ಅಭಿಮಾನಿಗಳ ನಿರೀಕ್ಷೆಯ ಮಟ್ಟವನ್ನು ತಲುಪುವಲ್ಲಿ ‘ಕಾಂತಾರ’ (Kantara) ಸಿನಿಮಾ ಯಶಸ್ವಿ ಆಗಿದೆ. ಚಿತ್ರಮಂದಿರದಲ್ಲಿ ಈ ಸಿನಿಮಾ ಹೌಸ್ಫುಲ್ ಪ್ರದರ್ಶನ ಕಾಣುತ್ತಿದೆ. ಈ ಮೂಲಕ ನಟ-ನಿರ್ದೇಶಕ ರಿಷಬ್ ಶೆಟ್ಟಿ (Rishab Shetty) ಅವರ ಖಾತೆಗೆ ಮತ್ತೊಂದು ಸೂಪರ್ ಹಿಟ್ ಚಿತ್ರ ಸೇರ್ಪಡೆ ಆದಂತೆ ಆಗಿದೆ. ಭೂತ ಕೋಲದ ಹಿನ್ನೆಲೆಯಲ್ಲಿ ಸಾಗುವ ಕಥೆಗೆ ಪ್ರೇಕ್ಷಕರು ಫಿದಾ ಆಗಿದ್ದಾರೆ. ರಿಷಬ್ ಶೆಟ್ಟಿ, ಕಿಶೋರ್, ಸಪ್ತಮಿ ಗೌಡ, ಅಚ್ಯುತ್ ಕುಮಾರ್ ಮುಂತಾದವರ ನಟನೆಗೆ ಅಭಿಮಾನಿಗಳಿಂದ ಫುಲ್ ಮಾರ್ಕ್ಸ್ ಸಿಕ್ಕಿದೆ. ಐಎಂಡಿಬಿ (IMDb) ವೆಬ್ಸೈಟ್ನಲ್ಲೂ ಈ ಸಿನಿಮಾ ಉತ್ತಮ ರೇಟಿಂಗ್ ಪಡೆದುಕೊಂಡಿದೆ. 10ಕ್ಕೆ 9.8 ರೇಟಿಂಗ್ ಪಡೆದುಕೊಂಡಿರುವುದು ‘ಕಾಂತಾರ’ ಚಿತ್ರದ ಹೆಚ್ಚುಗಾರಿಕೆ. ಬಾಕ್ಸ್ ಆಫೀಸ್ನಲ್ಲಿ ಈ ಚಿತ್ರಕ್ಕೆ ಭರ್ಜರಿ ಕಮಾಯಿ ಆಗುತ್ತಿದೆ.
ಸೆ.30ರಂದು ‘ಕಾಂತಾರ’ ಸಿನಿಮಾ ತೆರೆಕಂಡಿತು. ಅದಕ್ಕೂ ಮುನ್ನ ಸೆ.29ರಂದು ಅನೇಕ ಕಡೆಗಳಲ್ಲಿ ಪ್ರೀಮಿಯರ್ ಪ್ರದರ್ಶನ ಏರ್ಪಡಿಸಲಾಗುತ್ತು. ಸಿನಿಮಾ ನೋಡಿದ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಬುಕ್ ಮೈ ಶೋನಲ್ಲಿ 9 ಸಾವಿರಕ್ಕೂ ಅಧಿಕ ಮಂದಿ ಈ ಸಿನಿಮಾಗೆ ವೋಟ್ ಮಾಡಿದ್ದಾರೆ. ಶೇಕಡ 99 ರೇಟಿಂಗ್ ಪಡೆಯುವ ಮೂಲಕ ಜನಮೆಚ್ಚುಗೆಯ ಚಿತ್ರವಾಗಿ ‘ಕಾಂತಾರ’ ಹೊರಹೊಮ್ಮಿದೆ. ಈ ಸಿನಿಮಾಗೆ ‘ಹೊಂಬಾಳೆ ಫಿಲ್ಮ್ಸ್’ ಸಂಸ್ಥೆ ಬಂಡವಾಳ ಹೂಡಿದೆ. ‘ಐಎಂಡಿಬಿ ಮತ್ತು ಬುಕ್ ಮೈ ಶೋನಲ್ಲಿ ಗಮ್ಮತ್ ರೇಟಿಂಗ್’ ಎಂದು ಹೊಂಬಾಳೆ ಫಿಲ್ಮ್ಸ್ ಟ್ವೀಟ್ ಮಾಡಿದೆ.
ಕರಾವಳಿ ಹಿನ್ನೆಲೆಯಲ್ಲಿ ಸಾಗುವ ಕಥೆಯನ್ನು ಅದ್ದೂರಿಯಾಗಿ ತೆರೆಗೆ ತರಲಾಗಿದೆ. ತಾಂತ್ರಿಕವಾಗಿ ಈ ಚಿತ್ರ ತುಂಬ ಶ್ರೀಮಂತವಾಗಿದೆ. ಅಜನೀಶ್ ಬಿ. ಲೋಕನಾಥ್ ಅವರ ಸಂಗೀತ ನಿರ್ದೇಶನ, ಅರವಿಂದ್ ಕಶ್ಯಪ್ ಛಾಯಾಗ್ರಹಣ ಗಮನ ಸೆಳೆಯುತ್ತಿದೆ. ರೋಚಕವಾದ ಕ್ಲೈಮ್ಯಾಕ್ಸ್ ದೃಶ್ಯ ಕಂಡು ಅನೇಕ ಸೆಲೆಬ್ರಿಟಿಗಳು ಮೆಚ್ಚುಗೆ ಸೂಚಿಸಿದ್ದಾರೆ. ಟಾಲಿವುಡ್ ಸ್ಟಾರ್ ನಟ ಪ್ರಭಾಸ್, ‘ಕೆಜಿಎಫ್ 2’ ನಿರ್ದೇಶಕ ಪ್ರಶಾಂತ್ ನೀಲ್, ನಟಿ ರಮ್ಯಾ ಮುಂತಾದವರು ಈ ಚಿತ್ರವನ್ನು ಕೊಂಡಾಡಿದ್ದಾರೆ.
ವೀಕೆಂಡ್ ದಿನವಾದ ಶನಿವಾರ (ಅ.1) ಮತ್ತು ಭಾನುವಾರ (ಅ.2) ಅನೇಕ ಕಡೆಗಳಲ್ಲಿ ಹೌಸ್ ಫುಲ್ ಪ್ರದರ್ಶನ ಕಂಡಿದೆ. ಇದರಿಂದ ಚಿತ್ರಕ್ಕೆ ಭರ್ಜರಿ ಕಮಾಯಿ ಆಗಿದೆ. ಬಾಯಿ ಮಾತಿನ ಪ್ರಚಾರ ಉತ್ತಮವಾಗಿ ಸಿಗುತ್ತಿರುವುದು ಚಿತ್ರತಂಡಕ್ಕೆ ಪ್ಲಸ್ ಪಾಯಿಂಟ್ ಆಗಿದೆ. ಮುಂದಿನ ದಿನಗಳಲ್ಲಿ ಈ ಸಿನಿಮಾ ಇನ್ನಷ್ಟು ಕಲೆಕ್ಷನ್ ಮಾಡುವುದು ಖಚಿತ.
ಗಮ್ಮತ್ Ratings on @IMDb & @bookmyshow 💥#DivineBlockbusterKantara#Kantara @shetty_rishab @VKiragandur @hombalefilms @HombaleGroup @gowda_sapthami @AJANEESHB #ArvindKashyap @actorkishore @KantaraFilm pic.twitter.com/2XaywThTmy
— Hombale Films (@hombalefilms) October 1, 2022
ಹೀರೋ ಮತ್ತು ನಿರ್ದೇಶಕನಾಗಿ ಕನ್ನಡ ಚಿತ್ರರಂಗದಲ್ಲಿ ರಿಷಬ್ ಶೆಟ್ಟಿ ಅವರಿಗೆ ಸಖತ್ ಬೇಡಿಕೆ ಇದೆ. ಪ್ರತಿ ಸಿನಿಮಾದಲ್ಲಿಯೂ ಅವರು ಡಿಫರೆಂಟ್ ಪ್ರಯತ್ನ ಮಾಡುತ್ತಾರೆ. ‘ಕಾಂತಾರ’ ಚಿತ್ರದಲ್ಲಿ ಅವರು ಮಾಡಿರುವ ಶಿವ ಎಂಬ ಪಾತ್ರ ಆಕರ್ಷಕವಾಗಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.