AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Kantara Review: ‘ಕಾಂತಾರ’ ವಿಮರ್ಶೆ ಮಾಡಿದ ರಮ್ಯಾ; ರಿಷಬ್​ ಶೆಟ್ಟಿ ಚಿತ್ರದ ಬಗ್ಗೆ ‘ಮೋಹಕ ತಾರೆ’ ಹೇಳಿದ್ದೇನು?

Kantara Movie | Ramya Divya Spandana: ‘ಕಾಂತರ’ ಚಿತ್ರವನ್ನು ರಮ್ಯಾ ಮನಸಾರೆ ಹೊಗಳಿದ್ದಾರೆ. ಅವರಿಂದ ಮೆಚ್ಚುಗೆ ಸಿಕ್ಕಿದ್ದಕ್ಕೆ ರಿಷಬ್​ ಶೆಟ್ಟಿ ಮತ್ತು ಇಡೀ ತಂಡಕ್ಕೆ ಸಖತ್​ ಖುಷಿ ಆಗಿದೆ.

Kantara Review: ‘ಕಾಂತಾರ’ ವಿಮರ್ಶೆ ಮಾಡಿದ ರಮ್ಯಾ; ರಿಷಬ್​ ಶೆಟ್ಟಿ ಚಿತ್ರದ ಬಗ್ಗೆ ‘ಮೋಹಕ ತಾರೆ’ ಹೇಳಿದ್ದೇನು?
ರಿಷಬ್ ಶೆಟ್ಟಿ, ರಮ್ಯಾ
TV9 Web
| Updated By: ಮದನ್​ ಕುಮಾರ್​|

Updated on:Sep 30, 2022 | 7:54 AM

Share

ನಟಿ ರಮ್ಯಾ (Ramya) ಅವರು ಮತ್ತೆ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ಹಲವು ಚಿತ್ರತಂಡದ ಜೊತೆಗೆ ಅವರು ಸಂಪರ್ಕದಲ್ಲಿದ್ದಾರೆ. ಅನೇಕ ಪ್ರತಿಭೆಗಳಿಗೆ ಅವರು ಬೆನ್ನು ತಟ್ಟುತ್ತಿದ್ದಾರೆ. ಈಗ ‘ಕಾಂತರ’ (Kantara) ಸಿನಿಮಾ ನೋಡಿ ರಮ್ಯಾ ಮೆಚ್ಚಿಕೊಂಡಿದ್ದಾರೆ. ಸಿನಿಮಾ ಬಗ್ಗೆ ತಮ್ಮ ಅನಿಸಿಕೆ ಏನು ಎಂಬುದನ್ನು ಬರೆದುಕೊಂಡಿದ್ದಾರೆ. ಇತ್ತೀಚಿನ ದಿನಗಳಲ್ಲಿ ರಮ್ಯಾ ಅವರು ಇಷ್ಟು ವಿವರವಾಗಿ ವಿಮರ್ಶೆ ತಿಳಿಸಿರುವುದು ಇದೇ ಮೊದಲ ಎನ್ನಬಹುದು. ರಿಷಬ್​ ಶೆಟ್ಟಿಯ (Rishab Shetty) ನಿರ್ದೇಶನ, ನಟನೆಯ ಜೊತೆಗೆ ಇನ್ನುಳಿದ ಕಲಾವಿದರ ಅಭಿನಯಕ್ಕೂ ರಮ್ಯಾ ಫಿದಾ ಆಗಿದ್ದಾರೆ. ನಾಯಕಿ ಸಪ್ತಮಿ ಗೌಡ ಬಗ್ಗೆ ವಿಶೇಷ ಮಾತುಗಳನ್ನು ಹೇಳಿದ್ದಾರೆ. ಒಟ್ಟಾರೆಯಾಗಿ ರಮ್ಯಾಗೆ ‘ಕಾಂತಾರ’ ಸಿನಿಮಾ ತುಂಬ ಇಷ್ಟ ಆಗಿದೆ.

ಇಂದು (ಸೆ.30) ‘ಕಾಂತಾರ’ ಚಿತ್ರ ಅದ್ದೂರಿಯಾಗಿ ಬಿಡುಗಡೆ ಆಗಿದೆ. ನಿನ್ನೆ (ಸೆ.29) ಅನೇಕ ಕಡೆಗಳಲ್ಲಿ ಪ್ರೀಮಿಯರ್​ ಪ್ರದರ್ಶನ ಏರ್ಪಡಿಸಲಾಗಿತ್ತು. ಬೆಂಗಳೂರಿನಲ್ಲಿ ಅನೇಕ ಸೆಲೆಬ್ರಿಟಿಗಳು ಸಿನಿಮಾ ವೀಕ್ಷಿಸಿದ್ದಾರೆ. ರಮ್ಯಾ ಕೂಡ ಚಿತ್ರ ನೋಡಿ ಖುಷಿಪಟ್ಟಿದ್ದಾರೆ. ಬಳಿಕ ಸೋಶಿಯಲ್​ ಮೀಡಿಯಾದಲ್ಲಿ ‘ಕಾಂತರ’ ಬಗ್ಗೆ ಅವರು ಪೋಸ್ಟ್​ ಮಾಡಿದ್ದಾರೆ. ರಮ್ಯಾ ಕಡೆಯಿಂದ ಭರ್ಜರಿ ಪ್ರಶಂಸೆ ಸಿಕ್ಕಿರುವುದರಿಂದ ಈ ಸಿನಿಮಾ ಮೇಲಿನ ಹೈಪ್​ ಹೆಚ್ಚಾಗಿದೆ.

ಇದನ್ನೂ ಓದಿ
Image
Kantara: ರಿಷಬ್​ ಶೆಟ್ಟಿ ಕಂಬಳದ ಕೋಣ ಓಡಿಸುವುದು ಕಲಿತಿದ್ದು ಹೇಗೆ? ಇಲ್ಲಿದೆ ಮೇಕಿಂಗ್​ ವಿಡಿಯೋ
Image
Kantara: ‘ಕಾಂತಾರ’ ಚಿತ್ರಕ್ಕೆ ಪುನೀತ್​ ಹೀರೋ ಆಗ್ಬೇಕಿತ್ತು; ಆ ಸ್ಥಾನಕ್ಕೆ ರಿಷಬ್ ಶೆಟ್ಟಿ ಬಂದಿದ್ದು ಹೇಗೆ? ಇಲ್ಲಿದೆ ಉತ್ತರ
Image
‘ಸಿಂಗಾರ ಸಿರಿಯೆ..’ ಹಾಡಿಗೆ ತಲೆದೂಗಿದ ಪ್ರೇಕ್ಷಕರು; ರಿಷಬ್ ಶೆಟ್ಟಿ ನಟನೆಯ ‘ಕಾಂತಾರ’ ಚಿತ್ರಕ್ಕೆ ಸಿಕ್ತು ಮೈಲೇಜ್
Image
Rishab Shetty: ರಿಷಬ್​ ಶೆಟ್ಟಿ-ಪ್ರಗತಿ ಫ್ಯಾಮಿಲಿಯ ಸುಂದರ ಫೋಟೋ ಗ್ಯಾಲರಿ; ರಣ್ವಿತ್​ ಕ್ಯೂಟ್​ ನಗುವಿಗೆ ಎಲ್ಲರೂ ಫಿದಾ

‘ಕೆಲವೊಮ್ಮೆ ನೀವು ಸಿನಿಮಾ ನೋಡಿದಾಗ ಮಾತುಗಳೇ ಬರುವುದಿಲ್ಲ. ಯಾಕೆಂದರೆ, ವರ್ಣಿಸಲಾಗದ ಅನುಭವವನ್ನು ನೀವು ಆ ಚಿತ್ರದಿಂದ ಪಡೆದಿರುತ್ತೀರಿ. ಕಾಂತಾರ ಕೂಡ ಆ ಪ್ರಕಾರಕ್ಕೆ ಸೇರುವ ಸಿನಿಮಾ. ನೀವು ಖಂಡಿತವಾಗಿಯೂ ಅನುಭವಿಸಿ ನೋಡಬೇಕಾದ ಸಿನಿಮಾ ಇದು. ಈ ಚಿತ್ರದಿಂದ ನಾನು ಭೂತ ಕೋಲದ ಬಗ್ಗೆ ಸಾಕಷ್ಟು ತಿಳಿದುಕೊಂಡೆ’ ಎಂದು ರಮ್ಯಾ ಬರೆದುಕೊಂಡಿದ್ದಾರೆ.

‘ಕೊನೇ ಹತ್ತು ನಿಮಿಷದ ದೃಶ್ಯದಲ್ಲಿ ರಿಷಬ್​ ಅವರ ನಟನೆಯೊಳಗೆ ದೈವವೇ ಪ್ರವೇಶಿಸಿದೆ ಅಂತ ನಾನು ನಂಬಿದ್ದೇನೆ. ಸಿನಿಮಾ ನೋಡಿದ ಬಳಿಕ ನೀವು ನನ್ನ ಮಾತನ್ನು 100 ಪರ್ಸೆಂಟ್​ ಒಪ್ಪುತ್ತೀರಿ. ರಿಷಬ್​ ಅವರೇ, ಈ ಸಿನಿಮಾ ಮೂಲಕ ನಮ್ಮೆಲ್ಲರಿಗೂ ಹೆಮ್ಮೆ ಆಗುವಂತೆ ನೀವು ಮಾಡಿದ್ದೀರಿ. ಅದಕ್ಕಾಗಿ ನಿಮಗೆ ಧನ್ಯವಾದಗಳು. ಕೇವಲ ಎರಡನೇ ಸಿನಿಮಾದಲ್ಲಿಯೇ ಇಷ್ಟೊಂದು ಚೆನ್ನಾಗಿ ನಟಿಸಿರುವ ಸಪ್ತಮಿ ಗೌಡ ಅವರ ಪ್ರತಿಭೆ ಕಂಡು ಅಚ್ಚರಿ ಆಯಿತು’ ಎಂದು ರಮ್ಯಾ ಹೊಗಳಿದ್ದಾರೆ.

‘ಅರವಿಂದ್​ ಕಶ್ಯಪ್​ ಅವರು ಸೆರೆಹಿಡಿದ ದೃಶ್ಯಗಳು ನಮ್ಮನ್ನು ಕಾಂತಾರದ ಪ್ರಪಂಚದೊಳಗೆ ಕರೆದುಕೊಂಡು ಹೋದವು’ ಎಂದಿರುವ ರಮ್ಯಾ ಅವರು ವಿಜಯ್​ ಕಿರಗಂದೂರು, ಕಾರ್ತಿಕ್​ ಗೌಡ ಪ್ರಯತ್ನಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ. ರಿಷಬ್​ ಪತ್ನಿ ಪ್ರಗತಿಗೆ ರಮ್ಯಾ ಅಭಿನಂದನೆ ತಿಳಿಸಿದ್ದಾರೆ. ರಮ್ಯಾ ಸಿನಿಮಾ ನೋಡಿ ಇಷ್ಟಪಟ್ಟಿರುವುದು ರಿಷಬ್​ ಮತ್ತು ತಂಡದ ಖುಷಿ ಹೆಚ್ಚಿಸಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 7:54 am, Fri, 30 September 22

ಸ್ವಜನಪಕ್ಷಪಾತವಿಲ್ಲದ ಏಕೈಕ ಸ್ಥಳವೆಂದರೆ ಸೇನೆ; ಸಿಡಿಎಸ್ ಅನಿಲ್ ಚೌಹಾಣ್
ಸ್ವಜನಪಕ್ಷಪಾತವಿಲ್ಲದ ಏಕೈಕ ಸ್ಥಳವೆಂದರೆ ಸೇನೆ; ಸಿಡಿಎಸ್ ಅನಿಲ್ ಚೌಹಾಣ್
ಶಾಹೀನ್ ಅಫ್ರಿದಿ ಬ್ಯಾಟಿಂಗ್ ಶ್ಲಾಘಿಸಿದ ಕುಲ್ದೀಪ್ ಯಾದವ್
ಶಾಹೀನ್ ಅಫ್ರಿದಿ ಬ್ಯಾಟಿಂಗ್ ಶ್ಲಾಘಿಸಿದ ಕುಲ್ದೀಪ್ ಯಾದವ್
ಬುರುಡೆ ಜತೆ ಸಿಕ್ಕ ID ಕಾರ್ಡ್,ವಾಕಿಂಗ್ ಸ್ಟಿಕ್ ಬಗ್ಗೆ ಸತ್ಯ ಬಿಚ್ಚಿಟ ಮಗ
ಬುರುಡೆ ಜತೆ ಸಿಕ್ಕ ID ಕಾರ್ಡ್,ವಾಕಿಂಗ್ ಸ್ಟಿಕ್ ಬಗ್ಗೆ ಸತ್ಯ ಬಿಚ್ಚಿಟ ಮಗ
ಬೆಂಗಳೂರಿನಲ್ಲಿ ಮಳೆ ರುದ್ರನರ್ತನ: ವಾಹನ ಸವಾರರಿಗೆ ನರಕ ದರ್ಶನ
ಬೆಂಗಳೂರಿನಲ್ಲಿ ಮಳೆ ರುದ್ರನರ್ತನ: ವಾಹನ ಸವಾರರಿಗೆ ನರಕ ದರ್ಶನ
ಸಂಪುಟ ಸಭೆಯಲ್ಲಿ ಜಾತಿ ಜ್ವಾಲೆ:ಏರು ಧ್ವನಿಯಲ್ಲೇ ಸಚಿವರಿಂದ ಆಕ್ಷೇಪ
ಸಂಪುಟ ಸಭೆಯಲ್ಲಿ ಜಾತಿ ಜ್ವಾಲೆ:ಏರು ಧ್ವನಿಯಲ್ಲೇ ಸಚಿವರಿಂದ ಆಕ್ಷೇಪ
ಧರ್ಮಸ್ಥಳ ಕೇಸ್: ಇಂದು ಇನ್ನಷ್ಟು ತಲೆಬುರುಡೆ, ಅಸ್ಥಿಪಂಜರಗಳು ಪತ್ತೆ
ಧರ್ಮಸ್ಥಳ ಕೇಸ್: ಇಂದು ಇನ್ನಷ್ಟು ತಲೆಬುರುಡೆ, ಅಸ್ಥಿಪಂಜರಗಳು ಪತ್ತೆ
ಒಳನುಸುಳುಕೋರರನ್ನು ರಕ್ಷಿಸಲು ರಾಹುಲ್ ಗಾಂಧಿ ಯಾತ್ರೆ; ಅಮಿತ್ ಶಾ ವಾಗ್ದಾಳಿ
ಒಳನುಸುಳುಕೋರರನ್ನು ರಕ್ಷಿಸಲು ರಾಹುಲ್ ಗಾಂಧಿ ಯಾತ್ರೆ; ಅಮಿತ್ ಶಾ ವಾಗ್ದಾಳಿ
ಆಳಂದ ಮತಗಳ್ಳತನ:ಮತ್ತಷ್ಟು ಸ್ಫೋಟಕ ಅಂಶ ಬಿಚ್ಚಿಟ್ಟ ಪ್ರಿಯಾಂಕ್ ಖರ್ಗೆ
ಆಳಂದ ಮತಗಳ್ಳತನ:ಮತ್ತಷ್ಟು ಸ್ಫೋಟಕ ಅಂಶ ಬಿಚ್ಚಿಟ್ಟ ಪ್ರಿಯಾಂಕ್ ಖರ್ಗೆ
ಇನ್ಮುಂದೆ ಕಿಚ್ಚ ಸುದೀಪ್ ಅವರೇ ವಿಷ್ಣುವರ್ಧನ್​ ಮಗ: ಅಭಿಮಾನದ ಮಾತು
ಇನ್ಮುಂದೆ ಕಿಚ್ಚ ಸುದೀಪ್ ಅವರೇ ವಿಷ್ಣುವರ್ಧನ್​ ಮಗ: ಅಭಿಮಾನದ ಮಾತು
ವಿಷ್ಣುವರ್ಧನ್ ಎಂದಿಗೂ ನಮ್ಮ ಜೊತೆಗೇ ಇರುತ್ತಾರೆ: ಶಿವರಾಜ್ ಕುಮಾರ್
ವಿಷ್ಣುವರ್ಧನ್ ಎಂದಿಗೂ ನಮ್ಮ ಜೊತೆಗೇ ಇರುತ್ತಾರೆ: ಶಿವರಾಜ್ ಕುಮಾರ್