ನಿರ್ಮಾಣವಾಗಲೇ ಇಲ್ಲ ಪಾರ್ವತಮ್ಮ ರಾಜ್​ಕುಮಾರ್​ ಕನಸಿನ ಸಿನಿಮಾ ‘ಅಮೋಘವರ್ಷ ನೃಪತುಂಗ’

Parvathamma Rajkumar: ‘ಅಮೋಘವರ್ಷ ನೃಪತುಂಗ’ ಚಿತ್ರದಲ್ಲಿ ಡಾ. ರಾಜ್​ಕುಮಾರ್​ ಅವರು ದ್ವಿಪಾತ್ರ ಮಾಡಬೇಕಿತ್ತು. ಆ ಬಗ್ಗೆ ಪಾರ್ವತಮ್ಮ ರಾಜ್​ಕುಮಾರ್​ ಕನಸು ಕಂಡಿದ್ದರು.

ನಿರ್ಮಾಣವಾಗಲೇ ಇಲ್ಲ ಪಾರ್ವತಮ್ಮ ರಾಜ್​ಕುಮಾರ್​ ಕನಸಿನ ಸಿನಿಮಾ ‘ಅಮೋಘವರ್ಷ ನೃಪತುಂಗ’
ಪಾರ್ವತಮ್ಮ, ಡಾ. ರಾಜ್​ಕುಮಾರ್​
Follow us
TV9 Web
| Updated By: ಮದನ್​ ಕುಮಾರ್​

Updated on:Jul 18, 2022 | 10:31 AM

‘ಮೇರುನಟ’ ಡಾ. ರಾಜ್​ಕುಮಾರ್​ (Dr Rajkumar) ಅವರ ಸಿನಿಮಾಗಳೆಂದರೆ ಪ್ರೇಕ್ಷಕರಿಗೆ ಇಂದಿಗೂ ಫೇವರಿಟ್​. ಎಷ್ಟೇ ವರ್ಷಗಳು ಕಳೆದರೂ ಅವರ ಚಿತ್ರಗಳ ಸೆಳೆತ ಕಡಿಮೆ ಆಗಿಲ್ಲ. ಅದಕ್ಕೆ ಕಾರಣ ಹಲವು. ಸಿನಿಮಾಗಳನ್ನು ಆಯ್ಕೆ ಮಾಡಿಕೊಳ್ಳುವಾಗ ಡಾ. ರಾಜ್​ಕುಮಾರ್​ ಅವರು ಬಹಳ ಎಚ್ಚರಿಕೆ ವಹಿಸುತ್ತಿದ್ದರು. ಅವರ ಆಯ್ಕೆಗಳ ಹಿಂದೆ ಸಹೋದರ ವರದಪ್ಪ, ಪತ್ನಿ ಪಾರ್ವತಮ್ಮ ರಾಜ್​ಕುಮಾರ್​ ಮುಂತಾದವರು ಇರುತ್ತಿದ್ದರು. ಶೂಟಿಂಗ್​ ಶುರುವಾಗುವುದಕ್ಕೂ ಮುನ್ನ ಬಹಳ ಎಚ್ಚರಿಕೆಯಿಂದ ಸ್ಕ್ರಿಪ್ಟ್ ಕೆಲಸಗಳನ್ನು ಮಾಡಲಾಗುತ್ತಿತ್ತು. ಅದೆಲ್ಲದರ ಪರಿಣಾಮವಾಗಿ ಡಾ. ರಾಜ್​ಕುಮಾರ್​ ಸಿನಿಮಾಗಳು ಜನಮನ ಗೆಲ್ಲುವ ರೀತಿಯಲ್ಲಿ ಮೂಡಿಬರುತ್ತಿದ್ದವು. ವೃತ್ತಿಜೀವನದಲ್ಲಿ ಅಣ್ಣಾವ್ರು ಕೆಲವೊಂದು ಚಿತ್ರಗಳಲ್ಲಿ ನಟಿಸಲು ಸಾಧ್ಯವಾಗಲಿಲ್ಲ. ಅವುಗಳ ಪೈಕಿ ‘ಅಮೋಘವರ್ಷ ನೃಪತುಂಗ’ (Amoghavarsha Nrupatunga) ಚಿತ್ರ ಕೂಡ ಒಂದು. ಅದು ಪಾರ್ವತಮ್ಮ ರಾಜ್​ಕುಮಾರ್ (Parvathamma Rajkumar)​ ಅವರ ಕನಸಿನ ಪ್ರಾಜೆಕ್ಟ್​ ಆಗಿತ್ತು.

ಡಾ. ರಾಜ್​ ಅವರ 200ನೇ ಸಿನಿಮಾವಾಗಿ ‘ಅಮೋಘವರ್ಷ ನೃಪತುಂಗ’ ಚಿತ್ರ ಮೂಡಿಬರಬೇಕಿತ್ತು. ಆ ಸಿನಿಮಾ ಬಗ್ಗೆ ಪಾರ್ವತಮ್ಮ ಹಲವು ಆಸೆಗಳನ್ನು ಇಟ್ಟುಕೊಂಡಿದ್ದರು. ಆ ಬಗ್ಗೆ ಅವರು ನೀಡಿದ ವಿಡಿಯೋ ಸಂದರ್ಶನದ ತುಣುಕು ಈಗ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ. ‘ಅಮೋಘವರ್ಷ ನೃಪತುಂಗ’ ಚಿತ್ರದ ಕೆಲಸಗಳು ಯಾವ ಹಂತದಲ್ಲಿವೆ ಎಂಬ ಬಗ್ಗೆ ಅವರು ಮಾಹಿತಿ ಹಂಚಿಕೊಂಡಿದ್ದರು.

ಇದನ್ನೂ ಓದಿ
Image
ಪಾರ್ವತಮ್ಮ ಐದನೇ ವರ್ಷದ ಪುಣ್ಯಸ್ಮರಣೆ; ರಾಜ್​ಕುಮಾರ್ ಅಕಾಡೆಮಿ ಸಾಧನೆಯನ್ನು ಅಮ್ಮನಿಗೆ ಅರ್ಪಿಸಿದ ರಾಘಣ್ಣ
Image
ಪಾರ್ವತಮ್ಮ ರಾಜ್​ಕುಮಾರ್ ಸಹೋದರಿ ಎಸ್​.ಎ. ನಾಗಮ್ಮ ನಿಧನ
Image
ರಾಜ್​ಕುಮಾರ್ ಹಾಗೂ ಪಾರ್ವತಮ್ಮ ಸಮಾಧಿಗೆ ನಮಿಸಿದ ಅಲ್ಲು ಅರ್ಜುನ್​; ಇಲ್ಲಿದೆ ವಿಡಿಯೋ
Image
ಪಾರ್ವತಮ್ಮ ರಾಜ್​ಕುಮಾರ್​ ಹುಟ್ಟುಹಬ್ಬ: ವಿಶೇಷ ದಿನವೇ ಅಪ್ಪು ಕನಸಿನ ಪ್ರಾಜೆಕ್ಟ್​ ಶೀರ್ಷಿಕೆ ಟೀಸರ್​ ಬಿಡುಗಡೆ

‘ಈ ಸಿನಿಮಾಗೆ ತಯಾರಿ ಮಾಡಿಕೊಳ್ಳುತ್ತಿದ್ದೇವೆ. ಕಥೆ, ಚಿತ್ರಕಥೆ, ಡೈಲಾಗ್​ ಎಲ್ಲಾ ರೆಡಿ ಆಗಿದೆ. ರೆಕಾರ್ಡಿಂಗ್​ ದೊಡ್ಡದಾಗಿ ಮಾಡಬೇಕು. ಅದಕ್ಕೆ ಬೇಕಾದ ತಯಾರಿ ಮಾಡುತ್ತಿದ್ದೇವೆ. ಲೊಕೇಷನ್​ ನೋಡೋಕೆ ಹೋಗಬೇಕಿದೆ. ಲೊಕೇಷನ್​ ನೋಡಿಕೊಂಡು ಬಂದಮೇಲೆ ಪ್ರಾಯಶಃ ನವೆಂಬರ್​ನಲ್ಲಿ ಶೂಟಿಂಗ್​ ಶುರು ಮಾಡುತ್ತೇವೆ’ ಎಂದು ಪಾರ್ವತಮ್ಮ ರಾಜ್​ಕುಮಾರ್​ ಹೇಳಿದ್ದರು.

‘ಇದು ನನ್ನ 35 ವರ್ಷಗಳ ಆಸೆ. ಈ ಸಿನಿಮಾದ ಎರಡೂ ಪಾತ್ರವನ್ನು ಡಾ. ರಾಜ್​ಕುಮಾರ್​ ಅವರೇ ಮಾಡಬೇಕು. ತಾರಾಸು ಅವರು ಬರೆದ ಕಥೆಯನ್ನು ನಾನು ಓದಿದಾಗಿನಿಂದಲೂ ನನಗೆ ಆ ಆಸೆ ಇದೆ. ಅದನ್ನು ಸಿನಿಮಾ ಮಾಡಬೇಕು ಎಂದುಕೊಂಡಾಗ ನನಗೆ 15 ವರ್ಷ ವಯಸ್ಸು. ಅಷ್ಟರಲ್ಲಾಗಲೇ ನಾನು ಮದ್ರಾಸ್​ಗೆ ಬಂದುಬಿಟ್ಟಿದ್ದೆ’ ಎಂದು ಪಾರ್ವತಮ್ಮ ರಾಜ್​ಕುಮಾರ್​ ಹೇಳಿದ್ದರು. ಕಾರಣಾಂತರಗಳಿಂದ ಆ ಸಿನಿಮಾ ನಿರ್ಮಾಣವಾಗಲೇ ಇಲ್ಲ ಎಂಬುದು ಬೇಸರದ ಸಂಗತಿ.

ಎಲ್ಲ ಬಗೆಯ ಪಾತ್ರಗಳನ್ನು ಮಾಡಿ ಸೈ ಎನಿಸಿಕೊಂಡವರು ಡಾ. ರಾಜ್​ಕುಮಾರ್​. ಅದರಲ್ಲೂ ಪೌರಾಣಿಕ ಮತ್ತು ಐತಿಹಾಸಿಕ ಪಾತ್ರಗಳಲ್ಲಿ ಅವರಿಗೆ ಬೇರೆ ಯಾರೂ ಸಾಟಿ ಇಲ್ಲ. ‘ಅಮೋಘವರ್ಷ ನೃಪತುಂಗ’ ಚಿತ್ರದಲ್ಲಿ ಅವರನ್ನು ನೋಡಬೇಕು ಎಂಬ ಕನಸು ನನಸಾಗಲಿಲ್ಲವಲ್ಲ ಎಂಬ ಬೇಸರ ಅಭಿಮಾನಿಗಳಲ್ಲಿ ಇದೆ.

Published On - 10:31 am, Mon, 18 July 22

ಬೆಂಗಳೂರಲ್ಲಿ ಮಿತಿ ಮೀರಿದ ಮೊಬೈಲ್ ಕಳ್ಳರ ಅಟ್ಟಹಾಸ: ಲಾಂಗ್ ತೋರಿಸಿ ಪರಾರಿ
ಬೆಂಗಳೂರಲ್ಲಿ ಮಿತಿ ಮೀರಿದ ಮೊಬೈಲ್ ಕಳ್ಳರ ಅಟ್ಟಹಾಸ: ಲಾಂಗ್ ತೋರಿಸಿ ಪರಾರಿ
ಸುದೀಪ್​ ಮುಂದೆ ನಡೆಯಲಿಲ್ಲ ಗೌತಮಿಯ ಪಾಸಿಟಿವ್ ಮುಖವಾಡ
ಸುದೀಪ್​ ಮುಂದೆ ನಡೆಯಲಿಲ್ಲ ಗೌತಮಿಯ ಪಾಸಿಟಿವ್ ಮುಖವಾಡ
ಸಿದ್ದರಾಮೋತ್ಸವ ಮಾದರಿಯಲ್ಲೇ ಯಡಿಯೂರಪ್ಪ ಜನ್ಮದಿನೋತ್ಸವ ಆಚರಣೆಗೆ ನಿರ್ಧಾರ
ಸಿದ್ದರಾಮೋತ್ಸವ ಮಾದರಿಯಲ್ಲೇ ಯಡಿಯೂರಪ್ಪ ಜನ್ಮದಿನೋತ್ಸವ ಆಚರಣೆಗೆ ನಿರ್ಧಾರ
ಕುಟುಂಬದಲ್ಲಿ ತುರ್ತು ಪರಿಸ್ಥಿತಿ; ಬಿಗ್ ಬಾಸ್​ನಿಂದ ಹೊರಬಂದ ಗೋಲ್ಡ್ ಸುರೇಶ್
ಕುಟುಂಬದಲ್ಲಿ ತುರ್ತು ಪರಿಸ್ಥಿತಿ; ಬಿಗ್ ಬಾಸ್​ನಿಂದ ಹೊರಬಂದ ಗೋಲ್ಡ್ ಸುರೇಶ್
ಸಿಟ್ಟಿದ್ದವರ ಮೇಲೆ ಗುದ್ದಿ ಕೋಪ ತೀರಿಸಿಕೊಂಡ ಬಿಗ್​ಬಾಸ್ ಸ್ಪರ್ಧಿಗಳು
ಸಿಟ್ಟಿದ್ದವರ ಮೇಲೆ ಗುದ್ದಿ ಕೋಪ ತೀರಿಸಿಕೊಂಡ ಬಿಗ್​ಬಾಸ್ ಸ್ಪರ್ಧಿಗಳು
ಅತುಲ್ ಸುಭಾಷ್ ​: ಪುರುಷರ ಮೇಲೆ ದೌರ್ಜನ್ಯ, ಬದಲಾಗುತ್ತಾ ಕಾನೂನು?
ಅತುಲ್ ಸುಭಾಷ್ ​: ಪುರುಷರ ಮೇಲೆ ದೌರ್ಜನ್ಯ, ಬದಲಾಗುತ್ತಾ ಕಾನೂನು?
46 ವರ್ಷಗಳ ಬಳಿಕ ಬಾಗಿಲು ತೆರೆದ ದೇವಾಲಯ, ಶಿವ, ಹನುಮಂತನಿಗೆ ಆರತಿ
46 ವರ್ಷಗಳ ಬಳಿಕ ಬಾಗಿಲು ತೆರೆದ ದೇವಾಲಯ, ಶಿವ, ಹನುಮಂತನಿಗೆ ಆರತಿ
ಸೈಲೆಂಟ್​​ ಆಗಿ ಇದ್ಬಿಡಿ... ಆಸ್ಟ್ರೇಲಿಯನ್ನರಿಗೆ ವಿರಾಟ್ ಕೊಹ್ಲಿ ತಾಕೀತು!
ಸೈಲೆಂಟ್​​ ಆಗಿ ಇದ್ಬಿಡಿ... ಆಸ್ಟ್ರೇಲಿಯನ್ನರಿಗೆ ವಿರಾಟ್ ಕೊಹ್ಲಿ ತಾಕೀತು!
ಗಿನ್ನೆಸ್ ವಿಶ್ವ ದಾಖಲೆ ಬರೆದ ವಿಶ್ವದ ಅತಿ ಉದ್ದದ ಕಾರು
ಗಿನ್ನೆಸ್ ವಿಶ್ವ ದಾಖಲೆ ಬರೆದ ವಿಶ್ವದ ಅತಿ ಉದ್ದದ ಕಾರು
ಶ್ರೀರಂಗಪಟ್ಟಣ ಜಾಮಿಯಾ ಮಸೀದಿಗೆ ಸಾರ್ವಜನಿಕರ ಪ್ರವೇಶ ನಿರ್ಬಂಧ
ಶ್ರೀರಂಗಪಟ್ಟಣ ಜಾಮಿಯಾ ಮಸೀದಿಗೆ ಸಾರ್ವಜನಿಕರ ಪ್ರವೇಶ ನಿರ್ಬಂಧ