ಸಾವಿಗೆ ಯಾವ ವಯಸಾದರೇನು? ಅಕಾಲಿಕ ಮರಣ ಹೊಂದಿದ ಕನ್ನಡದ ಸಿನಿತಾರೆಯರು ಇವರು
ತಮ್ಮ ವಿಭಿನ್ನ ವಿಭಿನ್ನ ಪಾತ್ರಗಳ ಮೂಲಕ ಜನರ ಮನಸ್ಸಲ್ಲಿ ಮನೆ ಮಾಡುವ ನಟರು ತಮ್ಮನ್ನು ಅಗಲಿದಾಗ ಉಂಟಾಗುವ ನೋವು ಪದಗಳಲ್ಲಿ ಹೇಳಲು ಸಾಧ್ಯವಿಲ್ಲ. ಜೀವನದಲ್ಲಿ ಒಮ್ಮೆಯಾದರೂ ತಮ್ಮ ನೆಚ್ಚಿನ ನಟನನ್ನು ನೋಡುತ್ತೇವೆ. ಅವರ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳುತ್ತೇವೆ ಎಂದು ಕನಸು ಕಾಣುವ ಅಭಿಮಾನಿಗಳಿಗೆ ಅವರ ಸಾವು ದೊಡ್ಡ ಆಘಾತವೇ ಆಗಿರುತ್ತೆ. ಸ್ಯಾಂಡಲ್ವುಡ್ನ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಇಂದು ತನ್ನ ಅಭಿಮಾನಿ ಬಳಗವನ್ನು ಬಿಟ್ಟು ಅಗಲಿದ್ದಾರೆ. ಈ ಸಂಗತಿ ಕೇಳಿದ ಅದೆಷ್ಟೂ ಅಭಿಮಾನಿಗಳು ದುಃಖದ ಅಲೆಗಳಲ್ಲಿ ತೇಲುತ್ತಿದ್ದಾರೆ. ರಾಷ್ಟ್ರ ಪ್ರಶಸ್ತಿ ವಿಜೇತ ಸಂಜಾರಿ ವಿಜಯ್, ಸ್ಯಾಂಡಲ್ ವುಡ್ ನಟ ಚಿರು ಸರ್ಜಾ ಅಗಲಿಕೆ ಇಂದ ನೊಂದಿದ್ದ ಅಭಿಮಾನಿಗಳು ಮತ್ತೊಬ್ಬ ಕಿರಿಯ ಮೇರು ನಟನನ್ನು ಕಳೆದುಕೊಂಡಿದ್ದಾರೆ. ಸಾಧನೆಯ ಹಾದಿಯಲ್ಲಿದ್ದ ಚಿಕ್ಕ ವಯಸ್ಸಿನಲ್ಲೇ ಅಭಿಮಾನಿ ಬಳಗಕ್ಕೆ ವಿದಾಯ ಹೇಳಿದ ಕನ್ನಡದ 10 ನಟರ ಪಟ್ಟಿ ಇಲ್ಲಿದೆ.