- Kannada News Photo gallery Roopesh Shetty and Kavyashree Gowda love conversation in Bigg Boss Kannada Season 9
Roopesh Shetty: ರೂಪೇಶ್-ಕಾವ್ಯಶ್ರೀ ಲವ್ ಮಾತುಕತೆ; ದೂರದಿಂದ ನೋಡಿದ ಸಾನ್ಯಾ ಎಕ್ಸ್ಪ್ರೆಷನ್ ಹೇಗಿತ್ತು?
Bigg Boss Kannada Season 9: ಒಟಿಟಿ ಸೀಸನ್ನಲ್ಲಿ ರೂಪೇಶ್ ಶೆಟ್ಟಿ ಮತ್ತು ಸಾನ್ಯಾ ಐಯ್ಯರ್ ಆಪ್ತವಾಗಿದ್ದರು. ಆದರೆ ‘ಬಿಗ್ ಬಾಸ್ ಕನ್ನಡ’ 9ನೇ ಸೀಸನ್ನಲ್ಲಿ ಕಾವ್ಯಶ್ರೀ ಜತೆ ರೂಪೇಶ್ ಹೆಚ್ಚು ಸಮಯ ಕಳೆಯುವಂತಾಗಿದೆ.
Updated on: Sep 29, 2022 | 3:05 PM

Roopesh Shetty and Kavyashree Gowda love conversation in Bigg Boss Kannada Season 9

Roopesh Shetty and Kavyashree Gowda love conversation in Bigg Boss Kannada Season 9

ರೂಪೇಶ್ ಶೆಟ್ಟಿಗೆ ಕಾಳು ಹಾಕುವ ರೀತಿಯಲ್ಲಿ ಕಾವ್ಯಶ್ರೀ ನಟಿಸಿದರು. ಮೊದಲಿಗೆ ಎಷ್ಟೇ ಪಯತ್ನ ಪಟ್ಟರೂ ರೂಪೇಶ್ ಕಡೆಯಿಂದ ಗ್ರೀನ್ ಸಿಗ್ನಲ್ ಸಿಗಲಿಲ್ಲ. ‘ನನ್ನ ಹೆಸರಲ್ಲಿ 2-3 ಎಕರೆ ಆಸ್ತಿ ಇದೆ’ ಎಂದು ಕಾವ್ಯಶ್ರೀ ಹೇಳಿದ ಬಳಿಕ ರೂಪೇಶ್ ಮನಸ್ಸು ಬದಲಾಯಿಸಿದರು.

ಕಾವ್ಯಶ್ರೀ ಮತ್ತು ರೂಪೇಶ್ ಶೆಟ್ಟಿ ನಡುವೆ ನಡೆದ ಈ ಎಲ್ಲ ಸಂಭಾಷಣೆಗಳನ್ನು ದೂರದಿಂದಲೇ ನೋಡುತ್ತಿದ್ದರು ಸಾನ್ಯಾ ಐಯ್ಯರ್. ಅವರ ಕಣ್ಣುಗಳಲ್ಲಿ ಕುತೂಹಲ ಎದ್ದು ಕಾಣುತ್ತಿತ್ತು. ಮನಸ್ಸಿನಲ್ಲೇ ಏನೋ ಲೆಕ್ಕಾಚಾರ ಹಾಕುವ ರೀತಿಯಲ್ಲಿತ್ತು ಅವರ ಎಕ್ಸ್ಪ್ರೆಷನ್.

‘ಬಿಗ್ ಬಾಸ್ ಕನ್ನಡ ಒಟಿಟಿ’ ಶೋನಲ್ಲಿ ರೂಪೇಶ್ ಶೆಟ್ಟಿ ಮತ್ತು ಸಾನ್ಯಾ ಐಯ್ಯರ್ ನಡುವೆ ಹೆಚ್ಚು ಆಪ್ತತೆ ಬೆಳೆದಿತ್ತು. ಆದರೆ ಟಿವಿ ಸೀಸನ್ನಲ್ಲಿ ಕಾವ್ಯಶ್ರೀ ಜೊತೆ ರೂಪೇಶ್ ಶೆಟ್ಟಿ ಅವರು ಟಾಸ್ಕ್ ಕಾರಣದಿಂದ ಜೋಡಿ ಆಗಿದ್ದಾರೆ. ಒಬ್ಬರೂ ಜೊತೆಯಾಗಿ ಹೆಚ್ಚು ಸಮಯ ಕಳೆಯುವಂತಾಗಿದೆ.




