‘ದೊಡ್ಡದಾಗಿ ಪ್ರೀತಿ ಮಾಡಿ ಚಿಕ್ಕ ಮಕ್ಕಳಿಗೆ ಜನ್ಮ ಕೊಡೋಣ’; ಬಿಗ್ ಬಾಸ್​ನಲ್ಲಿ ಐಶ್ವರ್ಯಾಗೆ ಪ್ರಪೋಸ್ ಮಾಡಿದ ನವಾಜ್

ಸಾನ್ಯಾ ಐಯ್ಯರ್ ಹಾಗೂ ರೂಪೇಶ್ ಶೆಟ್ಟಿ ಮಧ್ಯೆ ಈ ಮೊದಲಿದ್ದಷ್ಟು ಕ್ಲೋಸ್​ನೆಸ್ ಈಗ ಉಳಿದಿಲ್ಲ. ಈ ಬೆಳವಣಿಗೆ ಮಧ್ಯೆ ಅಚ್ಚರಿಯ ಘಟನೆ ಒಂದು ನಡೆದಿದೆ.

‘ದೊಡ್ಡದಾಗಿ ಪ್ರೀತಿ ಮಾಡಿ ಚಿಕ್ಕ ಮಕ್ಕಳಿಗೆ ಜನ್ಮ ಕೊಡೋಣ’; ಬಿಗ್ ಬಾಸ್​ನಲ್ಲಿ ಐಶ್ವರ್ಯಾಗೆ ಪ್ರಪೋಸ್ ಮಾಡಿದ ನವಾಜ್
ಐಶ್ವರ್ಯಾ-ನವಾಜ್
TV9kannada Web Team

| Edited By: Rajesh Duggumane

Sep 29, 2022 | 9:34 PM

‘ಕನ್ನಡ ಬಿಗ್ ಬಾಸ್ ಸೀಸನ್ 9’ (BBK 9) ಸಾಕಷ್ಟು ಗಮನ ಸೆಳೆಯುತ್ತಿದೆ. ವಿವಿಧ ಕ್ಷೇತ್ರಗಳಿಂದ ಸ್ಪರ್ಧಿಗಳು ಬಂದಿದ್ದಾರೆ. ಹಳೆಯ ಆಟಗಾರರು ಕೂಡ ಇರುವುದರಿಂದ ಸ್ಪರ್ಧೆಯ ಮಜ ಹೆಚ್ಚಿದೆ. ಪ್ರಶಾಂತ್ ಸಂಬರ್ಗಿ ಅವರು ಎಂದಿನ ಜೋಶ್​ನಲ್ಲಿ ಆಟ ಆಡುತ್ತಿದ್ದಾರೆ. ಅವರು ಕಿರಿಕ್ ಕೂಡ ಮಾಡಿಕೊಳ್ಳುತ್ತಿದ್ದಾರೆ. ಸಾನ್ಯಾ ಐಯ್ಯರ್ (Sanya Iyer) ಹಾಗೂ ರೂಪೇಶ್ ಶೆಟ್ಟಿ ಮಧ್ಯೆ ಈ ಮೊದಲಿದ್ದಷ್ಟು ಕ್ಲೋಸ್​ನೆಸ್ ಈಗ ಉಳಿದಿಲ್ಲ. ಈ ಬೆಳವಣಿಗೆ ಮಧ್ಯೆ ಅಚ್ಚರಿಯ ಘಟನೆ ಒಂದು ನಡೆದಿದೆ. ಸೈಕ್ ನವಾಜ್ ಅವರು ಬೈಕ್ ರೇಸರ್ ಐಶ್ವರ್ಯಾ ಪಿಸೆಗೆ ಪ್ರಪೋಸ್ ಮಾಡಿದ್ದಾರೆ. ಅದೂ ಎಲ್ಲರ ಎದುರೇ ಅನ್ನೋದು ವಿಶೇಷ.

ಬಿಗ್ ಬಾಸ್ ಮನೆಗೆ ಬಂದ ಸಂದರ್ಭದಲ್ಲೇ ನವಾಜ್ ಅವರು ಐಶ್ವರ್ಯಾ ಬಗ್ಗೆ ಮೆಚ್ಚುಗೆಯ ಮಾತನ್ನು ಆಡಿದ್ದರು. ‘ನನಗೆ ಹಾಲಿವುಡ್ ಹೀರೋಯಿನ್​ಗಳು ಎಂದರೆ ಇಷ್ಟ. ಐಶ್ವರ್ಯಾ ಅವರು ನೋಡೋಕೆ ಹಾಲಿವುಡ್ ಹೀರೋಯಿನ್ ತರಹವೇ ಇದ್ದಾರೆ. ಅವರನ್ನು ಕಂಡರೆ ಇಷ್ಟ’ ಎಂದು ಹೇಳಿದ್ದರು ನವಾಜ್. ಈಗ ಅವರು ಒಂದು ಹೆಜ್ಜೆ ಮುಂದೆ ಹೋಗಿ, ಪ್ರಪೋಸ್ ಮಾಡಿದ್ದಾರೆ.

‘ನೋಡಿ ಐಶ್ವರ್ಯಾ ಪಿಸ್ಸೆ ಅವರೇ, ನಿಮ್ಮನ್ನು ನೋಡಿದಾಗಲೇ ಫಿದಾ ಆದೆ. ನಿಮ್ಮ ರೀತಿ ಇಂಗ್ಲಿಷ್​​​ನಲ್ಲಿ ಐ ಲವ್​ ಯೂ ಅಂತ ಹೇಳೋಕೆ ಬರಲ್ಲ. ನಮ್ಮ ಮನೆ ತುಂಬಾ ಚಿಕ್ಕದು, ಆದರೆ ಮನಸ್ಸು ದೊಡ್ಡದು. ಚಿಕ್ಕದಾಗಿ ಸೇರಿಕೊಂಡು, ದೊಡ್ಡದಾಗಿ ಪ್ರೀತಿ ಮಾಡೋಣ. ದೊಡ್ಡದಾಗಿ ಪ್ರೀತಿ ಮಾಡಿ, ಚಿಕ್ಕದಾಗಿ ಖುಷಿಪಡೋಣ. ಚಿಕ್ಕ ಖುಷಿಯಲ್ಲಿ ಮಕ್ಕಳಿಗೆ ಜನ್ಮ ಕೊಡೋಣ. ಆ ಚಿಕ್ಕ ಮಕ್ಕಳನ್ನು ದೊಡ್ಡವರಾಗಿ ಬೆಳೆಸೋಣ. ದೊಡ್ಡವರಾಗಿ ಸಾಯುವಾಗ ಚಿಕ್ಕದಾಗಿ ನಗೋಣ. ನಮ್ಮ ಮಕ್ಕಳು ದೊಡ್ಡದಾಗಿ ಸಮಾಧಿ ಕಟ್ಟಿಸುತ್ತಾರೆ, ಅವರ ಮನದಲ್ಲಿ ಚಿಕ್ಕ ಜಾಗದಲ್ಲಿರೋಣ’ ಎಂದರು ನವಾಜ್.

ಇದನ್ನೂ ಓದಿ: ಬಿಗ್ ಬಾಸ್ ಮನೆಗೆ ಎಂಟ್ರಿ ಕೊಡ್ತಾರಾ ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್ ಆಗಿದ್ದ ಈ ದಂಪತಿ?

ಇದನ್ನೂ ಓದಿ

ಇದಕ್ಕೆ ಪ್ರತಿಕ್ರಿಯಿಸಿದ ಐಶ್ವರ್ಯಾ, ‘ನಿನಗೆ ಒಳ್ಳೆ ಹುಡುಗಿ ಸಿಕ್ತಾಳೆ ಬಿಡು’ ಎಂದಿದ್ದಾರೆ. ‘ನೀವು ಸಿಗಲ್ವಾ’ ಎಂದು ಮರು ಪ್ರಶ್ನೆ ಹಾಕಿದರು ನವಾಜ್. ಇದನ್ನು ಕೇಳಿ ಮನೆ ಮಂದಿ ಎಲ್ಲರೂ ಜೋರಾಗಿ ನಕ್ಕರು. ಈ ಪ್ರೋಮೋವನ್ನು ಕಲರ್ಸ್ ಕನ್ನಡ ವಾಹಿನಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದೆ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada