ರಾಯಬಾಗ್ ಉರಗ ತಜ್ಞ ಹಾವಿಂದ ಮೂರು ಬಾರಿ ಕಚ್ಚಿಸಿಕೊಂಡರೂ ಬದುಕುಳಿದಿದ್ದಾನೆ!
ಕುಡಿತದ ಅಮಲಿನಲ್ಲಿ ಹಾವು ಹಿಡಿಯುವ ಮೊದಲು ಅದರಿಂದ ಮೂರು ಕಚ್ಚಿಸಿಕೊಂಡಿದ್ದಾನೆ. ಆದರೂ ಹಾವಿನ ವಿಷ ಅವನ ಮೇಲೆ ಯಾವುದೇ ಪರಿಣಾಮ ಬೀರಿಲ್ಲ.
ಬೆಳಗಾವಿ: ಈ ವ್ಯಕ್ತಿ ಸ್ವಯಂ ಘೋಷಿ ಉರಗ ತಜ್ಞ (snake expert) ಮಾರಾಯ್ರೇ. ಮೊದಲು ಆತನ ಪರಿಚಯ ಹೇಳ್ತೀವಿ. ಬೆಳಗಾವಿ ಜಿಲ್ಲೆ ರಾಯಬಾಗ ತಾಲ್ಲೂಕಿನ ಫಾಲಬಾವಿ ಗ್ರಾಮದ ನಿವಾಸಿ ಮತ್ತು ಹೆಸರು ರಮೇಶ್ ಬಾಗಡೆ (Ramesh Bagade). ವಿಡಿಯೋನಲ್ಲಿ ಭಾರೀ ಗಾತ್ರದ ಹಾವೊಂದನ್ನು ಆತ ಹಿಡಿದಿದ್ದು ನಿಮಗೆ ಕಾಣಿಸುತ್ತದೆ. ಕುಡಿತದ ಅಮಲಿನಲ್ಲಿ ಹಾವು ಹಿಡಿಯುವ ಮೊದಲು ಅದರಿಂದ ಮೂರು ಕಚ್ಚಿಸಿಕೊಂಡಿದ್ದಾನೆ. ಆದರೂ ಹಾವಿನ ವಿಷ (venom) ಅವನ ಮೇಲೆ ಯಾವುದೇ ಪರಿಣಾಮ ಬೀರಿಲ್ಲ. ವಿಡಿಯೋದ ಎರಡನೇ ಭಾಗದಲ್ಲಿ ಅವನೇ ಹೇಳುವಂತೆ ಅವನಿಗೆ ಹಾವಿನ ವಿಷ ಏರುವುದಿಲ್ಲ.
Latest Videos