ಬುಲ್ಡೋಜರ್ ನಲಪಾಡ್ ಅಕಾಡೆಮಿ ಒಳನುಗ್ಗಿದೆ, ಆದರೆ ತೆರವು ಕಾರ್ಯಾಚರಣೆ ಮಾತ್ರ ಆರಂಭವಾಗಿಲ್ಲ!
ಮೊದಲೆರಡು ದಿನಗಳವರೆಗೆ ಬಿ ಬಿ ಎಮ್ ಪಿ ಸಿಬ್ಬಂದಿ ಪ್ರತಿಷ್ಠಿತ ಅಪಾರ್ಟ್ಮೆಂಟ್, ವಿಲ್ಲಾ ಮುಂತಾದವುಗಳ ಬಳಿಗೆ ಬುಲ್ಡೋಜರ್ ತೆಗೆದುಕೊಂಡು ಹೋಯಿತಾಗಲೀ ಒತ್ತುವರಿಯಾಗಿದ್ದ ಸ್ಥಳಗಳನ್ನು ಮಾತ್ರ ಮುಕ್ತಗೊಳಿಸಲಿಲ್ಲ
ಬೆಂಗಳೂರು ಮಹಾನಗರ ಪಾಲಿಕೆಯ ಡೆಮಾಲಿಷನ್ ಡ್ರೈವ್ ಆರಂಭಗೊಂಡು ಇಂದಿಗೆ ಮೂರು ದಿನಗಳಾಯ್ತು. ಮೊದಲೆರಡು ದಿನಗಳವರೆಗೆ ಬಿ ಬಿ ಎಮ್ ಪಿ (BBMP) ಸಿಬ್ಬಂದಿ ಪ್ರತಿಷ್ಠಿತ ಅಪಾರ್ಟ್ಮೆಂಟ್, ವಿಲ್ಲಾ ಮುಂತಾದವುಗಳ ಬಳಿಗೆ ಬುಲ್ಡೋಜರ್ ತೆಗೆದುಕೊಂಡು ಹೋಯಿತೇ ಒತ್ತುವರಿಯಾಗಿದ್ದ ಸ್ಥಳಗಳನ್ನು ಮಾತ್ರ ಮುಕ್ತಗೊಳಿಸಲಿಲ್ಲ. ಮಂಗಳವಾರ ಸಿಬ್ಬಂದಿಯು ಚಲ್ಲಘಟ್ಟದಲ್ಲಿರುವ ನಲಪಾಡ್ ಅಕಾಡೆಮಿ (Nalapad Academy) ಮುಂದೆ ಕಂಡಿದ್ದು ನಿಜ, ಆದರೆ ತೆರವು ಕಾರ್ಯಾಚರಣೆ ನಡೆಸಲಿಲ್ಲ. ಶಾಸಕ ಎನ್ ಎ ಹ್ಯಾರಿಸ್ (NA Haris) ಅವರ ಪಿಎ ಅಂತ ಹೇಳಿಕೊಂಡ ವ್ಯಕ್ತಿಯೊಬ್ಬ ತೆರವು ಕಾರ್ಯಾಚರಣೆಗೆ ಅಡ್ಡಿಪಡಿಸಿದರು. ಇಂದು ಬುಲ್ಡೋಜರ್ ಏನೋ ಅಕಾಡೆಮಿಯ ಒಳಭಾಗದಲ್ಲಿ ಕಾಣಿಸುತ್ತಿದೆ, ತೆರವು ಕಾರ್ಯಾಚರಣೆ ಬೆಳಗ್ಗೆ 11 ಗಂಟೆಯವರೆಗೆ ಶುರುವಾಗಿರಲಿಲ್ಲ.
Latest Videos