, ಅವರು ನಮ್ಮ ಪಕ್ಷದ ಶಾಸಕರ ಕೈಗೂ ಸಿಗೋದಿಲ್ಲ, ಅವರೊಬ್ಬ ಅಹಂಕಾರದ (Egoistic) ಮನುಷ್ಯ ಎಂದು ರೆಡ್ಡಿ ಹೇಳಿದರು.
Latest Videos