- Kannada News Photo gallery Rishab Shetty wife Pragathi Shetty and son Ranvith Shetty cute family photos
Rishab Shetty: ರಿಷಬ್ ಶೆಟ್ಟಿ-ಪ್ರಗತಿ ಫ್ಯಾಮಿಲಿಯ ಸುಂದರ ಫೋಟೋ ಗ್ಯಾಲರಿ; ರಣ್ವಿತ್ ಕ್ಯೂಟ್ ನಗುವಿಗೆ ಎಲ್ಲರೂ ಫಿದಾ
Rishab Shetty | Pragathi Shetty: ಸ್ಯಾಂಡಲ್ವುಡ್ನ ಕ್ಯೂಟ್ ಜೋಡಿಗಳಲ್ಲಿ ಒಂದಾದ ರಿಷಬ್ ಶೆಟ್ಟಿ ಮತ್ತು ಪ್ರಗತಿ ಶೆಟ್ಟಿ ಅವರ ಕುಟುಂಬದ ಫೋಟೋಗಳು ಇಲ್ಲಿವೆ. ಈ ಫೋಟೋಗಳಿಗೆ ಅಭಿಮಾನಿಗಳಿಂದ ಸಖತ್ ಲೈಕ್ಸ್ ಸಿಕ್ಕಿವೆ.
Updated on:Jul 07, 2022 | 12:01 PM

Rishab Shetty wife Pragathi Shetty and son Ranvith Shetty cute family photos

Rishab Shetty wife Pragathi Shetty and son Ranvith Shetty cute family photos

ಪ್ರಗತಿ ಶೆಟ್ಟಿ ಅವರು ಕೂಡ ಚಿತ್ರರಂಗದಲ್ಲಿ ತೊಡಗಿಕೊಂಡಿದ್ದಾರೆ. ವಸ್ತ್ರ ವಿನ್ಯಾಸಕಿಯಾಗಿ ಅವರು ಬೇಡಿಕೆ ಸೃಷ್ಟಿಸಿಕೊಂಡಿದ್ದಾರೆ. ಪತಿಯ ಬಹುತೇಕ ಎಲ್ಲ ಸಿನಿಮಾಗಳಿಗೆ ಅವರೇ ಕಾಸ್ಟ್ಯೂಮ್ ಡಿಸೈನ್ ಮಾಡುತ್ತಾರೆ.

ರಿಷಬ್ ಶೆಟ್ಟಿ ಮತ್ತು ಪ್ರಗತಿ ಶೆಟ್ಟಿ ದಂಪತಿಯ ಮೊದಲ ಮಗುವಿಗೆ ರಣ್ವಿತ್ ಶೆಟ್ಟಿ ಎಂದು ಹೆಸರು ಇಡಲಾಗಿದೆ. ಮುದ್ದಾದ ಕಂದನ ಫೋಟೋಗಳನ್ನು ಅವರು ಸೋಶಿಯಲ್ ಮೀಡಿಯಾದಲ್ಲಿ ಆಗಾಗ ಹಂಚಿಕೊಳ್ಳುತ್ತಾರೆ. ರಣ್ವಿತ್ ಕ್ಯೂಟ್ ನಗುವಿಗೆ ಎಲ್ಲರೂ ಫಿದಾ ಆಗಿದ್ದಾರೆ.

ಕೆಲವೇ ದಿನಗಳ ಹಿಂದೆ ರಿಷಬ್ ಶೆಟ್ಟಿ ಅವರ ಮನೆಗೆ ದುಬಾರಿ ಕಾರು ಬಂದಿದೆ. ಆಡಿ ಕ್ಯೂ7 ಕಾರನ್ನು ಅವರು ಖರೀದಿಸಿದ್ದಾರೆ. ಅದಕ್ಕಾಗಿ ಅಭಿಮಾನಿಗಳು ಮತ್ತು ಸೆಲೆಬ್ರಿಟಿಗಳು ಈ ದಂಪತಿಗೆ ಅಭಿನಂದನೆ ತಿಳಿಸಿದ್ದಾರೆ.

ರಿಷಬ್ ಶೆಟ್ಟಿ ನಟನೆಯ ‘ಹರಿಕಥೆ ಅಲ್ಲ ಗಿರಿಕಥೆ’ ಸಿನಿಮಾ ಇತ್ತೀಚೆಗೆ ಬಿಡುಗಡೆ ಆಯಿತು. ಅವರು ನಟಿಸಿ, ನಿರ್ದೇಶಿಸುತ್ತಿರುವ ‘ಕಾಂತಾರ’ ಸಿನಿಮಾದ ಮೇಲೆ ಅಭಿಮಾನಿಗಳಿಗೆ ಹೆಚ್ಚು ನಿರೀಕ್ಷೆ ಇದೆ. ಟೀಸರ್ ಮೂಲಕ ಈ ಚಿತ್ರ ಗಮನ ಸೆಳೆದಿದೆ.
Published On - 12:00 pm, Thu, 7 July 22



















