ವಿದೇಶಿ ನ್ಯೂಸ್​ ಚಾನೆಲ್​ಗಳಲ್ಲಿ ಪುನೀತ್​ ನಿಧನದ ಸುದ್ದಿ; ಸೌತ್​ ಕೊರಿಯಾದಲ್ಲೂ ಅಭಿಮಾನದ ಹೊಳೆ

Puneeth Rajkumar: ವಿಶ್ವಾದ್ಯಂತ ಪುನೀತ್​ ರಾಜ್​ಕುಮಾರ್ ಅವರು ಯಾವ ಮಟ್ಟಿಗಿನ ಖ್ಯಾತಿ ಹೊಂದಿದ್ದರು ಎಂಬುದಕ್ಕೆ ಈ ಸಂಗತಿಗಳೇ ಸಾಕ್ಷಿ ಒದಗಿಸುತ್ತಿವೆ. ಜಾಗತಿಕ ಮಟ್ಟದಲ್ಲಿರುವ ಹಲವು ಪತಿಷ್ಠಿತ ನ್ಯೂಸ್​ ಚಾನೆಲ್​ಗಳು ಪುನೀತ್​ ಅವರ ನಿಧನದ ಸುದ್ದಿ ಬಿತ್ತರಿಸಿವೆ.

ವಿದೇಶಿ ನ್ಯೂಸ್​ ಚಾನೆಲ್​ಗಳಲ್ಲಿ ಪುನೀತ್​ ನಿಧನದ ಸುದ್ದಿ; ಸೌತ್​ ಕೊರಿಯಾದಲ್ಲೂ ಅಭಿಮಾನದ ಹೊಳೆ
ವಿದೇಶಿ ನ್ಯೂಸ್​ ಚಾನೆಲ್​ಗಳಲ್ಲಿ ಪುನೀತ್​ ನಿಧನದ ಸುದ್ದಿ
Follow us
TV9 Web
| Updated By: ಮದನ್​ ಕುಮಾರ್​

Updated on: Oct 31, 2021 | 1:58 PM

ಪುನೀತ್​ ರಾಜ್​ಕುಮಾರ್​ ಅವರನ್ನು ಕೋಟ್ಯಂತರ ಜನರು ಆರಾಧಿಸುತ್ತಿದ್ದರು. ಅವರ ನಟನೆಗೆ ಅಪಾರ ಸಂಖ್ಯೆಯ ಅಭಿಮಾನಿಗಳು ಫಿದಾ ಆಗಿದ್ದರು. ಕೇವಲ ಕರ್ನಾಟಕ ಮಾತ್ರವಲ್ಲದೇ ಅಕ್ಕ-ಪಕ್ಕದ ರಾಜ್ಯಗಳಲ್ಲಿ ಅವರಿಗೆ ಅಭಿಮಾನಿಗಳಿದ್ದಾರೆ. ಅಷ್ಟೇ ಅಲ್ಲ, ದೇಶ-ವಿದೇಶಗಳಲ್ಲೂ ಅವರ ಸಿನಿಮಾಗಳು ಸದ್ದು ಮಾಡುತ್ತಿದ್ದವು. ಹಾಗಾಗಿ ಅಲ್ಲಿನ ಸಿನಿಪ್ರಿಯರಿಗೂ ಪುನೀತ್​ ಪರಿಚಿತರಾಗಿದ್ದರು. ಆ ಕಾರಣಕ್ಕಾಗಿ ವಿದೇಶದ ಅನೇಕ ಸುದ್ದಿ ವಾಹಿನಿಗಳು ಪುನೀತ್​ ರಾಜ್​ಕುಮಾರ್​ ಅವರ ಅಗಲಿಕೆಯ ವಾರ್ತೆಯನ್ನು ಬಿತ್ತರಿಸಿವೆ.

ದಕ್ಷಿಣ ಕೊರಿಯಾದ Yonhap News ವಾಹಿನಿಯು ಪುನೀತ್​ ಅವರ ನಿಧನದ ಸುದ್ದಿಯನ್ನು ಪ್ರಸಾರ ಮಾಡಿದೆ. ನರೇಂದ್ರ ಮೋದಿ ಟ್ವಿಟರ್​ನಲ್ಲಿ ಹಂಚಿಕೊಂಡಿರುವ ಫೋಟೋ ಮತ್ತು ಬೆಂಗಳೂರಿನಲ್ಲಿ ಅಭಿಮಾನಿಗಳು ಶ್ರದ್ಧಾಂಜಲಿ ಸಲ್ಲಿಸುತ್ತಿರುವ ದೃಶಗಳನ್ನು ಈ ವಾಹಿನಿ ಬಿತ್ತರಿಸಿದೆ. ಪುನೀತ್​ ರಾಜ್​ಕುಮಾರ್​ ಅವರ ಸಾಧನೆಗಳನ್ನು ವಿವರಿಸಲಾಗಿದೆ. ಪುನೀತ್​ ನಿಧನಕ್ಕೆ ಕಾರಣ ಏನು? ಅವರ ಅಗಲಿಕೆಯಿಂದ ಅಭಿಮಾನಿಗಳು ಹೇಗೆಲ್ಲ ಕಂಬನಿ ಮಿಡಿಯುತ್ತಿದ್ದಾರೆ? ಸದ್ಯ ಬೆಂಗಳೂರಿನಲ್ಲಿ ಪರಿಸ್ಥಿತಿ ಯಾರ ರೀತಿ ಇದೆ ಎಂಬುದನ್ನು ಈ ನ್ಯೂಸ್​ ಚಾನೆಲ್​ನಲ್ಲಿ ತಿಳಿಸಲಾಗಿದೆ.

ಅದೇ ರೀತಿ ಜಾಗತಿಕ ಮಟ್ಟದಲ್ಲಿ ಖ್ಯಾತಿ ಹೊಂದಿರುವ ‘ಬಿಬಿಸಿ’ ಸುದ್ದಿ ವಾಹಿನಿ ಕೂಡ ಪುನೀತ್​ ನಿಧನದ ಸುದ್ದಿಯನ್ನು ಪ್ರಸಾರ ಮಾಡಿದೆ. ಪುನೀತ್​ ಅವರು ದಕ್ಷಿಣ ಭಾರತದ ಸೂಪರ್​ ಸ್ಟಾರ್​ ಆಗಿದ್ದರು ಎಂದು ಬಣ್ಣಿಸಿದೆ. ಸಿನಿಮಾ, ಕಿರುತೆರೆ ಮೂಲಕ ‘ಪವರ್​ ಸ್ಟಾರ್​’ ಯಾವ ರೀತಿ ಅಭಿಮಾನಿಗಳ ಮೇಲೆ ಪ್ರಭಾವ ಬೀರಿದ್ದರು ಎಂಬುದನ್ನು ಚರ್ಚಿಸಲಾಗಿದೆ. ವಿಶ್ವಾದ್ಯಂತ ಪುನೀತ್​ ರಾಜ್​ಕುಮಾರ್ ಅವರು ಹೊಂದಿದ್ದ ಖ್ಯಾತಿಗೆ ಈ ಸಂಗತಿಗಳೇ ಸಾಕ್ಷಿ ಒದಗಿಸುತ್ತಿವೆ.

ಪುನೀತ್​ ನಿಧನರಾದ ಸುದ್ದಿ ತಿಳಿದ ಕೂಡಲೇ ಪಾಕಿಸ್ತಾನದಿಂದಲೂ ಅಭಿಮಾನಿಯೊಬ್ಬರು ಗಾನ ನಮನ ಸಲ್ಲಿಸಿದ್ದರು. ‘ರಾಜಕುಮಾರ’ ಸಿನಿಮಾದ ‘ಗೊಂಬೆ ಹೇಳುತೈತೆ..’ ಹಾಗೂ ‘ಮಿಲನ’ ಸಿನಿಮಾದ ‘ನಿನ್ನಿಂದಲೇ ನಿನ್ನಿಂದಲೇ..’ ಗೀತೆಯನ್ನು ಹೇಳುವ ಮೂಲಕ ಶ್ರದ್ಧಾಂಜಲಿ ಅರ್ಪಿಸಿದ್ದಾರೆ. ಸದ್ಯ ಈ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ವೈರಲ್ ಆಗಿದೆ.

ಪುನೀತ್​ ರಾಜ್​ಕುಮಾರ್​ ಅವರ ಅಂತ್ಯಕ್ರಿಯೆಯನ್ನು ಇಂದು (ಅ.31) ಮುಂಜಾನೆ ನೆರವೇರಿಸಲಾಗಿದೆ.​ ಅಂತ್ಯಕ್ರಿಯೆ ವೇಳೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಅಣ್ಣ ಶಿವರಾಜ್​ಕುಮಾರ್​, ಪತ್ನಿ ಅಶ್ವಿನಿ, ಮಕ್ಕಳಾದ ಧೃತಿ ಹಾಗೂ ವಂದಿತಾ ಕಣ್ಣೀರು ಹಾಕುತ್ತಿರುವ ದೃಶ್ಯ ಮನ ಕಲಕುವಂತಿತ್ತು. ಪುನೀತ್​ ಅವರಿಗೆ ಗಂಡು ಮಕ್ಕಳಿಲ್ಲ. ಆ ಕಾರಣದಿಂದ ಅವರ ಸಹೋದರ ರಾಘವೇಂದ್ರ ರಾಜ್​ಕುಮಾರ್​ ಅವರ ಪುತ್ರ ವಿನಯ್​ ರಾಜ್​ಕುಮಾರ್​ ಅವರಿಂದ ಅಂತಿಮ ವಿಧಿವಿಧಾನಗಳನ್ನು ಮಾಡಿಸಲಾಯಿತು. ಬಳಿಕ ಪುನೀತ್​ ಪುತ್ರಿಯರು ಅಪ್ಪನ ಸಮಾಧಿಗೆ ಪೂಜೆ ಸಲ್ಲಿಸಿದರು.

ಇದನ್ನೂ ಒದಿ:

Puneeth Rajkumar: ಶಿವಣ್ಣನ ಎದುರು ಪುನೀತ್​ ಹೇಳಿಕೊಂಡಿದ್ದ ಆಸೆ ಈಡೇರಲೇ ಇಲ್ಲ; ಅಭಿಮಾನಿಗಳ ಹೃದಯ ನುಚ್ಚುನೂರು

Puneeth Rajkumar: ಪುನೀತ್​ಗೆ ಸುದೀಪ್​ ನುಡಿ ನಮನ; ಅಂತ್ಯಕ್ರಿಯೆ ವೇಳೆ ಮಕ್ಕಳ ಬಗ್ಗೆ ಯೋಚಿಸಿ ಕಣ್ಣೀರಿಟ್ಟ ಕಿಚ್ಚ

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ