AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Beauty Tips: ಬೇಸಿಗೆಯಲ್ಲಿ ಕಾಡುವ ಒಣ ತ್ವಚೆಯ ರಕ್ಷಣೆಗೆ ಹೀಗೆ ಮಾಡಿ

ಚಳಿಗಾಲ ಮುಗಿದರೂ ಒಣ ತ್ವಚೆಯ ಸಮಸ್ಯೆ ಬಿಟ್ಟಿಲ್ಲ. ಆದ್ದರಿಂದ ನೀವು ಬಾಡಿ ಲೋಷನ್ ಬದಲಿಗೆ ಬಾಡಿ ಆಯಿಲ್ ಅನ್ನು ಬಳಸಬಹುದು. ಇದು ವಸಂತಕಾಲದಲ್ಲಿಯೂ ನಿಮ್ಮ ಚರ್ಮವನ್ನು ಸುಂದರವಾಗಿರಿಸುತ್ತದೆ.

TV9 Web
| Updated By: Pavitra Bhat Jigalemane|

Updated on:Mar 13, 2022 | 2:01 PM

Share
ಚಳಿಗಾಲ ಮುಗಿದಿದೆ ಆದರೆ ಒಣ ತ್ವಚೆಯ ಸಮಸ್ಯೆ ಇನ್ನೂ ಬಿಟ್ಟಿಲ್ಲ. ಆದ್ದರಿಂದ ನೀವು ಬಾಡಿ ಲೋಷನ್ ಬದಲಿಗೆ ಬಾಡಿ ಆಯಿಲ್ ಅನ್ನು ಬಳಸಬಹುದು. ಇದು ವಸಂತಕಾಲದಲ್ಲಿಯೂ ನಿಮ್ಮ ಚರ್ಮವನ್ನು ಸುಂದರವಾಗಿರಿಸುತ್ತದೆ. ತ್ವಚೆಯನ್ನು ದೀರ್ಘಕಾಲದವರೆಗೆ ಮೃದುವಾಗಿಡುವ ಸಾಮರ್ಥ್ಯವನ್ನು ಹೊಂದಿರುವ ಕೆಲವು ತೈಲಗಳಿವೆ. ಚರ್ಮದ ಮೇಲೆ ಹಚ್ಚಿದರೆ ಸುಲಭವಾಗಿ ಹೀರಲ್ಪಡುತ್ತವೆ, ಇದರಿಂದಾಗಿ ಚರ್ಮವು ದೀರ್ಘಕಾಲದವರೆಗೆ ತೇವಾಂಶವನ್ನು ಉಳಿಸಿಕೊಳ್ಳುತ್ತದೆ.

1 / 6
ಬಾದಾಮಿ ಎಣ್ಣೆ- ಬಾದಾಮಿ ಎಣ್ಣೆ ಚರ್ಮದ ಎಲ್ಲಾ ಸಮಸ್ಯೆಗಳನ್ನು ಹೋಗಲಾಡಿಸುತ್ತದೆ ಮತ್ತು ಚರ್ಮವನ್ನು ಮೃದುವಾಗಿರಿಸುತ್ತದೆ. ವಸಂತಕಾಲದಲ್ಲಿ ನಿಮ್ಮ ಚರ್ಮವು ಹೆಚ್ಚು ಶುಷ್ಕವಾಗಿದ್ದರೆ ಈ ಎಣ್ಣೆಯನ್ನು ಬಳಸಿ.

2 / 6
Beauty Tips: ಬೇಸಿಗೆಯಲ್ಲಿ ಕಾಡುವ ಒಣ ತ್ವಚೆಯ ರಕ್ಷಣೆಗೆ ಹೀಗೆ ಮಾಡಿ

ಸಾಸಿವೆ ಎಣ್ಣೆ - ಸಾಸಿವೆ ಎಣ್ಣೆಯನ್ನು ಪ್ರಾಚೀನ ಕಾಲದಿಂದಲೂ ಚರ್ಮದ ಆರೈಕೆಯಲ್ಲಿ ಬಳಸಲಾಗುತ್ತದೆ. ಚರ್ಮವು ಶುಷ್ಕವಾಗಿದ್ದರೆ ಸಾಸಿವೆ ಎಣ್ಣೆಯನ್ನು ಚರ್ಮಕ್ಕೆ ಹಚ್ಚಿ ಮಸಾಜ್​ ಮಾಡಬಹುದು.

3 / 6
Beauty Tips: ಬೇಸಿಗೆಯಲ್ಲಿ ಕಾಡುವ ಒಣ ತ್ವಚೆಯ ರಕ್ಷಣೆಗೆ ಹೀಗೆ ಮಾಡಿ

ಆಲಿವ್ ಆಯಿಲ್- ಆಲಿವ್ ಎಣ್ಣೆಯನ್ನು ತ್ವಚೆಯನ್ನು ಕಾಂತಿಯುತಗೊಳಿಸಲು ಹಲವು ರೀತಿಯಲ್ಲಿ ಬಳಸಲಾಗುತ್ತದೆ. ಸುಕ್ಕು ಗಟ್ಟಿದ ಒಣ ಚರ್ಮವನ್ನು ಸರಿಪಡಿಸಲು ಆಲಿವ್​ ಎಣ್ಣೆ ಸಹಕಾರಿಯಾಗಿದೆ.

4 / 6
Beauty Tips: ಬೇಸಿಗೆಯಲ್ಲಿ ಕಾಡುವ ಒಣ ತ್ವಚೆಯ ರಕ್ಷಣೆಗೆ ಹೀಗೆ ಮಾಡಿ

ಜೊಜೊಬಾ ಆಯಿಲ್- ಜೊಜೊಬಾ ವಿನ್ಯಾಸವು ತುಂಬಾ ಹಗುರವಾಗಿರುತ್ತದೆ, ಆದ್ದರಿಂದ ಎಣ್ಣೆಯುಕ್ತ ಚರ್ಮಕ್ಕಾಗಿ ಇದನ್ನು ಅತ್ಯುತ್ತಮವೆಂದು ಪರಿಗಣಿಸಲಾಗುತ್ತದೆ. ಈ ಋತುವಿನಲ್ಲಿ ಎಣ್ಣೆಯುಕ್ತ ಚರ್ಮವು ಸಾಕಷ್ಟು ಒಣಗಲು ಪ್ರಾರಂಭಿಸಿದಾಗ ಜೊಜೊಬಾ ಎಣ್ಣೆಯ ಬಳಕೆ ಮಾಡಬಹುದು.

5 / 6
Beauty Tips: ಬೇಸಿಗೆಯಲ್ಲಿ ಕಾಡುವ ಒಣ ತ್ವಚೆಯ ರಕ್ಷಣೆಗೆ ಹೀಗೆ ಮಾಡಿ

ತೆಂಗಿನ ಎಣ್ಣೆ - ತೆಂಗಿನ ಎಣ್ಣೆಯನ್ನು ಕೂದಲಿಗೆ ಮಾತ್ರವಲ್ಲದೆ ಚರ್ಮಕ್ಕೂ ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಇದು ತುಂಬಾ ಹಗುರವಾದ ವಿನ್ಯಾಸವನ್ನು ಹೊಂದಿರುವುದರಿಂದ ಇದನ್ನು ಎಲ್ಲಾ ರೀತಿಯ ಚರ್ಮದ ಜನರು ಬಳಸಬಹುದು.

6 / 6

Published On - 1:29 pm, Sun, 13 March 22