AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Bad Manners Teaser: ಅಭಿಷೇಕ್​ ಅಂಬರೀಷ್​​ ಜನ್ಮದಿನಕ್ಕೆ ‘ಬ್ಯಾಡ್​ ಮ್ಯಾನರ್ಸ್​’ ಟೀಸರ್​ ಉಡುಗೊರೆ

Abhishek Ambareesh Birthday: ಸೂರಿ ನಿರ್ದೇಶನದಲ್ಲಿ ‘ಬ್ಯಾಡ್​ ಮ್ಯಾನರ್ಸ್​’ ಚಿತ್ರ ಸಿದ್ಧವಾಗುತ್ತಿದೆ. ಅಭಿಷೇಕ್​ ಅಂಬರೀಷ್​ ಬರ್ತ್​ಡೇ ಪ್ರಯುಕ್ತ ಈ ಸಿನಿಮಾದ ಟೀಸರ್​ ರಿಲೀಸ್​ ಆಗಿದೆ.

Bad Manners Teaser: ಅಭಿಷೇಕ್​ ಅಂಬರೀಷ್​​ ಜನ್ಮದಿನಕ್ಕೆ ‘ಬ್ಯಾಡ್​ ಮ್ಯಾನರ್ಸ್​’ ಟೀಸರ್​ ಉಡುಗೊರೆ
ಅಭಿಷೇಕ್ ಅಂಬರೀಷ್
TV9 Web
| Edited By: |

Updated on:Oct 03, 2022 | 1:59 PM

Share

ನಟ ಅಭಿಷೇಕ್​ ಅಂಬರೀಷ್​ (Abhishek Ambareesh) ಅವರು ಹಲವು ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ. ಇಂದು (ಅ.3) ಅವರಿಗೆ ಹುಟ್ಟುಹಬ್ಬದ (Abhishek Ambareesh Birthday) ಸಂಭ್ರಮ. ಆ ಪ್ರಯುಕ್ತ ಹೊಸ ಟೀಸರ್​ ಹಾಗೂ ಪೋಸ್ಟರ್​ಗಳನ್ನು ರಿಲೀಸ್​ ಮಾಡಲಾಗುತ್ತಿದೆ. ಅಭಿಮಾನಿಗಳು ನೆಚ್ಚಿನ ನಟನ ಜನ್ಮದಿನವನ್ನು ಅದ್ದೂರಿಯಾಗಿ ಆಚರಿಸುತ್ತಿದ್ದಾರೆ. ‘ರೆಬಲ್​ ಸ್ಟಾರ್​’ ಅಂಬರೀಷ್​ ಪುತ್ರ ಎಂಬ ಕಾರಣಕ್ಕೆ ಅಭಿಷೇಕ್​ ಮೇಲೆ ಸಿನಿಪ್ರಿಯರಿಗೆ ವಿಶೇಷ ಅಭಿಮಾನ. ಅಂಬಿ ಪುತ್ರನಿಗೆ ಇಂದು ಸೆಲೆಬ್ರಿಟಿಗಳು, ಸ್ನೇಹಿತರು, ಆಪ್ತರು ಹಾಗೂ ಅಭಿಮಾನಿಗಳು ಹುಟ್ಟುಹಬ್ಬದ ಶುಭಾಶಯ ತಿಳಿಸುತ್ತಿದ್ದಾರೆ. ಈ ಖುಷಿಯನ್ನು ಹೆಚ್ಚಿಸಲು ‘ಬ್ಯಾಡ್​ ಮ್ಯಾನರ್ಸ್​’ (Bad Manners) ಸಿನಿಮಾದ ಟೀಸರ್​ ಬಿಡುಗಡೆ ಮಾಡಲಾಗಿದೆ.

ಅಭಿಷೇಕ್​ ಅಂಬರೀಷ್​ ನಟಿಸುತ್ತಿರುವ ‘ಬ್ಯಾಡ್​ ಮ್ಯಾನರ್ಸ್​’ ಸಿನಿಮಾ ಬಗ್ಗೆ ನಿರೀಕ್ಷೆ ಸೃಷ್ಟಿಯಾಗಲು ಅನೇಕ ಕಾರಣಗಳಿವೆ. ಈ ಚಿತ್ರಕ್ಕೆ ಖ್ಯಾತ ನಿರ್ದೇಶಕ ‘ದುನಿಯಾ’ ಸೂರಿ ಅವರು ಆ್ಯಕ್ಷನ್​-ಕಟ್​ ಹೇಳುತ್ತಿದ್ದಾರೆ. ಚಿತ್ರದ ಶೀರ್ಷಿಕೆ ಕೂಡ ಗಮನ ಸೆಳೆಯುತ್ತಿದೆ. ರಗಡ್​ ಸಿನಿಮಾಗಳನ್ನು ಮಾಡುವಲ್ಲಿ ಸೂರಿ ಫೇಮಸ್​. ಅಭಿಷೇಕ್​ ಅವರನ್ನು ಆ ರೀತಿ ನೋಡಲು ಫ್ಯಾನ್ಸ್​ ಬಯಸುತ್ತಾರೆ. ಈಗ ಟೀಸರ್​ ಮೂಲಕ ಚಿತ್ರದ ಮೇಲಿನ ನಿರೀಕ್ಷೆಯನ್ನು ಹೆಚ್ಚಿಸಲಾಗಿದೆ.

ಇದನ್ನೂ ಓದಿ
Image
ಕೆಲವು ರಾಜಕೀಯ ಪಕ್ಷಗಳಿಂದ ಪುತ್ರ ಅಭಿಷೇಕ್​ಗೆ ಆಫರ್ ಬಂದಿರುವುದು ನಿಜ: ಸಂಸದೆ ಸುಮಲತಾ ಅಂಬರೀಷ್
Image
ಅಭಿಷೇಕ್​ ಅಂಬರೀಷ್ ನಟನೆಯ ‘ಬ್ಯಾಡ್​ ಮ್ಯಾನರ್ಸ್​​’ ಸೆಟ್​ನಲ್ಲಿ ಡಾಲಿ ಧನಂಜಯ; ಇಲ್ಲಿದೆ ವಿಡಿಯೋ
Image
ಅಭಿಷೇಕ್​ ಅಂಬರೀಷ್​ ರಾಜಕೀಯಕ್ಕೆ ಬರ್ತಾರಾ?; ಸುಮಲತಾ ಅಂಬರೀಷ್​ ಹೇಳಿದ್ದಿಷ್ಟು
Image
ಮೊದಲ ಅವಾರ್ಡ್​​ ತಂದು ಅಪ್ಪನ ಫೋಟೋ ಮುಂದೆ ಇರಿಸಿದ ಅಭಿಷೇಕ್​ ಅಂಬರೀಷ್​; ಸುಮಲತಾ ಮೊಗದಲ್ಲಿ ಸಂಭ್ರಮ

‘ಅಮರ್​’ ಚಿತ್ರದ ಮೂಲಕ ಅಭಿಷೇಕ್​ ಅಂಬರೀಷ್​ ಅವರು ಚಿತ್ರರಂಗಕ್ಕೆ ಕಾಲಿಟ್ಟರು. ಮೊದಲ ಸಿನಿಮಾದಲ್ಲಿ ಅವರಿಗೆ ನಾಗಶೇಖರ್​ ನಿರ್ದೇಶನ ಮಾಡಿದ್ದರು. ಆ ಚಿತ್ರದ ಹಾಡುಗಳು ಸೂಪರ್​ ಹಿಟ್​ ಆದವು. ಈಗ ‘ಬ್ಯಾಡ್​ ಮ್ಯಾನರ್ಸ್​’ ಮಾತ್ರವಲ್ಲದೇ ಮಹೇಶ್​ ಕುಮಾರ್​ ನಿರ್ದೇಶನದ ಹೊಸ ಚಿತ್ರವನ್ನು ಕೂಡ ಅಭಿಷೇಕ್​ ಒಪ್ಪಿಕೊಂಡಿದ್ದಾರೆ. ಕೃಷ್ಣ ನಿರ್ದೇಶನ ಮಾಡಲಿರುವ ‘ಕಾಳಿ’ ಚಿತ್ರಕ್ಕೂ ಅಭಿಷೇಕ್​ ಹೀರೋ ಆಗಿದ್ದಾರೆ.

‘ಬ್ಯಾಡ್​ ಮ್ಯಾನರ್ಸ್​’ ಚಿತ್ರದಲ್ಲಿ ಅಭಿಷೇಕ್ ಅವರು ಭರ್ಜರಿ ಸಾಹಸ ದೃಶ್ಯಗಳಲ್ಲಿ ನಟಿಸಿದ್ದಾರೆ ಎಂಬುದಕ್ಕೆ ಟೀಸರ್​ನಲ್ಲಿ ಸಾಕ್ಷಿ ಸಿಕ್ಕಿದೆ. ಇನ್ನು, ಖಡಕ್​ ಡೈಲಾಗ್​ಗಳನ್ನೂ ಅವರು ಹೊಡೆದಿದ್ದಾರೆ. ‘ಐಡಿಯಾ ಸೃಷ್ಟಿ ಮಾಡಿದವನು ಸತ್ರೂ ಪರವಾಗಿಲ್ಲ. ಐಡಿಯಾ ಸಾಯಲ್ಲ’, ‘ವ್ಯವಸ್ಥೆ ತಪ್ಪಲ್ಲ.. ಮನುಷ್ಯನ ಯೋಚನೆ ತಪ್ಪು’ ಎಂದು ಅವರು ಹೇಳಿರುವ ಡೈಲಾಗ್​ಗಳು ಗಮನ ಸೆಳೆಯುತ್ತಿವೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 10:56 am, Mon, 3 October 22

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್