ತಾಂಜಾನಿಯಾದಲ್ಲಿ ಅಲ್ಲು ಅರ್ಜುನ್ ಫ್ಯಾಮಿಲಿ; ನ್ಯಾಷನಲ್ ಪಾರ್ಕ್ನಲ್ಲಿ ಪೋಸ್ ನೀಡಿದ ಕುಟುಂಬ
ತಾಂಜಾನಿಯಾದಲ್ಲಿರುವ ನ್ಯಾಷನಲ್ ಪಾರ್ಕ್ ಒಂದಕ್ಕೆ ಅಲ್ಲು ಅರ್ಜುನ್ ಕುಟುಂಬ ಭೇಟಿ ನೀಡಿದೆ. ಅಲ್ಲು ಅರ್ಜುನ್ ಪತ್ನಿ ಸ್ನೇಹಾ ರೆಡ್ಡಿ ಅವರು ಇನ್ಸ್ಟಾಗ್ರಾಮ್ ಹಾಲಿಡೇ ಎಂಜಾಯ್ ಮಾಡುತ್ತಿರುವ ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಈ ಫೋಟೋದಲ್ಲಿ ಅಲ್ಲು ಅರ್ಜುನ್, ಸ್ನೇಹಾ ರೆಡ್ಡಿ, ಮಕ್ಕಳಾದ ಅಲ್ಲು ಆರ್ಯನ್ ಹಾಗೂ ಅಲ್ಲು ಅರ್ಹ ಗಮನ ಸೆಳೆಯುತ್ತಿದ್ದಾರೆ.
Updated on: Jul 05, 2022 | 6:37 PM

ಅಲ್ಲು ಅರ್ಜುನ್ ಅವರು ಕುಟುಂಬಕ್ಕೆ ಹೆಚ್ಚು ಆದ್ಯತೆ ನೀಡುತ್ತಾರೆ. ‘ಪುಷ್ಪ’ ಸಿನಿಮಾ ಗೆದ್ದು ಬೀಗಿದ ನಂತರ ಅವರು ಒಂದು ಬ್ರೇಕ್ ತೆಗೆದುಕೊಂಡಿದ್ದಾರೆ. ಮೇ ತಿಂಗಳಲ್ಲಿ ಅವರು ಲಂಡನ್ಗೆ ತೆರಳಿದ್ದರು. ಈಗ ತಾಂಜಾನಿಯಾಗೆ ಹಾರಿದ್ದಾರೆ.

ತಾಂಜಾನಿಯಾದಲ್ಲಿರುವ ನ್ಯಾಷನಲ್ ಪಾರ್ಕ್ ಒಂದಕ್ಕೆ ಅಲ್ಲು ಅರ್ಜುನ್ ಕುಟುಂಬ ಭೇಟಿ ನೀಡಿದೆ. ಅಲ್ಲು ಅರ್ಜುನ್ ಪತ್ನಿ ಸ್ನೇಹಾ ರೆಡ್ಡಿ ಅವರು ಇನ್ಸ್ಟಾಗ್ರಾಮ್ ಹಾಲಿಡೇ ಎಂಜಾಯ್ ಮಾಡುತ್ತಿರುವ ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಈ ಫೋಟೋದಲ್ಲಿ ಅಲ್ಲು ಅರ್ಜುನ್, ಸ್ನೇಹಾ ರೆಡ್ಡಿ, ಮಕ್ಕಳಾದ ಅಲ್ಲು ಆರ್ಯನ್ ಹಾಗೂ ಅಲ್ಲು ಅರ್ಹ ಗಮನ ಸೆಳೆಯುತ್ತಿದ್ದಾರೆ.

ಈ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಫ್ಯಾನ್ಸ್ ಇದಕ್ಕೆ ಲೈಕ್ಸ್ ಒತ್ತುತ್ತಿದ್ದಾರೆ. ಈ ಮೊದಲು ಕೂಡ ಸ್ನೇಹಾ ರೆಡ್ಡಿ ಹಲವು ಫೋಟೋಗಳನ್ನು ಹಂಚಿಕೊಂಡಿದ್ದರು.

ಅಲ್ಲು ಅರ್ಜುನ್ ಅವರು ಏಪ್ರಿಲ್ 8ರಂದು ಬರ್ತ್ಡೇ ಆಚರಿಸಿಕೊಂಡರು. ಅವರಿಗೆ ಈಗ 40 ವರ್ಷ ವಯಸ್ಸು. ಯುರೋಪ್ ಖಂಡಕ್ಕೆ ತೆರಳಿ ಅದ್ದೂರಿ ಬರ್ತ್ಡೇ ಆಚರಿಸಿಕೊಂಡಿದ್ದರು. ಇದರ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.

‘ಪುಷ್ಪ 2’ ಚಿತ್ರದ ಕೆಲಸಗಳು ಇನ್ನಷ್ಟೇ ಆರಂಭಗೊಳ್ಳಬೇಕಿದೆ. ಈ ಸಿನಿಮಾ ಬಗ್ಗೆ ಅಭಿಮಾನಿಗಳಿಗೆ ಸಾಕಷ್ಟು ನಿರೀಕ್ಷೆ ಇದೆ.

TV9 Kannada
Read More