ಗರ್ಭಪಾತ ಮಾಡಿ ಶಿಶುಗಳ ದೇಹವನ್ನು ಹಳ್ಳಕ್ಕೆ ಎಸೆದಿದ್ದ ಮೂಡಲಗಿ ವೆಂಕಟೇಶ್ ಹೆರಿಗೆ ಆಸ್ಪತ್ರೆಯನ್ನು ಸೀಜ್ ಮಾಡಿದ ಬೆಳಗಾವಿ ಡಿಹೆಚ್ಒ

ನಮಗೆ ಲಭ್ಯವಾಗಿರುವ ಮಾಹಿತಿ ಪ್ರಕಾರ ಈ ಆಸ್ಪತ್ರೆಯಲ್ಲಿ ಅಕ್ರಮವಾಗಿ ಗರ್ಭಪಾತಗಳನ್ನು ಮಾಡಲಾಗುತ್ತಿತ್ತು. ಕಳೆದ 3 ವರ್ಷಗಳಲ್ಲಿ ಗರ್ಭಪಾತ ಮಾಡಿ ಹೊರತೆಗೆದ 7 ಶಿಶುಗಳ ದೇಹಗಳನ್ನು ಬಾಟಲಿಗಳಲ್ಲಿಟ್ಟು ಇತ್ತೀಚಿಗೆ ಹತ್ತಿರದ ಹಳ್ಳವೊಂದರಲ್ಲಿ ಬಿಸಾಡಲಾಗಿತ್ತು.

TV9kannada Web Team

| Edited By: Arun Belly

Jun 25, 2022 | 3:22 PM

ಬೆಳಗಾವಿಯ ಮೂಡಲಗಿ ಪಟ್ಟಣದಲ್ಲಿರುವ ವೆಂಕಟೇಶ್ ಹೆರಿಗೆ ಅಸ್ಪತ್ರೆ (Venkatesh Maternity Hospital) ಅದಕ್ಕೆ ಹೊಂದಿಕೊಂಡೇ ಇರುವ ಸ್ಕ್ಯಾನಿಂಗ್ ಸೆಂಟರ್ (Scanning Centre) ಅನ್ನು ಬೆಳಗಾವಿ ಜಿಲ್ಲಾ ಆರೋಗ್ಯ ವೈದ್ಯಾಧಿಕಾರಿಯವರು (DHO) ಸೀಜ್ ಮಾಡಿದ್ದಾರೆ. ನಮಗೆ ಲಭ್ಯವಾಗಿರುವ ಮಾಹಿತಿ ಪ್ರಕಾರ ಈ ಆಸ್ಪತ್ರೆಯಲ್ಲಿ ಅಕ್ರಮವಾಗಿ ಗರ್ಭಪಾತಗಳನ್ನು ಮಾಡಲಾಗುತ್ತಿತ್ತು. ಕಳೆದ 3 ವರ್ಷಗಳಲ್ಲಿ ಗರ್ಭಪಾತ ಮಾಡಿ ಹೊರತೆಗೆದ 7 ಶಿಶುಗಳ ದೇಹಗಳನ್ನು ಬಾಟಲಿಗಳಲ್ಲಿಟ್ಟು ಇತ್ತೀಚಿಗೆ ಹತ್ತಿರದ ಹಳ್ಳವೊಂದರಲ್ಲಿ ಬಿಸಾಡಲಾಗಿತ್ತು. ಅವು ಪತ್ತೆಯಾದ ಹಿನ್ನೆಲೆಯಲ್ಲಿ ಆಸ್ಪತ್ರೆ ವಿರುದ್ಧ ಪ್ರಕರಣ ದಾಖಲಾದ ಬಳಿಕ ಆರೋಗ್ಯಾಧಿಕಾರಿ ಆಸ್ಪತ್ರೆಯನ್ನೇ ಮುಚ್ಚಿಸಿಬಿಟ್ಟಿದ್ದಾರೆ.

ಇದನ್ನೂ ಓದಿ:  ಇದೂ ಒಂದು ರಾಷ್ಟ್ರೀಯ ಹೆದ್ದಾರಿಯೇ? ರಸ್ತೆಯುದ್ದಕ್ಕೂ 100 ಸ್ವಿಮ್ಮಿಂಗ್ ಪೂಲ್! ಅಚ್ಚರಿಯ ವಿಡಿಯೋ ವೈರಲ್!

Follow us on

Click on your DTH Provider to Add TV9 Kannada