ಬೊಮ್ಮಾಯಿಯವರ ಉದ್ಧಟತನ, ಕಾರ್ಯವೈಖರಿ ಹೀಗೆಯೇ ಮುಂದುವರಿದರೆ ಹೋರಾಟಕ್ಕಿಳಿಯಬೇಕಾಗುತ್ತದೆ: ನಿರಂಜನಾನಂದಪುರಿ ಸ್ವಾಮೀಜಿ

ಬೊಮ್ಮಾಯಿಯವರ ಉದ್ಧಟತನ, ಕಾರ್ಯವೈಖರಿ ಹೀಗೆಯೇ ಮುಂದುವರಿದರೆ ಹೋರಾಟಕ್ಕಿಳಿಯಬೇಕಾಗುತ್ತದೆ: ನಿರಂಜನಾನಂದಪುರಿ ಸ್ವಾಮೀಜಿ

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Jun 25, 2022 | 4:26 PM

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಶಿಕ್ಷಣ ಸಚಿವ ಬಿ ಸಿ ನಾಗೇಶ್ ಅವರಿಗೆ ತಿಳಿಸಿದಲ್ಲದೆ ಅವರು ತಮ್ಮ ಉದ್ಧಟತನ ಮತ್ತು ಕಾರ್ಯವೈಖರಿಯನ್ನು ಹೀಗೆಯೇ ಮುಂದುವರಿಸಿದರೆ ಮುಂಬರುವ ದಿನಗಳಲ್ಲಿ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ದಾವಣಗೆರೆ ಕನಕಗುರು ಪೀಠದ ಶ್ರೀ ನಿರಂಜನಾನಂದಪುರಿ ಸ್ವಾಮೀಜಿಯರು (Niranjanananda Puri Swamiji) ಶನಿವಾರದಂದು ಹರಿಹರ ತಾಲೂಕಿನ ಬೆಳ್ಳೂಡಿ ಗ್ರಾಮದಲ್ಲಿ ಮಾಧ್ಯಮದವರೊಂದಿಗೆ ಮಾತಾಡುವಾಗ ಪಠ್ಯಪುಸ್ತಕಗಳ (textbooks) ವಿಷಯದಲ್ಲಿ ಆಗಿರುವ ಲೋಪದೋಷಗಳನ್ನು ಕೂಡಲೇ ಸರಿಪಡಿಸಬೇಕೆಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಮತ್ತು ಶಿಕ್ಷಣ ಸಚಿವ ಬಿ ಸಿ ನಾಗೇಶ್ ಅವರಿಗೆ ತಿಳಿಸಿದಲ್ಲದೆ ಅವರು ತಮ್ಮ ಉದ್ಧಟತನ ಮತ್ತು ಕಾರ್ಯವೈಖರಿಯನ್ನು ಹೀಗೆಯೇ ಮುಂದುವರಿಸಿದರೆ ಮುಂಬರುವ ದಿನಗಳಲ್ಲಿ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಶಿಕ್ಷಣ ಯಾವುದೇ ಒಂದು ಜಾತಿಗೆ ಸೀಮಿತವಾಗಿರದೆ ಎಲ್ಲ ಸಮುದಾಯಗಳಿಗೆ ಸಿಗಬೇಕು, ಕುವೆಂಪು, ಬಸವಣ್ಣ ಮತ್ತು ಕನಕದಾಸರ ಬಗ್ಗೆ ಸಮುದಾಯಗಳಿಗೆ ಪ್ರಮಾಣೀಕವಾಗಿ ಹೇಳಬೇಕು. ಅವರನ್ನು ಕುರಿತ ಕೆಲ ಅಂಶಗಳನ್ನು ಮುಚ್ಚಿಟ್ಟರೆ ಮತ್ತು ಈಗಾಗಲೇ ಆಗಿರುವ ಪ್ರಮಾದಗಳನ್ನು ಸರಿಪಡಿಸದಿದ್ದರೆ ಹೋರಾಟಕ್ಕಿಳಿಯಬೇಕಾಗುತ್ತದೆ ಅಂತಲೂ ಶ್ರೀಗಳು ಎಚ್ಚರಿಸಿದರು.

ಇದನ್ನೂ ಓದಿ:    Rishabh Pant: ತಾನು ಔಟಾದಾಗ ಎದುರಾಳಿ ಆಟಗಾರರ ಜೊತೆ ಸಂಭ್ರಮಿಸಿದ ರಿಷಭ್ ಪಂತ್: ವೈರಲ್ ವಿಡಿಯೋ