ಸೋಮವಾರ ಬೆಳ್ಳಂಬೆಳಿಗ್ಗೆ ತೋರಣಗಲ್​ನಲ್ಲಿರುವ ಜಿಂದಾಲ್ ಫ್ಯಾಕ್ಟರಿ ಆವರಣದಲ್ಲಿ ಕರಡಿ ಪ್ರತ್ಯಕ್ಷ!

ಜನ ಅದರಿಂದ ಭೀತಿಗೊಳಗಾಗಿ ಓಡಿಸುವ ಪ್ರಯತ್ನ ಮಾಡುತ್ತಿದ್ದಾರೆ. ಅವರ ಕೈಗೆ ಸಿಕ್ಕರೆ ನನ್ನನ್ನು ಕೊಂದೇ ಬಿಡುತ್ತಾರೆಂಬ ಆತಂಕ ಕರಡಿಗೆ! ಕೊನೆಗೂ ಫ್ಯಾಕ್ಟರಿಯ ಕೆಲಸಗಾರರು ಅದನ್ನು ಕಾರ್ಖಾನೆ ಆವರಣದಿಂದ ಓಡಿಸುವಲ್ಲಿ ಸಫಲರಾಗುತ್ತಾರೆ.

TV9kannada Web Team

| Edited By: Arun Belly

Jun 27, 2022 | 1:13 PM

ಬಳ್ಳಾರಿ ಜಿಲ್ಲೆ ಸಂಡೂರು ತಾಲ್ಲೂಕಿನ ತೋರಣಗಲ್ ನಲ್ಲಿರುವ (Toranagal Factory) ಜಿಂದಾಲ್ (Jindal) ಫ್ಯಾಕ್ಟರಿಗೆ ಸೋಮವಾರ ಬೆಳ್ಳಂಬೆಳಗ್ಗೆಯೇ ಒಬ್ಬ ಅನಿರೀಕ್ಷಿತ ಅತಿಥಿಯ ಆಗಮನವಾಗಿದೆ ಮಾರಾಯ್ರೇ. ಹೌದು, ಪಕ್ಕದ ಕಾಡಿನಿಂದ ಕರಡಿಯೊಂದು ಕಾರ್ಖಾನೆಯ ಆರ್ ಎಮ್ ಎಸ್ ಹೆಚ್ ಪ್ಲಾಂಟ್ (RMSH Plant) ನೊಳಗೆ ನುಗ್ಗಿ ಉಕ್ಕಿನ ಮೆಟ್ಟಿಲುಗಳ ಮೂಲಕ ಮೇಲೇರುವ ಪ್ರಯತ್ನ ಮಾಡುತ್ತಿರುವುದನ್ನು ವಿಡಿಯೋನಲ್ಲಿ ನೋಡಬಹುದು. ಜನ ಅದರಿಂದ ಭೀತಿಗೊಳಗಾಗಿ ಓಡಿಸುವ ಪ್ರಯತ್ನ ಮಾಡುತ್ತಿದ್ದಾರೆ. ಅವರ ಕೈಗೆ ಸಿಕ್ಕರೆ ನನ್ನನ್ನು ಕೊಂದೇ ಬಿಡುತ್ತಾರೆಂಬ ಆತಂಕ ಕರಡಿಗೆ! ಕೊನೆಗೂ ಫ್ಯಾಕ್ಟರಿಯ ಕೆಲಸಗಾರರು ಅದನ್ನು ಕಾರ್ಖಾನೆ ಆವರಣದಿಂದ ಓಡಿಸುವಲ್ಲಿ ಸಫಲರಾಗುತ್ತಾರೆ.

ಇದನ್ನೂ ಓದಿ:   ಮಂಡ್ಯದಲ್ಲಿ ಆರು ವರ್ಷದ ಬಾಲಕನಿಂದ ಬೆಳಕಿಗೆ ಬಂತು ಕಳ್ಳತನ ಪ್ರಕರಣ! ಸೆರೆ ಹಿಡಿದ ವಿಡಿಯೋದಿಂದ ದಲ್ಲಾಳಿಗಳ ಬಣ್ಣ ಬಯಲು

Follow us on

Click on your DTH Provider to Add TV9 Kannada