ಮಂಡ್ಯದಲ್ಲಿ ಮತ್ತೆ ಭುಗಿಲೇಳುತ್ತಾ ಧರ್ಮ ದಂಗಲ್: ಉರುಸ್ ಆಚರಣೆ ನೆಪದಲ್ಲಿ ಶಕ್ತಿ ಪ್ರದರ್ಶನಕ್ಕೆ ಮುಸಲ್ಮಾನರ ಮೆಗಾ ಪ್ಲಾನ್
ಜಾಥಾದಲ್ಲಿ ಸುಮಾರು 30-40 ಸಾವಿರ ಮಂದಿ ಭಾಗವಹಿಸುವ ಸಾಧ್ಯತೆಯಿದ್ದು, ಜೂನ್ 28ರಂದು(ನಾಳೆ) ಬೃಹತ್ ಜಾಥಾ ನಡೆಯಲಿದೆ. ಶ್ರೀರಂಗಪಟ್ಟಣ ಮಸೀದಿಯಿಂದ ಗುಂಬಜ್ವರೆಗೆ ಮಧ್ಯಾಹ್ನ 3ರಿಂದ ಸಂಜೆ 5ಗಂಟೆವರೆಗೆ ಬೃಹತ್ ಜಾಥಾ ನಡೆಯಲಿದೆ.
ಮಂಡ್ಯ: 230ನೇ ಉರುಸ್ (Urus) ಆಚರಣೆ ಹಿನ್ನೆಲೆ ಜಿಲ್ಲೆಯಲ್ಲಿ ಜೂನ್ 27, 28, 29ರಂದು ಮೂರು ದಿನ ಉರುಸ್ ಆಚರಿಸಲಾಗುತ್ತಿದ್ದು, ಮತ್ತೊಂದು ಧರ್ಮ ದಂಗಲ್ಗೆ ಸಕ್ಕರೆ ನಗರಿ ಮಂಡ್ಯ ಸಾಕ್ಷಿಯಾಗಲಿದ್ಯ ಎನ್ನುವ ಪ್ರಶ್ನೆಗಳು ಹುಟ್ಟಿಕೊಳ್ಳುತ್ತಿವೆ. ಹಿಂದೂಗಳ ಬಳಿಕ ಇದೀಗ ಮುಸಲ್ಮಾನರ ಸರದಿಯಾಗಿದ್ದು, ಉರುಸ್ ಆಚರಣೆ ನೆಪದಲ್ಲಿ ಬೃಹತ್ ಶಕ್ತಿ ಪ್ರದರ್ಶನಕ್ಕೆ ಮುಸಲ್ಮಾನರು ಮೆಗಾ ಪ್ಲಾನ್ ಸಿದ್ಧ ಮಾಡಿದ್ದಾರೆ. ಜಿಲ್ಲೆಯ ಶ್ರೀರಂಗಪಟ್ಟಣ ಸಮೀಪದ ಗಂಜಾಂನಲ್ಲಿ ಉರುಸ್ ಕಾರ್ಯಕ್ರಮ ನಡೆಯಲಿದೆ.
ಇದನ್ನೂ ಓದಿ: Karnataka Rain: ರಾಜ್ಯಾದ್ಯಂತ 2 ದಿನಗಳ ಕಾಲ ಗುಡುಗು ಸಹಿತ ಭಾರಿ ಮಳೆ ಸಾಧ್ಯತೆ
ಜಾಥಾದಲ್ಲಿ ಸುಮಾರು 30-40 ಸಾವಿರ ಮಂದಿ ಭಾಗವಹಿಸುವ ಸಾಧ್ಯತೆಯಿದ್ದು, ಜೂನ್ 28ರಂದು(ನಾಳೆ) ಬೃಹತ್ ಜಾಥಾ ನಡೆಯಲಿದೆ. ಶ್ರೀರಂಗಪಟ್ಟಣ ಮಸೀದಿಯಿಂದ ಗುಂಬಜ್ವರೆಗೆ ಮಧ್ಯಾಹ್ನ 3ರಿಂದ ಸಂಜೆ 5ಗಂಟೆವರೆಗೆ ಬೃಹತ್ ಜಾಥಾ ನಡೆಯಲಿದೆ.
ಇದನ್ನೂ ಓದಿ: ಸೋಮವಾರ ಬೆಳ್ಳಂಬೆಳಿಗ್ಗೆ ತೋರಣಗಲ್ನಲ್ಲಿರುವ ಜಿಂದಾಲ್ ಫ್ಯಾಕ್ಟರಿ ಆವರಣದಲ್ಲಿ ಕರಡಿ ಪ್ರತ್ಯಕ್ಷ!
ಹಜರತ್ ಟಿಪ್ಪು ಸುಲ್ತಾನ್ ಶಹೀದ್ ವಕ್ಫ್ ಎಸ್ಟೇಟ್ನಿಂದ ಜಾಥಾಗೆ ಅನುಮತಿ ಕೋರಿ ಮಂಡ್ಯ ಎಸ್ಪಿಗೆ ಪತ್ರ ಬರೆಯಲಾಗಿದ್ದು, ಪತ್ರ ಟಿವಿ9 ಗೆ ಲಭ್ಯವಾಗಿದೆ. 3 ದಿನಗಳ ಬಿಗಿ ಪೊಲೀಸ್ ಬಂದೋ ಬಸ್ತ್ಗೆ ಮನವಿ ಕೂಡ ಮಾಡಲಾಗಿದೆ. ಉರುಸ್ ಆಚರಣೆ ವೇಳೆ ಯಾವುದೇ ಅಹಿತಕರ ಘಟನೆ ನಡೆಯದಂತೆ, ಕಾನೂನು ಸುವ್ಯವಸ್ಥೆ ಕಾಪಾಡುವಂತೆ ಮನವಿ ಮಾಡಲಾಗಿದೆ.