ಚಾಮುಂಡೇಶ್ವರಿ ದರ್ಶನ ಪಡೆದ ಶಿವಣ್ಣ-ಗೀತಕ್ಕ; ‘ಹ್ಯಾಟ್ರಿಕ್ ಹೀರೋ’ ನೋಡಲು ಬಂದ ಜನಸಾಗರ
Chamundeshwari Temple: ಶಿವರಾಜ್ಕುಮಾರ್ ಅವರು ಮೈಸೂರಿಗೆ ತೆರಳಿದ್ದಾರೆ. ಪತ್ನಿ ಗೀತಾ ಜೊತೆ ಚಾಮುಂಡಿ ಬೆಟ್ಟಕ್ಕೆ ಹೋಗಿ ಅವರು ನಾಡದೇವತೆಯ ದರ್ಶನ ಪಡೆದಿದ್ದಾರೆ.
ನಟ ಶಿವರಾಜ್ಕುಮಾರ್ (Shivarajkumar) ಅವರು ‘ಬೈರಾಗಿ’ ಸಿನಿಮಾದ ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ಈ ಸಲುವಾಗಿ ಅವರು ಚಿತ್ರತಂಡದ ಜೊತೆ ಸೇರಿಕೊಂಡು ಬೆಂಗಳೂರಿನಿಂದ ಚಾಮರಾಜನಗರಕ್ಕೆ ಪ್ರಯಾಣ ಬೆಳೆಸಿದ್ದಾರೆ. ಮಾರ್ಗ ಮಧ್ಯದಲ್ಲಿ ಮೈಸೂರಿನ ಚಾಮುಂಡೇಶ್ವರಿ ದೇವಿಯ ದರ್ಶನ ಪಡೆದಿದ್ದಾರೆ. ಈ ವೇಳೆ ಗೀತಾ ಶಿವರಾಜ್ಕುಮಾರ್ (Geetha Shivarajkumar) ಕೂಡ ಜೊತೆಗಿದ್ದರು. ತಮ್ಮ ನೆಚ್ಚಿನ ನಟನನ್ನು ನೋಡಲು ಅಲ್ಲಿ ಜನಸಾಗರವೇ ಸೇರಿತ್ತು. ಅಭಿಮಾನಿಗಳು ‘ಹ್ಯಾಟ್ರಿಕ್ ಹೀರೋ’ ಜೊತೆ ಫೋಟೋ ಕ್ಲಿಕ್ಕಿಸಿಕೊಂಡು ಖುಷಿಪಟ್ಟಿದ್ದಾರೆ. ಚಾಮರಾಜನಗರದಲ್ಲಿ ಇಂದು (ಜೂನ್ 25) ಸಂಜೆ ‘ಬೈರಾಗಿ’ (Bairagee) ಸಿನಿಮಾದ ಪ್ರೀ-ರಿಲೀಸ್ ಇವೆಂಟ್ ನಡೆಯಲಿದೆ.
ಇದನ್ನೂ ಓದಿ: ‘ಬೈರಾಗಿ’ ಯಾತ್ರೆ: ಡಾ. ರಾಜ್ ಹುಟ್ಟಿ ಬೆಳೆದ ಗಾಜನೂರು ನೋಡಲು ಶಿವಣ್ಣನ ಜತೆ ಹೊರಟ ಡಾಲಿ ಧನಂಜಯ
Bairagee: ಯಾವೆಲ್ಲ ಊರಿಗೆ ಬರ್ತಾರೆ ಶಿವಣ್ಣ-ಡಾಲಿ? ಇಲ್ಲಿದೆ ‘ಬೈರಾಗಿ’ ಯಾತ್ರೆಯ ರೂಟ್ ಮ್ಯಾಪ್
Latest Videos