‘ಅಗತ್ಯಬಿದ್ದರಷ್ಟೇ ಬಾಲಿವುಡ್​​ನಲ್ಲಿ ನಟಿಸ್ತೀನಿ’; ಅಲ್ಲು ಅರ್ಜುನ್ ನೇರ ನುಡಿ

ಕೆಲವರಿಗೆ ಬಾಲಿವುಡ್​​ನಲ್ಲಿ ಮಿಂಚುವುದೇ ಗುರಿ ಆದರೆ, ಇನ್ನೂ ಕೆಲವರಿಗೆ ತಮ್ಮ ಭಾಷೆಯಲ್ಲೇ ಅಭಿಮಾನಿಗಳನ್ನು ರಂಜಿಸಬೇಕು ಎಂಬ ಗುರಿ ಇರುತ್ತದೆ. ಅಲ್ಲು ಅರ್ಜುನ್ ಕೂಡ ಇದೇ ಸಾಲಿಗೆ ಸೇರುತ್ತಾರೆ.

‘ಅಗತ್ಯಬಿದ್ದರಷ್ಟೇ ಬಾಲಿವುಡ್​​ನಲ್ಲಿ ನಟಿಸ್ತೀನಿ’; ಅಲ್ಲು ಅರ್ಜುನ್ ನೇರ ನುಡಿ
ಅಲ್ಲು ಅರ್ಜುನ್
TV9kannada Web Team

| Edited By: Rajesh Duggumane

Jul 18, 2022 | 7:58 PM

ನಟ ಅಲ್ಲು ಅರ್ಜುನ್ (Allu Arjun) ಅವರು ಟಾಲಿವುಡ್ ಬಿಟ್ಟು ಹೊರ ಹೋಗಿಲ್ಲ. ಆದರೆ, ಅವರ ನಟನೆಯ ‘ಪುಷ್ಪ’ ಸಿನಿಮಾ (Pushpa Movie) ಪ್ಯಾನ್​ ಇಂಡಿಯಾ ಮಟ್ಟದಲ್ಲಿ ತೆರೆಗೆ ಬಂತು. ಈ ಸಿನಿಮಾ ಬಾಲಿವುಡ್​​ನಲ್ಲಿ 100 ಕೋಟಿ ರೂಪಾಯಿ ಕಲೆಕ್ಷನ್ ಮಾಡಿ ಬೀಗಿತು. ಈ ಸಿನಿಮಾದಿಂದ ಅಲ್ಲು ಅರ್ಜುನ್ ಹಿಂದಿ ಬೆಲ್ಟ್​​ನವರಿಗೆ ಹೆಚ್ಚು ಚಿರಪರಿಚಿತರಾದರು. ಈ ಕಾರಣಕ್ಕೆ ಅವರು ಬಾಲಿವುಡ್​ಗೆ ಕಾಲಿಡೋದು ಯಾವಾಗ ಎಂಬ ಪ್ರಶ್ನೆ ಎದುರಾಗುತ್ತಿದೆ. ಇದಕ್ಕೆ ಅಲ್ಲು ಅರ್ಜುನ್ ಅವರು ನೇರವಾಗಿ ಉತ್ತರ ನೀಡಿದ್ದಾರೆ. ಸದ್ಯಕ್ಕಂತೂ ಅವರಿಗೆ ಹಿಂದಿ ಚಿತ್ರರಂಗಕ್ಕೆ ತೆರಳುವ ಆಲೋಚನೆ ಇಲ್ಲ. ಆದರೆ, ಅಗತ್ಯಬಿದ್ದರೆ ಅವರು ಬಾಲಿವುಡ್​ಗೆ ಹೋಗೋಕೆ ರೆಡಿ ಇದ್ದಾರೆ.

ದಕ್ಷಿಣ ಭಾರತದ ಅನೇಕ ಸ್ಟಾರ್ ನಟ/ನಟಿಯರು ಇಲ್ಲಿ ಗೆದ್ದ ಬಳಿಕ ಬಾಲಿವುಡ್​ ಕದ ತಟ್ಟಿದ್ದಾರೆ. ಕೆಲವರಿಗೆ ಬಾಲಿವುಡ್​​ನಲ್ಲಿ ಮಿಂಚುವುದೇ ಗುರಿ ಆದರೆ, ಇನ್ನೂ ಕೆಲವರಿಗೆ ತಮ್ಮ ಭಾಷೆಯಲ್ಲೇ ಅಭಿಮಾನಿಗಳನ್ನು ರಂಜಿಸಬೇಕು ಎಂಬ ಗುರಿ ಇರುತ್ತದೆ. ಅಲ್ಲು ಅರ್ಜುನ್ ಕೂಡ ಇದೇ ಸಾಲಿಗೆ ಸೇರುತ್ತಾರೆ. ಅವರು ಇಲ್ಲಿನ ಅಭಿಮಾನಿಗಳನ್ನು ರಂಜಿಸುವ ಗುರಿ ಹೊಂದಿದ್ದಾರೆ.

‘ಸದ್ಯಕ್ಕಂತೂ ಹಿಂದಿಯಲ್ಲಿ ನಟಿಸೋದು ನನ್ನ ಕಂಫರ್ಟಬಲ್ ಜೋನ್​ನ ಹೊರಗಿರುವ ವಿಚಾರ. ಆದರೆ, ಅಗತ್ಯವಿದ್ದರೆ ನಾನು ಅಲ್ಲಿ ಹೋಗಿ ನಟಿಸುತ್ತೇನೆ’ ಎಂದು ಇಂಡಿಯಾ ಟುಡೇಗೆ ನೀಡಿದ ಸಂದರ್ಶನದಲ್ಲಿ ಅಲ್ಲು ಅರ್ಜುನ್ ಹೇಳಿದ್ದಾರೆ. ಈ ಮೂಲಕ ಸದ್ಯಕ್ಕಂತೂ ಬಾಲಿವುಡ್​ಗೆ ಹೋಗುವ ಆಲೋಚನೆ ಇಲ್ಲ ಎಂದಿದ್ದಾರೆ ಅವರು.

ಈ ರೀತಿಯ ಹೇಳಿಕೆ ನೀಡಿ ಮಹೇಶ್ ಬಾಬು ಚರ್ಚೆಗೆ ಗುರಿ ಆಗಿದ್ದರು. ‘ಬಾಲಿವುಡ್​ಗೆ ನನ್ನ ಭರಿಸುವ ಶಕ್ತಿಯೇ ಇಲ್ಲ. ಹೀಗಾಗಿ, ನಾನು ಬಾಲಿವುಡ್​ಗೆ ತೆರಳಲ್ಲ’ ಎಂದು ಹೇಳಿದ್ದರು. ಬಾಲಿವುಡ್​ಗೆ ಹೋಗಿ ಸಿನಿಮಾ ಮಾಡುವುದು ಕಂಫರ್ಟಬಲ್ ಎನಿಸುವುದಿಲ್ಲ ಎಂಬ ಅರ್ಥದಲ್ಲಿ ಅವರು ಈ ರೀತಿ ಹೇಳಿಕೆ ನೀಡಿದ್ದರು. ಆದರೆ, ಅದನ್ನು ಬೇರೆ ರೀತಿಯಲ್ಲಿ ಅರ್ಥೈಸಲಾಗಿತ್ತು. ನಂತರ ಮಹೇಶ್ ಬಾಬು ಇದಕ್ಕೆ ಸ್ಪಷ್ಟನೆ ನೀಡಿದ್ದರು.

ಇದನ್ನೂ ಓದಿ: ತಾಂಜಾನಿಯಾದಲ್ಲಿ ಅಲ್ಲು ಅರ್ಜುನ್ ಫ್ಯಾಮಿಲಿ; ನ್ಯಾಷನಲ್​ ಪಾರ್ಕ್​ನಲ್ಲಿ ಪೋಸ್ ನೀಡಿದ ಕುಟುಂಬ

ಇದನ್ನೂ ಓದಿ

ಅಲ್ಲು ಅರ್ಜುನ್ ಅವರು ‘ಪುಷ್ಪ 2’ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಆಗಲಿದ್ದಾರೆ. ಈ ಚಿತ್ರಕ್ಕೆ ಇತ್ತೀಚೆಗೆ ಆಡಿಷನ್ ಪೂರ್ಣಗೊಂಡಿದೆ. ಈ ತಿಂಗಳಾಂತ್ಯಕ್ಕೆ ಚಿತ್ರದ ಶೂಟಿಂಗ್ ಆರಂಭ ಆಗುವ ನಿರೀಕ್ಷೆ ಇದೆ. ಈ ಸಿನಿಮಾಗೆ ಸುಕುಮಾರ್ ನಿರ್ದೇಶನ ಮಾಡುತ್ತಿದ್ದಾರೆ. ರಶ್ಮಿಕಾ ಮಂದಣ್ಣ ಅವರು ನಾಯಕಿ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada