Kannada News » Photo gallery » Mahesh Babu wife Namrata Shirodkar Shares throwback photo of New York
ನ್ಯೂಯಾರ್ಕ್ ಡೈರಿಸ್ ನೆನಪಿಸಿಕೊಂಡ ಮಹೇಶ್ ಬಾಬು ಪತ್ನಿ ನಮ್ರತಾ
ಮಹೇಶ್ ಬಾಬು ನಟನೆಯ ‘ಸರ್ಕಾರು ವಾರಿ ಪಾಟ’ ಸಿನಿಮಾ ಇತ್ತೀಚೆಗೆ ತೆರೆಗೆ ಬಂತು. ಈ ಚಿತ್ರ ಈಗ ಒಟಿಟಿಯಲ್ಲೂ ರಿಲೀಸ್ ಆಗಿದೆ. ಈ ಸಿನಿಮಾ ಬಿಡುಗಡೆ ಆದ ಬಳಿಕ ಮಹೇಶ್ ಬಾಬು ಅವರು ಪ್ರವಾಸ ಆರಂಭಿಸಿದ್ದರು. ಈಗ ಅವರು ಭಾರತಕ್ಕೆ ಮರಳಿದ್ದಾರೆ.
ಪ್ರತಿ ಸಿನಿಮಾ ತೆರೆಕಂಡ ಬಳಿಕ ಮಹೇಶ್ ಬಾಬು ಅವರು ಪತ್ನಿ ಹಾಗೂ ಮಕ್ಕಳ ಜತೆ ವಿದೇಶಕ್ಕೆ ತೆರಳುತ್ತಾರೆ. ಈ ಬಾರಿ ಅವರು ಜರ್ಮನಿ ಹಾಗೂ ನ್ಯೂಯಾರ್ಕ್ಗೆ ಪ್ರಯಾಣ ಬೆಳೆಸಿದ್ದರು. ಇದರ ಫೋಟೋಗಳನ್ನು ನಮ್ರತಾ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿದ್ದಾರೆ.
1 / 5
ಮಹೇಶ್ ಬಾಬು ನಟನೆಯ ‘ಸರ್ಕಾರು ವಾರಿ ಪಾಟ’ ಸಿನಿಮಾ ಇತ್ತೀಚೆಗೆ ತೆರೆಗೆ ಬಂತು. ಈ ಚಿತ್ರ ಈಗ ಒಟಿಟಿಯಲ್ಲೂ ರಿಲೀಸ್ ಆಗಿದೆ. ಈ ಸಿನಿಮಾ ಬಿಡುಗಡೆ ಆದ ಬಳಿಕ ಮಹೇಶ್ ಬಾಬು ಅವರು ಪ್ರವಾಸ ಆರಂಭಿಸಿದ್ದರು. ಈಗ ಅವರು ಭಾರತಕ್ಕೆ ಮರಳಿದ್ದಾರೆ.
2 / 5
‘ಸರ್ಕಾರು ವಾರಿ ಪಾಟ’ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಗೆದ್ದಿದೆ. ಈ ಚಿತ್ರದಿಂದ ಮಹೇಶ್ ಬಾಬು ವೃತ್ತಿ ಜೀವನಕ್ಕೆ ಮೈಲೇಜ್ ಸಿಕ್ಕಂತೆ ಆಗಿದೆ. ಅಮೆರಿಕಕ್ಕೆ ತೆರಳಿದ ಸಂದರ್ಭದಲ್ಲಿ ಆಗರ್ಭ ಶ್ರೀಮಂತ, ಉದ್ಯಮಿ ಬಿಲ್ ಗೇಟ್ಸ್ ಅವರನ್ನು ಮಹೇಶ್ ಬಾಬು ಭೇಟಿ ಮಾಡಿದ್ದರು.
3 / 5
ನಮ್ರತಾ ಅವರು ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಕುಟುಂಬದ ಜತೆ ಕಳೆದ ಖುಷಿಯ ಕ್ಷಣವನ್ನು ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಾರೆ.
4 / 5
ಮಹೇಶ್ ಬಾಬು-ನಮ್ರತಾ ಮಗಳು ಸಿತಾರಾ ಕೂಡ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟೀವ್ ಆಗಿದ್ದಾರೆ. ಅವರಿಗೂ ದೊಡ್ಡ ಅಭಿಮಾನಿ ಬಳಗ ಸೃಷ್ಟಿ ಆಗಿದೆ.