Bigg Boss: ಅ.1ರಿಂದ ಬದಲಾಗಲಿದೆ ‘ಬಿಗ್​ ಬಾಸ್​’ ರಿಯಾಲಿಟಿ ಶೋ ಸ್ವರೂಪ; ಏನಿದು ಹೊಸ ಸುದ್ದಿ?

Bigg Boss 16: ಬಿಗ್​ ಬಾಸ್​ ಮನೆಯಲ್ಲಿ ಹೊಸ ಪ್ರಯೋಗಗಳನ್ನು ಮಾಡಲಾಗುತ್ತದೆ. ಈ ಬಾರಿ ಇನ್ನಷ್ಟು ಹೊಸತನ ಪರಿಚಯಿಸಲಾಗುತ್ತಿದೆ. ಇದರಿಂದ ವೀಕ್ಷಕರ ಕೌತುಕ ಹೆಚ್ಚಿದೆ.

Bigg Boss: ಅ.1ರಿಂದ ಬದಲಾಗಲಿದೆ ‘ಬಿಗ್​ ಬಾಸ್​’ ರಿಯಾಲಿಟಿ ಶೋ ಸ್ವರೂಪ; ಏನಿದು ಹೊಸ ಸುದ್ದಿ?
ಬಿಗ್ ಬಾಸ್
Follow us
TV9 Web
| Updated By: ಮದನ್​ ಕುಮಾರ್​

Updated on:Sep 26, 2022 | 8:15 AM

ಕಿರುತೆರೆ ಪ್ರೇಕ್ಷಕರಿಗೆ ಬಿಗ್​ ಬಾಸ್​ (Bigg Boss) ರಿಯಾಲಿಟಿ ಶೋ ಮೇಲೆ ಎಲ್ಲಿಲ್ಲದ ಆಸಕ್ತಿ. ಯಾಕೆಂದರೆ ಬೇರೆಲ್ಲ ಶೋಗಗಳಿಂತಲೂ ಇದು ಸಖತ್​ ಭಿನ್ನವಾಗಿರುತ್ತದೆ. ಹಿಂದಿ, ಕನ್ನಡ, ತಮಿಳು ಮುಂತಾದ ಭಾಷೆಗಳಲ್ಲಿ ಬಿಗ್​ ಬಾಸ್​ ಶೋ ಯಶಸ್ವಿಯಾಗಿ ನಡೆದುಕೊಂಡು ಬರುತ್ತಿದೆ. ಹಿಂದಿಯಲ್ಲಿ ಸಲ್ಮಾನ್​ ಖಾನ್​ (Salman Khan), ಕನ್ನಡದಲ್ಲಿ ಕಿಚ್ಚ ಸುದೀಪ್​, ತೆಲುಗಿನಲ್ಲಿ ಅಕ್ಕಿನೇನಿ ನಾಗಾರ್ಜುನ, ತಮಿಳಿನಲ್ಲಿ ಕಮಲ್​ ಹಾಸನ್​.. ಹೀಗೆ ಘಟಾನುಘಟಿ ಸ್ಟಾರ್​ ಹೀರೋಗಳು ಈ ಕಾರ್ಯಕ್ರಮದ ನಿರೂಪಣೆ ಮಾಡುತ್ತಿದ್ದಾರೆ. ಪ್ರತಿ ಸೀಸನ್​ನಲ್ಲೂ ಒಂದಷ್ಟು ಹೊಸತನವನ್ನು ಪರಿಚಯಿಸಲಾಗುತ್ತಿದೆ. ಈ ಬಾರಿ ‘ಹಿಂದಿ ಬಿಗ್​ ಬಾಸ್​ 16’ (Bigg Boss 16) ತುಂಬ ಡಿಫರೆಂಟ್​ ಆಗಿರಲಿದೆ. ಇದರ ಸ್ವರೂಪವೇ ಬದಲಾಗಲಿದೆ ಎಂಬುದಕ್ಕೆ ಹೊಸ ಪ್ರೋಮೋ ಮೂಲಕ ಸುಳಿವು ನೀಡಲಾಗಿದೆ.

ಹಲವು ವರ್ಷಗಳಿಂದ ಸಲ್ಮಾನ್​ ಖಾನ್​ ಅವರು ಹಿಂದಿ ಬಿಗ್​ ಬಾಸ್​ ಶೋ ನಡೆಸಿಕೊಂಡು ಬರುತ್ತಿದ್ದಾರೆ. ಪ್ರತಿ ಎಪಿಸೋಡ್​ಗೆ ಅವರು ಕೋಟ್ಯಂತರ ರೂಪಾಯಿ ಸಂಭಾವನೆ ಪಡೆಯುತ್ತಾರೆ. ಇನ್ನೇನು ಕೆಲವೇ ದಿನಗಳಲ್ಲಿ ಬಿಗ್​ ಬಾಸ್​ 16ನೇ ಸೀಸನ್​ ಶುರುವಾಗಲಿದೆ. ಕಲರ್ಸ್​ ಟಿವಿಯಲ್ಲಿ ಈ ಕಾರ್ಯಕ್ರಮ ಪ್ರಸಾರ ಆಗಲಿದೆ. ಈ ವರ್ಷದ ಕಾರ್ಯಕ್ರಮ ಪೂರ್ತಿ ಭಿನ್ನವಾಗಿರಲಿದೆ ಎಂದು ಸಲ್ಮಾನ್​ ಖಾನ್​ ಹೇಳಿದ್ದಾರೆ.

ಇದನ್ನೂ ಓದಿ
Image
BBK9: ಮೊದಲ ವಾರವೇ ಬಿಗ್​ ಬಾಸ್​ ಮನೆಯಲ್ಲಿ 12 ಮಂದಿ ನಾಮಿನೇಟ್​; ಶುರುವಾಯ್ತು ಢವಢವ
Image
BBK9: ಮೊದಲ ದಿನವೇ ಬಿಗ್​ ಬಾಸ್​ ಮನೆಯಲ್ಲಿ ದೊಡ್ಡ ಫೈಟ್​; ಕೂಗಾಡಿದ ಪ್ರಶಾಂತ್​ ಸಂಬರ್ಗಿ
Image
Bigg Boss OTT: ‘ಬಿಗ್​ ಬಾಸ್​ ಒಟಿಟಿ’ ಲಾಭವೋ ನಷ್ಟವೋ? ಇನ್ನೊಂದು ಸೀಸನ್​ ಬರೋದು ಅನುಮಾನ
Image
Bigg Boss 16: ಬಿಗ್​ ಬಾಸ್​ ನಿರೂಪಣೆಗೆ ಸಲ್ಮಾನ್​ ಖಾನ್​ ಕೇಳಿದ್ದು 1000 ಕೋಟಿ ರೂ. ಸಂಬಳ? ಆದರೆ ಆಗಿದ್ದೇ ಬೇರೆ

ಹೊಸ ಪ್ರೋಮೋದಲ್ಲಿ ಸಲ್ಮಾನ್​ ಖಾನ್​ ಅವರು ಮೊಗ್ಯಾಂಬೋ ಅವತಾರ ತಾಳಿದ್ದಾರೆ. ‘ಮೊಗ್ಯಾಂಬೋಗೆ ಇನ್ಮುಂದೆ ಖುಷಿ ಆಗುವುದಿಲ್ಲ. ಯಾಕೆಂದರೆ ಇನ್ಮುಂದೆ ಎಲ್ಲರಿಗೂ ಭಯ ಆಗಲಿದೆ. ಆ ಬಾರಿ ಆಟ ಬದಲಾಗಲಿದೆ. ಈಗ ಸ್ವತಃ ಬಿಗ್​ ಬಾಸ್​ ಆಟ ಆಡ್ತಾರೆ’ ಎಂದು ಸಲ್ಮಾನ್​ ಖಾನ್​ ಹೇಳಿರುವ ಪ್ರೋಮೋ ಸಖತ್​ ವೈರಲ್​ ಆಗಿದೆ. ಅಭಿಮಾನಿಗಳು ಬಗೆಬಗೆಯಲ್ಲಿ ಕಮೆಂಟ್​ ಮಾಡುತ್ತಿದ್ದಾರೆ. ಅಕ್ಟೋಬರ್​ 1ರಂದು ಈ ಶೋ ಪ್ರಸಾರ ಆರಂಭಿಸಲಿದೆ.

ಕಿರುತೆರೆ, ಸಿನಿಮಾ, ಸೋಶಿಯಲ್​ ಮೀಡಿಯಾ ಮುಂತಾದ ಕ್ಷೇತ್ರಗಳಿಂದ ವಿವಿಧ ಬಗೆಯ ವ್ಯಕ್ತಿತ್ವ ಇರುವ ಸ್ಪರ್ಧಿಗಳನ್ನು ಆಯ್ಕೆ ಮಾಡಲಾಗುತ್ತದೆ. ಈ ಬಾರಿ ಯಾರೆಲ್ಲ ದೊಡ್ಮನೆಗೆ ಬರಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ. ಸಲ್ಮಾನ್​ ಖಾನ್​ ಅವರು ಸಿನಿಮಾ ಕೆಲಸಗಳ ನಡುವೆ ಬಿಗ್​ ಬಾಸ್​ ನಿರೂಪಣೆಗೆ ಸಮಯ ಮೀಸಲಿಡುತ್ತಾರೆ. ಅವರನ್ನು ನೋಡಲು ಪ್ರತಿ ವೀಕೆಂಡ್​ನಲ್ಲಿ ಅಭಿಮಾನಿಗಳು ಟಿವಿ ಮುಂದೆ ಹಾಜರಾಗುತ್ತಾರೆ.

ಕನ್ನಡದಲ್ಲಿ ಬಿಗ್​ ಬಾಸ್​ 9ನೇ ಸೀಸನ್​ ಶುರುವಾಗಿದೆ. ಒಟ್ಟು 18 ಸ್ಪರ್ಧಿಗಳ ನಡುವೆ ಪೈಪೋಟಿ ಆರಂಭ ಆಗಿದೆ. ಎಂದಿನ ಜೋಶ್​ನಲ್ಲಿ ಕಿಚ್ಚ ಸುದೀಪ್​ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದಾರೆ. ಮೊದಲ ವಾರ ಒಟ್ಟು 12 ಮಂದಿ ನಾಮಿನೇಟ್​ ಆಗಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 8:15 am, Mon, 26 September 22

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ