Daali Dhananjay: ‘ಪ್ರೀತಿಸಿದ ಹುಡುಗಿ ಸಿಗಬಾರದು, ಆ ನೋವಲ್ಲಿ ನೂರು ಕವಿತೆ ಬರಿತೀನಿ’: ಡಾಲಿ ಧನಂಜಯ್
Monsoon Raaga: ‘ಮಾನ್ಸೂನ್ ರಾಗ’ ಚಿತ್ರದ ಪ್ರೀ-ರಿಲೀಸ್ ಇವೆಂಟ್ ಅದ್ದೂರಿಯಾಗಿ ನಡೆದಿದೆ. ಈ ವೇದಿಕೆಯಲ್ಲಿ ಒನ್ ಸೈಡ್ ಲವ್ ಬಗ್ಗೆ ಡಾಲಿ ಧನಂಜಯ್ ಮಾತನಾಡಿದ್ದಾರೆ.
ನಟ ಡಾಲಿ ಧನಂಜಯ್ (Daali Dhananjay) ಅವರು ಸ್ಟಾರ್ ಕಲಾವಿದನಾಗಿ ಬೆಳೆದು ನಿಂತಿದ್ದಾರೆ. ಬಹುಭಾಷೆಯ ಚಿತ್ರರಂಗದಲ್ಲಿ ಅವರಿಗೆ ಡಿಮ್ಯಾಂಡ್ ಇದೆ. ಈಗ ಅವರು ನಟಿಸಿರುವ ‘ಮಾನ್ಸೂನ್ ರಾಗ’ (Monsoon Raaga) ಚಿತ್ರ ಬಿಡುಗಡೆಗೆ ಸಜ್ಜಾಗಿದೆ. ಮಂಗಳವಾರ (ಸೆ.13) ಬೆಂಗಳೂರಿನಲ್ಲಿ ಈ ಸಿನಿಮಾದ ಪ್ರೀ-ರಿಲೀಸ್ ಇವೆಂಟ್ ನಡೆಯಿತು. ಚಿತ್ರದಲ್ಲಿ ನಟಿಸಿರುವ ಸುಹಾನಿಸಿ (Suhasini Maniratnam) ಕೂಡ ಕಾರ್ಯಕ್ರಮಕ್ಕೆ ಬಂದಿದ್ದರು. ಟೈಮ್ ಟ್ರಾವೆಲ್ ಮೂಲಕ ಒಂದಷ್ಟು ವರ್ಷಗಳ ಹಿಂದಕ್ಕೆ ಹೋಗಿ, ಸುಹಾನಿಸಿ ಜೊತೆ ‘ಬಂಧನ’ ರೀತಿ ಸಿನಿಮಾ ಮಾಡಬೇಕು ಎಂಬ ಆಸೆಯನ್ನು ಡಾಲಿ ತೋಡಿಕೊಂಡಿದ್ದಾರೆ. ಆ ಚಿತ್ರದಲ್ಲಿ ನಾಯಕನಿಗೆ ಪ್ರೀತಿಸಿದ ಹುಡುಗಿ ಸಿಗೋದಿಲ್ಲ. ಆ ರೀತಿ ಒನ್ ಸೈಡ್ ಲವ್ ಆದರೆ ನೂರಾರು ಕವಿತೆ ಬರೆಯುವುದಾಗಿ ಧನಂಜಯ್ ಹೇಳಿದ್ದಾರೆ.
Published on: Sep 14, 2022 09:21 AM
Latest Videos