Soundarya: ಸೌಂದರ್ಯಾ ಜನ್ಮದಿನ: ‘ದ್ವೀಪ’ದಿಂದ ‘ಆಪ್ತಮಿತ್ರ’ವರೆಗೆ ಅದ್ಭುತ ನಟನೆ ತೋರಿದ ನಟಿಯ ಮರೆಯೋದುಂಟೆ?

Happy Birthday Soundarya: ಖ್ಯಾತ ನಟಿ ಸೌಂದರ್ಯಾ ಮಾಡಿದ ಪಾತ್ರಗಳು ಅಭಿಮಾನಿಗಳ ಮನದಲ್ಲಿ ಅಚ್ಚಾಗಿವೆ. ಇಂದಿಗೂ, ಎಂದೆಂದಿಗೂ ಅವರನ್ನು ಪ್ರೇಕ್ಷಕರು ಮಿಸ್​ ಮಾಡಿಕೊಳ್ಳುತ್ತಲೇ ಇರುತ್ತಾರೆ.

Soundarya: ಸೌಂದರ್ಯಾ ಜನ್ಮದಿನ: ‘ದ್ವೀಪ’ದಿಂದ ‘ಆಪ್ತಮಿತ್ರ’ವರೆಗೆ ಅದ್ಭುತ ನಟನೆ ತೋರಿದ ನಟಿಯ ಮರೆಯೋದುಂಟೆ?
ಸೌಂದರ್ಯಾ
Follow us
TV9 Web
| Updated By: ಮದನ್​ ಕುಮಾರ್​

Updated on: Jul 18, 2022 | 8:37 AM

ನಟಿ ಸೌಂದರ್ಯಾ (Soundarya) ಅವರನ್ನು ಕನ್ನಡ ಚಿತ್ರರಂಗ (Sandalwood) ಎಂದಿಗೂ ಮರೆಯಲು ಸಾಧ್ಯವಿಲ್ಲ. ಎಲ್ಲ ಬಗೆಯ ಪಾತ್ರಗಳಿಗೂ ಜೀವ ತುಂಬಿದ ಅವರ ಪ್ರತಿಭೆಗೆ ಸರಿಸಾಟಿ ಆಗಬಲ್ಲಂತಹ ಮತ್ತೋರ್ವ ನಟಿ ಇಲ್ಲ. ಸೌಂದರ್ಯಾ ಎಂಬ ಹೆಸರಿಗೆ ತಕ್ಕಂತೆಯೇ ಅವರು ರೂಪವತಿ ಆಗಿದ್ದರು. ಅವರ ಅಂದಕ್ಕೆ ಮರುಳಾಗದವರೇ ಇಲ್ಲ ಎನ್ನಬಹುದು. ಅದೇ ರೀತಿ, ನಟನೆ ಕಂಡು ವಾವ್​ ಎನ್ನದ ಪ್ರೇಕ್ಷಕರೇ ಇಲ್ಲ. ಇಂದು (ಜುಲೈ 18) ಸೌಂದರ್ಯಾ ಜನ್ಮದಿನ (Soundarya Birthday). ಭೌತಿಕವಾಗಿ ಅವರು ನಮ್ಮ ಜೊತೆ ಇಲ್ಲ. ಆದರೂ ಕೂಡ ಸಿನಿಮಾಗಳ ಮೂಲಕ, ಮನಮೋಹಕ ಪಾತ್ರಗಳ ಮೂಲಕ ಅವರು ಅಭಿಮಾನಿಗಳ ಮನದಲ್ಲಿ ಸದಾ ಜೀವಂತವಾಗಿ ಇರುತ್ತಾರೆ. ನೆಚ್ಚಿನ ನಟಿಯನ್ನು ನೆನಪು ಮಾಡಿಕೊಂಡು ಅವರಿಗೆ ಜನ್ಮದಿನದ ಶುಭಾಶಯಗಳನ್ನು ತಿಳಿಸಲಾಗುತ್ತಿದೆ.

ಸೌಂದರ್ಯಾ ಅವರ ಮೂಲ ಹೆಸರು ಕೆ.ಎಸ್​. ಸೌಮ್ಯ. ಆದರೆ ಚಿತ್ರರಂಗದಲ್ಲಿ ಅವರು ಸೌಂದರ್ಯಾ ಎಂಬ ಹೆಸರಿನಿಂದ ಗುರುತಿಸಿಕೊಂಡರು. ದೇಶಾದ್ಯಂತ ಮನೆಮಾತಾಗುವ ಮಟ್ಟಕ್ಕೆ ಅವರು ಬೆಳೆದುನಿಂತರು. ಕೇವಲ 12 ವರ್ಷದಲ್ಲಿ 100ಕ್ಕೂ ಅಧಿಕ ಸಿನಿಮಾ ಮಾಡಿ ಸೈ ಎನಿಸಿಕೊಂಡರು. ಆ ಮೂಲಕ ‘ಆಧುನಿಕ ತೆಲುಗು ಚಿತ್ರರಂಗದ ಸಾವಿತ್ರಿ’ ಎಂಬ ಬಿರುದು ಪಡೆದರು. ಕನ್ನಡ, ತಮಿಳು, ತೆಲುಗು ಮತ್ತು ಹಿಂದಿ ಸಿನಿಮಾಗಳಲ್ಲಿ ನಟಿಸಿ ಅವರು ಸೈ ಎನಿಸಿಕೊಂಡರು.

ಪಾತ್ರಗಳ ಆಯ್ಕೆಯಲ್ಲಿ ಸೌಂದರ್ಯಾ ಅವರು ಯಾವಾಗಲೂ ಅಭಿಮಾನಿಗಳನ್ನು ಅಚ್ಚರಿಗೊಳಿಸಿದರು. ‘ಸಿಪಾಯಿ’ ಸಿನಿಮಾದ ಹಳ್ಳಿ ಹುಡುಗಿ, ‘ದ್ವೀಪ’ ಸಿನಿಮಾದ ಮಲೆನಾಡಿನ ರೈತ ಮಹಿಳೆ, ‘ಆಪ್ತಮಿತ್ರ’ ಸಿನಿಮಾದ ನಾಗವಲ್ಲಿ/ಗಂಗಾ ಸೇರಿದಂತೆ ಬಗೆಬಗೆಯ ಪಾತ್ರಗಳನ್ನು ಅವರು ನಿಭಾಯಿಸಿದರು. ಆ ಮೂಲಕ ಅಭಿಮಾನಿಗಳ ಹೃದಯ ಕದ್ದರು.

ಇದನ್ನೂ ಓದಿ
Image
Sanchari Vijay: ಸಂಚಾರಿ ವಿಜಯ್​ ಹುಟ್ಟುಹಬ್ಬ: ಪ್ರತಿಭಾನ್ವಿತ ನಟನ ನೆನೆದು ‘ಮಿಸ್​ ಯೂ’ ಎನ್ನುತ್ತಿದೆ ಸ್ಯಾಂಡಲ್​ವುಡ್​
Image
ಗಿರೀಶ್​ ಕಾರ್ನಾಡ್​ ಜನ್ಮದಿನ: ವಿಷ್ಣುವರ್ಧನ್​, ಶಂಕರ್​ನಾಗ್​ಗೆ ಮೊದಲು ಆ್ಯಕ್ಷನ್​-ಕಟ್​ ಹೇಳಿದ್ದೇ ಗಿರೀಶ್​ ಕಾರ್ನಾಡ್​
Image
ಶಂಕರ್ ​ನಾಗ್​ ನಿಧನರಾದಾಗ ಅಂತ್ಯಸಂಸ್ಕಾರಕ್ಕೆ ಬರಲು ಮಾಸ್ಟರ್​ ಮಂಜುನಾಥ್​ಗೆ ಸಾಧ್ಯವಾಗಲಿಲ್ಲ; ಕಾರಣ ಏನು?
Image
ವಿದೇಶಿ ನ್ಯೂಸ್​ ಚಾನೆಲ್​ಗಳಲ್ಲಿ ಪುನೀತ್​ ನಿಧನದ ಸುದ್ದಿ; ಸೌತ್​ ಕೊರಿಯಾದಲ್ಲೂ ಅಭಿಮಾನದ ಹೊಳೆ

ನಿರ್ಮಾಪಕಿಯಾಗಿಯೂ ಸೌಂದರ್ಯಾ ಗುರುತಿಸಿಕೊಂಡಿದ್ದರು. ಅವರು ನಿರ್ಮಿಸಿದ ‘ದ್ವೀಪ’ ಚಿತ್ರಕ್ಕೆ ಎರಡು ‘ರಾಷ್ಟ್ರ ಪ್ರಶಸ್ತಿ’ ಒಲಿದು ಬಂದವು. ನಾಲ್ಕು ‘ರಾಜ್ಯ ಪ್ರಶಸ್ತಿ’, ಮೂರು ‘ಫಿಲ್ಮ್​ ಫೇರ್​’ ಪ್ರಶಸ್ತಿ ಪಡೆದುಕೊಂಡಿದ್ದು ಈ ಸಿನಿಮಾದ ಹೆಗ್ಗಳಿಕೆ. ಇಂಥ ಸಂವೇದನಾಶೀಲ ಸಿನಿಮಾವನ್ನು ನಿರ್ಮಿಸಿದ ಅವರಿಗೆ ಎಲ್ಲರಿಂದಲೂ ಮೆಚ್ಚುಗೆ ವ್ಯಕ್ತವಾಯಿತು. ಇಷ್ಟೆಲ್ಲ ಸಾಧನೆ ಮಾಡಿದ ನಟಿ ಕೇವಲ 31ನೇ ವಯಸ್ಸಿಗೆ ಇಹಲೋಕ ತ್ಯಜಿಸುತ್ತಾರೆ ಎಂಬುದನ್ನು ಯಾರೂ ಊಹಿಸಿರಲಿಲ್ಲ.

ಅದು, 2004ರ ಏಪ್ರಿಲ್ 17. ಚುನಾವಣಾ ಪ್ರಚಾರಕ್ಕಾಗಿ ಅವರು ಪ್ರಯಾಣ ಮಾಡುತ್ತಿದ್ದ ವಿಮಾನ ಅಪಘಾತಕ್ಕೆ ಈಡಾಯಿತು. ಚಿತ್ರರಂಗದಲ್ಲಿ ಧ್ರುವತಾರೆಯಂತೆ ಮಿಂಚುತ್ತಿದ್ದ ಅವರು ಈ ರೀತಿ ದುರ್ಮರಣ ಹೊಂದಿದರು ಎಂಬ ಸುದ್ದಿ ಕೇಳಿ ಅಭಿಮಾನಿಗಳ ಎದೆಗೆ ಸಿಡಿಲು ಬಡಿದಂತೆ ಆಯಿತು. ಇಂದಿಗೂ, ಎಂದೆಂದಿಗೂ ಸೌಂದರ್ಯಾ ಅವರನ್ನು ಪ್ರೇಕ್ಷಕರು ಮಿಸ್​ ಮಾಡಿಕೊಳ್ಳುತ್ತಲೇ ಇರುತ್ತಾರೆ.

Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ