Puneeth Rajkumar: ಶಿವಣ್ಣನ ಎದುರು ಪುನೀತ್​ ಹೇಳಿಕೊಂಡಿದ್ದ ಆಸೆ ಈಡೇರಲೇ ಇಲ್ಲ; ಅಭಿಮಾನಿಗಳ ಹೃದಯ ನುಚ್ಚುನೂರು

Puneeth Rajkumar Death: ‘ಸಲಗ’ ಸಿನಿಮಾದ ಪ್ರೀ-ರಿಲೀಸ್​ ಇವೆಂಟ್​ ವೇದಿಕೆ ಮೇಲೆ ಪುನೀತ್​ ರಾಜ್​ಕುಮಾರ್​ ಅವರು ತಮ್ಮ ಮನದಾಸೆಯನ್ನು ವ್ಯಕ್ತಪಡಿಸಿದ್ದರು. ಅದನ್ನು ಕೇಳಿ ಶಿವರಾಜ್​ಕುಮಾರ್​ ಖುಷಿ ಆಗಿದ್ದರು. ಆದರೆ ಆ ಕನಸು ನನಸಾಗಲೇ ಇಲ್ಲ.

Puneeth Rajkumar: ಶಿವಣ್ಣನ ಎದುರು ಪುನೀತ್​ ಹೇಳಿಕೊಂಡಿದ್ದ ಆಸೆ ಈಡೇರಲೇ ಇಲ್ಲ; ಅಭಿಮಾನಿಗಳ ಹೃದಯ ನುಚ್ಚುನೂರು
ಶಿವರಾಜ್​ಕುಮಾರ್​​, ಪುನೀತ್​ ರಾಜ್​ಕುಮಾರ್
Follow us
TV9 Web
| Updated By: ಮದನ್​ ಕುಮಾರ್​

Updated on: Oct 29, 2021 | 3:31 PM

ಹೃದಯಾಘಾತದಿಂದ ನಟ ಪುನೀತ್​ ರಾಜ್​ಕುಮಾರ್​ ಅವರು ಇಂದು (ಅ.29) ನಿಧನರಾಗಿದ್ದಾರೆ. ಈ ಕಹಿ ಘಟನೆಯನ್ನು ಯಾರೂ ಊಹಿಸಿರಲಿಲ್ಲ. ಚಿತ್ರರಂಗದಲ್ಲಿ ಇನ್ನೂ ಮಿಂಚಿ ಮೆರೆಯಬೇಕಾಗಿದ್ದ ಪುನೀತ್​ ಅವರು ಸಾವಿನ ಹಾದಿ ಹಿಡಿದಿರುವುದು ಎಲ್ಲರಿಗೂ ತೀವ್ರ ನೋವುಂಟು ಮಾಡಿದೆ. ಈ ಘಟನೆಯಿಂದ ಅಭಿಮಾನಿಗಳ ಹೃದಯ ಛಿದ್ರವಾಗಿದೆ. ಕೆಲವೇ ದಿನಗಳ ಹಿಂದೆ ಪುನೀತ್​ ರಾಜ್​ಕುಮಾರ್​ ಅವರು ತಮ್ಮದೊಂದು ದೊಡ್ಡ ಕನಸಿನ ಬಗ್ಗೆ ಹೇಳಿಕೊಂಡಿದ್ದರು. ಸಹೋದರ ಶಿವರಾಜ್​ಕುಮಾರ್​ ನಟನೆಯ ಚಿತ್ರಕ್ಕೆ ನಿರ್ದೇಶನ ಮಾಡಬೇಕು ಎಂದು ಅವರು ಕನಸು ಕಂಡಿದ್ದರು.

ಅದು ‘ಸಲಗ’ ಸಿನಿಮಾದ ಪ್ರೀರಿಲೀಸ್​ ಇವೆಂಟ್​. ಆ ವೇದಿಕೆ ಮೇಲೆ ಪುನೀತ್​ ರಾಜ್​ಕುಮಾರ್​ ಅವರು ತಮ್ಮ ಮನದಾಸೆಯನ್ನು ವ್ಯಕ್ತಪಡಿಸಿದ್ದರು. ‘ಒಂದು ಕಾಲದಲ್ಲಿ ಡೈರೆಕ್ಷನ್​ ಮಾಡಬೇಕು ಎಂಬ ಹುಚ್ಚು ನನಗೂ ಇತ್ತು. ಶಿವಣ್ಣನ ಸಿನಿಮಾವನ್ನೇ ನಿರ್ದೇಶನ ಮಾಡಬೇಕು. ಯಾಕೆಂದರೆ ಶಿವಣ್ಣ ಯಾವಾಗಲೂ ನಿರ್ದೇಶಕರ ನಟ’ ಎಂದು ಪುನೀತ್​ ಹೇಳಿದ್ದರು.

‘ಒಂದು ಒಳ್ಳೆಯ ಕಾನ್ಸೆಪ್ಟ್​ ತೆಗೆದುಕೊಂಡು ಬಂದು, ಅಭಿಮಾನಿಗಳು ಸೀಟ್​ ತುದಿಯಲ್ಲಿ ಕುಳಿತು ನೋಡುವಂತಹ ಥ್ರಿಲ್ಲರ್​ ಸಿನಿಮಾವನ್ನು ಖಂಡಿತಾ ಮಾಡುತ್ತೇನೆ. ಸಂತೋಷ್​ ಆನಂದ್​​ರಾಮ್​ ನನಗೆ ಡೈಲಾಗ್​ ಬರೆದುಕೊಡುತ್ತಾರೆ. ಚೇತನ್​ ಕುಮಾರ್​ ನನಗೆ ​ಸಪೋರ್ಟ್​ ಮಾಡೋಕೆ ಇರುತ್ತಾರೆ. ಇವರೆಲ್ಲ ಇರುವಾಗ ನಾನು ಸ್ಟೈಲ್​ ಆಗಿ ಬಂದು ಆ್ಯಕ್ಷನ್​-ಕಟ್​ ಹೇಳುತ್ತೇನೆ’ ಎಂದು ಪವರ್​ ಸ್ಟಾರ್​ ಹೇಳಿದ್ದರು.

ಪುನೀತ್​ ಅವರ ಆಸೆಗೆ ಉಪೇಂದ್ರ ಪ್ರತಿಕ್ರಿಯೆ ನೀಡಿದ್ದರು. ‘ನೀವು ನಿರ್ದೇಶನ ಮಾಡಿದರೆ ನಾನು ಸಹಾಯಕ ನಿರ್ದೇಶಕ ಆಗುತ್ತೇನೆ’ ಎಂದು ಅದೇ ವೇದಿಕೆಯಲ್ಲಿ ಉಪ್ಪಿ ಘೋಷಿಸಿದ್ದರು. ಆದರೆ ಪುನೀತ್​ ರಾಜ್​ಕುಮಾರ್​ ಕಂಡ ಆ ಕನಸು ಈಡೇರಲೇ ಇಲ್ಲ. ಆ ಕಾರ್ಯಕ್ರಮದಲ್ಲಿ ಹಾಜರಾಗಿದ್ದ ಶಿವರಾಜ್​ಕುಮಾರ್​ ಅವರು ಸಹೋದರನ ಬಗ್ಗೆ ಮನಸಾರೆ ಮಾತನಾಡಿದ್ದರು. ‘ಅಪ್ಪು ನಮ್ಮೆಲ್ಲರ ಹೆಮ್ಮೆ’ ಎಂದು ಹಾಡಿಹೊಗಳಿದ್ದರು. ಅದೆಲ್ಲವೂ ಈಗ ನೆನಪು ಮಾತ್ರ.

ಪ್ರಸ್ತುತ ಹಲವು ಸಿನಿಮಾ ಕೆಲಸಗಳಲ್ಲಿ ಅಪ್ಪು ತೊಡಗಿಕೊಂಡಿದ್ದರು. ಪವನ್​ ಕುಮಾರ್​ ನಿರ್ದೇಶನದ ‘ದ್ವಿತ್ವ’, ಚೇತನ್​ಕುಮಾರ್​ ನಿರ್ದೇಶನದ ‘ಜೇಮ್ಸ್​’ ಮುಂತಾದ ಸಿನಿಮಾಗಳು ಅವರ ಕೈಯಲ್ಲಿದ್ದವು. ಆದರೆ ಎಲ್ಲವನ್ನೂ ಬಿಟ್ಟು ಪುನೀತ್ ಇಹಲೋಕ ತ್ಯಜಿಸಿದ್ದಾರೆ.

ಇದನ್ನೂ ಓದಿ:

ಪುನೀತ್​ ರಾಜ್​ಕುಮಾರ್​ ನಿಧನ: ಕ್ಷಣಕ್ಷಣದ ಮಾಹಿತಿಗೆ ಇಲ್ಲಿ ಕ್ಲಿಕ್​ ಮಾಡಿ

Puneeth Rajkumar Obituary: ಹೃದಯ ಬಡಿತ ನಿಲ್ಲಿಸುವುದಕ್ಕೂ ಮುನ್ನ ಕೋಟ್ಯಂತರ ಜನರ ಹೃದಯ ಗೆದ್ದಿದ್ದ ಪುನೀತ್

ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ಧಾರವಾಡದಲ್ಲಿ ರೈತರೊಂದಿಗೆ ವಿತಂಡವಾದಕ್ಕಿಳಿದ ಸಚಿವ ಸಂತೋಷ್ ಲಾಡ್
ಧಾರವಾಡದಲ್ಲಿ ರೈತರೊಂದಿಗೆ ವಿತಂಡವಾದಕ್ಕಿಳಿದ ಸಚಿವ ಸಂತೋಷ್ ಲಾಡ್
ನೋಟೀಸ್ ಹಿಂಪಡೆಯಲು ಸಿದ್ದರಾಮಯ್ಯ ಮೌಖಿಕ ಆದೇಶ ನೀಡಿದ್ದಾರೆ: ರೆಡ್ಡಿ
ನೋಟೀಸ್ ಹಿಂಪಡೆಯಲು ಸಿದ್ದರಾಮಯ್ಯ ಮೌಖಿಕ ಆದೇಶ ನೀಡಿದ್ದಾರೆ: ರೆಡ್ಡಿ
ಶೋಭಾ ಶೆಟ್ಟಿಗೆ ಈಗ ಉಗ್ರಂ ಮಂಜು ನೇರ ಟಾರ್ಗೆಟ್​; ಮುಖಕ್ಕೆ ಬಿತ್ತು ಕೆಸರು
ಶೋಭಾ ಶೆಟ್ಟಿಗೆ ಈಗ ಉಗ್ರಂ ಮಂಜು ನೇರ ಟಾರ್ಗೆಟ್​; ಮುಖಕ್ಕೆ ಬಿತ್ತು ಕೆಸರು
ವಕ್ಪ್ ಕಾಯ್ದೆಗೆ ತಿದ್ದುಪಡಿ ಬರುವವರೆಗೆ ಹೋರಾಟ ನಿಲ್ಲದು: ಶೋಭಾ ಕರಂದ್ಲಾಜೆ
ವಕ್ಪ್ ಕಾಯ್ದೆಗೆ ತಿದ್ದುಪಡಿ ಬರುವವರೆಗೆ ಹೋರಾಟ ನಿಲ್ಲದು: ಶೋಭಾ ಕರಂದ್ಲಾಜೆ