ಶಿವರಾಜ್ಕುಮಾರ್ (Shivarajkumar) ಹಾಗೂ ಧನಂಜಯ ಅವರು ಮೊದಲ ಬಾರಿಗೆ ಒಟ್ಟಿಗೆ ನಟಿಸಿದ್ದು ‘ಟಗರು’ ಚಿತ್ರದಲ್ಲಿ. ಈ ಸಿನಿಮಾ ಸೂಪರ್ ಡೂಪರ್ ಹಿಟ್ ಆಯಿತು. ಧನಂಜಯ ಅವರು ವಿಲನ್ ಆಗಿ ಮಿಂಚಿದರೆ, ಶಿವಣ್ಣ ಖಡಕ್ ಪೊಲೀಸ್ ಅಧಿಕಾರಿಯಾಗಿ ಗಮನ ಸೆಳೆದಿದ್ದರು. ಈಗ ‘ಬೈರಾಗಿ’ ಸಿನಿಮಾದಲ್ಲಿ ಇಬ್ಬರೂ ಮತ್ತೆ ಮುಖಾಮುಖಿ ಆಗುತ್ತಿದ್ದಾರೆ. ಶಿವಣ್ಣ ಹಾಗೂ ಧನಂಜಯ ನಡುವೆ ಒಳ್ಳೆಯ ಫ್ರೆಂಡ್ಶಿಪ್ ಇದೆ. ಇದನ್ನು ಶಿವರಾಜ್ಕುಮಾರ್ ಅವರು ಮತ್ತೆ ಹೇಳಿಕೊಂಡಿದ್ದಾರೆ. ‘ಬೈರಾಗಿ’ ಚಿತ್ರದ (Bairagee Movie) ಪ್ರೀ ರಿಲೀಸ್ ಕಾರ್ಯಕ್ರಮ ಚಾಮರಾಜನಗರದಲ್ಲಿ ನಡೆದಿದೆ. ಅಲ್ಲಿಗೆ ತೆರಳಿದ್ದ ತಂಡ ಚಿತ್ರದ ಪ್ರಮೋಷನ್ ಮಾಡಿದೆ. ವೇದಿಕೆ ಏರಿದ ಶಿವಣ್ಣ ಅವರು ಧನಂಜಯ ಜತೆ ಮತ್ತಷ್ಟು ಸಿನಿಮಾ ಮಾಡುವ ಬಗ್ಗೆ ಹೇಳಿಕೊಂಡಿದ್ದಾರೆ.
ರಾಮನಗರದಲ್ಲಿ ಶಿವರಾಜ್ಕುಮಾರ್ಗೆ ಭವ್ಯ ಸ್ವಾಗತ; ಇಲ್ಲಿದೆ ವಿಡಿಯೋ