Prashanth Sambargi: ನಿಜವಾದ ಹೆಸರು ಮುಚ್ಚಿಟ್ಟಿದ್ದಾರಾ ಗುರೂಜಿ? ‘ಸತ್ಯ ಬಯಲು ಮಾಡ್ತೀನಿ’ ಎಂದ ಪ್ರಶಾಂತ್​ ಸಂಬರಗಿ

BBK9: ‘ಸರ್ಕಾರದ ದಾಖಲೆಯಲ್ಲಿ ನಿಮ್ಮ ಹೆಸರು ಆರ್ಯವರ್ಧನ್​ ಅಂತ ಇಲ್ಲ. ನಿಜವಾದ ಹೆಸರು ಬೇರೆ ಇದೆ’ ಎಂದು ಪ್ರಶಾಂತ್ ಸಂಬರಗಿ ಹೇಳಿದ್ದಾರೆ.

Prashanth Sambargi: ನಿಜವಾದ ಹೆಸರು ಮುಚ್ಚಿಟ್ಟಿದ್ದಾರಾ ಗುರೂಜಿ? ‘ಸತ್ಯ ಬಯಲು ಮಾಡ್ತೀನಿ’ ಎಂದ ಪ್ರಶಾಂತ್​ ಸಂಬರಗಿ
ಪ್ರಶಾಂತ್ ಸಂಬರ್ಗಿ, ಆರ್ಯವರ್ಧನ್ ಗುರೂಜಿ
Follow us
TV9 Web
| Updated By: ಮದನ್​ ಕುಮಾರ್​

Updated on: Sep 25, 2022 | 10:22 PM

ಬಿಗ್​ ಬಾಸ್​ ಮನೆಯಲ್ಲಿ ಮೊದಲ ದಿನವೇ ಜಗಳ ನಡೆದಿದೆ. ಇದೆಲ್ಲ ದೊಡ್ಮನೆಯಲ್ಲಿ ಕಾಮನ್​. ಒಬ್ಬರನ್ನು ಇನ್ನೊಬ್ಬರು ಟಾರ್ಗೆಟ್​ ಮಾಡುವುದು ತೀರಾ ಸಹಜ. ಆದರೆ ಅದೆಲ್ಲವೂ ಬಿಗ್​ ಬಾಸ್​ ಮನೆಯೊಳಗಿನ ವಿಷಯಕ್ಕೆ ಸೀಮಿತವಾಗಿದ್ದರೆ ಚೆನ್ನ. ಆದರೆ ಪ್ರಶಾಂತ್​ ಸಂಬರ್ಗಿ (Prashanth Sambargi) ಅವರು ಪ್ರತಿಸ್ಪರ್ಧಿಗಳನ್ನು ಪರ್ಸನಲ್ ಆಗಿ ಟಾರ್ಗೆಟ್​ ಮಾಡುತ್ತಾರೆ. ಕಳೆದ ಸೀಸನ್​ನಲ್ಲಿಯೂ ಅವರು ಇದೇ ರೀತಿ ವರ್ತಿಸಿದ್ದರು. ಈಗ ‘ಬಿಗ್​ ಬಾಸ್​ ಕನ್ನಡ ಸೀಸನ್​ 9’ (Bigg Boss Kannada Season 9) ಆರಂಭ ಆಗಿದ್ದು, ಆರ್ಯರ್ವಧನ್​ ಗುರೂಜಿ (Aryavardhan Guruji) ಬಗ್ಗೆ ಪ್ರಶಾಂತ್​ ಸಂಬರ್ಗಿ ಮಾತನಾಡಿದ್ದಾರೆ. ಅವರ ಪ್ರಕಾರ ಗುರೂಜಿಯ ನಿಜವಾದ ಹೆಸರು ಆರ್ಯವರ್ಧನ್​ ಅಲ್ಲವೇ ಅಲ್ಲವಂತೆ!

ಬಿಗ್​ ಬಾಸ್​ ಮನೆಗೆ ಬರುವುದಕ್ಕೂ ಮುನ್ನ ಸಂಖ್ಯಾಶಾಸ್ತ್ರ ಹೇಳುವ ಮೂಲಕ ಆರ್ಯವರ್ಧನ್​ ಗುರೂಜಿ ಫೇಮಸ್​ ಆಗಿದ್ದರು. ಕೆಲವೊಮ್ಮೆ ಟ್ರೋಲ್​ ಆಗಿದ್ದು ಕೂಡ ಉಂಟು. ‘ಬಿಗ್​ ಬಾಸ್​ ಕನ್ನಡ ಒಟಿಟಿ’ ಶೋ ಮೂಲಕ ಅವರ ಜನಪ್ರಿಯತೆ ಹೆಚ್ಚಿತು. ಈಗ ಅವರು ಟಿವಿ ಸೀಸನ್​ಗೂ ಕಾಲಿಟ್ಟಿರುವುದು ಅವರ ಅಭಿಮಾನಿಗಳಿಗೆ ಖುಷಿ ನೀಡಿದೆ. ಅವರನ್ನು ಮೊದಲ ದಿನವೇ ಪ್ರಶಾಂತ್ ಸಂಬರ್ಗಿ ಟಾರ್ಗೆಟ್​ ಮಾಡಿದ್ದಾರೆ.

ಮಾತಿನ ಮಧ್ಯದಲ್ಲಿ ಸಂಬರ್ಗಿ ಎನ್ನುವ ಬದಲು ಸಂಪಗಿ ಎಂದರು ಆರ್ಯವರ್ಧನ್​. ಅಲ್ಲಿಂದ ಹೊಸ ಚರ್ಚೆಯೇ ಶುರುವಾಯಿತು. ‘ಹಾಗಾದ್ರೆ ನಿಮ್ಮ ನಿಜವಾದ ಹೆಸರು ಏನು ಅಂತ ನಾನು ಹೇಳ್ಲಾ? ನೀವು ವಿಷ್ಣುವರ್ಧನ್​ ರೀತಿ ವರ್ಧನ್​ ಅಂತ ಸೇರಿಸಿಕೊಂಡಿದ್ದೀರಿ. ಸರ್ಕಾರದ ದಾಖಲೆಯಲ್ಲಿ ನಿಮ್ಮ ಹೆಸರು ಆರ್ಯವರ್ಧನ್​ ಅಂತ ಇಲ್ಲ. ನಿಜವಾದ ಹೆಸರು ಏನು ಅನ್ನೋದನ್ನು ಸುದೀಪ್​ ಎದುರು ಹೇಳ್ತೀನಿ’ ಎಂದಿದ್ದಾರೆ ಪ್ರಶಾಂತ್​ ಸಂಬರ್ಗಿ. ಈ ವಿಚಾರದಲ್ಲಿ ಚರ್ಚೆ ಮುಂದುವರಿಯಿತು. ಆಗ ತಮ್ಮ ಹೆಸರು ಸುಬ್ರಹ್ಮಣ್ಯ ಎಂದು ಆರ್ಯವರ್ಧನ್​ ಗುರೂಜಿ ಹೇಳಿದರು.

ಇದನ್ನೂ ಓದಿ
Image
‘ಬಿಗ್ ಬಾಸ್ ಕನ್ನಡ ಸೀಸನ್ 9’ ಸೇರಿದ 18 ಸ್ಪರ್ಧಿಗಳು ಇವರೇ ನೋಡಿ; ಇಲ್ಲಿದೆ ಫೋಟೋ ಹಾಗೂ ವಿವರ
Image
ಬಿಗ್ ಬಾಸ್​ ಮನೆಗೆ ಎಂಟ್ರಿ ಕೊಟ್ಟ ಬೈಕ್ ರೇಸರ್ ಐಶ್ವರ್ಯಾ, ‘ಮಂಗಳಗೌರಿ ಮದುವೆ’ ಖ್ಯಾತಿಯ ಕಾವ್ಯಶ್ರೀ
Image
ಬಿಗ್ ಬಾಸ್​ಗೆ ಎಂಟ್ರಿ ಕೊಟ್ಟ ನೇಹಾ ಗೌಡ ಹಾಗೂ ವಿನೋದ್​; ಇವರ ವಿಶೇಷತೆಗಳೇನು?
Image
ಬಿಗ್ ಬಾಸ್ ಮನೆ ಸೇರಿದ ಒಟಿಟಿ ಸ್ಪರ್ಧಿಗಳು; ಇವರಿಗಿರುವ ಸವಾಲುಗಳು ಒಂದೆರಡಲ್ಲ

ಮೊದಲ ದಿನವೇ ಬಿಗ್​ ಬಾಸ್​ನಲ್ಲಿ ನಾಮಿನೇಷನ್​ ಪ್ರಕ್ರಿಯೆ ಆರಂಭ ಆಗಿದೆ. ಪ್ರವೀಣರು ಮತ್ತು ನವೀನರು ಜೋಡಿಯಾಗಿ ಆಟ ಆಡಬೇಕಿದೆ. ನಾಮಿನೇಷನ್​ ಪ್ರಕ್ರಿಯೆ ಕೂಡ ಜೋಡಿಯಾಗಿಯೇ ನಡೆದಿದೆ. 18 ಜನರು ಸದ್ಯ ಬಿಗ್​ ಬಾಸ್​ ಮನೆಯಲ್ಲಿ ಇದ್ದಾರೆ. ಸುಮಾರು ನೂರು ದಿನಗಳ ಕಾಲ ನಡೆಯುವ ಈ ಶೋನಲ್ಲಿ ಕೊನೆವರೆಗೂ ಉಳಿದುಕೊಳ್ಳಬೇಕು ಎಂಬ ಆಸೆಯೊಂದಿಗೆ ಎಲ್ಲರೂ ಪೈಪೋಟಿ ಆರಂಭಿಸಿದ್ದಾರೆ.

ಹೊಸಬರು ಮತ್ತು ಹಳಬರು ಇರುವ ಈ ಶೋ ಕನ್ನಡ ಕಿರುತೆರೆ ಪ್ರೇಕ್ಷಕರಿಗೆ ಬೇರೆ ರೀತಿಯ ಫೀಲ್​ ನೀಡುತ್ತಿದೆ. ಮೊದಲ ವಾರ ಯಾರು ಎಲಿಮಿನೇಟ್​ ಆಗುತ್ತಾರೆ ಎಂಬ ಕೌತುಕ ಮೂಡಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ