ಬೆಳಗಾವಿ: ಸ್ಮಶಾನಕ್ಕೆ ಹೆಣ ಸಾಗಿಸಲು ದಾರಿಯಿಲ್ಲದ್ದಕ್ಕೆ ಏಣಗಿ ಗ್ರಾಮಸ್ಥರು ಜಿಲ್ಲಾಧಿಕಾರಿ ಕಚೇರಿ ಮುಂದೆ ಶವವಿಟ್ಟು ಪ್ರತಿಭಟಿಸಿದರು

ಹಾಗಾಗೇ ಗ್ರಾಮದ 65 ಪ್ರಾಯದವರಾಗಿದ್ದ ಅಬ್ದುಲ್ ಮಿಶ್ರಿಕೋಟಿ ಹೆಸರಿನ ವ್ಯಕ್ತಿ ಸತ್ತಾಗ ಗ್ರಾಮಸ್ಥರು ಶವವನ್ನು ಜಿಲ್ಲಾಧಿಕಾರಿಗಳ ಕಚೇರಿ ಮುಂದಿಟ್ಟು ಪ್ರತಿಭಟನೆ ನಡೆಸಿದರು

TV9kannada Web Team

| Edited By: Arun Belly

Jun 27, 2022 | 11:55 AM

ಬೆಳಗಾವಿ ಜಿಲ್ಲೆಯ ಏಣಗಿ (Enagi) ಗ್ರಾಮದ ಮುಸಲ್ಮಾನ ಸಮುದಾಯದವರಿಗೆ ಊರಲ್ಲಿ ಸ್ಮಶಾನವಿದೆ ಆದರೆ ಅಲ್ಲಿಗೆ ಹೋಗುವುದಕ್ಕೆ ದಾರಿ ಇಲ್ಲ. ಕಳೆದ ಹಲವಾರು ವರ್ಷಗಳಿಂದ ದಾರಿ ಮಾಡಿಸಿ ಕೊಡಿ ಅಂತ ಸರ್ಕಾರವನ್ನು ಆಗ್ರಹಿಸುತ್ತಿದ್ದರೂ ಅದರಿಂದ ಪ್ರಯೋಜವಾಗಿಲ್ಲ. ಹಾಗಾಗೇ ಗ್ರಾಮದ 65 ಪ್ರಾಯದವರಾಗಿದ್ದ ಅಬ್ದುಲ್ ಮಿಶ್ರಿಕೋಟಿ (Abdul Mishrikoti) ಹೆಸರಿನ ವ್ಯಕ್ತಿ ಸತ್ತಾಗ ಗ್ರಾಮಸ್ಥರು ಶವವನ್ನು ಜಿಲ್ಲಾಧಿಕಾರಿಗಳ ಕಚೇರಿ (DC Office) ಮುಂದಿಟ್ಟು ಪ್ರತಿಭಟನೆ ನಡೆಸಿದರು. ದಾರಿ ಮಾಡಿಕೊಡದ ಹೊರತು ಶವವನ್ನು ಅಲ್ಲಿಂದ ಎತ್ತುವುದಿಲ್ಲ ಅಂತ ಅವರು ಹಟ ಹಿಡಿದಿದ್ದರು.

ಇದನ್ನೂ ಓದಿ:  Viral Video: ತಾಯಿ ಕಳೆದುಕೊಂಡ ವಿದ್ಯಾರ್ಥಿಗೆ ಅಪ್ಪುಗೆಯ ಸಾಂತ್ವಾನ ಹೇಳಿದ ತರಗತಿ! ಕಣ್ಣೀರು ಬರಿಸುತ್ತದೆ ಈ ವಿಡಿಯೋ

Follow us on

Click on your DTH Provider to Add TV9 Kannada