Yash: ಯಶ್​ ಗೆಟಪ್​ ಕಾಪಿ ಮಾಡಿದ್ರಾ ಸಲ್ಮಾನ್​ ಖಾನ್​; ಬಿ-ಟೌನ್​ ತುಂಬ ಹಬ್ಬಿದೆ ಈ ಮಾತು

Salman Khan | Kisi Ka Bhai Kisi Ki Jaan: ‘ಕಿಸಿ ಕ ಭಾಯ್​ ಕಿಸಿ ಕಿ ಜಾನ್​’ ಚಿತ್ರದ ಟೀಸರ್​ ವೈರಲ್​ ಆಗಿದೆ. ಅದರಲ್ಲಿ ಸಲ್ಮಾನ್​ ಖಾನ್​ ಲುಕ್​ ನೋಡಿದ ಬಹುತೇಕರಿಗೆ ಯಶ್​ ಹೋಲಿಕೆ ಕಾಣಿಸಿದೆ.

Yash: ಯಶ್​ ಗೆಟಪ್​ ಕಾಪಿ ಮಾಡಿದ್ರಾ ಸಲ್ಮಾನ್​ ಖಾನ್​; ಬಿ-ಟೌನ್​ ತುಂಬ ಹಬ್ಬಿದೆ ಈ ಮಾತು
ಯಶ್, ಸಲ್ಮಾನ್ ಖಾನ್
Follow us
TV9 Web
| Updated By: ಮದನ್​ ಕುಮಾರ್​

Updated on:Sep 13, 2022 | 9:28 AM

ನಟ ಯಶ್​ (Yash) ಅವರು ಅನೇಕರಿಗೆ ಮಾದರಿ ಆಗಿದ್ದಾರೆ. ಯಾವುದೇ ಸಿನಿಮಾ ಕುಟುಂಬದ ಹಿನ್ನೆಲೆ ಇಲ್ಲದೇ ಚಿತ್ರರಂಗಕ್ಕೆ ಕಾಲಿಟ್ಟ ಅವರು ಇಂದು ನಂಬರ್​ ಒನ್​ ಸ್ಟಾರ್​ ಆಗಿ ಮೆರೆಯುತ್ತಿದ್ದಾರೆ. ಎಷ್ಟೋ ಯುವಕರಿಗೆ ಯಶ್​ ಸ್ಫೂರ್ತಿ. ಇನ್ನು, ‘ರಾಕಿಂಗ್​ ಸ್ಟಾರ್​’ ಮಾಡುವ ಕೆಲಸಗಳು ಇತರೆ ಸೆಲೆಬ್ರಿಟಿಗಳಿಗೂ ಸ್ಫೂರ್ತಿ ಆಗುತ್ತಿದೆ ಎಂಬುದು ವಿಶೇಷ. ಅಚ್ಚರಿ ಎಂದರೆ, ಬಾಲಿವುಡ್​ನ ಸ್ಟಾರ್​ ನಟ ಸಲ್ಮಾನ್​ ಖಾನ್​ (Salman Khan) ಕೂಡ ಯಶ್​ ಅವರ ಸ್ಟೈಲ್​ಗೆ ಮನಸೋತಂತಿದೆ. ಮುಂಬರುವ ‘ಕಿಸಿ ಕ ಭಾಯ್​ ಕಿಸಿ ಕಿ ಜಾನ್​’ (Kisi Ka Bhai Kisi Ki Jaan) ಚಿತ್ರದಲ್ಲಿ ಸಲ್ಮಾನ್ ಖಾನ್ ಅವರು ಯಶ್​ ರೀತಿ ಗೆಟಪ್​ ಧರಿಸುತ್ತಿದ್ದಾರೆ. ಹಾಗಂತ ಈ ಮಾತನ್ನು ಚಿತ್ರತಂಡದವರು ಹೇಳಿದ್ದಲ್ಲ. ಬದಲಿಗೆ, ಟೀಸರ್​ ನೋಡಿದ ಬಳಿಕ ಪ್ರೇಕ್ಷಕರು ಮತ್ತು ಬಿ-ಟೌನ್​ ವಲಯದಲ್ಲಿ ಈ ಬಗ್ಗೆ ಚರ್ಚೆ ಜೋರಾಗಿದೆ.

ಯಶ್​ ಅವರು ಭಾರತೀಯ ಚಿತ್ರರಂಗದಲ್ಲಿ ಟ್ರೆಂಡ್​ ಸೆಟ್ಟರ್​ ಆಗಿದ್ದಾರೆ. ‘ಕೆಜಿಎಫ್​’ ಚಿತ್ರ ಸೂಪರ್​ ಹಿಟ್​ ಆದ ಬಳಿಕ ಬೇರೆ ನಿರ್ಮಾಪಕರು ಮತ್ತು ನಟರು ಕೂಡ ಹೈ ಬಜೆಟ್​ ಪ್ಯಾನ್​ ಇಂಡಿಯಾ ಸಿನಿಮಾಗಳ ಬಗ್ಗೆ ಧೈರ್ಯ ತೋರಿಸುವಂತಾಯಿತು. ಅನೇಕ ಹೀರೋಗಳು ಯಶ್​ ರೀತಿ ಗಡ್ಡ ಬಿಟ್ಟುಕೊಂಡು ಕಾಣಿಸಿಕೊಳ್ಳಲು ಶುರುಮಾಡಿದರು. ಈಗ ಸಲ್ಮಾನ್​ ಖಾನ್​ ಅವರು ಉದ್ದ ಕೂದಲಿನ ಗೆಟಪ್​ಗೆ ಮರುಳಾಗಿದ್ದಾರೆ.

ಇದನ್ನೂ ಓದಿ
Image
ಬಾಲ್ಯ ಸ್ನೇಹಿತನ ಮದುವೆಗೆ ಪತ್ನಿ ಸಮೇತ ಬಂದು ಹರಸಿದ ಯಶ್​; ಸಲಾಂ ರಾಕಿ ಭಾಯ್​ ಎಂದ ಫ್ಯಾನ್ಸ್​
Image
ಗೋವಾ ಸಿಎಂ ಪ್ರಮೋದ್​ ಸಾವಂತ್​ ಭೇಟಿ ಮಾಡಿದ ಯಶ್​-ರಾಧಿಕಾ ಪಂಡಿತ್​; ಮುಂದಿನ ಸಿನಿಮಾ ಬಗ್ಗೆ​ ಕುತೂಹಲ
Image
‘ಕೆಜಿಎಫ್​ 2’ ಹಿಟ್​ ಆಗಿದ್ದಕ್ಕೆ ಕಬ್ಬಿನ ಹಾಲು ಟ್ರೀಟ್​ ಕೇಳಿದ ‘ಗೂಗ್ಲಿ’ ನಟಿ ಕೃತಿ ಕರಬಂಧ: ಯಶ್​ ಏನಂದ್ರು?
Image
‘ಕೆಜಿಎಫ್​ 2’ಗೆ ಕೆಟ್ಟ ವಿಮರ್ಶೆ ಮಾಡಿ, ಯಶ್​ ಬಗ್ಗೆ ವ್ಯಂಗ್ಯದ ಮಾತಾಡಿದ ‘ದೇಶದ್ರೋಹಿ’ ನಟ:​ ಸಿಡಿದೆದ್ದ ಫ್ಯಾನ್ಸ್​

ಸಲ್ಲು ನಟಿಸುತ್ತಿರುವ ‘ಕಿಸಿ ಕ ಭಾಯ್​ ಕಿಸಿ ಕಿ ಜಾನ್​’ ಚಿತ್ರದ ಟೀಸರ್​ ಇತ್ತೀಚೆಗೆ ಬಿಡುಗಡೆ ಆಯಿತು. ಅದರಲ್ಲಿ ಸಲ್ಮಾನ್​ ಖಾನ್​ ಲುಕ್​ ನೋಡಿದ ಬಹುತೇಕರಿಗೆ ಯಶ್​ ನೆನಪಾಗಿದೆ. ಸಲ್ಲು ಹೀಗೆ ಉದ್ದ ಕೂದಲಿನ ಗೆಟಪ್​ನಲ್ಲಿ ಕಾಣಿಸಿಕೊಳ್ಳಲು ಯಶ್​ ಅವರೇ ಸ್ಫೂರ್ತಿ ಎಂದು ಜನರು ಮಾತನಾಡಿಕೊಳ್ಳುತ್ತಿದ್ದಾರೆ. ಈ ಚಿತ್ರದ ಕಂಟೆಂಟ್​ ಕೂಡ ‘ಕೆಜಿಎಫ್​ ರೀತಿಯೇ ಇದ್ದರೆ ಉತ್ತಮ ಎಂದು ನೆಟ್ಟಿಗರು ಕಮೆಂಟ್​ ಮಾಡುತಿದ್ದಾರೆ.

‘ಕಿಸಿ ಕ ಭಾಯ್​ ಕಿಸಿ ಕಿ ಜಾನ್​’ ಚಿತ್ರದ ಮೇಕಿಂಗ್ ಕೂಡ ‘ಕೆಜಿಎಫ್​’ ಚಿತ್ರವನ್ನೇ ಹೋಲಬಹುದು. ಈ ಸಿನಿಮಾಗೆ ಹಿನ್ನೆಲೆ ಸಂಗೀತ ನೀಡುತ್ತಿರುವುದು ಕನ್ನಡದ ಪ್ರತಿಭೆ ರವಿ ಬಸ್ರೂರು ಎಂಬುದು ವಿಶೇಷ. ಟೀಸರ್​ನಲ್ಲಿ ಹಿನ್ನೆಲೆ ಸಂಗೀತ ಕೇಳಿ ಫ್ಯಾನ್ಸ್​ ಖುಷಿಪಟ್ಟಿದ್ದಾರೆ. ಅದ್ದೂರಿ ಬಜೆಟ್​ನಲ್ಲಿ ಈ ಚಿತ್ರ ಮೂಡಿಬರುತ್ತಿದೆ. ಸಲ್ಮಾನ್​ ಖಾನ್​ ಅವರಿಗೆ ಜೋಡಿಯಾಗಿ ಪೂಜಾ ಹೆಗ್ಡೆ ನಟಿಸುತ್ತಿದ್ದಾರೆ. ಸದ್ಯ ಸಲ್ಮಾನ್​ ಖಾನ್​ ಹಂಚಿಕೊಂಡಿರುವ ಟೀಸರ್​ ಸಖತ್​ ವೈರಲ್​ ಆಗಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 9:28 am, Tue, 13 September 22

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ