ಚಾರ್ಮಾಡಿ ಘಾಟ್​ನ ಬಂಡೆಗಳ ಮೇಲೆ ಪ್ರವಾಸಿಗರ ಮೋಜು-ಮಸ್ತಿ; ಯುವಕರಿಂದ ಡ್ಯಾನ್ಸ್

ಚಾರ್ಮಾಡಿ ಘಾಟ್​ನ ಬಂಡೆಗಳ ಮೇಲೆ ಪ್ರವಾಸಿಗರ ಮೋಜು-ಮಸ್ತಿ; ಯುವಕರಿಂದ ಡ್ಯಾನ್ಸ್

TV9 Web
| Updated By: sandhya thejappa

Updated on:Jun 27, 2022 | 10:45 AM

ಮಳೆಗಾಲದಲ್ಲಿ ಚಾರ್ಮಾಡಿ ಘಾಟ್​ಗೆ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆ. ನೀರಿನಲ್ಲಿ ಆಟವಾಡಿ ಮೋಜು- ಮಸ್ತಿ ಮಾಡುತ್ತಾರೆ.

ಚಿಕ್ಕಮಗಳೂರು: ಜಿಲ್ಲೆಯ ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟ್ (Charmadi Ghat) ಪ್ರಕೃತಿ ಸೌಂದರ್ಯವನ್ನೇ ಹೊದ್ದು ನಿಂತಿದೆ. ಮಳೆಗಾಲದಲ್ಲಂತೂ (Rainy Season) ಬಂಡೆಗಳ ಮೇಲೆ ಹರಿದು ಬರುವ ನೀರನ್ನು ನೋಡಲು ಎರಡು ಕಣ್ಣು ಸಾಲದು. ಮಳೆಗಾಲದಲ್ಲಿ ಚಾರ್ಮಾಡಿ ಘಾಟ್​ಗೆ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆ. ನೀರಿನಲ್ಲಿ ಆಟವಾಡಿ ಮೋಜು- ಮಸ್ತಿ ಮಾಡುತ್ತಾರೆ. ಅದೇ ರೀತಿ ಈ ಬಾರಿಯೂ ಚಾರ್ಮಾಡಿ ಘಾಟ್ನ ಬಂಡೆಗಳ ಮೇಲೆ ಪ್ರವಾಸಿಗರು ಫುಲ್ ಎಂಜಾಯ್ ಮಾಡಿದ್ದಾರೆ. ಕೆಲವರು ಜಾರುವ ಬಂಡೆಗಳ ಮೇಲೆ ಹತ್ತಿ ಹುಚ್ಚಾಟ ಮರೆದಿದ್ದರೆ, ಇನ್ನು ಕೆಲವರು ಬಂಡೆಗಳ ಮೇಲೆ ಹತ್ತಿ ಫೋಟೋಗೆ ಪೋಸ್ ಕೊಡುತ್ತಿದ್ದಾರೆ. ಯುವಕರು ರಸ್ತೆ ಮದ್ಯೆ ಡ್ಯಾನ್ಸ್ ಮಾಡಿದ್ದು, ಟ್ರಾಫಿಕ್ ಜಾಮ್ ಆಗಿತ್ತು. ಪ್ರವಾಸಿಗರ ಹುಚ್ಚಾಟದಿಂದ ಘಾಟ್ನಲ್ಲಿ ಓಡಾಡುವ ಪ್ರವಾಸಿಗರಿಗೆ ತೀರ ತೊಂದರೆಯಾಗಿದೆ. ಈ ಹಿನ್ನೆಲೆ ಪೊಲೀಸರು ಸೂಕ್ತ ಕ್ರಮ ಕೈಗೊಳ್ಳುವಂತೆ ವಾಹನ ಸವಾರರು ಮನವಿ ಮಾಡಿದ್ದಾರೆ.

ಇದನ್ನೂ ಓದಿ: Skin Care: ನಿಮ್ಮ ಒಣ ತ್ವಚೆಯನ್ನು ಕೋಮಲವಾಗಿಸಲು ಈ ಆಯಿಲ್​ಗಳನ್ನು ಬಳಕೆ ಮಾಡಿ

Published on: Jun 27, 2022 10:44 AM