Relationship: ಒಳ್ಳೆಯವನೆಂದು ಬಿಂಬಿಸುವ ಭರದಲ್ಲಿ ನಿಮ್ಮ ವ್ಯಕ್ತಿತ್ವ ಕಳೆದು ಹೋಗದಂತೆ ನೋಡಿಕೊಳ್ಳಿ

ಸ್ನೇಹ, ಪ್ರೀತಿ ಯಾವುದೇ ಇರಲಿ ನಿಮ್ಮ ವ್ಯಕ್ತಿತ್ವ ಕಳೆದುಹೋಗದಂತೆ ನೋಡಿಕೊಳ್ಳಬೇಕು. ನಿಮ್ಮ ತನವನ್ನು ಎಲ್ಲಿಯೂ ಬಿಟ್ಟುಕೊಡಬೇಡಿ. ಸಂಬಂಧವನ್ನು ಉಳಿಸಿಕೊಳ್ಳಲು ಕೆಲವರು ತುಂಬಾ ಕಷ್ಟಪಡುತ್ತಾರೆ, ಸಂಗಾತಿಗೆ ಇಷ್ಟವಾಗುವ ಕೆಲಸವನ್ನೇ ಮಾಡುತ್ತಾ, ತಮ್ಮ ಇಷ್ಟವನ್ನು ಮರೆಯುತ್ತಾರೆ.

Relationship: ಒಳ್ಳೆಯವನೆಂದು ಬಿಂಬಿಸುವ ಭರದಲ್ಲಿ ನಿಮ್ಮ ವ್ಯಕ್ತಿತ್ವ ಕಳೆದು ಹೋಗದಂತೆ ನೋಡಿಕೊಳ್ಳಿ
Relationship
Follow us
TV9 Web
| Updated By: ನಯನಾ ರಾಜೀವ್

Updated on: Jun 28, 2022 | 8:00 AM

ಸ್ನೇಹ, ಪ್ರೀತಿ ಯಾವುದೇ ಇರಲಿ ನಿಮ್ಮ ವ್ಯಕ್ತಿತ್ವ ಕಳೆದುಹೋಗದಂತೆ ನೋಡಿಕೊಳ್ಳಬೇಕು. ನಿಮ್ಮ ತನವನ್ನು ಎಲ್ಲಿಯೂ ಬಿಟ್ಟುಕೊಡಬೇಡಿ. ಸಂಬಂಧವನ್ನು ಉಳಿಸಿಕೊಳ್ಳಲು ಕೆಲವರು ತುಂಬಾ ಕಷ್ಟಪಡುತ್ತಾರೆ, ಸಂಗಾತಿಗೆ ಇಷ್ಟವಾಗುವ ಕೆಲಸವನ್ನೇ ಮಾಡುತ್ತಾ, ತಮ್ಮ ಇಷ್ಟವನ್ನು ಮರೆಯುತ್ತಾರೆ.

ಆದರೆ ಇದೇ ರೂಢಿಯಾದರೆ ವರ್ಷಗಳು ಕಳೆದಂತೆ ನಿಮ್ಮ ತನವೇ ಮಾಯವಾಗಿ ಸಂಗಾತಿ ಬಗ್ಗೆ ಒಂದು ರೀತಿಯ ದ್ವೇಷ ಹುಟ್ಟಿಕೊಳ್ಳಬಹುದು. ಇದರಿಂದ ಸಂಬಂಧ ಹಾಳಾಗುವ ಸಾಧ್ಯತೆ ಹೆಚ್ಚಿರುತ್ತದೆ.

ಸಂಬಂಧವನ್ನು ಉತ್ತಮ ರೀತಿಯಲ್ಲಿ ನಡೆಸಲು ಉತ್ತಮ ನಡವಳಿಕೆ ಬಹಳ ಮುಖ್ಯ. ಕೆಟ್ಟ ನಡವಳಿಕೆಯೊಂದಿಗೆ ಯಾವುದೇ ಸಂಬಂಧವು ದೀರ್ಘಕಾಲ ಉಳಿಯುವುದಿಲ್ಲ. ಈ ಕಾರಣದಿಂದಾಗಿ ಕೆಲವರು ಸಂಬಂಧವನ್ನು ಉಳಿಸಲು ಅತಿಯಾದ ಒಳ್ಳೆಯವರಾಗಲು ಪ್ರಯತ್ನಿಸುತ್ತಾರೆ.

ನೀವು ಕೇವಲ ಸಂಬಂಧವನ್ನು ಉಳಿಸಲು ಒಳ್ಳೆಯವರಾಗಿರಲು ಪ್ರಯತ್ನಿಸುತ್ತಿದ್ದರೆ, ಇದು ನಿಸ್ಸಂಶಯವಾಗಿ ಒಂದು ಪ್ರದರ್ಶನವಾಗಿದೆ ಅದು ಹೆಚ್ಚು ಕಾಲ ಉಳಿಯುವುದಿಲ್ಲ.

ಮತ್ತೊಂದೆಡೆ, ಸಂಗಾತಿಯಿಂದ ಸರಿಯಾದ ಪ್ರತಿಕ್ರಿಯೆ ಸಿಗದ ನಂತರವೂ, ಅವರು ನಿಮ್ಮನ್ನು ಬಿಡುವುದಿಲ್ಲ ಎಂಬ ಕಾರಣಕ್ಕೆ ನೀವು ನಿಮ್ಮ ಒಳ್ಳೆಯತನವನ್ನು ತೋರಿಸಿದರೆ, ನೀವು ಕೆಲವು ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಸಂಬಂಧದಲ್ಲಿ ತುಂಬಾ ಚೆನ್ನಾಗಿರುವುದು ಸಹ ಸಂಬಂಧದ ಮೇಲೆ ಪರಿಣಾಮ ಬೀರುತ್ತದೆ.

1.ಸಂಬಂಧದಲ್ಲಿ ತುಂಬಾ ಒಳ್ಳೆಯವರೆಂದು ಬಿಂಬಿದುವ ಭರದಲ್ಲಿ ಆತ್ಮಗೌರವ ಕಳೆದುಕೊಳ್ಳಬೇಡಿ. 2. ತುಂಬಾ ಒಳ್ಳೆಯವನಾಗಿರುವುದು ಕೆಲವೊಮ್ಮೆ ನಿಮ್ಮ ವ್ಯಕ್ತಿತ್ವ ತೋರ್ಪಡಿಕೆಯೆನಿಸಬಹುದು. 3. ಅಂತಹ ಜನರ ಅಭಿಪ್ರಾಯಕ್ಕೆ ಸಂಬಂಧದಲ್ಲಿ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಲಾಗುವುದಿಲ್ಲ. 4. ನಿಮ್ಮ ಅಭಿಪ್ರಾಯವು ಸಂಗಾತಿಯಂತೆಯೇ ಇರುವ ಕಾರಣ ನೀವು ದೊಡ್ಡ ನಿರ್ಧಾರಗಳಿಂದ ದೂರವಿರಬಹುದು. 5. ಅನೇಕ ಬಾರಿ, ಇದರಿಂದಾಗಿ, ಸಂಬಂಧದಲ್ಲಿ ತಪ್ಪು ತಿಳುವಳಿಕೆ ಕೂಡ ಉಂಟಾಗುತ್ತದೆ.

ನಿಮ್ಮನ್ನು ಮೊದಲ ಸ್ಥಾನದಲ್ಲಿಡಿ: ಎಂದಿಗೂ ನಿಮ್ಮನ್ನು ನೀವು ಮೊದಲ ಸ್ಥಾನದಲ್ಲಿಡಿ, ನಿಮ್ಮ ಭಾವನೆಗಳನ್ನು ಆಲಿಸಿ, ನಿಮ್ಮನ್ನು ನೀವು ಕೇರ್ ಮಾಡಿಕೊಳ್ಳಿ, ನಿಮ್ಮ ಆಸೆಗಳನ್ನು ಈಡೇರಿಸಿಕೊಳ್ಳಲು ಯಾರನ್ನೂ ಅವಲಂಬಿಸಬೇಡಿ, ನಿಮ್ಮ ಕನಸುಗಳನ್ನು ನೀವೇ ಸಾಕಾರಗೊಳಿಸಿಕೊಳ್ಳಿ. ವೆಬ್​ಸೀರೀಸ್​ಗಳನ್ನು ನೋಡುವುದು, ಸಸಿಗಳನ್ನು ನೆಡುವುದು, ಹಾಡು ಹೇಳುವುದು, ಸ್ನೇಹಿತರ ಜತೆ ಹರಟೆಹೊಡೆಯುವುದು, ಪೋಟೊಗ್ರಫಿ ಹೀಗೆ ನಿಮಗೆ ಇಷ್ಟವಾದ ಚಟುವಟಿಕೆಗಳಲ್ಲಿ ನಿಮ್ಮನ್ನು ತೊಡಗಿಸಿಕೊಳ್ಳಿ.

ನಿಮ್ಮ ಬೆಲೆ ನಿಮಗೆ ಗೊತ್ತಿರಲಿ: ಪ್ರೀತಿಯ ಅನ್ವೇಷಣೆಯಲ್ಲಿ ನಾವು ಸ್ವಾಭಿಮಾನದ ಗಡಿಗಳನ್ನು ದಾಟಬಹುದು. ಸಂಬಂಧವು ನಿಮಗೆ ಆರೋಗ್ಯಕರವಾಗಿಲ್ಲ ಎಂಬುದಕ್ಕೆ ಇದು ಮತ್ತೊಂದು ಸೂಚಕವಾಗಿದೆ. ಯಾರೂ ನಿಮ್ಮನ್ನು ಕೀಳಾಗಿ ಕಾಣಲು ಅವಕಾಶ ಮಾಡಿಕೊಡಬೇಡಿ, ಒಂದೊಮ್ಮೆ ನಿಮ್ಮ ಸಂಗಾತಿ ಅಗೌರವದಿಂದ ನಡೆದುಕೊಳ್ಳುತ್ತಿದ್ದರೆ ಅವರಿಂದ ದೂರವಿರಿ.