Puneeth Rajkumar: ‘ದೇವರು ಇವರೆಲ್ಲರಿಗೂ ಒಳ್ಳೆಯದು ಮಾಡಲಿ’; ಇದು ವೇದಿಕೆ ಮೇಲೆ ಪುನೀತ್​ ಕೊನೆಯ ಮಾತು

Puneeth Rajkumar Last Speech: ಶುಕ್ರವಾರ ಬೆಳಗ್ಗೆ ಜಿಮ್​ನಲ್ಲಿ ವರ್ಕೌಟ್ ಮಾಡುವಾಗ ಪುನೀತ್ ರಾಜ್​​ಕುಮಾರ್ ಅವರಿಗೆ ಆರೋಗ್ಯ ಸಮಸ್ಯೆ ಉಂಟಾಯಿತು. ಹೃದಯಕ್ಕೆ ಸಂಬಂಧಿಸಿದ ಸಮಸ್ಯೆ ಕಾಣಿಸಿಕೊಂಡಿದೆ ಎಂದು ಹೇಳಲಾಗಿತ್ತು.

Puneeth Rajkumar: ‘ದೇವರು ಇವರೆಲ್ಲರಿಗೂ ಒಳ್ಳೆಯದು ಮಾಡಲಿ’; ಇದು ವೇದಿಕೆ ಮೇಲೆ ಪುನೀತ್​ ಕೊನೆಯ ಮಾತು
ಶಿವರಾಜ್​ಕುಮಾರ್​, ಯಶ್​, ಪುನೀತ್​
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on:Oct 29, 2021 | 3:08 PM

ಪುನೀತ್​ ರಾಜ್​ಕುಮಾರ್​ ಕೇವಲ 46ನೇ ವಯಸ್ಸಿಗೆ ಮೃತಪಟ್ಟಿದ್ದಾರೆ. ಇದು ಇಡೀ ಕರ್ನಾಟಕದ ಜನತೆಗೆ ದೊಡ್ಡ ಶಾಕ್​ ಆಗಿದೆ. ಅವರ ಅಭಿಮಾನಿಗಳು ಈ ಸುದ್ದಿಯನ್ನು ನಂಬೋಕೆ ರೆಡಿ ಇಲ್ಲ. ಈ ಮಧ್ಯೆ ಅವರ ಕೊನೆಯ ಮಾತುಗಳು ಈಗ ವೈರಲ್ ​ಆಗುತ್ತಿದೆ.

ಶುಕ್ರವಾರ ಬೆಳಗ್ಗೆ ಜಿಮ್​ನಲ್ಲಿ ವರ್ಕೌಟ್ ಮಾಡುವಾಗ ಪುನೀತ್ ರಾಜ್​​ಕುಮಾರ್ ಅವರಿಗೆ ಆರೋಗ್ಯ ಸಮಸ್ಯೆ ಉಂಟಾಯಿತು. ಹೃದಯಕ್ಕೆ ಸಂಬಂಧಿಸಿದ ಸಮಸ್ಯೆ ಕಾಣಿಸಿಕೊಂಡಿದೆ ಎಂದು ಹೇಳಲಾಗಿತ್ತು. ನಂತರ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ, ಅವರು ಆಸ್ಪತ್ರೆಯಿಂದ ಹೊರಬರಲೆ ಇಲ್ಲ.

ಇತ್ತೀಚೆಗೆ ‘ಭಜರಂಗಿ 2’ ಪ್ರೀರಿಲೀಸ್​ ಇವೆಂಟ್​ ನಡೆಸಲಾಗಿತ್ತು. ಈ ವೇಳೆ ಪುನೀತ್​ ಮಾತನಾಡಿದ್ದರು. ‘ತುಂಬಾ ಹೆಮ್ಮೆ ಪಡೋ ವಿಚಾರ ಏನೆಂದರೆ ಲಾಕ್​ಡೌನ್​ ನಂತರ ಸಿನಿಮಾಗಳು ರಿಲೀಸ್​ ಆಗುತ್ತಿವೆ. ಅದೇ ರೀತಿ ಇವತ್ತಿನ ಭಜರಂಗಿ 2 ಪ್ರೀ ರಿಲೀಸ್​ ಇವೆಂಟ್​ ಕಾರ್ಯಕ್ರಮದಲ್ಲಿದ್ದೇವೆ. ಅಕ್ಟೋಬರ್​ 29ರಂದು ಸಿನಿಮಾ ತೆರೆಗೆ ಬರುತ್ತಿದೆ. 2019ರಲ್ಲೇ ಸಿನಿಮಾ ಶುರುವಾಗಿತ್ತು. ಆದರೆ, ಕೊವಿಡ್ ಕಾರಣದಿಂದ ಮುಂದೂಡಲಾಗಿತ್ತು. ನಾನು ಸಿನಿಮಾದ ದೃಶ್ಯಗಳನ್ನು ನೋಡಿದ್ದೇನೆ. ಜಯಣ್ಣ ಹಾಗೂ ಭೋಗೇಂದ್ರ ಅವರು ಒಂದೊಳ್ಳೆಯ ಸಿನಿಮಾ ಕೊಡಲಿ. ದೇವರು ಇವರೆಲ್ಲರಿಗೂ ಒಳ್ಳೆದು ಮಾಡಲಿ. ಸಿನಿಮಾ ದೊಡ್ಡ ಸಕ್ಸಸ್​ ಕಾಣಲಿ’ ಎಂದಿದ್ದರು ಪುನೀತ್​.

(ಪುನೀತ್​ ಮಾತು, 2:19 ಗಂಟೆಯಿಂದ ಪ್ರಾರಂಭ)

ವೈದ್ಯರು ಏನಂದಿದ್ರು?

‘ಇವತ್ತು ಬೆಳಗ್ಗೆ 11:30ಕ್ಕೆ ಚೆಸ್ಟ್​ ಪೆನ್​ ಆಗಿ ಇಲ್ಲಿ ಬಂದಿದ್ದಾರೆ. ಬರುವಾಗ ಸ್ವಲ್ಪ ಸೀರಿಯಸ್​ ಆಗಿತ್ತು. ಗಂಭೀರ ಹೃದಯಾಘಾತವಾಗಿದೆ. ಇನ್ನೂ, ಆರೋಗ್ಯ ಗಂಭೀರವಾಗಿದೆ. ಏನನ್ನೂ ಹೇಳೋಕೆ ಆಗಲ್ಲ. ನಮ್ಮ ಪ್ರಯತ್ನ ನಾವು ಮಾಡುತ್ತಿದ್ದೇವೆ’ ಎಂದು ವೈದ್ಯರು ತಿಳಿಸಿದ್ದರು.

ಇದನ್ನೂ ಓದಿ: Puneeth Rajkumar: ಪುನೀತ್​ ರಾಜ್​ಕುಮಾರ್​ ಹೃದಯಾಘಾತದಿಂದ ನಿಧನ; ಕರ್ನಾಟಕದ ಪಾಲಿಗೆ ಕರಾಳ ಶುಕ್ರವಾರ

Published On - 2:48 pm, Fri, 29 October 21