Updated on:Mar 13, 2022 | 2:01 PM
ಸಾಸಿವೆ ಎಣ್ಣೆ - ಸಾಸಿವೆ ಎಣ್ಣೆಯನ್ನು ಪ್ರಾಚೀನ ಕಾಲದಿಂದಲೂ ಚರ್ಮದ ಆರೈಕೆಯಲ್ಲಿ ಬಳಸಲಾಗುತ್ತದೆ. ಚರ್ಮವು ಶುಷ್ಕವಾಗಿದ್ದರೆ ಸಾಸಿವೆ ಎಣ್ಣೆಯನ್ನು ಚರ್ಮಕ್ಕೆ ಹಚ್ಚಿ ಮಸಾಜ್ ಮಾಡಬಹುದು.
ಆಲಿವ್ ಆಯಿಲ್- ಆಲಿವ್ ಎಣ್ಣೆಯನ್ನು ತ್ವಚೆಯನ್ನು ಕಾಂತಿಯುತಗೊಳಿಸಲು ಹಲವು ರೀತಿಯಲ್ಲಿ ಬಳಸಲಾಗುತ್ತದೆ. ಸುಕ್ಕು ಗಟ್ಟಿದ ಒಣ ಚರ್ಮವನ್ನು ಸರಿಪಡಿಸಲು ಆಲಿವ್ ಎಣ್ಣೆ ಸಹಕಾರಿಯಾಗಿದೆ.
ಜೊಜೊಬಾ ಆಯಿಲ್- ಜೊಜೊಬಾ ವಿನ್ಯಾಸವು ತುಂಬಾ ಹಗುರವಾಗಿರುತ್ತದೆ, ಆದ್ದರಿಂದ ಎಣ್ಣೆಯುಕ್ತ ಚರ್ಮಕ್ಕಾಗಿ ಇದನ್ನು ಅತ್ಯುತ್ತಮವೆಂದು ಪರಿಗಣಿಸಲಾಗುತ್ತದೆ. ಈ ಋತುವಿನಲ್ಲಿ ಎಣ್ಣೆಯುಕ್ತ ಚರ್ಮವು ಸಾಕಷ್ಟು ಒಣಗಲು ಪ್ರಾರಂಭಿಸಿದಾಗ ಜೊಜೊಬಾ ಎಣ್ಣೆಯ ಬಳಕೆ ಮಾಡಬಹುದು.
ತೆಂಗಿನ ಎಣ್ಣೆ - ತೆಂಗಿನ ಎಣ್ಣೆಯನ್ನು ಕೂದಲಿಗೆ ಮಾತ್ರವಲ್ಲದೆ ಚರ್ಮಕ್ಕೂ ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಇದು ತುಂಬಾ ಹಗುರವಾದ ವಿನ್ಯಾಸವನ್ನು ಹೊಂದಿರುವುದರಿಂದ ಇದನ್ನು ಎಲ್ಲಾ ರೀತಿಯ ಚರ್ಮದ ಜನರು ಬಳಸಬಹುದು.
Published On - 1:29 pm, Sun, 13 March 22