MS Dhoni Birthday: ಭಾರತಕ್ಕಾಗಿ ಎಲ್ಲಾ ಐಸಿಸಿ ಟ್ರೋಪಿಗಳನ್ನು ಗೆದ್ದ ಧೋನಿಗೆ ಇಂದು ಜನ್ಮದಿನ; ಫೋಟೋ ನೋಡಿ

MS Dhoni Birthday: ಭಾರತ ಕ್ರಿಕೆಟ್ ತಂಡವನ್ನು ಮೂರು ಮಾದರಿಯಲ್ಲಿ ನಂಬರ್ 1 ಶ್ರೇಯಾಂಕಕ್ಕೆ ತಲುಪಿಸಿದ್ದ ರಾಂಚಿಯ ಹುಡುಗನ ಆಟಕ್ಕೆ ಇಡೀ ಕ್ರಿಕೆಟ್​ ಜಗತ್ತೆ ಮರುಳಾಗಿ ಹೋಗಿತ್ತು. ಮೈದಾನದಲ್ಲಿ ಕೂಲ್ ಆಗಿರುತ್ತಿದ್ದ ಧೋನಿ, ತೆಗೆದುಕೊಳ್ಳುತ್ತಿದ್ದ ನಿರ್ಧಾರಗಳಿಂದ ಸಖತ್ ಸದ್ದು ಮಾಡುತ್ತಿದ್ದರು.

TV9 Web
| Updated By: ಪೃಥ್ವಿಶಂಕರ

Updated on: Jul 07, 2022 | 7:27 AM

ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರಿಗೆ ಇಂದು 41ನೇ ಹುಟ್ಟು ಹಬ್ಬದ ಸಂಭ್ರಮ. ಭಾರತ ಕ್ರಿಕೆಟ್ ತಂಡವನ್ನು ಮೂರು ಮಾದರಿಯಲ್ಲಿ ನಂಬರ್ 1 ಶ್ರೇಯಾಂಕಕ್ಕೆ ತಲುಪಿಸಿದ್ದ ರಾಂಚಿಯ ಹುಡುಗನ ಆಟಕ್ಕೆ ಇಡೀ ಕ್ರಿಕೆಟ್​ ಜಗತ್ತೆ ಮರುಳಾಗಿ ಹೋಗಿತ್ತು. ಮೈದಾನದಲ್ಲಿ ಕೂಲ್ ಆಗಿರುತ್ತಿದ್ದ ಧೋನಿ, ತೆಗೆದುಕೊಳ್ಳುತ್ತಿದ್ದ ನಿರ್ಧಾರಗಳಿಂದ ಸಖತ್ ಸದ್ದು ಮಾಡುತ್ತಿದ್ದರು. ಅಂತಹ ಧೋನಿ ಇಂದು 41ನೇ ಜನ್ಮದಿನವನ್ನು ಮಡದಿ, ಮಗಳೊಂದಿಗೆ ಆಚರಿಸಿಕೊಳ್ಳುತ್ತಿದ್ದಾರೆ.

1 / 5
ಮೊದಲ ಬಾರಿಗೆ ಆಯೋಜನೆಯಾಗಿದ್ದ ಐಸಿಸಿ ಟಿ 20 ವಿಶ್ವಕಪ್ ಪಂದ್ಯಾವಳಿಗಾಗಿ ಧೋನಿ ಅವರನ್ನು ಟೀಮ್ ಇಂಡಿಯಾ ಕ್ಯಾಪ್ಟನ್ ಆಗಿ ಆಯ್ಕೆ ಮಾಡಲಾಯಿತು. ಇಡೀ ಪಂದ್ಯಾವಳಿಯ ನಾಯಕತ್ವ ವಹಿಸಿದ್ದ ಧೋನಿ ಅತ್ಯುತ್ತಮ ನಾಯಕತ್ವವನ್ನು ನೀಡಿದರು. ಫೈನಲ್‌ನಲ್ಲಿ ಪಾಕಿಸ್ತಾನ ವಿರುದ್ಧ ಜಯಗಳಿಸಲು ಧೋನಿ ನಾಯಕತ್ವವೇ ಕಾರಣ. ಸಚಿನ್ ತೆಂಡೂಲ್ಕರ್, ಸೌರವ್ ಗಂಗೂಲಿ ಮತ್ತು ರಾಹುಲ್ ದ್ರಾವಿಡ್ ಅವರಂತಹ ಹಿರಿಯರು ಇಲ್ಲದ ಆ ಪಂದ್ಯದಲ್ಲಿ ಧೋನಿ ಒಬ್ಬಂಟಿಯಾಗಿದ್ದರು. 2007 ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ನಡೆದ ಟಿ 20 ವಿಶ್ವಕಪ್ ಫೈನಲ್‌ನಲ್ಲಿ ಭಾರತ ಪಾಕಿಸ್ತಾನವನ್ನು ಮಣಿಸಿ ಟ್ರೋಫಿಯನ್ನು ಗೆದ್ದುಕೊಂಡಿತು.

2 / 5
MS Dhoni Birthday: ಭಾರತಕ್ಕಾಗಿ ಎಲ್ಲಾ ಐಸಿಸಿ ಟ್ರೋಪಿಗಳನ್ನು ಗೆದ್ದ ಧೋನಿಗೆ ಇಂದು ಜನ್ಮದಿನ; ಫೋಟೋ ನೋಡಿ

2011 ರಲ್ಲಿ ಧೋನಿ ನೇತೃತ್ವದ ಭಾರತೀಯ ಕ್ರಿಕೆಟ್ ತಂಡವು ವಿಶ್ವಕಪ್ ಪ್ರಶಸ್ತಿಯನ್ನು ಗೆದ್ದುಕೊಂಡಿತು. ವಾಂಖೆಡೆ ಸ್ಟೇಡಿಯಂನಲ್ಲಿ ಶ್ರೀಲಂಕಾ ವಿರುದ್ಧದ ಫೈನಲ್‌ನಲ್ಲಿ ಭಾರತ 275 ರನ್‌ಗಳ ಗುರಿಯನ್ನು ಬೆನ್ನಟ್ಟಬೇಕಿತ್ತು. ಆ ಪಂದ್ಯದಲ್ಲಿ ಗೌತಮ್ ಗಂಭೀರ್ (97) ಮತ್ತು ಧೋನಿ (91) ಭಾರಿ ರನ್ ಗಳಿಸಿದರು. ಭಾರತ ಒಟ್ಟು ಆರು ವಿಕೆಟ್‌ಗಳಿಂದ ಜಯ ಸಾಧಿಸಿತು.

3 / 5
MS Dhoni Birthday: ಭಾರತಕ್ಕಾಗಿ ಎಲ್ಲಾ ಐಸಿಸಿ ಟ್ರೋಪಿಗಳನ್ನು ಗೆದ್ದ ಧೋನಿಗೆ ಇಂದು ಜನ್ಮದಿನ; ಫೋಟೋ ನೋಡಿ

2013 ರಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯದಲ್ಲಿ ಭಾರತ-ಇಂಗ್ಲೆಂಡ್ ಸೆಣಸಾಟ ನಡೆಸಿದ್ದವು. ಈ ಅಂತಿಮ ಪಂದ್ಯದಲ್ಲಿ ಎಂ.ಎಸ್. ಧೋನಿ ಅವರ ನಾಯಕತ್ವ ಮತ್ತೊಮ್ಮೆ ಜಗಜ್ಜಾಹೀರಾಗಿತ್ತು. ನಿಗದಿಪಡಿಸಿದ 20 ಓವರ್‌ಗಳಲ್ಲಿ ಟೀಮ್‌ಇಂಡಿಯಾ ಕೇವಲ 129 ರನ್ ಗಳಿಸಲು ಸಾಧ್ಯವಾಯಿತು. ಅಂತಹ ಸಮಯದಲ್ಲಿ ಧೋನಿ ತೆಗೆದುಕೊಂಡ ನಿರ್ಧಾರಗಳೇ ಭಾರತ ತಂಡವನ್ನು ಗೆಲುವಿನ ದಡಕ್ಕೆ ತಂದವು. ಧೋನಿ ಬೌಲಿಂಗ್‌ನಲ್ಲಿ ಪ್ರಮುಖ ಬದಲಾವಣೆಗಳನ್ನು ಮಾಡಿ ಎಲ್ಲರನ್ನೂ ಅಚ್ಚರಿಗೊಳಿಸಿದರು. ಬೌಲರ್​ಗಳಿಗೆ ಸರಿಯಾದ ಸಮಯದಲ್ಲಿ ಸರಿಯಾದ ತಂತ್ರಗಳನ್ನು ಹೇಳುವ ಮೂಲಕ ಇಂಗ್ಲೆಂಡ್ ಬ್ಯಾಟ್ಸ್‌ಮನ್‌ಗಳನ್ನು ಕಟ್ಟಿಹಾಕುವಲ್ಲಿ ಮಹೀ ಪ್ರಮುಖ ಪಾತ್ರ ವಹಿಸಿದರು. ಧೋನಿ ನೇತೃತ್ವದ ಟೀಂ ಇಂಡಿಯಾ ಇಂಗ್ಲೆಂಡ್​ ತಂಡವನ್ನು ಒಟ್ಟು 124 ರನ್​ ಗಳಿಗೆ ಕಟ್ಟಿ ಹಾಕಿ ಟ್ರೋಫಿಯನ್ನು ಗೆದ್ದುಕೊಂಡಿತು.

4 / 5
MS Dhoni Birthday: ಭಾರತಕ್ಕಾಗಿ ಎಲ್ಲಾ ಐಸಿಸಿ ಟ್ರೋಪಿಗಳನ್ನು ಗೆದ್ದ ಧೋನಿಗೆ ಇಂದು ಜನ್ಮದಿನ; ಫೋಟೋ ನೋಡಿ

2009 ರಲ್ಲಿ ಭಾರತವು ಐಸಿಸಿ ಟೆಸ್ಟ್ ಶ್ರೇಯಾಂಕದಲ್ಲಿ ಅಗ್ರಸ್ಥಾನದಲ್ಲಿರಲು ಕ್ಯಾಪ್ಟನ್ ಧೋನಿ ಪಾತ್ರವು ನಿರ್ಣಾಯಕವಾಗಿದೆ. 2001 ರಲ್ಲಿ ಶ್ರೇಯಾಂಕಗಳು ಪ್ರಾರಂಭವಾದಾಗಿನಿಂದ ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ಮಾತ್ರ ಟೆಸ್ಟ್ ಪಂದ್ಯಗಳಲ್ಲಿ ಮೊದಲ ಸ್ಥಾನದಲ್ಲಿದ್ದವು. ಆದರೆ, ಧೋನಿ ನಾಯಕತ್ವದಲ್ಲಿ ಟೀಮ್ ಇಂಡಿಯಾ ಅಗ್ರಸ್ಥಾನಕ್ಕೇರಿತ್ತು. 2009 ರಲ್ಲಿ ಟೀಮ್ ಇಂಡಿಯಾ ಮೂರನೇ ಸ್ಥಾನದಲ್ಲಿತ್ತು. ಅದರ ನಂತರ ಅದು ಪ್ರಥಮ ಸ್ಥಾನವನ್ನು ತಲುಪಿತು.

5 / 5
Follow us