Kantara Review: ಹಲವು ಸಂಘರ್ಷಗಳ ‘ಕಾಂತಾರ’; ರಿಷಬ್​ ಶೆಟ್ಟಿಯ ಹೊಸ ಅವತಾರ

Rishab Shetty | Kantara Movie: ಕರಾವಳಿ ಸೊಗಡಿನಲ್ಲಿ ‘ಕಾಂತಾರ’ ಸಿನಿಮಾ ಮೂಡಿಬಂದಿದೆ. ನಿರ್ದೇಶನಕ್ಕಿಂತಲೂ ನಟನೆಯಲ್ಲಿ ರಿಷಬ್​ ಶೆಟ್ಟಿ ಹೆಚ್ಚು ಸ್ಕೋರ್​ ಮಾಡಿದ್ದಾರೆ.

Kantara Review: ಹಲವು ಸಂಘರ್ಷಗಳ ‘ಕಾಂತಾರ’; ರಿಷಬ್​ ಶೆಟ್ಟಿಯ ಹೊಸ ಅವತಾರ
ರಿಷಬ್ ಶೆಟ್ಟಿ, ಸಪ್ತಮಿ ಗೌಡ
Follow us
ಮದನ್​ ಕುಮಾರ್​
| Updated By: ರಾಜೇಶ್ ದುಗ್ಗುಮನೆ

Updated on:Sep 30, 2022 | 5:28 PM

ಚಿತ್ರ: ಕಾಂತಾರ

ನಿರ್ಮಾಣ: ವಿಜಯ್​ ಕಿರಗಂದೂರು

ನಿರ್ದೇಶನ: ರಿಷಬ್​ ಶೆಟ್ಟಿ

ಇದನ್ನೂ ಓದಿ
Image
Kantara: ರಿಷಬ್​ ಶೆಟ್ಟಿ ಕಂಬಳದ ಕೋಣ ಓಡಿಸುವುದು ಕಲಿತಿದ್ದು ಹೇಗೆ? ಇಲ್ಲಿದೆ ಮೇಕಿಂಗ್​ ವಿಡಿಯೋ
Image
Kantara: ‘ಕಾಂತಾರ’ ಚಿತ್ರಕ್ಕೆ ಪುನೀತ್​ ಹೀರೋ ಆಗ್ಬೇಕಿತ್ತು; ಆ ಸ್ಥಾನಕ್ಕೆ ರಿಷಬ್ ಶೆಟ್ಟಿ ಬಂದಿದ್ದು ಹೇಗೆ? ಇಲ್ಲಿದೆ ಉತ್ತರ
Image
‘ಸಿಂಗಾರ ಸಿರಿಯೆ..’ ಹಾಡಿಗೆ ತಲೆದೂಗಿದ ಪ್ರೇಕ್ಷಕರು; ರಿಷಬ್ ಶೆಟ್ಟಿ ನಟನೆಯ ‘ಕಾಂತಾರ’ ಚಿತ್ರಕ್ಕೆ ಸಿಕ್ತು ಮೈಲೇಜ್
Image
Rishab Shetty: ರಿಷಬ್​ ಶೆಟ್ಟಿ-ಪ್ರಗತಿ ಫ್ಯಾಮಿಲಿಯ ಸುಂದರ ಫೋಟೋ ಗ್ಯಾಲರಿ; ರಣ್ವಿತ್​ ಕ್ಯೂಟ್​ ನಗುವಿಗೆ ಎಲ್ಲರೂ ಫಿದಾ

ಪಾತ್ರವರ್ಗ: ರಿಷಬ್​ ಶೆಟ್ಟಿ, ಸಪ್ತಮಿ ಗೌಡ, ಅಚ್ಯುತ್​ ಕುಮಾರ್​, ಕಿಶೋರ್​, ಪ್ರಮೋದ್​ ಶೆಟ್ಟಿ, ಮಾನಸಿ ಸುಧೀರ್​ ಮುಂತಾದವರು.

ಸ್ಟಾರ್​: 3/5

ಒಂದು ಸಿನಿಮಾದಿಂದ ಮತ್ತೊಂದು ಸಿನಿಮಾಗೆ ಸಂಪೂರ್ಣ ಭಿನ್ನವಾದದ್ದನ್ನು ಪ್ರಯತ್ನಿಸುವ ಕಾರಣದಿಂದ ರಿಷಬ್​ ಶೆಟ್ಟಿ ಡಿಫರೆಂಟ್​ ಎನಿಸಿಕೊಳ್ಳುತ್ತಾರೆ. ಯಾವುದೇ ಒಂದು ಚಿತ್ರದಿಂದ ಗೆಲುವು ಸಿಕ್ತು ಎಂದು ಅದೇ ಮಾದರಿಗೆ ಗಂಟು ಬೀಳುವವರು ಅವರಲ್ಲ. ನಟನೆ ಮತ್ತು ನಿರ್ದೇಶನ ಎರಡರಲ್ಲೂ ಅವರು ಬೇರೆ ಬೇರೆ ಪ್ರಕಾರಕ್ಕೆ ತಮ್ಮನ್ನು ತಾವು ತೆರೆದುಕೊಳ್ಳುತ್ತಾರೆ. ಈಗ ಬಿಡುಗಡೆ ಆಗಿರುವ ‘ಕಾಂತಾರ’ ಸಿನಿಮಾ ಕೂಡ ಅವರ ವೃತ್ತಿ ಜೀವನದ ಭಿನ್ನ ಚಿತ್ರವಾಗಿ ನಿಲ್ಲುತ್ತದೆ. ಅಂತಹ ಸಾಕಷ್ಟು ಗುಣ ಈ ಸಿನಿಮಾಗಿದೆ. ಒಟ್ಟಾರೆ ಸಿನಿಮಾ ಹೇಗಿದೆ ತಿಳಿಯಲು ಈ ವಿಮರ್ಶೆ ಓದಿ..

ರಿಷಬ್​ ಶೆಟ್ಟಿ ಕರಾವಳಿ ಭಾಗದವರು. ಅಲ್ಲಿನ ಭೌಗೋಳಿಕ ಮತ್ತು ಸಾಮಾಜಿಕ ಸ್ಥಿತಿಗತಿಯ ಬಗ್ಗೆ ಅವರಿಗೆ ಚೆನ್ನಾಗಿ ಪರಿಚಯ ಇದೆ. ಆ ಹಿನ್ನೆಲೆಯನ್ನೇ ಇಟ್ಟುಕೊಂಡು ಅವರು ‘ಕಾಂತಾರ’ ಚಿತ್ರದ ಕಥೆಯನ್ನು ಹೆಣೆದಿದ್ದಾರೆ. ಭೂತ ಕೋಲ ಆಚರಣೆಯನ್ನು ಕೇಂದ್ರವಾಗಿಸಿ ಒಂದು ಸಂಘರ್ಷದ ಕಹಾನಿಯನ್ನು ಅವರು ಕಟ್ಟಿಕೊಟ್ಟಿದ್ದಾರೆ. ಅವರು ಆಯ್ದುಕೊಂಡ ಕಥೆಯ ಫಾರ್ಮ್ಯಾಟ್​ನಲ್ಲಿ ಹೆಚ್ಚೇನೂ ಹೊಸತನ ಕಾಣಿಸದು. ಆದರೆ ಅದನ್ನು ತೆರೆಗೆ ತಂದಿರುವ ರೀತಿಯಲ್ಲಿ ತಾಜಾತನ ಇದೆ.

ಕಾಡಿನ ಜೊತೆ ಬೆರೆತುಕೊಂಡಿರುವ ಒಂದು ಊರಿನ ಜನ. ಆ ಜನರ ಸಂಪ್ರದಾಯ, ಆಚರಣೆಗಳಿಂದ ಕಾಡಿಗೆ ತೊಂದರೆ ಆಗುತ್ತದೆ ಎಂದು ತಿಳಿದಿರುವ ಫಾರೆಸ್ಟ್​ ಆಫೀಸರ್​. ಊರಿನ ಜನರ ಭೂಮಿಯನ್ನೆಲ್ಲ ಕಬಳಿಸಿಬೇಕು ಎಂದು ಹೊಂಚು ಹಾಕಿರುವ ಜಮೀನ್ದಾರ. ಈ ಮೂವರ ನಡುವಿನ ಸಂಘರ್ಷ ಅಂತಿಮವಾಗಿ ಯಾವ ಹಂತವನ್ನು ತಲುಪುತ್ತದೆ ಎಂಬುದೇ ‘ಕಾಂತಾರ’ ಚಿತ್ರದ ಕಥೆ. ಈ ಕಥೆಯಲ್ಲಿ ಬಡವ-ಶ್ರೀಮಂತ, ನಂಬಿಕೆ-ಅಪನಂಬಿಕೆ, ಒಳಿತು-ಕೆಡುಕು ನಡುವಿನ ಸಂಘರ್ಷವೂ ಇದೆ.

ಶಿವ ಎಂಬ ಯುವಕನ ಪಾತ್ರದಲ್ಲಿ ರಿಷಬ್​ ಶೆಟ್ಟಿ ಅವರು ಅಕ್ಷರಶಃ ಅಬ್ಬರಿಸಿದ್ದಾರೆ. ಭಿನ್ನ ಮ್ಯಾನರಿಸಂ ಮೂಲಕ ಅವರು ಆ ಪಾತ್ರಕ್ಕೆ ಜೀವ ತುಂಬಿದ್ದಾರೆ. ಕಾಮಿಡಿ, ಫೈಟಿಂಗ್​, ರೊಮ್ಯಾನ್ಸ್​ ಯಾವುದರಲ್ಲೂ ಅವರು ಹಿಂದೆ ಬಿದ್ದಿಲ್ಲ. ಕ್ಲೈಮ್ಯಾಕ್ಸ್​ ದೃಶ್ಯದಲ್ಲಿ ಅವರ ನಟನೆಗೆ ಚಪ್ಪಾಳೆ ಸಲ್ಲಲೇಬೇಕು. ಅಚ್ಯುತ್​ ಕುಮಾರ್​, ಸಪ್ತಮಿ ಗೌಡ, ಪ್ರಮೋದ್​ ಶೆಟ್ಟಿ, ಮಾನಸಿ ಸುಧೀರ್​, ಕಿಶೋರ್​ ನಟನೆ ಕೂಡ ಗಮನ ಸೆಳೆಯುತ್ತದೆ. ಎಲ್ಲರೂ ಆಯಾ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ.

ತಾಂತ್ರಿಕವಾಗಿ ಈ ಚಿತ್ರವನ್ನು ‘ಹೊಂಬಾಳೆ ಫಿಲ್ಮ್ಸ್​’ ಸಂಸ್ಥೆ ತುಂಬ ಶ್ರೀಮಂತವಾಗಿ ನಿರ್ಮಿಸಿದೆ. ಆರಂಭದಲ್ಲಿ ಬರುವ ಕಂಬಳದ ದೃಶ್ಯದಿಂದ ಕ್ಲೈಮ್ಯಾಕ್ಸ್​ನಲ್ಲಿ ಬರುವ ಸಾಹಸ ದೃಶ್ಯದವರೆಗೆ ತೆರೆ ಮೇಲೆ ಯಾವ ಕೊರತೆಯೂ ಕಾಣಿಸದು. ಅರವಿಂದ್​ ಕಶ್ಯಪ್​ ಅವರ ಛಾಯಾಗ್ರಹಣದಲ್ಲಿ ಪ್ರತಿ ದೃಶ್ಯವೂ ಅಚ್ಚುಕಟ್ಟಾಗಿ ಮೂಡಿಬಂದಿದೆ. ಭೂತ ಕೋಲವನ್ನು ಅವರು ತುಂಬ ಸಮರ್ಥವಾಗಿ ಸೆರೆ ಹಿಡಿದಿದ್ದಾರೆ. ಅಜನೀಶ್​ ಬಿ. ಲೋಕನಾಥ್​ ಅವರ ಹಿನ್ನೆಲೆ ಸಂಗೀತದಿಂದ ಎಲ್ಲ ದೃಶ್ಯಗಳ ತೀವ್ರತೆ ಹೆಚ್ಚಿದೆ.

ಭೂತಾರಾಧನೆ ಆಚರಣೆಯನ್ನು ಕಣ್ಣಿಗೆ ಕಟ್ಟುವಂತೆ ಚಿತ್ರಿಸುವಲ್ಲಿ ಈ ಸಿನಿಮಾ ಯಶಸ್ವಿ ಆಗಿದೆ. ಜಾತಿ ಪದ್ಧತಿಯ ಕರಾಳತೆಯನ್ನು ಕೂಡ ಕಟುವಾಗಿ ವಿರೋಧಿಸುತ್ತದೆ. ಅನೇಕ ದೃಶ್ಯಗಳನ್ನು ನೈಜವಾಗಿ ಕಟ್ಟಿಕೊಡಲು ಪ್ರಯತ್ನಿಸಿರುವ ರಿಷಬ್​ ಶೆಟ್ಟಿ ಅವರು ಒಂದಷ್ಟು ದೃಶ್ಯಗಳನ್ನು ಹೆಚ್ಚು ನಾಟಕೀಯವಾಗಿಸಿದ್ದಾರೆ. ನಾಯಕಿ ಜೊತೆ ನಾಯಕ ಮಾಡುವ ತುಂಟಾಟದ ದೃಶ್ಯಗಳಲ್ಲಿ ಸಂವೇದನಾಶೀಲತೆಯ ಕೊರತೆ ಕಾಣುತ್ತದೆ. ಕಾಡು ಪ್ರಾಣಿಗಳನ್ನು ಭೇಟೆ ಆಡುವುದು, ಅರಣ್ಯಾಧಿಕಾರಿ ಮೇಲೆ ಹಲ್ಲೆಗೆ ಮುಂದಾಗುವುದು, ಕದ್ದು ಮರ ಕಡಿಯುವುದು ಮುಂತಾದ ದೃಶ್ಯಗಳಿಗೆ ಹೆಚ್ಚು ಸ್ಕ್ರೀನ್​ ಸ್ಪೇಸ್​ ಸಿಕ್ಕಿದೆ. ಆದರೆ ಅದನ್ನು ತಪ್ಪು ಎಂದು ಹೇಳುವ ಸನ್ನಿವೇಶಗಳು ಕ್ಷಣಮಾತ್ರದಲ್ಲಿ ಮುಗಿದು ಬಿಡುತ್ತವೆ. ಪರಿಸರ ಕಾಳಜಿಯ ದೃಷ್ಟಿಯಿಂದ ಈ ಅಂಶಗಳ ಬಗ್ಗೆ ನಿರ್ದೇಶಕರು ಗಮನ ಹರಿಸುವ ಅಗತ್ಯವಿತ್ತು ಎನಿಸುತ್ತದೆ.

ಈ ರೀತಿಯ ಒಂದಷ್ಟು ಕೊರತೆಗಳನ್ನು ಬದಿಗಿಟ್ಟರೆ ‘ಕಾಂತಾರ’ ಒಂದು ಉತ್ತಮ ಸಿನಿಮಾ ಎನಿಸಿಕೊಳ್ಳುತ್ತದೆ. ಕ್ಲೈಮ್ಯಾಕ್ಸ್​ನಲ್ಲಿ ರಿಷಬ್​ ಶೆಟ್ಟಿ ಅವರು ತಮ್ಮ ನಟನೆ ಮೂಲಕ ಸಂಪೂರ್ಣವಾಗಿ ಆವರಿಸಿಕೊಳ್ಳುತ್ತಾರೆ. ಅದು ಈ ಚಿತ್ರದ ಪ್ಲಸ್​ ಪಾಯಿಂಟ್​.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 1:31 pm, Fri, 30 September 22

ಜರ್ಮನಿಯಲ್ಲೇ ನ್ಯೂಸ್​9 ಜಾಗತಿಕ ಶೃಂಗಸಭೆ ನಡೆಯುತ್ತಿರುವುದೇಕೆ?
ಜರ್ಮನಿಯಲ್ಲೇ ನ್ಯೂಸ್​9 ಜಾಗತಿಕ ಶೃಂಗಸಭೆ ನಡೆಯುತ್ತಿರುವುದೇಕೆ?
ಜರ್ಮನಿಯಲ್ಲಿ ನ್ಯೂಸ್​9 ಗ್ಲೋಬಲ್ ಶೃಂಗಸಭೆಗೆ ಚಾಲನೆ
ಜರ್ಮನಿಯಲ್ಲಿ ನ್ಯೂಸ್​9 ಗ್ಲೋಬಲ್ ಶೃಂಗಸಭೆಗೆ ಚಾಲನೆ
ಟಿವಿ9 ಕನ್ನಡದ ಸಹೋದರ ಸಂಸ್ಥೆ ನ್ಯೂಸ್ 9ನ ಗ್ಲೋಬಲ್ ಸಮ್ಮಿಟ್ ನೇರಪ್ರಸಾರ
ಟಿವಿ9 ಕನ್ನಡದ ಸಹೋದರ ಸಂಸ್ಥೆ ನ್ಯೂಸ್ 9ನ ಗ್ಲೋಬಲ್ ಸಮ್ಮಿಟ್ ನೇರಪ್ರಸಾರ
ಕೇರಳದಲ್ಲಿ ವೇಗವಾಗಿ ಬಂದ ಕಾರಿಗೆ ಡಿಕ್ಕಿ ಹೊಡೆದು ಬಸ್​ನ ಚಕ್ರವೇ ಛಿದ್ರ!
ಕೇರಳದಲ್ಲಿ ವೇಗವಾಗಿ ಬಂದ ಕಾರಿಗೆ ಡಿಕ್ಕಿ ಹೊಡೆದು ಬಸ್​ನ ಚಕ್ರವೇ ಛಿದ್ರ!
ಬಿಪಿಎಲ್ ಕಾರ್ಡುಗಳ ಶುದ್ಧೀಕರಣ ಅಗಲೇಬೇಕಿದೆ ಎಂದ ಪ್ರಲ್ಹಾದ ಜೋಶಿ
ಬಿಪಿಎಲ್ ಕಾರ್ಡುಗಳ ಶುದ್ಧೀಕರಣ ಅಗಲೇಬೇಕಿದೆ ಎಂದ ಪ್ರಲ್ಹಾದ ಜೋಶಿ
ರೈತರ ಸಾಲ ಮಾಡುತ್ತೇನೆಂದಿದ್ದ ಆರ್ ಅಶೋಕ ಮಾಡಿದರೆ? ಸಿದ್ದರಾಮಯ್ಯ
ರೈತರ ಸಾಲ ಮಾಡುತ್ತೇನೆಂದಿದ್ದ ಆರ್ ಅಶೋಕ ಮಾಡಿದರೆ? ಸಿದ್ದರಾಮಯ್ಯ
ತಾಕತ್ ಇದ್ರೆ ತಡೆಯಿರಿ ನೋಡೋಣ: ಚೈತ್ರಾ ಕುಂದಾಪುರ ಸವಾಲು
ತಾಕತ್ ಇದ್ರೆ ತಡೆಯಿರಿ ನೋಡೋಣ: ಚೈತ್ರಾ ಕುಂದಾಪುರ ಸವಾಲು
ಬಿಪಿಎಲ್ ಕಾರ್ಡ್; ಬಿಜೆಪಿ ನಾಯಕರು ಮೊದಲು ಕೇಂದ್ರವನ್ನು ಪ್ರಶ್ನಿಸಲಿ: ಸಚಿವ
ಬಿಪಿಎಲ್ ಕಾರ್ಡ್; ಬಿಜೆಪಿ ನಾಯಕರು ಮೊದಲು ಕೇಂದ್ರವನ್ನು ಪ್ರಶ್ನಿಸಲಿ: ಸಚಿವ
‘ದರ್ಶನ್​ಗೆ ಬೇಲ್ ಕೊಡಬಾರದು, ಸುಪ್ರೀಂ ಕೋರ್ಟ್​ಗೆ ಹಾಕ್ತೀವಿ’: ಪರಮೇಶ್ವರ್
‘ದರ್ಶನ್​ಗೆ ಬೇಲ್ ಕೊಡಬಾರದು, ಸುಪ್ರೀಂ ಕೋರ್ಟ್​ಗೆ ಹಾಕ್ತೀವಿ’: ಪರಮೇಶ್ವರ್
ವಕ್ಫ್ ಹೋರಾಟ ಪ್ರಧಾನಿ ಮೋದಿ ಆರಂಭಿಸಿದ ಕೇಂದ್ರದ ಯೋಜನೆ: ವಿಜಯೇಂದ್ರ
ವಕ್ಫ್ ಹೋರಾಟ ಪ್ರಧಾನಿ ಮೋದಿ ಆರಂಭಿಸಿದ ಕೇಂದ್ರದ ಯೋಜನೆ: ವಿಜಯೇಂದ್ರ