AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Yash: ಯಶ್​ ಹೀರೋ ಆಗಿ ಕಳೆಯಿತು 14 ವರ್ಷ; ‘ರಾಕಿಂಗ್​ ಸ್ಟಾರ್​’ ಪಾಲಿಗೆ ಜುಲೈ 18 ಸ್ಪೆಷಲ್​ ದಿನ

14 Years Of Yashism: ಚಿತ್ರರಂಗದಲ್ಲಿ ಹೀರೋ ಆಗಿ 14 ವರ್ಷ ಕಳೆಯುವುದರೊಳಗೆ ಯಶ್​ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಳ್ಳುವಂತೆ ಬೆಳೆದಿದ್ದಾರೆ. ಅನೇಕರಿಗೆ ಅವರು ಮಾದರಿ ಆಗಿದ್ದಾರೆ.

Yash: ಯಶ್​ ಹೀರೋ ಆಗಿ ಕಳೆಯಿತು 14 ವರ್ಷ; ‘ರಾಕಿಂಗ್​ ಸ್ಟಾರ್​’ ಪಾಲಿಗೆ ಜುಲೈ 18 ಸ್ಪೆಷಲ್​ ದಿನ
ರಾಧಿಕಾ ಪಂಡಿತ್, ಯಶ್
TV9 Web
| Updated By: ರಾಜೇಶ್ ದುಗ್ಗುಮನೆ|

Updated on:Jul 19, 2022 | 5:38 PM

Share

ನಟ ಯಶ್​ (Yash) ಅವರು ಇಂದು ಪ್ಯಾನ್​ ಇಂಡಿಯಾ ಸ್ಟಾರ್​ ಆಗಿ ಮೆರೆಯುತ್ತಿದ್ದಾರೆ. ಅವರ ಕಾಲ್​ಶೀಟ್​ ಪಡೆಯಲು ದೊಡ್ಡ ದೊಡ್ಡ ನಿರ್ಮಾಣ ಸಂಸ್ಥೆಗಳು ಕ್ಯೂನಲ್ಲಿ ನಿಂತಿವೆ. ‘ಕೆಜಿಎಫ್​: ಚಾಪ್ಟರ್​ 2’ (KGF Chapter 2) ಸಿನಿಮಾ ಬ್ಲಾಕ್​ಬಸ್ಟರ್​ ಹಿಟ್​ ಆದ ಬಳಿಕ ಯಶ್​ ಅವರ ಡಿಮ್ಯಾಂಡ್​ ಹೆಚ್ಚಿದೆ. ಭಾರತ ಮಾತ್ರವಲ್ಲದೇ ವಿದೇಶದಲ್ಲೂ ಅವರ ಹವಾ ಜೋರಾಗಿದೆ. ಆದರೆ 14 ವರ್ಷಗಳ ಹಿಂದೆ ಕಹಾನಿ ಹೀಗೆ ಇರಲಿಲ್ಲ. ಕನ್ನಡ ಚಿತ್ರರಂಗಕ್ಕೆ ಅವರು ಆಗತಾನೇ ಕಾಲಿಟ್ಟಿದ್ದರು. ಯಶ್​ ಹೀರೋ ಆಗಿ ನಟಿಸಿದ ಮೊದಲ ಸಿನಿಮಾ ‘ಮೊಗ್ಗಿನ ಮನಸು’ (Moggina Manasu) ತೆರೆಕಂಡು ಇಂದಿಗೆ (ಜುಲೈ 18) ಬರೋಬ್ಬರಿ 14 ವರ್ಷ ಕಳೆದಿದೆ. ಯಶ್​ ಪಾಲಿಗೆ ಈ ದಿನ ತುಂಬ ವಿಶೇಷ ಈ ದಿನವನ್ನು ‘ರಾಕಿಂಗ್​ ಸ್ಟಾರ್​’ ಅಭಿಮಾನಿಗಳು ಸೆಲೆಬ್ರೇಟ್​ ಮಾಡುತ್ತಿದ್ದಾರೆ.

ಕನ್ನಡ ಚಿತ್ರರಂಗದಲ್ಲಿ ಹಂತಹಂತವಾಗಿ ಬೆಳೆದು ಬಂದವರು ಯಶ್​. ಅನೇಕ ಕಲಾವಿದರಿಗೆ ಅವರೇ ಮಾದರಿ. ಮೊದಲು ಸೀರಿಯಲ್​ಗಳಲ್ಲಿ ನಟಿಸಿ, ನಂತರ ಚಿತ್ರರಂಗಕ್ಕೆ ಕಾಲಿಟ್ಟು, ಬಳಿಕ ಪ್ಯಾನ್​ ಇಂಡಿಯಾ ಹೀರೋ ಆಗಿ ಬೆಳೆದು ನಿಲ್ಲುವುದು ಎಂದರೆ ಸಣ್ಣ ಮಾತಲ್ಲ. ಸಿನಿಮಾ ಕುಟುಂಬದ ಹಿನ್ನೆಲೆ ಇಲ್ಲದೇ ಅವರು ಈ ಸಾಧನೆ ಮಾಡಿದ್ದಾರೆ. ಹೀರೋ ಆಗಿ ಅವರ ಸಿನಿಮಾ ಪಯಣಕ್ಕೆ 14 ವರ್ಷ ತುಂಬಿದೆ. ಅದಕ್ಕಾಗಿ ಎಲ್ಲರೂ ಅವರಿಗೆ ಸೋಶಿಯಲ್​ ಮೀಡಿಯಾ ಮೂಲಕ ಅಭಿನಂದನೆ ತಿಳಿಸುತ್ತಿದ್ದಾರೆ.

ಇದನ್ನೂ ಓದಿ
Image
ಬಾಲ್ಯ ಸ್ನೇಹಿತನ ಮದುವೆಗೆ ಪತ್ನಿ ಸಮೇತ ಬಂದು ಹರಸಿದ ಯಶ್​; ಸಲಾಂ ರಾಕಿ ಭಾಯ್​ ಎಂದ ಫ್ಯಾನ್ಸ್​
Image
ಗೋವಾ ಸಿಎಂ ಪ್ರಮೋದ್​ ಸಾವಂತ್​ ಭೇಟಿ ಮಾಡಿದ ಯಶ್​-ರಾಧಿಕಾ ಪಂಡಿತ್​; ಮುಂದಿನ ಸಿನಿಮಾ ಬಗ್ಗೆ​ ಕುತೂಹಲ
Image
‘ಕೆಜಿಎಫ್​ 2’ ಹಿಟ್​ ಆಗಿದ್ದಕ್ಕೆ ಕಬ್ಬಿನ ಹಾಲು ಟ್ರೀಟ್​ ಕೇಳಿದ ‘ಗೂಗ್ಲಿ’ ನಟಿ ಕೃತಿ ಕರಬಂಧ: ಯಶ್​ ಏನಂದ್ರು?
Image
‘ಕೆಜಿಎಫ್​ 2’ಗೆ ಕೆಟ್ಟ ವಿಮರ್ಶೆ ಮಾಡಿ, ಯಶ್​ ಬಗ್ಗೆ ವ್ಯಂಗ್ಯದ ಮಾತಾಡಿದ ‘ದೇಶದ್ರೋಹಿ’ ನಟ:​ ಸಿಡಿದೆದ್ದ ಫ್ಯಾನ್ಸ್​

2008ರ ಜುಲೈ 18ರಂದು ತೆರೆಕಂಡ ‘ಮೊಗ್ಗಿನ ಮನಸು’ ಚಿತ್ರದಿಂದ ಯಶ್​ ಅವರು ಕನ್ನಡ ಸಿನಿಮಾ ಪ್ರೇಕ್ಷಕರಿಗೆ ಹೀರೋ ಆಗಿ ಪರಿಚಯಗೊಂಡರು. ಮೊದಲ ಸಿನಿಮಾದಲ್ಲೇ ಅವರು ಪ್ರೇಕ್ಷಕರನ್ನು ಇಂಪ್ರೆಸ್​ ಮಾಡಿದರು. ಆ ಚಿತ್ರದಲ್ಲಿ ಅವರಿಗೆ ಜೋಡಿಯಾಗಿ ನಟಿಸಿದ್ದು ರಾಧಿಕಾ ಪಂಡಿತ್​. ಅವರಿಗೂ ಅದು ಮೊದಲ ಸಿನಿಮಾ ಎಂಬುದು ವಿಶೇಷ. ಬಳಿಕ ರಿಯಲ್​ ಲೈಫ್​ನಲ್ಲಿಯೂ ಅವರಿಬ್ಬರು ಜೋಡಿಯಾದರು. ಗಲ್ಲಾಪೆಟ್ಟಿಗೆಯಲ್ಲಿ ‘ಮೊಗ್ಗಿನ ಮನಸು’ ಗೆಲುವು ಕಂಡಿತು. ನಂತರ ಏಳು-ಬೀಳಿನ ಹಾದಿಯಲ್ಲಿ ಸಾಗಿ ಬಂದ ಯಶ್​ ಅವರು ಈಗ ಸೂಪರ್​ ಸ್ಟಾರ್​ ಆಗಿ ಮಿಂಚುತ್ತಿದ್ದಾರೆ.

‘ಮೊಗ್ಗಿನ ಮನಸು’ ಚಿತ್ರಕ್ಕೆ ಶಂಶಾಕ್​ ನಿರ್ದೇಶನ ಮಾಡಿದ್ದರು. ಯಶ್​, ರಾಧಿಕಾ ಪಂಡಿತ್​ ಮಾತ್ರವಲ್ಲದೇ ಶುಭಾ ಪೂಂಜಾ, ಮಾನಸಿ, ರಾಜೇಶ್​ ನಟರಂಗ ಮುಂತಾದವರು ಅಭಿನಯಿಸಿದ್ದರು. 14 ವರ್ಷ ಕಳೆಯುವುದರೊಳಗೆ ಯಶ್​ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಳ್ಳುವಂತೆ ಆಗಿದ್ದಾರೆ. ಹಲವು ಹಿಟ್​ ಸಿನಿಮಾಗಳನ್ನು ನೀಡಿದ್ದಾರೆ. ‘ಕೆಜಿಎಫ್​: ಚಾಪ್ಟರ್​ 2’ ಸಿನಿಮಾ ಮೂಲಕ ಸದ್ಯಕ್ಕಂತೂ ಯಾರೂ ಮುರಿಯದ ದಾಖಲೆಯನ್ನು ಅವರು ಬರೆದಿದ್ದಾರೆ.

Published On - 12:24 pm, Mon, 18 July 22

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ