ಅಪ್ಪು.. ಅಪ್ಪು.. ಎಂದು ಕೂಗಿದ ಅಭಿಮಾನಿಗಳಿಗೆ ಶಿವಣ್ಣ ವಾರ್ನಿಂಗ್​; ಇಲ್ಲಿದೆ ವಿಡಿಯೋ

ಅಪ್ಪು.. ಅಪ್ಪು.. ಎಂದು ಕೂಗಿದ ಅಭಿಮಾನಿಗಳಿಗೆ ಶಿವಣ್ಣ ವಾರ್ನಿಂಗ್​; ಇಲ್ಲಿದೆ ವಿಡಿಯೋ

TV9 Web
| Updated By: ರಾಜೇಶ್ ದುಗ್ಗುಮನೆ

Updated on: Jun 26, 2022 | 1:36 PM

ಚಾಮರಾಜನಗರದಲ್ಲಿ ನಡೆದ ‘ಬೈರಾಗಿ’ ಪ್ರೀ-ರಿಲೀಸ್ ಇವೆಂಟ್​ನಲ್ಲೂ ಹಾಗೆಯೇ ಆಗಿದೆ. ಎಲ್ಲರೂ ಅಪ್ಪು ಅಪ್ಪು ಎಂದು ಕೂಗಿದ್ದಾರೆ. ಇದಕ್ಕೆ ಶಿವಣ್ಣ ಗರಂ ಆದರು.

ಪುನೀತ್ ರಾಜ್​ಕುಮಾರ್ (Puneeth Rajkumar) ಅವರನ್ನು ಕಳೆದುಕೊಂಡು ಹಲವು ತಿಂಗಳು ಕಳೆದಿದೆ. ಆದರೆ, ಅವರಿಲ್ಲ ಎನ್ನವ ನೋವು ಈಗಲೂ ಕಾಡುತ್ತಲೇ ಇದೆ. ಪುನೀತ್ ಅವರು ಇಲ್ಲ ಎಂಬುದನ್ನು ರಾಜ್​ ಕುಟುಂಬದ ಬಳಿ ಈಗಲೂ ಒಪ್ಪಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಶಿವರಾಜ್​ಕುಮಾರ್ (Shivarajkumar)​​ ಅವರು ಪುನೀತ್ ರಾಜ್​ಕುಮಾರ್ ಅವರನ್ನು ಹೃದಯದಲ್ಲಿ ಇಟ್ಟು ಪೂಜಿಸುತ್ತಿದ್ದಾರೆ. ‘ಪುನೀತ್​ ರಾಜ್​ಕುಮಾರ್ ಇಲ್ಲವಲ್ಲ’ ಎಂದರೆ ಅವರಿಗೆ ತುಂಬಾನೇ ಕೋಪಬಂದು ಬಿಡುತ್ತದೆ. ಚಾಮರಾಜನಗರದಲ್ಲಿ ನಡೆದ ‘ಬೈರಾಗಿ’ ಪ್ರೀ-ರಿಲೀಸ್ ಇವೆಂಟ್​ನಲ್ಲೂ ಹಾಗೆಯೇ ಆಗಿದೆ. ಎಲ್ಲರೂ ಅಪ್ಪು ಅಪ್ಪು ಎಂದು ಕೂಗಿದ್ದಾರೆ. ಇದಕ್ಕೆ ಶಿವಣ್ಣ ಗರಂ ಆದರು. ಅಲ್ಲದೆ, ಫ್ಯಾನ್ಸ್​ಗೆ ತಮ್ಮದೇ ಶೈಲಿಯಲ್ಲಿ ವಾರ್ನಿಂಗ್ ನೀಡಿದರು.

ಇದನ್ನೂ ಓದಿ: ‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್’ನಲ್ಲಿ ತಂದೆ ನೆನೆದು ಕಣ್ಣೀರು ಹಾಕಿದ ಶಿವಣ್ಣ; ಇದಕ್ಕೆ ಕಾರಣವಾಯ್ತು ಆ ಒಂದು ಹಾಡು

‘ಡ್ಯಾನ್ಸ್​ ಕರ್ನಾಟಕ ಡ್ಯಾನ್ಸ್’ ವೇದಿಕೆ ಮೇಲೆ ಶಿವರಾಜ್​ಕುಮಾರ್ ಎನರ್ಜೆಟಿಕ್ ಡ್ಯಾನ್ಸ್; ಎದ್ದು ನಿಂತು ಚಪ್ಪಾಳೆ ತಟ್ಟಿದ ರಕ್ಷಿತಾ