Health: ಅಜೀರ್ಣಕ್ಕೆ ಅಜವಾನ್! ಔಷಧಿ ಅಂಗಡಿಗೆ ಹೋಗುವ ಮೊದಲು ಅಡುಗೆಮನೆಗೆ ಹೋಗಿ

carom seeds : ಎಳೆಗೂಸು ಸುಮ್ಮಸುಮ್ಮನೆ ಅಳುತ್ತಿದೆಯೆಂದರೆ ಅದಕ್ಕೆ ಅಜೀರ್ಣವೂ ಒಂದು ಕಾರಣ. ತಾಯಿಯಾದವಳು ಅಜವಾನ್​ ಅಗಿದು ಮಗುವಿನ ಬಾಯಿಯ ಮೂಲಕ ತನ್ನ ಉಸಿರನ್ನು ದಾಟಿಸಿದರೂ ಸಾಕು. ಐದು ನಿಮಿಷಕ್ಕೆ ಮಗು ಶಾಂತವಾಗುತ್ತದೆ.

Health: ಅಜೀರ್ಣಕ್ಕೆ ಅಜವಾನ್! ಔಷಧಿ ಅಂಗಡಿಗೆ ಹೋಗುವ ಮೊದಲು ಅಡುಗೆಮನೆಗೆ ಹೋಗಿ
ಸೌಜನ್ಯ : ಅಂತರ್ಜಾಲ
Follow us
TV9 Web
| Updated By: ಶ್ರೀದೇವಿ ಕಳಸದ

Updated on: Jun 28, 2022 | 10:59 AM

Home Remedies : ಜೀರ್ಣಕ್ರಿಯೆ ಹೆಚ್ಚಿಸುವ ಅಂಶಗಳು ನಿಮ್ಮ ಅಡುಗೆಮನೆಯಲ್ಲಿಯೇ ಇವೆ. ಅಜವಾನ್​ ಅಥವಾ ಓಂಕಾಳು ಭಾರತೀಯ ಅಡುಗೆ ಶೈಲಿಗಳಲ್ಲಿ ಸರ್ವೇಸಾಮಾನ್ಯ. ಮಸಾಲೆಯಿಂದ ಕೂಡಿದ ಪದಾರ್ಥಗಳ ತಯಾರಿಕೆಯಲ್ಲಿ ರುಚಿಗೆ ಇದನ್ನು ಹಾಕುತ್ತಾರೆ. ಆದರೆ ಆರೋಗ್ಯದ ಹಿನ್ನೆಲೆಯಲ್ಲಿ ಗಮನಿಸಿದಾಗ ಎಸಿಡಿಟಿ, ಅಜೀರ್ಣಕ್ಕೆ ಇದು ಉತ್ತಮ ಔಷಧಿ. ಇಷ್ಟೇ ಅಲ್ಲ ಅಜವಾನ್​ನಲ್ಲಿ ಕೂದಲು, ಚರ್ಮಕ್ಕೆ ಅವಶ್ಯವಿರುವ ಫೈಬರ್, ಖನಿಜ, ವಿಟಮಿನ್​ಗಳು ಹೇರಳವಾಗಿವೆ. ಆದ್ದರಿಂದ ಊಟದ ನಂತರ ಈ ಅಜವಾನ್ ಅಗಿದು ತಿನ್ನುವ ಅಭ್ಯಾಸವನ್ನು ಕೆಲವರು ರೂಢಿಸಿಕೊಂಡಿರುತ್ತಾರೆ. ಕೆಲವರು ಬೇಯಿಸಿಯೂ ತಿನ್ನುತ್ತಾರೆ. ಇನ್ನೂ ಕೆಲವರು ಸೋಂಪುಕಾಳಿನೊಂದಿಗೆ ಸೇರಿಸಿ ಹುರಿದು ತಿನ್ನುತ್ತಾರೆ. ಹೀಗೆ ಮಾಡುವುದರಿಂದ ಜೀರ್ಣಾಂಗವು ಆರೋಗ್ಯಯುವಾಗಿರುತ್ತದೆ.

ನಮಗೇಕೆ ಅಜೀರ್ಣ ಉಂಟಾಗುತ್ತದೆ? 

ಅತಿಯಾಗಿ ತಿನ್ನುವುದು ಅಜೀರ್ಣಕ್ಕೆ ಸಾಮಾನ್ಯ ಕಾರಣ. ತಿಳಿದೋ ತಿಳಿಯದೆಯೋ ಅಥವಾ ರುಚಿ ಹೆಚ್ಚೆಂದೋ ಅಗತ್ಯಕ್ಕಿಂತ ಹೆಚ್ಚು ಆಹಾರ ಸೇವಿಸುವುದನ್ನು ರೂಢಿಸಿಕೊಂಡಿರುತ್ತೇವೆ. ಇದು ಅಸಮತೋಲನಕ್ಕೆ ಕಾರಣವಾಗುತ್ತದೆ. ಕಾರ್ಬ್​, ಪ್ರೊಟೀನ್​, ಫೈಬರ್, ಕೊಬ್ಬು ಏರುಪೇರಾಗಿ ಜೀರ್ಣಾಂಗ ಕ್ರಿಯೆಯಲ್ಲಿ ಅಡೆತಡೆ ಉಂಟಾಗುತ್ತದೆ.

ಇದನ್ನೂ ಓದಿ
Image
Weather: Qatar Mail: ಮಧ್ಯಪ್ರಾಚ್ಯವನ್ನು ದಿಕ್ಕೆಡಿಸುತ್ತಿರುವ ಈ ಮರಳು ಬಿರುಗಾಳಿ
Image
National Wine Day: ಒಡೆದ​ ವೈನ್ ಬಾಟಲಿ ಮತ್ತು ‘ಕೂಲ್​ ರನ್ನಿಂಗ್’ನೊಂದಿಗೆ ಮಮತಾ ಸಾಗರ್
Image
Poetry: ಅವಿತಕವಿತೆ; ಬಾಗಿಲುಗಳು ‘ಎಡ’ಕ್ಕೆ ತೆರೆಯಲಿವೆ ಬಾಗಿಲುಗಳು ‘ಬಲ’ಕ್ಕೆ ತೆರೆಯಲಿವೆ
Image
Booker Shortlist 2022: ಗೀತಾಂಜಲಿ ಶ್ರೀ ಕಾದಂಬರಿ ‘ಟಾಂಬ್ ಆಫ್ ಸ್ಯಾಂಡ್’ ಬೂಕರ್ ಪ್ರಶಸ್ತಿಯ ಅಂತಿಮ ಘಟ್ಟಕ್ಕೆ

ಒತ್ತಡದಲ್ಲಿ ಆಹಾರ ಸೇವನೆ

ಒತ್ತಡಕ್ಕೆ ಒಳಗಾದಾಗ ಒಮ್ಮೆಲೆ ಆಹಾರವನ್ನು ಸೇವಿಸಬಾರದು. ಮೊದಲು ಆಳವಾದ ಉಸಿರು ತೆಗೆದುಕೊಂಡು ಉಸಿರಾಟದ ವ್ಯಾಯಾಮ ಮಾಡಿ ಮನಸ್ಸನ್ನು ಶಾಂತಗೊಳಿಸಿಕೊಳ್ಳಬೇಕು. ಮನಸಿನಲ್ಲಿ ಉಂಟಾದ ಎಲ್ಲಾ ಗೊಂದಲಗಳು ದೂರವಾದವು ಎನ್ನಿಸಿದ ಮೇಲೆ ನಿಧಾನವಾಗಿ ಊಟ ಮಾಡಬಹುದು. ಹೆಚ್ಚು ಮಸಾಲೆ ಪದಾರ್ಥಗಳನ್ನು ಸೇವಿಸುವುದು ಮತ್ತು ಊಟದಿಂದ ಊಟದ ಮಧ್ಯೆ ದೀರ್ಘ ಅಂತರ ಇದ್ದಾಗ ಅಜೀರ್ಣವಾಗುತ್ತದೆ.

ಇದನ್ನೂಓದಿ : Health and Beauty : ಈ ಕಾಫಿ ಅಂದ್ರೆ ಬರೀ ಕುಡಿಯೋದಕ್ಕಷ್ಟೇ ಅಲ್ಲ

ಎಸಿಡಿಟಿ

ಎಸಿಡಿಟಿ ಕಡಿಮೆ ಮಾಡಲು ಮಾತ್ರೆಗಳನ್ನು ಸೇವಿಸುತ್ತೇವೆ. ಆದರೆ ಅದು ತಕ್ಷಣಕ್ಕೆ ಪರಿಹಾರ ನೀಡಿದರೂ ದೀರ್ಘಕಾಲದ ಸಮಸ್ಯೆಗೆ ಕಾರಣವಾಗುತ್ತದೆ. ಹೊಟ್ಟೆಯಲ್ಲಿ ಆಮ್ಲೀಯ ಅಂಶ ಶೇಖರಣೆಯಾಗುತ್ತ ಬ್ಯಾಕ್ಟೀರಿಯಾ ಉಂಟಾಗುವ ಸಾಧ್ಯತೆ ಇರುತ್ತದೆ. ಅಜವಾನ್​ ಸೇವನೆ ಈ ಆಮ್ಲೀಯತೆಯನ್ನು ನಿಯಂತ್ರಿಸಬಲ್ಲುದು. ಯಾವಾಗ ಎಸಿಡಿಟಿ ಉಂಟಾಗುತ್ತದೆಯೋ ಆಗೆಲ್ಲಾ ಒಂದು ಚಮಚ ಅಜವಾನ್, ಒಂದು ಗ್ಲಾಸ್ ನೀರಿನೊಂದಿಗೆ ಐದು ನಿಮಿಷ ಕುದಿಸಿ ಬೆಚ್ಚಿಗಿನ ನೀರನ್ನು ಕುಡಿಯಬಹುದು.

ಗರ್ಭಿಣಿಯರಿಗೆ

ಗರ್ಭಿಣಿಯರಿಗೆ ಬೆಳಗಿನ ಹೊತ್ತು ವಾಕರಿಕೆ ಉಂಟಾಗುವುದು ಸಹಜ. ಅಂತಹ ಸಂದರ್ಭಗಳಲ್ಲಿ ಒಂದು ಚಮಚ ಅಜವಾನ್​ ಅನ್ನು ಮೂರು ಕಪ್ ನೀರಿನಲ್ಲಿ ಕುದಿಸಬೇಕು. ಆ ಕುದಿತವು ಅರ್ಧದಷ್ಟು ನೀರನ್ನು ಇಂಗಿಸಬೇಕು. ಖಾಲೀ ಹೊಟ್ಟೆಯಲ್ಲಿ ನಿಧಾನವಾಗಿ ಆ ನೀರನ್ನು ಕುಡಿಯಬೇಕು.

ಉಳಿದಂತೆ ಯಾರಿಗೂ ಕರುಳಿನಲ್ಲಿ ಬ್ಯಾಕ್ಟಿರಿಯಾಗಳು ಹುಟ್ಟಿಕೊಳ್ಳುವ ಸಾಧ್ಯತೆ ಇದೆ. ಆಗ ನಮ್ಮ ಪೌಷ್ಠಿಕ ಆಹಾರವನ್ನು ಅವು ಹೀರಿಕೊಂಡಾಗ ನಮಗೆ ಹೊಟ್ಟೆ ಉಬ್ಬರ, ಅಜೀರ್ಣ, ನೋವು ಉಂಟಾಗುತ್ತದೆ. ಆದ್ದರಿಂದ ಅಜವಾನ್​ ತಿನ್ನುವ ಅಭ್ಯಾಸ ಒಳ್ಳೆಯದು. ಇದು ಸಹವಾಗಿ ಜಂತುಹುಳುವಿನ ನಿವಾರಣೆ ಮಾಡುತ್ತದೆ.

ಇದನ್ನೂ ಓದಿ : Health : ನಿತ್ಯವೂ ಎಳನೀರು ಕುಡಿಯುವುದರಿಂದ ಏನು ಪ್ರಯೋಜನ

ಅಜವಾನ್​ ಸ್ವಲ್ಪ ಖಾರವಿರುವುದರಿಂದ ಅರ್ಧ ಚಮಚ ಅಜವಾನ್, ಅರ್ಧ ಚಮಚ ಬೆಲ್ಲವನ್ನು ಸೇರಿಸಿ ಅಗಿಯಬಹುದು ಅಥವಾ ದಾಲ್ಚಿನಿಯೊಂದಿಗೆ ಕುದಿಸಿ, ಜೇನುತುಪ್ಪ, ಬೆಲ್ಲವನ್ನು ಸೇರಿಸಿ ಚಹಾ ತಯಾರಿಸಬಹುದು. ಊಟಕ್ಕೆ ಎರಡು ಗಂಟೆಯ ಮೊದಲು ಅಥವಾ ಖಾಲೀ ಹೊಟ್ಟೆಯಲ್ಲಿ ಕುಡಿಯಬಹುದು. ಇದು ಸಂಧಿವಾತದ ನೋವನ್ನು ಕಡಿಮೆ ಮಾಡುತ್ತದೆ.

ಮಕ್ಕಳ ಹೊಟ್ಟೆಯನ್ನು ಶಾಂತಗೊಳಿಸುತ್ತದೆ  

ಸಾಮಾನ್ಯವಾಗಿ ಎಳೆಗೂಸು ಅಜೀರ್ಣದಿಂದ ಕಿರಿಕಿರಿ ಮಾಡುತ್ತದೆ. ಆಗ ಅಜವಾನ್ ಹುರಿದು ತುಪ್ಪ ಅಥವಾ ಹರಳೆಣ್ಣೆ ಹಾಕಿ ಪೇಸ್ಟ್ ಮಾಡಿ ಮಗುವಿನ ಹೊಕ್ಕುಳ ಭಾಗಕ್ಕೆ ಸವರಬೇಕು. ಇದು ಶೀಘ್ರವೇ ಹೊಟ್ಟೆಯನ್ನು ಶಾಂತಗೊಳಿಸುತ್ತದೆ. ದೊಡ್ಡವರು, ವಯಸ್ಸಾದವರೂ ಈ ಪ್ರಯೋಗ ಮಾಡಬಹುದು.