AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Health: ಸಸ್ಯಾಧಾರಿತ ಮಾಂಸ ಏನು ಹೀಗೆಂದರೆ?

Food : ಸಸ್ಯಾಧಾರಿತ ಮಾಂಸದಿಂದ ನಮ್ಮ ದೇಹವು ಹೀರಿಕೊಳ್ಳುವ ಪ್ರೋಟೀನ್​ನ ಪ್ರಮಾಣ, ಪ್ರಾಣಿಮಾಂಸಕ್ಕಿಂತಲೂ ಕಡಿಮೆ ಎಂಬ ಅಂಶ ಇತ್ತೀಚಿನ ಸಂಶೋಧನೆಯಿಂದ ತಿಳಿದುಬಂದಿದೆ.

Health: ಸಸ್ಯಾಧಾರಿತ ಮಾಂಸ ಏನು ಹೀಗೆಂದರೆ?
ಸೌಜನ್ಯ : ಅಂತರ್ಜಾಲ
TV9 Web
| Edited By: |

Updated on:Jun 28, 2022 | 1:23 PM

Share

From Plant-Based Meats : ‘ಜರ್ನಲ್ ಆಫ್ ಅಗ್ರಿಕಲ್ಚರಲ್ ಅಂಡ್ ಫುಡ್ ಕೆಮಿಸ್ಟ್ರಿ’ ಜರ್ನಲ್​ನಲ್ಲಿ ಈ ವರದಿ ಪ್ರಕಟವಾಗಿದೆ. ವಿಜ್ಞಾನಿಗಳಾದ ಓಸ್ವಾಲ್ಡೊ ಕ್ಯಾಂಪನೆಲ್ಲಾ, ಡಾ. ಚೆನ್ ತಂಡ ಈ ಸಂಶೋಧನೆಯಲ್ಲಿ ಪಾಲ್ಗೊಂಡಿತ್ತು. ಕೋಳಿಮಾಂಸಕ್ಕೆ ಪರ್ಯಾಯವಾಗಿ ಸಸ್ಯಾಧಾರಿತ ಮಾಂಸದಿಂದ ನಮ್ಮ ದೇಹ ಪೆಪ್ಪೈಡ್ ಅಂಶವನ್ನು​ ಯಾವ ಪ್ರಮಾಣದಲ್ಲಿ ಹೀರಿಕೊಳ್ಳಬಹುದು ಎನ್ನುವುದನ್ನು ಪತ್ತೆ ಹಚ್ಚುವುದು ಈ ತಂಡದ ಉದ್ದೇಶವಾಗಿತ್ತು. ಅದಕ್ಕೀಗ ನಿಖರ ಉತ್ತರ ದೊರಕಿದೆ. ಅಲ್ಲದೆ, ಯಾವೆಲ್ಲ ಸಸ್ಯಗಳು ಸಸ್ಯಾಧಾರಿತ ಮಾಂಸದಡಿ  ಒಳಪಡುತ್ತವೆ ಎನ್ನುವುದು ಸಂಶೋಧನೆಯ ಮುಂದಿನ ಗುರಿಯಾಗಿದೆ. ಸಸ್ಯ ಮೂಲದ ಮಾಂಸದಿಂದ ನಮ್ಮ ದೇಹವು ಹೀರಿಕೊಳ್ಳುವ ಪ್ರೋಟೀನ್​ನ ಪ್ರಮಾಣ ಪ್ರಾಣಿಮಾಂಸಕ್ಕಿಂತಲೂ ಕಡಿಮೆ ಎನ್ನುವುದು ಈ ಅಧ್ಯಯನದಿಂದ ದೃಢಪಟ್ಟಿದೆ.

ಸಸ್ಯಾಧಾರಿತ ಮಾಂಸ ಎಂದರೇನು? ಸಸ್ಯಾಧಾರಿತ ಮಾಂಸವೆಂದರೆ, ಪ್ರಾಣಿಮಾಂಸದಲ್ಲಿರುವ ಪ್ರೋಟೀನ್​ಗಳನ್ನು ಸಸ್ಯಾಧಾರಿತ ಪದಾರ್ಥಗಳ ಮೂಲಕ ಪಡೆಯುವ ವಿಧಾನ. ದ್ವಿದಳ ಧಾನ್ಯಗಳಾದ, ಸೋಯಾಬಿನ್, ಮಸೂರ್, ಕ್ವಿನೋವಾ, ಬಟಾಣಿ ಮುಂತಾದವುಗಳಲ್ಲಿ ಮಾಂಸಾಹಾರದ ಪರಿಮಳ, ಬಣ್ಣ, ರುಚಿಗೂ ಸಾಮ್ಯತೆ ಇದೆ. ಪದಾರ್ಥಗಳ ತಯಾರಿಕೆಯ ವಿನ್ಯಾಸಕ್ಕೂ ಇವು ಸರಿ ಹೊಂದುತ್ತವೆ. ಹಾಗಾಗಿ ಇವುಗಳನ್ನು ಸಸ್ಯಾಧಾರಿತ ಮಾಂಸವೆಂದು ಹೇಳಲಾಗುತ್ತದೆ.

ಇದನ್ನೂ ಓದಿ : Health: ನಿಮ್ಮ ಮೂಳೆಗಳಿಗೂ ಕೋಪ ಬರುತ್ತದೆ, ಹಠಕ್ಕೆ ಬೀಳುತ್ತವೆ!

ಸಸ್ಯಾಧಾರಿತ ಮಾಂಸವನ್ನು ಹೊಂದಿದ ಪದಾರ್ಥಗಳಲ್ಲಿ ಸಾಮಾನ್ಯವಾಗಿ ಕಡಿಮೆ ಪ್ರಮಾಣದಲ್ಲಿ ಕ್ಯಾಲೋರಿ ಮತ್ತು ಸಂಸ್ಕರಿತ ಕೊಬ್ಬು, ಹೆಚ್ಚಿನ ಪ್ರಮಾಣದಲ್ಲಿ ಫೈಬರ್​ ಅಂಶ ಇರುತ್ತದೆ. ಹಾಗಾಗಿ ಇದನ್ನು ಆಸ್ವಾದಿಸುವಾಗ ಪ್ರಾಣಿಮಾಂಸದಂತೆಯೇ ಭಾಸವಾಗುತ್ತದೆ. ಆದರೆ, ಪ್ರಾಣಿಮಾಂಸಕ್ಕಿಂತ ಇದು ಆರೋಗ್ಯಕಾರಿ ಏಕೆಂದರೆ ಕೊಬ್ಬು ಮತ್ತು ಕ್ಯಾಲೊರಿ ಕಡಿಮೆ ಇರುವುದರಿಂದ ಅಡ್ಡಪರಿಣಾಮಗಳು ಉಂಟಾಗಲಾರವು.

ಟೈಪ್ 2 ಮಧುಮೇಹ, ರಕ್ತದೊತ್ತಡದಿಂದ ಬಳಲುವವರು ಪ್ರಾಣಿಮಾಂಸಕ್ಕಿಂತ ಸಸ್ಯಾಧಾರಿತ ಮಾಂಸ ಸೇವಿಸುವುದು ಒಳ್ಳೆಯದು. ಕ್ಯಾನ್ಸರ್​ನಂಥ ಸಂಕೀರ್ಣ ಕಾಯಿಲೆಗಳಿಂದಲೂ ದೂರ ಇರಬಹುದು.

ಇದನ್ನೂ ಓದಿ : Health: ಅಜೀರ್ಣಕ್ಕೆ ಅಜವಾನ್! ಔಷಧಿ ಅಂಗಡಿಗೆ ಹೋಗುವ ಮೊದಲು ಅಡುಗೆಮನೆಗೆ ಹೋಗಿ

ಸಾಕಷ್ಟು ರೆಸಿಪಿಗಳು ನಮಗೀಗಾಗಲೇ ಗೊತ್ತಿವೆ. ಅಂತರ್ಜಾಲದಲ್ಲಿಯೂ ಲಭ್ಯವಿದ್ದು ನಿತ್ಯದ ಆಹಾರಕ್ರಮದಲ್ಲಿ ರೂಢಿಸಿಕೊಳ್ಳಬಹುದು. ಕಾಳುಗಳಾದರೆ ಮೊಳಕೆ ಬರಿಸಿ ಪಲ್ಯ ತಯಾರಿಸಬಹುದು. ಚಿಕ್ಕಮಕ್ಕಳು ಪಲ್ಯ ತಿನ್ನಲು ಹಟ ಮಾಡಿದರೆ, ಚಪಾತಿಯಲ್ಲಿ ಮೊಳಕೆ ಕಾಳಿನ ಪಲ್ಯ ಮಾಡಿ ರೋಲ್​ ಅಥವಾ ಪಾಕೆಟ್ ಮಾಡಿ ಕೊಡಬಹುದು. ದೋಸೆಯ ಮೇಲೂ ಮೊಳಕೆ ಕಾಳುಗಳನ್ನು ಹರಡಿ ಬೇಯಿಸಬಹುದು. ಹಾಗೆಯೇ ತಾಲಿಪಟ್ಟು, ರೊಟ್ಟಿ ಮಾಡುವಾಗಲೂ ಮೊಳಕೆ ಕಾಳುಗಳನ್ನು ತಟ್ಟಿ ಬೇಯಿಸಬಹುದು. ಬ್ರೆಡ್​ ಮಧ್ಯೆ ಬೇಯಿಸಿದ ಮೊಳಕೆಕಾಳು ಹಾಕಿ ರೋಸ್ಟ್ ಮಾಡಿ ಕೊಡಬಹುದು.

ಮಾಂಸಾಹಾರ ಬೇಡ ಆದರೆ ಅದರಲ್ಲಿರುವ ಪ್ರೋಟೀನ್​ ಅಂಶಗಳು ಬೇಕು ಎನ್ನುವವರು ಈ ಪದಾರ್ಥಗಳನ್ನು ನಿತ್ಯವೂ ನಿಯಮಿತ ಪ್ರಮಾಣದಲ್ಲಿ ಸವಿಯಬಹುದು.

Published On - 1:16 pm, Tue, 28 June 22