ಕೆಲವು ರಾಜಕೀಯ ಪಕ್ಷಗಳಿಂದ ಪುತ್ರ ಅಭಿಷೇಕ್​ಗೆ ಆಫರ್ ಬಂದಿರುವುದು ನಿಜ: ಸಂಸದೆ ಸುಮಲತಾ ಅಂಬರೀಷ್

ಪುತ್ರ ಅಭಿಷೇಕ್​ಗೆ ರಾಜಕೀಯ ಪಕ್ಷಗಳಿಂದ ಬಂದ ಆಫರ್​ಗಳ ಬಗ್ಗೆ ಸಂಸದೆ ಸುಮಲತಾ ಅಂಬರೀಷ್ ಮಾಹಿತಿ ನೀಡಿದ್ದು, ಕೆಲವು ರಾಜಕೀಯ ಪಕ್ಷಗಳಿಂದ ಆಫರ್ ಬಂದಿರುವುದು ನಿಜ ಎಂದಿದ್ದಾರೆ.

ಕೆಲವು ರಾಜಕೀಯ ಪಕ್ಷಗಳಿಂದ ಪುತ್ರ ಅಭಿಷೇಕ್​ಗೆ ಆಫರ್ ಬಂದಿರುವುದು ನಿಜ: ಸಂಸದೆ ಸುಮಲತಾ ಅಂಬರೀಷ್
ಸುಮಲತಾ ಅಂಬರೀಷ್
Follow us
TV9 Web
| Updated By: Rakesh Nayak Manchi

Updated on:Jun 28, 2022 | 2:57 PM

ಮಂಡ್ಯ: ಅಭಿಷೇಕ್ ಅಂಬರೀಷ್ (Abhishek Ambareesh) ಅವರು ರಾಜಕೀಯ ಪ್ರವೇಶ ಮಾಡುವ ಬಗ್ಗೆ ಮಾತುಗಳು ಕೇಳಿಬರುತ್ತಿದ್ದವು. ಇದೀಗ ಪುತ್ರ ಅಭಿಷೇಕ್​ಗೆ ರಾಜಕೀಯ ಪಕ್ಷಗಳಿಂದ ಬಂದ ಆಫರ್​ಗಳ ಬಗ್ಗೆ ಸಂಸದೆ ಸುಮಲತಾ ಅಂಬರೀಷ್ (Sumalatha Ambareesh) ಅವರು ಮಾಹಿತಿ ನೀಡಿದ್ದಾರೆ. ಕೆಲವು ಪಕ್ಷಗಳಿಂದ ಅಭಿಷೇಕ್​ಗೆ ಆಫರ್ ಬಂದಿರುವುದು ನಿಜ. ಯಾವ ಪಕ್ಷಕ್ಕೆ ಅಭಿಷೇಕ್ ಅನಿವಾರ್ಯವೋ ಅಂತಹ ಪಕ್ಷಗಳ ಮಾತನಾಡುತ್ತವೆ ಎಂದು ಹೇಳಿದ್ದಾರೆ.

ಬೇರೆ ಕ್ಷೇತ್ರದಿಂದ ಸ್ಪರ್ಧಿಸುವ ಬಗ್ಗೆ ಪ್ರತಿಕ್ರಿಯಿಸಿದ ಸಂಸದೆ ಸುಮಲತಾ, ನಾನು ಮಂಡ್ಯದ ಸಂಸದೆ, ನಾನು ಬೆಂಗಳೂರು ಉತ್ತರ ಆಗಿರಬಹುದು ಅಥವಾ ಬೇರೆ ಯಾವುದೇ ಕ್ಷೇತ್ರದಲ್ಲಾಗಲಿ ಸ್ಪರ್ಧಿಸುವುದಿಲ್ಲ,  ನಾನು ಕೇಳಿಯೂ ಇಲ್ಲ. ಮಂಡ್ಯವನ್ನು ನಾನು ಬಿಡುವುದಿಲ್ಲ, ಮಂಡ್ಯ ನನ್ನನ್ನು ಬಿಡುವುದಿಲ್ಲ, ಇದು ಅಪಪ್ರಚಾರ ಅಷ್ಟೇ. ಬೇರೆ ಕ್ಷೇತ್ರವನ್ನು ಕೇಳಿರುವುದು ಕೇವಲ ಎಲೆಕ್ಷನ್ ಗಿಮಿಕ್ ಅಷ್ಟೆ. ನನ್ನ ವಿರುದ್ಧ ಅಪಪ್ರಚಾರ ಮಾಡುತ್ತಾ ಇದ್ದಾರೆ, ಕೆಳಮಟ್ಟದ ರಾಜಕಾರಣ ಮಾಡಲಾಗುತ್ತಿದೆ. ಜನರು ಇಷ್ಟಪಟ್ಟಿರುವುದಕ್ಕೆ ನಾನು ಇಂದು ಇಲ್ಲಿದ್ದೀನಿ ಎಂದರು.

ಇದನ್ನೂ ಓದಿ: 230ನೇ ಟಿಪ್ಪು ಸುಲ್ತಾನ್ ಉರುಸ್ ಆಚರಣೆ: ಮುಂಜಾಗ್ರತಾ ಕ್ರಮವಾಗಿ ಬಿಗಿ ಪೊಲೀಸ್ ಭದ್ರತೆ

ಮೈಸೂರು ಸಂಸದರು ಮತ್ತು ತಮ್ಮ ನಡುವೆ ಕೋಲ್ಡ್ ವಾರ್ ನಡೆಯುತ್ತಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ನನ್ನ ಹಾಗೂ ಮೈಸೂರು ಸಂಸದರ ನಡುವೆ ಯಾವುದೇ ಕೋಲ್ಡ್ ವಾರ್ ಇಲ್ಲ. ನಮ್ಮ ರೈತರಿಗೆ ನಮ್ಮ ಜನರಿಗೆ ತೊಂದರೆ ಆದರೆ ನಾನು ಹೋರಾಟ ಮಾಡುತ್ತೇನೆ. ನಮ್ಮ ಭಾಗದ ಜನರಿಗೆ ತೊಂದರೆಯಾದರೆ ನೇರವಾಗಿ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರ ಬಳಿಯೇ ಹೋಗಿ ನ್ಯಾಯ ಕೇಳುತ್ತೇನೆ. ನನ್ನದು ಫೋಟೊ ಪಾಲಿಟಿಕ್ಸ್ ಅಲ್ಲ. ಕೆಲಸ ಮಾಡಿಸಿ ಕ್ಯಾಮರ ಮುಂದೆ ಮಿಡಿಯಾ ಮುಂದೆ ನಾನು ಪ್ರಚಾರ ಪಡೆಯುವುದಿಲ್ಲ ಎಂದರು.

ಇಂದು ಶ್ರೀರಂಗಪಟ್ಟಣದಲ್ಲಿ ನಡೆಯು 230ನೇ ಟಿಪ್ಪು ಸುಲ್ತಾನ್ ಉರುಸ್ ಆಚರಣೆಯಲ್ಲಿ ಸಂಸದೆ ಸುಮಲತಾ ಅಂಬರೀಷ್ ಅವರು ಭಾಗಿಯಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿತ್ತು. ಈ ಬಗ್ಗೆ ಪ್ರತಿಕ್ರಿಯಿಸಿದ ಅವರು, ನಾನು ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಿಲ್ಲ ಎಂದಿದ್ದಾರೆ.

ಟ್ರಾಫಿಕ್ ಜಾಮ್, ರೈಲಿನಲ್ಲಿ ಮಂಡ್ಯಕ್ಕೆ ಆಗಮಿಸಿದ ಸಂಸದರು

ಬೆಂಗಳೂರು ಮೈಸೂರು ಹೈವೆ ಕಾಮಗಾರಿ ಪ್ರಗತಿಯಲ್ಲಿರುವ ಹಿನ್ನೆಲೆ ಸಂಚಾರ ದಟ್ಟಣೆ ಉಂಟಾಗಿದೆ. ಈ ಹಿನ್ನೆಲೆ ಸಂಸದೆ ಸುಮಲತಾ ಅವರು ಕೊಚ್ಚಿವೆಲ್ಲಿ ರೈಲು ಮೂಲಕ ಮಂಡ್ಯಕ್ಕೆ ಆಗಮಿಸಿದರು. ಇಂದು ನಡೆಯುವ ದಿಶಾ ಸಭೆ ಹಾಗೂ ಜಿಲ್ಲಾ ಸಲಹಾ ಸಮಿತಿ ಸಭೆಯಲ್ಲಿ ಸಂಸದರು ಭಾಗಿಯಾಗಲಿದ್ದಾರೆ. ಹೀಗಾಗಿ ಕಾರು ಬಿಟ್ಟು ರೈಲಿನಲ್ಲಿ ಪ್ರಯಾಣ ಬೆಳೆಸಿದ್ದಾರೆ.

ಇದನ್ನೂ ಓದಿ: ಮಂಡ್ಯದಲ್ಲಿ ಮತ್ತೆ ಭುಗಿಲೇಳುತ್ತಾ ಧರ್ಮ ದಂಗಲ್​​: ಉರುಸ್ ಆಚರಣೆ ನೆಪದಲ್ಲಿ ಶಕ್ತಿ ಪ್ರದರ್ಶನಕ್ಕೆ ಮುಸಲ್ಮಾನರ ಮೆಗಾ ಪ್ಲಾನ್

Published On - 2:57 pm, Tue, 28 June 22

ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ