ಚಿಕ್ಕಬಳ್ಳಾಪುರದ ಅಕ್ಕುಂದಾದಲ್ಲಿ ಕ್ವಾರಿ ನಡೆಸುತ್ತಿರುವರಿಗೆ ಜನರ ಸುರಕ್ಷತೆ ಬಗ್ಗೆ ಕಾಳಜಿ ಇದ್ದಂತಿಲ್ಲ!

ಅಲ್ಲಿ ಓಡಾಡುವ ಜನರಿಗೆ ಅಕ್ಕಪಕ್ಕದ ಹೊಲಗದ್ದೆಗಳಲ್ಲಿ ಕೆಲಸ ಮಾಡುತ್ತಿರಬಹುದಾದ ರೈತಾಪಿ ಜನಗಳಿಗೆ ಸಿಡಿದ ಕಲ್ಲಿನ ಚೂರು ತಾಕಿ ಗಾಯಗಳಾದರೆ ಅದಕ್ಕೆ ಹೊಣೆ ಯಾರು?

TV9kannada Web Team

| Edited By: Arun Belly

Jun 27, 2022 | 2:25 PM

Chikkaballapur:  ಜೆಕೆ ಕನಸ್ಟ್ರಕ್ಷನ್ ಕಂಪನಿ ನಡೆಸುತ್ತಿದೆ ಎನ್ನಲಾಗುತ್ತಿರುವ ಕಲ್ಲು ಗಣಿಗಾರಿಕೆಯಲ್ಲಿ (quarry activities) ಎಷ್ಟು ಅಪಾಯಕಾರಿಯಾಗಿ ಕಲ್ಲುಬಂಡೆಗಳನ್ನು ಸ್ಫೋಟಿಸಲಾಗುತ್ತಿದೆ (exploded) ಅಂತ ವಿಡಿಯೋ ನೋಡಿದರೆ ಮನವರಿಕೆಯಾಗುತ್ತದೆ ಮತ್ತು ಈ ಕಂಪನಿಯನ್ನು ಪ್ರಶ್ನಿಸುವವರು ಯಾರೂ ಇಲ್ಲವಾ ಎಂಭ ಸಂಶಯವೂ ಮೂಡುತ್ತದೆ. ಸ್ಫೋಟದ ರಭಸಕ್ಕೆ ಕಲ್ಲು ಪುಡಿಯಾಗಿ ದೂದೂರಕ್ಕೆ ಸಿಡಿಯುತ್ತಿವೆ. ಅಲ್ಲಿ ಓಡಾಡುವ ಜನರಿಗೆ ಅಕ್ಕಪಕ್ಕದ ಹೊಲಗದ್ದೆಗಳಲ್ಲಿ ಕೆಲಸ ಮಾಡುತ್ತಿರಬಹುದಾದ ರೈತಾಪಿ ಜನಗಳಿಗೆ (farmers) ಸಿಡಿದ ಕಲ್ಲಿನ ಚೂರು ತಾಕಿ ಗಾಯಗಳಾದರೆ ಅದಕ್ಕೆ ಹೊಣೆ ಯಾರು? ಅಂದಹಾಗೆ ಈ ಕಲ್ಲು ಗಣಿಗಾರಿಕೆ ಚಿಕ್ಕಾಬಳ್ಳಾಪುರ ಜಿಲ್ಲೆ ಅರ್ಕುಂದಾ ಗ್ರಾಮದಲ್ಲಿ ನಡೆಯುತ್ತಿದೆ.

ಇದನ್ನೂ ಓದಿ: ಮುದ್ದಿನ ಶ್ವಾನದೊಂದಿಗೆ 777 ಚಾರ್ಲಿ ಸಿನಿಮಾ ವೀಕ್ಷಿಸಿದ ಜನಾರ್ದನ ರೆಡ್ಡಿ; ವೈರಲ್ ವಿಡಿಯೋ ಇಲ್ಲಿದೆ

Follow us on

Click on your DTH Provider to Add TV9 Kannada