ಬೆಂಗಳೂರಲ್ಲಿ ಶನಿವಾರ ನಡೆದ ಅರಣ್ಯ ಇಲಾಖೆಯ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಅಧಿಕಾರಿಗಳು ಮತ್ತು ವಿಧಾನ ಪರಿಷತ್ ಸದಸ್ಯೆ ತಾರಾ ಅನುರಾಧಾ ವಿರುದ್ಧ ಸಿಡಿಮಿಡಿಗೊಂಡ ಪ್ರಸಂಗ ನಡೆಯಿತು. ನಮಗೆ ಲಭ್ಯವಾಗಿರುವ ಮಾಹಿತಿ ಪ್ರಕಾರ ಹಾರ-ತುರಾಯಿ, ಶಾಲು-ಪೇಟ ಮೊದಲಾದ ದುಬಾರಿ ವೆಚ್ಚಗಳನ್ನು ಮಾಡುವುದು ಬೇಡ ಅಂತ ಬೊಮ್ಮಾಯಿ ಅವರು ಮೊದಲಿಂದ ಹೇಳಿಕೊಂಡು ಬಂದಿದ್ದರೂ, ಪ್ರತಿ ಸಮಾರಂಭದಲ್ಲಿ ಜನ ಮತ್ತು ಆಧಿಕಾರಿಗಳು ಅವೆಲ್ಲವನ್ನು ಮಾಡುತ್ತಾರೆ. ಹಾಗಾಗೇ ಅವರು ತಾರಾ ಮೇಲೆ ಸಿಟ್ಟಾದರು ಅನಿಸುತ್ತೆ.