Upendra: ಪ್ಯಾನ್​ ಇಂಡಿಯಾ ಚಿತ್ರದಲ್ಲಿ ಶಿವಣ್ಣ-ಉಪೇಂದ್ರ; ಬಿಗ್​ ನ್ಯೂ​ಸ್​ ನೀಡಿದ ‘45’ ಚಿತ್ರತಂಡ

Shivarajkumar | 45 Movie: ಬಹುಕೋಟಿ ವೆಚ್ಚದಲ್ಲಿ ‘45’ ಸಿನಿಮಾ ನಿರ್ಮಾಣ ಆಗುತ್ತಿದೆ. ಈ ಸಿನಿಮಾದ ಚಿತ್ರೀಕರಣ ಡಿಸೆಂಬರ್​ನಲ್ಲಿ ಆರಂಭ ಆಗಲಿದೆ.

Upendra: ಪ್ಯಾನ್​ ಇಂಡಿಯಾ ಚಿತ್ರದಲ್ಲಿ ಶಿವಣ್ಣ-ಉಪೇಂದ್ರ; ಬಿಗ್​ ನ್ಯೂ​ಸ್​ ನೀಡಿದ ‘45’ ಚಿತ್ರತಂಡ
ರಮೇಶ್​ ರೆಡ್ಡಿ, ಉಪೇಂದ್ರ, ಅರ್ಜುನ್​ ಜನ್ಯ, ಶಿವರಾಜ್​ಕುಮಾರ್
Follow us
TV9 Web
| Updated By: ಮದನ್​ ಕುಮಾರ್​

Updated on: Oct 02, 2022 | 9:13 PM

ಕನ್ನಡ ಚಿತ್ರರಂಗದಲ್ಲಿ ಪ್ಯಾನ್​ ಇಂಡಿಯಾ ಸಿನಿಮಾಗಳ ಸಂಖ್ಯೆ ಹೆಚ್ಚುತ್ತಿದೆ. ಉಪೇಂದ್ರ (Upendra) ಅವರು ‘ಕಬ್ಜ’ ಸಿನಿಮಾ ಮಾಡುತ್ತಿದ್ದಾರೆ. ಅತ್ತ, ಶಿವರಾಜ್​ಕುಮಾರ್​ ನಟನೆಯ ‘45’ ಚಿತ್ರ ಕೂಡ ಪ್ಯಾನ್​ ಇಂಡಿಯಾ ಮಟ್ಟದಲ್ಲಿ ತಯಾರಾಗಲಿದೆ. ಅಚ್ಚರಿ ಎಂದರೆ, ಈ ಸಿನಿಮಾದಲ್ಲಿ ಶಿವರಾಜ್​ಕುಮಾರ್​ (Shivarajkumar) ಜೊತೆ ‘ರಿಯಲ್​ ಸ್ಟಾರ್​’ ಉಪೇಂದ್ರ ಕೂಡ ನಟಿಸಲಿದ್ದಾರೆ. ಈ ಬಗ್ಗೆ ‘45’ ಚಿತ್ರತಂಡದಿಂದ ದೊಡ್ಡ ಸುದ್ದಿ ಸಿಕ್ಕಿದೆ. ಈ ಸಿನಿಮಾಗೆ ರಮೇಶ್​ ರೆಡ್ಡಿ ಬಂಡವಾಳ ಹೂಡುತ್ತಿದ್ದು, ಅರ್ಜುನ್​ ಜನ್ಯ ಅವರು ನಿರ್ದೇಶನ ಮಾಡುತ್ತಿದ್ದಾರೆ. ಪಾತ್ರವರ್ಗಕ್ಕೆ ಉಪೇಂದ್ರ ಸೇರ್ಪಡೆ ಆಗಿರುವುದರಿಂದ ಚಿತ್ರದ ಮೇಲಿನ ನಿರೀಕ್ಷೆ ಹೆಚ್ಚಾಗಿದೆ. ನಿರ್ಮಾಪಕ ರಮೇಶ್​ ರೆಡ್ಡಿ ಮತ್ತು ನಿರ್ದೇಶಕ ಅರ್ಜುನ್​ ಜನ್ಯ (Arjun Janya) ಅವರು ಉಪೇಂದ್ರ ಅವರನ್ನು ಚಿತ್ರತಂಡಕ್ಕೆ ಸ್ವಾಗತಿಸಿದ್ದಾರೆ.

ಗಣೇಶ್​, ದಿಗಂತ್​, ಪವನ್​ ಕುಮಾರ್​ ನಟನೆಯ ‘ಗಾಳಿಪಟ 2’ ಸಿನಿಮಾ ಇತ್ತೀಚೆಗಷ್ಟೇ ಬಿಡುಗಡೆಯಾಗಿ ಸೂಪರ್​ ಹಿಟ್​ ಆಯಿತು. ಇದರಿಂದ ರಮೇಶ್​ ರೆಡ್ಡಿ ಅವರಿಗೆ ಲಾಭವಾಯಿತು. ಈಗ ಅವರು ಮುಂದಿನ ಸಿನಿಮಾ ಮೇಲೆ ಗಮನ ಹರಿಸಿದ್ದಾರೆ. ತಮ್ಮ ‘ಸೂರಜ್ ಪ್ರೊಡಕ್ಷನ್ಸ್​’ ಮೂಲಕ ದೊಡ್ಡ ಸಾಹಸಕ್ಕೆ ಅವರು ಕೈ ಹಾಕಿದ್ದಾರೆ. ಅರ್ಜುನ್ ಜನ್ಯ ನಿರ್ದೇಶನ ಮಾಡಲಿರುವ ‘45’ ಚಿತ್ರವನ್ನು ಶಿವರಾಜ್​ಕುಮಾರ್​ ಅವರ ಜನ್ಮದಿನದ ಪ್ರಯುಕ್ತ ಅನೌನ್ಸ್​ ಮಾಡಲಾಗಿತ್ತು. ಸದ್ಯ ಆ ಚಿತ್ರಕ್ಕೆ ಪ್ರೀ-ಪ್ರೊಡಕ್ಷನ್​ ಕೆಲಸಗಳು ನಡೆಯುತ್ತಿವೆ.

ಬಹುಕೋಟಿ ವೆಚ್ಚದಲ್ಲಿ ‘45’ ಸಿನಿಮಾ ನಿರ್ಮಾಣ ಆಗುತ್ತಿದೆ. ಈ ಸಿನಿಮಾದ ಚಿತ್ರೀಕರಣ ಡಿಸೆಂಬರ್​ನಲ್ಲಿ ಆರಂಭ ಆಗಲಿದೆ. ಕನ್ನಡ, ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿಯಲ್ಲಿ ಏಕಕಾಲಕ್ಕೆ ತೆರೆಕಾಣಿಸಲು ಪ್ಲ್ಯಾನ್​ ಮಾಡಿಕೊಳ್ಳಲಾಗಿದೆ. ಅರ್ಜುನ್ ಜನ್ಯ ಅವರೇ ಕಥೆ-ಚಿತ್ರಕಥೆ ಬರೆದಿದ್ದು, ನಿರ್ದೇಶನದ ಜೊತೆಗೆ ಸಂಗೀತ ನಿರ್ದೇಶನದ ಜವಾಬ್ದಾರಿಯನ್ನು ಕೂಡ ವಹಿಸಿಕೊಂಡಿದ್ದಾರೆ. ಶೂಟಿಂಗ್​ ಶುರು ಆಗುವುದಕ್ಕೂ ಮುನ್ನವೇ ಚಿತ್ರದ ಆಡಿಯೋ ಹಕ್ಕುಗಳಿಗೆ ಸಖತ್​ ಡಿಮ್ಯಾಂಡ್ ಬಂದಿದೆ ಎನ್ನಲಾಗಿದೆ.

ಇದನ್ನೂ ಓದಿ
Image
‘ಓಂ’ ಸಿನಿಮಾ ಸ್ಟೈಲ್​ನಲ್ಲಿ ‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್’ಗೆ ಶಿವರಾಜ್​ಕುಮಾರ್ ಎಂಟ್ರಿ; ಇಲ್ಲಿದೆ ವಿಡಿಯೋ
Image
‘ಪಾಸ್​ಪೋರ್ಟ್​ನಲ್ಲಿ ನನ್ನ ಹೆಸರು ಹೀಗಿಲ್ಲ’; ಅಸಲಿ ಹೆಸರು ರಿವೀಲ್ ಮಾಡಿದ ಶಿವರಾಜ್​ಕುಮಾರ್
Image
ಶಕ್ತಿಧಾಮದ ಮಕ್ಕಳ ಜತೆ ‘ಬೈರಾಗಿ’ ಹಾಡಿಗೆ ಡ್ಯಾನ್ಸ್ ಮಾಡಿದ ಶಿವರಾಜ್​ಕುಮಾರ್
Image
Sudeep: ‘ನಾನು-ಶಿವಣ್ಣ ಕೆಲವು ಸಮಯ ಮಾತಾಡ್ತಾ ಇರಲಿಲ್ಲ, ಕಾರಣ ಹುಡುಕ್ತಾ ಹೋದ್ರೆ..’; ಸುದೀಪ್​ ನೇರ ಮಾತು

ಶಿವರಾಜ್​ಕುಮಾರ್​ ಮತ್ತು ಉಪೇಂದ್ರ ಅವರು ಈ ಚಿತ್ರದಲ್ಲಿ ಜೊತೆಯಾಗಿ ನಟಿಸಲಿರುವುದರಿಂದ ಅವರಿಬ್ಬರ ಪಾತ್ರಗಳು ಹೇಗಿರಲಿವೆ ಎಂಬ ಕೌತುಕ ನಿರ್ಮಾಣ ಆಗಿದೆ. ಈ ಹಿಂದೆ ‘ಓಂ’ ಚಿತ್ರದಲ್ಲಿ ಉಪೇಂದ್ರ ಮತ್ತು ಶಿವಣ್ಣ ಒಟ್ಟಿಗೆ ಕೆಲಸ ಮಾಡಿದ್ದರು. ಬಳಿಕ ‘ಪ್ರೀತ್ಸೆ’ ಹಾಗೂ ‘ಲವ ಕುಶ’ ಚಿತ್ರದಲ್ಲಿ ತೆರೆ ಹಂಚಿಕೊಂಡಿದ್ದರು. ಈ ಮತ್ತೆ ಅವರಿಬ್ಬರು ‘45’ ಚಿತ್ರಕ್ಕಾಗಿ ಒಂದಾಗುತ್ತಿರುವುದು ವಿಶೇಷ. ಚಿತ್ರದ ಬಗ್ಗೆ ಹೆಚ್ಚಿನ ಅಪ್​ಡೇಟ್​ ಪಡೆಯಲು ಫ್ಯಾನ್ಸ್​ ಕಾದಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಚಿಟ್ಟಾಣಿ ಆಸೆ ಈಡೇರಿಸಲು ಯಕ್ಷಗಾನದಲ್ಲಿ ಅಭಿನಯಿಸಿದ ನಟಿ ಉಮಾಶ್ರೀ
ಚಿಟ್ಟಾಣಿ ಆಸೆ ಈಡೇರಿಸಲು ಯಕ್ಷಗಾನದಲ್ಲಿ ಅಭಿನಯಿಸಿದ ನಟಿ ಉಮಾಶ್ರೀ
Daily Devotional: ಮಾಘ ಸ್ನಾನದ ಹಿಂದಿನ ರಹಸ್ಯ ಹಾಗೂ ಮಹತ್ವ ತಿಳಿಯಿರಿ
Daily Devotional: ಮಾಘ ಸ್ನಾನದ ಹಿಂದಿನ ರಹಸ್ಯ ಹಾಗೂ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
ಪ್ರಿಯಕರನೊಂದಿಗೆ ಹೆಂಡತಿ ಹೋಗುತ್ತಿದ್ದ ಕಾರಿನ ಮೇಲೆ ಹತ್ತಿ ಕುಳಿತ ಗಂಡ!
ಪ್ರಿಯಕರನೊಂದಿಗೆ ಹೆಂಡತಿ ಹೋಗುತ್ತಿದ್ದ ಕಾರಿನ ಮೇಲೆ ಹತ್ತಿ ಕುಳಿತ ಗಂಡ!
ಅಯ್ಯೋ.. ಸಿಸಿಟಿವಿ ರಿಪೇರಿ ಮಾಡಲು ಬಂದಿದ್ದವನ ವಜ್ರದ ಉಂಗುರ ಬಿಡದ ಖದೀಮರು
ಅಯ್ಯೋ.. ಸಿಸಿಟಿವಿ ರಿಪೇರಿ ಮಾಡಲು ಬಂದಿದ್ದವನ ವಜ್ರದ ಉಂಗುರ ಬಿಡದ ಖದೀಮರು
ಗಾಂಧಿ ಭಾರತ ಒಂದು ಸರ್ಕಾರೀ ಕಾರ್ಯಕ್ರಮ, ಎಲ್ಲರೂ ಭಾಗವಹಿಸಬಹುದು: ಶಿವಕುಮಾರ್
ಗಾಂಧಿ ಭಾರತ ಒಂದು ಸರ್ಕಾರೀ ಕಾರ್ಯಕ್ರಮ, ಎಲ್ಲರೂ ಭಾಗವಹಿಸಬಹುದು: ಶಿವಕುಮಾರ್
ಮಹಾಕುಂಭದಲ್ಲಿ ಹೂವಿನ ಹಾರ ಮಾರುವ ಯುವತಿ ಸೌಂದರ್ಯಕ್ಕೆ ಫ್ಯಾನ್ ಆಗದವರೇ ಇಲ್ಲ
ಮಹಾಕುಂಭದಲ್ಲಿ ಹೂವಿನ ಹಾರ ಮಾರುವ ಯುವತಿ ಸೌಂದರ್ಯಕ್ಕೆ ಫ್ಯಾನ್ ಆಗದವರೇ ಇಲ್ಲ