Puneeth Rajkumar Obituary: ಹೃದಯ ಬಡಿತ ನಿಲ್ಲಿಸುವುದಕ್ಕೂ ಮುನ್ನ ಕೋಟ್ಯಂತರ ಜನರ ಹೃದಯ ಗೆದ್ದಿದ್ದ ಪುನೀತ್

Puneeth Rajkumar Heart Attack: ಪುನೀತ್​ ರಾಜ್​ಕುಮಾರ್​ ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವರ ಅಗಲಿಕೆಗೆ ಎಲ್ಲರೂ ಕಂಬನಿ ಮಿಡಿಯುತ್ತಿದ್ದಾರೆ. ಬಣ್ಣದಲೋಕದಲ್ಲಿ ಅವರು ಸಾಗಿಬಂದ ಹಾದಿಯನ್ನು ಮರೆಯಲು ಸಾಧ್ಯವಿಲ್ಲ.

Puneeth Rajkumar Obituary: ಹೃದಯ ಬಡಿತ ನಿಲ್ಲಿಸುವುದಕ್ಕೂ ಮುನ್ನ ಕೋಟ್ಯಂತರ ಜನರ ಹೃದಯ ಗೆದ್ದಿದ್ದ ಪುನೀತ್
ಪುನೀತ್​ ರಾಜ್​ಕುಮಾರ್​
Follow us
TV9 Web
| Updated By: ಮದನ್​ ಕುಮಾರ್​

Updated on: Oct 29, 2021 | 2:46 PM

ಪುನೀತ್​ ರಾಜ್​ಕುಮಾರ್​ (Puneeth Rajkumar) ಇನ್ನಿಲ್ಲ ಎಂಬ ಸುದ್ದಿಯನ್ನು ನಂಬಲು ಸಾಧ್ಯವಾಗುತ್ತಲೇ ಇಲ್ಲ. ಫಿಟ್ನೆಸ್​ಗೆ ಹೆಚ್ಚು ಕಾಳಜಿ ನೀಡುತ್ತಿದ್ದ ಅವರು ಹೃದಯಾಘಾತದಿಂದ ಶುಕ್ರವಾರ (ಅ.29) ಮೃತರಾಗಿದ್ದಾರೆ. ಇಡೀ ಕರುನಾಡಿಗೆ ಇದು ಕರಾಳ ದಿನ. ‘ಪವರ್​ ಸ್ಟಾರ್​’ ಅಭಿಮಾನಿಗಳು ಶೋಕ ಸಾಗರದಲ್ಲಿ ಮುಳುಗಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಚಾಪು ಮೂಡಿಸಿದ್ದ ಅಪ್ಪು ಇಹಲೋಕ ತ್ಯಜಿಸಿರುವುದು ತೀವ್ರ ನೋವಿನ ಸಂಗತಿ. ಚಿಕ್ಕ ವಯಸ್ಸಿನಿಂದಲೂ ಬಣ್ಣದ ಲೋಕದಲ್ಲಿ ಸಕ್ರಿಯರಾಗಿದ್ದ ಪುನೀತ್​ ಅವರು ಸ್ಯಾಂಡಲ್​ವುಡ್​ಗೆ ನೀಡಿದ ಕೊಡುಗೆ ಅಪಾರ. ಅವರ ಸಿನಿಮಾ ಜರ್ನಿ ನೋಡಿದರೆ ಎಷ್ಟೋ ಜನರಿಗೆ ಸ್ಫೂರ್ತಿ ಆಗುವಂಥದ್ದು. ಅವರು ಸಾಗಿ ಬಂದ ಬಣ್ಣ ಬದುಕಿನ ಪಯಣ ಹೀಗಿತ್ತು..

ಅಂದು ಎಲ್ಲರ ಮೆಚ್ಚಿನ ಮಾಸ್ಟರ್​ ಲೋಹಿತ್​

ಡಾ. ರಾಜ್​ಕುಮಾರ್​ ಪುತ್ರನಾದ ಕಾರಣ ಪುನೀತ್​ ರಾಜ್​ಕುಮಾರ್​ ಅವರಿಗೆ ತುಂಬ ಚಿಕ್ಕ ವಯಸ್ಸಿನಲ್ಲಿಯೇ ಸಿನಿಮಾರಂಗದ ಒಡನಾಟ ಬೆಳೆಯಿತು. ಬಾಲಕನಾಗಿದ್ದಾಗಲೇ ಅವರು ಕ್ಯಾಮೆರಾ ಎದುರಿಸಿದರು. ಬಾಲನಟನಾಗಿ ಅನೇಕ ಸಿನಿಮಾಗಳಲ್ಲಿ ಬಣ್ಣ ಹಚ್ಚಿದರು. ಆಗಲೇ ಅವರು ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಸಂಪಾದಿಸಿದರು. 14ಕ್ಕೂ ಅಧಿಕ ಸಿನಿಮಾಗಳಲ್ಲಿ ಅವರು ಬಾಲನಟನಾಗಿ ಅಭಿನಯಿಸಿದ್ದರು. ಸನಾದಿ ಅಪ್ಪಣ್ಣ, ತಾಯಿಗೆ ತಕ್ಕ ಮಗ, ವಸಂತ ಗೀತ, ಭಾಗ್ಯವಂತರು ಮುಂತಾದ ಸಿನಿಮಾಗಳಲ್ಲಿ ಪುನೀತ್​ ನಟನೆಗೆ ಜನ ಮೆಚ್ಚುಗೆ ಸೂಚಿಸಿದ್ದರು. ಆಗ ಅವರನ್ನು ಮಾಸ್ಟರ್​ ಲೋಹಿತ್​ ಎಂಬ ಹೆಸರಿನಿಂದ ಕರೆಯಲಾಗುತ್ತಿತ್ತು.

9ನೇ ವರ್ಷಕ್ಕೆ ನ್ಯಾಷನಲ್​ ಅವಾರ್ಡ್​!

ನಟನೆ ಎಂಬುದು ಪುನೀತ್​ ರಾಜ್​ಕುಮಾರ್​ ಅವರ ರಕ್ತದಲ್ಲೇ ಇತ್ತು. ಚಿಕ್ಕ ವಯಸ್ಸಿನಲ್ಲೇ ಅವರು ಯಾವ ಪಾತ್ರ ಕೊಟ್ಟರೂ ಲೀಲಾಜಾಲವಾಗಿ ನಿಭಾಯಿಸುವ ಕಲೆಯನ್ನು ಮೈಗೂಡಿಸಿಕೊಂಡಿದ್ದರು. ‘ಭಕ್ತ ಪ್ರಹ್ಲಾದ’ ಸಿನಿಮಾದಲ್ಲಿ ಪುನೀತ್​ ರಾಜ್​ಕುಮಾರ್​ ಅವರ ನಟನೆಯನ್ನು ಸಿನಿಪ್ರಿಯರು ಎಂದಿಗೂ ಮರೆಯುವಂತಿಲ್ಲ. ‘ಬೆಟ್ಟದ ಹೂವು’ ಸಿನಿಮಾದಲ್ಲಿನ ಅವರ ನಟನೆಗೆ ಅಪಾರ ಮೆಚ್ಚುಗೆ ವ್ಯಕ್ತವಾಗಿತ್ತು. ಅಲ್ಲದೇ, ಆ ಚಿತ್ರದಲ್ಲಿನ ನಟನೆಗಾಗಿ ಅವರಿಗೆ ಅತ್ಯುತ್ತಮ ಬಾಲನಟ ರಾಷ್ಟ್ರ ಪ್ರಶಸ್ತಿ ಕೂಡ ಸಿಕ್ಕಿತ್ತು.

ಮೊದಲ ಚಿತ್ರ ‘ಅಪ್ಪು’ ಸೂಪರ್​ ಹಿಟ್​

1989ರಲ್ಲಿ ತೆರೆಕಂಡ ‘ಪರಷುರಾಮ್​’ ಸಿನಿಮಾದ ಬಳಿಕ ಪುನೀತ್​ ರಾಜ್​ಕುಮಾರ್​ ಅವರು ನಟನೆಯಿಂದ ಒಂದಷ್ಟು ವರ್ಷ ಬ್ರೇಕ್​ ತೆಗೆದುಕೊಂಡರು. 2002ರಲ್ಲಿ ‘ಅಪ್ಪು’ ಸಿನಿಮಾ ಮೂಲಕ ಪುನೀತ್​ ಹೀರೋ ಆಗಿ ಸ್ಯಾಂಡಲ್​ವುಡ್​ನಲ್ಲಿ ಹೊಸ ಅಧ್ಯಾಯ ಶುರುಮಾಡಿದರು. ಮೊದಲ ಚಿತ್ರವೇ ಸೂಪರ್​ಹಿಟ್​ ಆಯಿತು. ಆ ಸಿನಿಮಾಗೆ ತೆಲುಗಿನ ಖ್ಯಾತ ನಿರ್ದೇಶಕ ಪುರಿ ಜಗನ್ನಾಥ್​ ಆ್ಯಕ್ಷನ್​-ಕಟ್​ ಹೇಳಿದ್ದರು. ನಂತರ ತೆರೆಕಂಡ ‘ಅಭಿ’, ‘ಆಕಾಶ್​’, ‘ಅರಸು’ ಸಿನಿಮಾಗಳೆಲ್ಲವೂ ಭಾರಿ ಯಶಸ್ಸು ತಂದುಕೊಟ್ಟವು.

ಇದನ್ನೂ ಓದಿ:

Puneeth Rajkumar: ಪುನೀತ್​ ರಾಜ್​ಕುಮಾರ್​ ಹೃದಯಾಘಾತದಿಂದ ನಿಧನ; ಕರ್ನಾಟಕದ ಪಾಲಿಗೆ ಕರಾಳ ಶುಕ್ರವಾರ

‘ನಮ್ಮ ಫ್ಯಾಮಿಲಿ ಅಂತಲ್ಲ.. ಫ್ಯಾಮಿಲಿ ಅಂದ್ರೆ ಚಿತ್ರರಂಗ’: ನಿನ್ನ ಸನಿಹಕೆ ಚಿತ್ರ ನೋಡಿದ ಬಳಿಕ ಪುನೀತ್​ ಮಾತು

ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ಧಾರವಾಡದಲ್ಲಿ ರೈತರೊಂದಿಗೆ ವಿತಂಡವಾದಕ್ಕಿಳಿದ ಸಚಿವ ಸಂತೋಷ್ ಲಾಡ್
ಧಾರವಾಡದಲ್ಲಿ ರೈತರೊಂದಿಗೆ ವಿತಂಡವಾದಕ್ಕಿಳಿದ ಸಚಿವ ಸಂತೋಷ್ ಲಾಡ್
ನೋಟೀಸ್ ಹಿಂಪಡೆಯಲು ಸಿದ್ದರಾಮಯ್ಯ ಮೌಖಿಕ ಆದೇಶ ನೀಡಿದ್ದಾರೆ: ರೆಡ್ಡಿ
ನೋಟೀಸ್ ಹಿಂಪಡೆಯಲು ಸಿದ್ದರಾಮಯ್ಯ ಮೌಖಿಕ ಆದೇಶ ನೀಡಿದ್ದಾರೆ: ರೆಡ್ಡಿ
ಶೋಭಾ ಶೆಟ್ಟಿಗೆ ಈಗ ಉಗ್ರಂ ಮಂಜು ನೇರ ಟಾರ್ಗೆಟ್​; ಮುಖಕ್ಕೆ ಬಿತ್ತು ಕೆಸರು
ಶೋಭಾ ಶೆಟ್ಟಿಗೆ ಈಗ ಉಗ್ರಂ ಮಂಜು ನೇರ ಟಾರ್ಗೆಟ್​; ಮುಖಕ್ಕೆ ಬಿತ್ತು ಕೆಸರು