AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Skin Care: ನಿಮ್ಮ ಒಣ ತ್ವಚೆಯನ್ನು ಕೋಮಲವಾಗಿಸಲು ಈ ಆಯಿಲ್​ಗಳನ್ನು ಬಳಕೆ ಮಾಡಿ

ನಿಮ್ಮದು ಒಣ ತ್ವಚೆಯೇ, ಎಜಿಮಾ ಸಮಸ್ಯೆಯನ್ನು ಎದುರಿಸುತ್ತಿದ್ದೀರಾ, ಮುಖದಲ್ಲಿ ತುರಿಕೆ ಕಾಣಿಸಿಕೊಳ್ಳುತ್ತಿದೆಯೇ? ಹಾಗಾದರೆ ನೀವು ಮುಖಕ್ಕೆ ಬಳಸುತ್ತಿರುವ ಆಯಿಲ್​ ಅನ್ನು ಒಮ್ಮೆ ಗಮನಿಸಿ. ನೀವು ಸದಾ ನಿಮ್ಮ ದೇಹವನ್ನು ಹೈಡ್ರೇಟ್, ಮಾಯ್ಚುರೈಸ್ ಆಗಿರುವಂತೆ ನೋಡಿಕೊಳ್ಳಿ, ಚರ್ಮವನ್ನು ನರಿಶ್ ಮಾಡಲು ಫೇಶಿಯಲ್ ಆಯಿಲ್ ಬಳಕೆ ಮಾಡಬೇಕು.

Skin Care: ನಿಮ್ಮ ಒಣ ತ್ವಚೆಯನ್ನು ಕೋಮಲವಾಗಿಸಲು ಈ ಆಯಿಲ್​ಗಳನ್ನು ಬಳಕೆ ಮಾಡಿ
Coconut OilImage Credit source: NDTV
TV9 Web
| Edited By: |

Updated on:Jun 27, 2022 | 10:41 AM

Share

ನಿಮ್ಮದು ಒಣ ತ್ವಚೆಯೇ, ಎಜಿಮಾ ಸಮಸ್ಯೆಯನ್ನು ಎದುರಿಸುತ್ತಿದ್ದೀರಾ, ಮುಖದಲ್ಲಿ ತುರಿಕೆ ಕಾಣಿಸಿಕೊಳ್ಳುತ್ತಿದೆಯೇ? ಹಾಗಾದರೆ ನೀವು ಮುಖಕ್ಕೆ ಬಳಸುತ್ತಿರುವ ಆಯಿಲ್​ ಅನ್ನು ಒಮ್ಮೆ ಗಮನಿಸಿ. ನೀವು ಸದಾ ನಿಮ್ಮ ದೇಹವನ್ನು ಹೈಡ್ರೇಟ್, ಮಾಯ್ಚುರೈಸ್ ಆಗಿರುವಂತೆ ನೋಡಿಕೊಳ್ಳಿ, ಚರ್ಮವನ್ನು ನರಿಶ್ ಮಾಡಲು ಫೇಶಿಯಲ್ ಆಯಿಲ್ ಬಳಕೆ ಮಾಡಬೇಕು.

ಅರಿಶಿನದಲ್ಲಿರುವ ಕರ್ಕ್ಯುಮಿನ್ ಉರಿಯೂತ ವಿರೋಧಿ ಆದ್ದರಿಂದ ಎಜಿಮಾ ವಿರುದ್ಧ ಹೋರಾಡುವ ಗುಣವನ್ನು ಹೊಂದಿದೆ. ಚರ್ಮದ ಹೊಳಪನ್ನು ಹೆಚ್ಚಿಸುವ ಗುಣವನ್ನು ಹೊಂದಿರುವ ಅರಿಶಿನ ಟ್ಯಾನ್ ಆದ ಚರ್ಮವನ್ನು ನೈಸರ್ಗಿಕವಾಗಿ ಹೊಳೆಯುವಂತೆ ಮಾಡುವ ಗುಣವನ್ನು ಹೊಂದಿದೆ.

ಚರ್ಮ ಹಾನಿಗೊಳಗಾದಾಗ ತ್ವಚೆ ಕುಂದಿದಂತೆ ಕಾಣುತ್ತದೆ, ಅರಿಶಿನ ಸೂರ್ಯನ ಯುವಿ ಕಿರಣಗಳಿಂದ ಚರ್ಮಕ್ಕಾಗುವ ಹಾನಿಯನ್ನು ತಡೆದು ವಯಸ್ಸಾದಂತೆ ಕಾಣುವುದನ್ನು ಕೂಡ ತಡೆಯುತ್ತದೆ.

ಉತ್ಕರ್ಷಣ ನಿರೋಧಕ ಗುಣವನ್ನು ಹೊಂದಿರುವ ಅರಿಶಿಣವನ್ನು ಕಲೆ ಮತ್ತು ತ್ವಚೆ ಸುಕ್ಕುಗಟ್ಟುವುದನ್ನು ತಡೆದು ವಯಸ್ಸಾದಂತೆ ಕಾಣುವುದನ್ನು ತಪ್ಪಿಸುತ್ತದೆ.ಇದರಲ್ಲಿರುವ ಆ್ಯಂಟಿ ಇನ್ಫ ಮೇಟರಿ ಗುಣ ನಿಯಮಿತ ಬಳಕೆಯಿಂದ ತ್ವಚೆ ಹೊಳಪನ್ನು ಹೆಚ್ಚಿಸುತ್ತದೆ.

ಯಾವುದೇ ರೀತಿಯ ಸಣ್ಣ ಗಾಯ , ಸುಟ್ಟ ಗಾಯ ಅರಿಶಿಣ ಬಳಸುವುದರಿಂದ ಬೇಗ ಗುಣವಾಗಲು ಸಹಾಯಕವಾಗುತ್ತದೆ. ನಿಮ್ಮ ಚರ್ಮದ ಹೊಳಪನ್ನು ಕಾಪಾಡಬಲ್ಲ ಆಯಿಲ್​ಗಳು.

ಆಲ್​ಮಂಡ್ ಆಯಿಲ್: ಬಾದಾಮಿ ಎಣ್ಣೆಯಲ್ಲಿ ವಿಟಮಿನ್ ಎ ಅಂಶವಿದ್ದು, ಮುಖದಲ್ಲಿ ಸುಕ್ಕುಗಟ್ಟುವಿಕೆ, ಚರ್ಮ ಒಣಗುವುದನ್ನು ತಪ್ಪಿಸಿ ಕಾಂತಿಯನ್ನು ಮರುಕಳಿಸುತ್ತದೆ.

ತೆಂಗಿನ ಎಣ್ಣೆ: ತ್ವಚೆಯ ರಕ್ಷಣೆಯಲ್ಲ್ಲ ಆಂಟಿಆಕ್ಸಿಡೆಂಟ್ ನಿರ್ಣಾಯಕ ಪಾತ್ರ ವಹಿಸುತ್ತದೆ ಬಹುತೇಕ ಫೇಸ್ ಕ್ರೀಂಗಳಲ್ಲಿರುವ ಆಂಟಿ ಆಕ್ಸಿಡೆಂಟ್ ತೆಂಗಿನ ಎಣ್ಣೆಯಲ್ಲೂ ಇದೆ. ಹೀಗಾಗಿ ಸೌಂದರ್ಯಪ್ರಿಯರು ಮುಖಕ್ಕೆ ತೆಂಗಿನ ಎಣ್ಣೆ ಹಚ್ಚುವ ಮೂಲಕ ನೈಸರ್ಗಿಕವಾಗಿ ಅಂದವನ್ನು ಹೆಚ್ಚಿಸಿಕೊಳ್ಳಬಹುದು.

ಆವಕಾಡೋ ಎಣ್ಣೆ: ಆವಕಾಡೋ ಎಣ್ಣೆಯಲ್ಲಿ ವಿಟಮಿನ್ ಸಿ ಹಾಗೂ ವಿಟಮಿನ್ ಇ ಅಂಶಗಳು ತ್ವಚೆಗೆ ಆಂತರಿಕವಾಗಿ ಪೋಷಣೆ ನೀಡುವ ಮೂಲಕ ಬಾಹ್ಯ ಸೌಂದರ್ಯವನ್ನು ಹೆಚ್ಚಿಸುತ್ತವೆ. ಆವಕಾಡೊನಲ್ಲಿರುವ ಲುಟೀನ್ ಹಾಗೂ ಜಿಯಾಕ್ಸೆಂಥೀನ್ ಪದಾರ್ಥಗಳು ಸೂರ್ಯನ ಅತಿ ನೇರಳೆ ಕಿರಣಗಳಿಂದ ಚರ್ಮಕ್ಕೆ ಆಗುವ ಹಾನಿಯನ್ನು ತಡೆಗಟ್ಟುವ ಶಕ್ತಿಯನ್ನು ಹೊಂದಿದ್ದು, ವಯಸ್ಸಾಗುವಿಕೆಯ ಲಕ್ಷಣಗಳನ್ನು ಕಡಿಮೆ ಮಾಡುತ್ತವೆ.

ಆವಕಾಡೊ ಹಣ್ಣು ಇದನ್ನು ಕನ್ನಡದಲ್ಲಿ ಬೆಣ್ಣೆ ಹಣ್ಣು ಎಂದು ಕರೆಯಲಾಗುತ್ತದೆ. ತಿನ್ನಲು ಬಲು ರುಚಿಯಾಗಿರುವ ಇದು ಆರೋಗ್ಯಕ್ಕೆ ತುಂಬಾ ಒಳ್ಳೆ

ನಮ್ಮ ತ್ವಚೆಯ ಆರೋಗ್ಯ ಕಾಪಾಡಲು ಇದನ್ನು ಬಹು ವಿಧಾನದಲ್ಲಿ ಬಳಸಬಹುದಾಗಿದೆ. ಪೌಷ್ಟಿಕಾಂಶಗಳಿಂದ ಸಮೃದ್ಧವಾಗಿರುವ ಆವಕಾಡೊ ಹಣ್ಣನ್ನು ಸೂಪರ್ ಫುಡ್ ಎಂದು ವರ್ಗೀಕರಿಸಲಾಗಿದ್ದು, ತ್ವಚೆಯ ಆರೋಗ್ಯ ಕಾಪಾಡಲು ಇದನ್ನು ಬಳಸಲಾಗುತ್ತದೆ.

ಈ ಲೇಖನವು ಟಿವಿ9ನ ಅಧಿಕೃತ ಮಾಹಿತಿಯಾಗಿರುವುದಿಲ್ಲ, ಸಾಮಾನ್ಯ ಮಾಹಿತಿಯನ್ನು ಒಳಗೊಂಡಿರುತ್ತದೆ. ಚರ್ಮದ ಸಮಸ್ಯೆಗಳಿದ್ದರೆ ವೈದ್ಯರನ್ನು ಭೇಟಿಯಾಗಿ.

Published On - 10:40 am, Mon, 27 June 22

ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ