Bigg Boss 16: ಬಿಗ್​ ಬಾಸ್​ ನಿರೂಪಣೆಗೆ ಸಲ್ಮಾನ್​ ಖಾನ್​ ಕೇಳಿದ್ದು 1000 ಕೋಟಿ ರೂ. ಸಂಬಳ? ಆದರೆ ಆಗಿದ್ದೇ ಬೇರೆ

Salman Khan Remuneration: ಸದ್ಯದ ಮಾರುಕಟ್ಟೆಯ ಸ್ಥಿತಿಗತಿ ಆಧರಿಸಿ ಸಂಭಾವನೆ ಮೊತ್ತವನ್ನು ವಾಹಿನಿಯವರು ನಿರ್ಧರಿಸಿದ್ದಾರೆ. ಆ ಮೊತ್ತವನ್ನು ಒಪ್ಪಿಕೊಂಡು ‘ಬಿಗ್​ ಬಾಸ್​’ ಶೋ ನಡೆಸಿಕೊಡಲು ಸಲ್ಮಾನ್​ ಖಾನ್​ ಒಪ್ಪಿಕೊಂಡಿದ್ದಾರೆ ಎಂದು ವರದಿ ಆಗಿದೆ.

Bigg Boss 16: ಬಿಗ್​ ಬಾಸ್​ ನಿರೂಪಣೆಗೆ ಸಲ್ಮಾನ್​ ಖಾನ್​ ಕೇಳಿದ್ದು 1000 ಕೋಟಿ ರೂ. ಸಂಬಳ? ಆದರೆ ಆಗಿದ್ದೇ ಬೇರೆ
ಸಲ್ಮಾನ್ ಖಾನ್
Follow us
TV9 Web
| Updated By: ಮದನ್​ ಕುಮಾರ್​

Updated on: Sep 20, 2022 | 3:07 PM

ನಟ ಸಲ್ಮಾನ್​ ಖಾನ್​ (Salman Khan) ಅವರು ಸಿನಿಮಾಗಳಲ್ಲಿ ಅಭಿನಯಿಸುವುದರ ಜೊತೆಗೆ ನಿರೂಪಕನಾಗಿಯೂ ಡಿಮ್ಯಾಂಡ್​ ಸೃಷ್ಟಿಸಿಕೊಂಡಿದ್ದಾರೆ. ಅವರು ಬಿಗ್​ ಬಾಸ್​ ನಿರೂಪಣೆ ಮಾಡುವ ಶೈಲಿಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಅನೇಕ ಸೀಸನ್​ಗಳಿಂದ ಅವರೇ ನಿರೂಪಣೆಯ ಜವಾಬ್ದಾರಿ ವಹಿಸಿಕೊಂಡು ಬಂದಿದ್ದಾರೆ. ಇನ್ನೇನು ಕೆಲವೇ ದಿನಗಳಲ್ಲಿ ಹಿಂದಿ ಬಿಗ್​ ಬಾಸ್​ ಹೊಸ ಸೀಸನ್​ (Bigg Boss 16) ಆರಂಭ ಆಗಲಿದೆ. ಈ ಹೊಸ ಆವೃತ್ತಿಗಾಗಿ ಸಲ್ಮಾನ್​ ಖಾನ್​ ಅವರು ಬರೋಬ್ಬರಿ 1000 ಕೋಟಿ ರೂಪಾಯಿ ಸಂಭಾವನೆ (Salman Khan Remuneration) ಕೇಳಿದ್ದಾರೆ ಎಂಬ ಸುದ್ದಿ ಹರಡಿದೆ. ಆದರೆ ವಾಹಿನಿಯವರು ಅಷ್ಟೆಲ್ಲ ಕೊಡಲು ಸಾಧ್ಯವಿಲ್ಲ ಅಂತ ಹೇಳಿದ್ದಾರೆ ಎನ್ನಲಾಗಿದೆ. ಈ ಕುರಿತು ‘ಡಿಎನ್​ಎ’ ವರದಿ ಮಾಡಿದೆ.

ಮೂಲಗಳ ಪ್ರಕಾರ, ಕಳೆದ ಸೀಸನ್​ನಲ್ಲಿ ಸಲ್ಮಾನ್​ ಖಾನ್​ ಅವರು ಬಿಗ್​ ಬಾಸ್​ ನಿರೂಪಣೆಗೆ 350 ಕೋಟಿ ರೂಪಾಯಿ ಚಾರ್ಜ್​ ಮಾಡಿದ್ದರು. ಈ ವರ್ಷ ಅದನ್ನು ಮೂರು ಪಟ್ಟು ಹೆಚ್ಚು ಮಾಡುವಂತೆ ಬೇಡಿಕೆ ಇಟ್ಟಿದ್ದಾರೆ ಎಂಬುದು ಗಾಸಿಪ್​ ಮಂದಿಯ ಮಾತು. ಆದರೆ ‘ಕಲರ್ಸ್​’ ವಾಹಿನಿಯವರು ಸಾವಿರ ಕೋಟಿ ರೂಪಾಯಿ ಸಂಭಾವನೆ ನೀಡಿದರೆ ನಷ್ಟ ಅನುಭವಿಸಬೇಕಾಗುತ್ತದೆ ಎಂಬ ಕಾರಣದಿಂದ ಅಷ್ಟು ಸಂಬಳ ನೀಡಲು ಸಾಧ್ಯವಿಲ್ಲ ಎಂದಿದ್ದಾರಂತೆ.

ವಾಹಿನಿಯವರು ನೋ ಎಂದಮೇಲೆ ಸಲ್ಮಾನ್​ ಖಾನ್​ ಅವರ ಮುಂದಿನ ನಿರ್ಧಾರ ಏನು? ಆ ಬಗ್ಗೆಯೂ ಗುಸುಗುಸು ಕೇಳಿಬಂದಿದೆ. ಸದ್ಯದ ಮಾರುಕಟ್ಟೆಯ ಸ್ಥಿತಿಗತಿ ಆಧರಿಸಿ ಸಂಭಾವನೆಯಲ್ಲಿ ಇನ್ನಷ್ಟು ಕಡಿತಗೊಳಿಸಲು ವಾಹಿನಿಯವರು ನಿರ್ಧರಿಸಿದ್ದಾರೆ. ಹಾಗಾಗಿ ಈ ಹಿಂದಿನ ಸೀಸನ್​ಗಿಂತಲೂ ಕಡಿಮೆ ಸಂಭಾವನೆ ಪಡೆದುಕೊಂಡು ಶೋ ನಡೆಸಿಕೊಡಲು ಸಲ್ಲು ಒಪ್ಪಿಕೊಂಡಿದ್ದಾರೆ ಎಂದು ವರದಿ ಆಗಿದೆ.

ಇದನ್ನೂ ಓದಿ
Image
Yash: ಯಶ್​ ಗೆಟಪ್​ ಕಾಪಿ ಮಾಡಿದ್ರಾ ಸಲ್ಮಾನ್​ ಖಾನ್​; ಬಿ-ಟೌನ್​ ತುಂಬ ಹಬ್ಬಿದೆ ಈ ಮಾತು
Image
Salman Khan: ಗನ್​ ಇಟ್ಟುಕೊಳ್ಳಲು ಸಲ್ಮಾನ್​ ಖಾನ್​ಗೆ ಸಿಕ್ತು ಲೈಸೆನ್ಸ್​; ಕೊಲೆ ಬೆದರಿಕೆ ಬೆನ್ನಲ್ಲೇ ವಿಶೇಷ ಅನುಮತಿ
Image
Swara Bhaskar: ಸಲ್ಮಾನ್​ ಖಾನ್​ ಬಳಿಕ ನಟಿ ಸ್ವರಾ ಭಾಸ್ಕರ್​ಗೆ ಕೊಲೆ ಬೆದರಿಕೆ; ಸಾವರ್ಕರ್​ ಬಗ್ಗೆ ಮಾತಾಡಿದ್ದಕ್ಕೆ ಆಕ್ರೋಶ
Image
ಅವಕಾಶ ಇಲ್ಲದಾಗ 2 ಸಾವಿರ ರೂ. ಕೊಟ್ಟು ಸುಳ್ಳು ಸುದ್ದಿ ಮಾಡಿಸಿದ್ದ ಸಲ್ಮಾನ್​ ಖಾನ್​; ಒಪ್ಪಿಕೊಂಡು ಕಣ್ಣೀರಿಟ್ಟ ನಟ

ಈ ಸಂಖ್ಯೆಗಳ ಬಗ್ಗೆ ಎಲ್ಲಿಯೂ ಅಧಿಕೃತ ಹೇಳಿಕೆ ಪ್ರಕಟ ಆಗಿಲ್ಲ. ಹೊಸ ಸೀಸನ್​ ಯಾವಾಗ ಆರಂಭ ಆಗಲಿದೆ ಎಂಬುದು ಕೂಡ ತಿಳಿದುಬಂದಿಲ್ಲ. ಪ್ರೇಕ್ಷಕರ ಊಹೆಯ ಪ್ರಕಾರ, ಅಕ್ಟೋಬರ್​ 1ರಂದು ‘ಬಿಗ್​ ಬಾಸ್​ ಹಿಂದಿ ಸೀಸನ್​ 16’ ಪ್ರಾರಂಭ ಆಗಲಿದೆ. ಪ್ರಸ್ತುತ ‘ಕಲರ್ಸ್​’ ವಾಹಿನಿಯಲ್ಲಿ ‘ಖತ್ರೋಂಕಿ ಕಿಲಾಡಿ 12’ ಶೋ ಪ್ರಸಾರ ಆಗುತ್ತಿದೆ. ಆ ಕಾರ್ಯಕ್ರಮ ಸೆಪ್ಟೆಂಬರ್​ 25ಕ್ಕೆ ಅಂತ್ಯವಾಗಲಿದೆ. ಆ ನಂತರವೇ ಬಿಗ್​ ಬಾಸ್​ ಹೊಸ ಸೀಸನ್​ ಶುರುವಾಲಿದೆ.

ಕಳೆದ ವರ್ಷ ಹಿಂದಿಯಲ್ಲಿ ‘ಬಿಗ್​ ಬಾಸ್​ ಒಟಿಟಿ’ ಮೊದಲ ಸೀಸನ್​ ಪ್ರಸಾರ ಆಯಿತು. ಅದನ್ನು ಕರಣ್​ ಜೋಹರ್ ನಿರೂಪಣೆ ಮಾಡಿದ್ದರು. ಆ ಕಾರ್ಯಕ್ರಮದಿಂದ ನಿರೀಕ್ಷಿತ ಮಟ್ಟದಲ್ಲಿ ಆದಾಯ ಬಂದಿಲ್ಲ ಎಂಬ ಮಾತಿದೆ. ಆ ಬಗ್ಗೆ ನಿರೀಕ್ಷೆ ಇಟ್ಟುಕೊಂಡಿದ್ದ ಪ್ರೇಕ್ಷಕರಿಗೆ ನಿರಾಸೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ