Health : ನಿತ್ಯವೂ ಎಳನೀರು ಕುಡಿಯುವುದರಿಂದ ಏನು ಪ್ರಯೋಜನ

Tips : ಎಳನೀರಿನೊಂದಿಗೆ ನಿಂಬೆ, ಪಾದರಲವಣ, ಜೇನು, ಶುಂಠಿ ಮುಂತಾದವುಗಳನ್ನು ಬೆರೆಸಿ ನಿತ್ಯವೂ ಸೇವಿಸಿದರೆ ಅನೇಕ ಪ್ರಯೋಜಗಳು ಇವೆ.

Health : ನಿತ್ಯವೂ ಎಳನೀರು ಕುಡಿಯುವುದರಿಂದ ಏನು ಪ್ರಯೋಜನ
ಸೌಜನ್ಯ : ಅಂತರ್ಜಾಲ
Follow us
| Updated By: ಶ್ರೀದೇವಿ ಕಳಸದ

Updated on:Jun 22, 2022 | 6:47 PM

Coconut : ಬದುಕಿಗೆ ಬೇಕಾದ ಎಲ್ಲ ಅಗತ್ಯವನ್ನೂ ತೆಂಗಿನಮರ ನೀಡುತ್ತದೆ ಎಂಬ ಹಿನ್ನೆಲೆಯಲ್ಲಿ ಸಂಸ್ಕೃತದಲ್ಲಿ ಈ ಮರಕ್ಕೆ ಕಲ್ಪವೃಕ್ಷ ಎಂದು ಕರೆಯಲಾಗುತ್ತದೆ. ಭಾರತದಲ್ಲಷ್ಟೇ ಅಲ್ಲ ಕೆನಡಾ, ಶ್ರೀಲಂಕಾ ಮುಂತಾದ ದೇಶಗಳಲ್ಲಿಯೂ ತೆಂಗು ನಿತ್ಯ ಆಹಾರ ಕ್ರಮದಲ್ಲಿ ಇದ್ದೇ ಇದೆ. ಬೇಸಿಗೆ, ಚಳಿಗಾಲ, ಮಳೆಗಾಲ ಯಾವ ಕಾಲದಲ್ಲಿಯೂ ನಮ್ಮ ದೇಹದಲ್ಲಿ ನೀರಿನಾಂಶ ಇರುವಂತೆ ಕಾಪಾಡುವ ಪಾನೀಯ ಇದಾಗಿದೆ. ಎಳನೀರು ಇಂಗುತ್ತ ತಿರುಳು ಬೆಳೆಯುತ್ತಾ ಹೋದಂತೆ ಪೊಟ್ಯಾಶಿಯಮ್, ಸೋಡಿಯಂ, ಮ್ಯಾಗ್ನೀಶಿಯಂ, ಕ್ಯಾಲ್ಸಿಯಂ ಮತ್ತು ಫಾಸ್ಫರಸ್ ಎಲೆಕ್ಟ್ರೋಲೈಟ್ಸ್, ವಿಟಮಿನ್ ಸಿ, ಬಿ ಜೀವಸತ್ವಗಳು, ಪ್ರೋಟೀನ್, ಫೈಬರ್ ಮುಂತಾದ ಅಂಶಗಳು ಒಳಗೊಳ್ಳುತ್ತಾ ಹೋಗುತ್ತವೆ. ಎಳನೀರು ಸೇವಿಸುವುದರಿಂದ ತಕ್ಷಣವೇ ದೇಹದಲ್ಲಿ ಶಕ್ತಿಸಂಚಯವಾಗುವುದರಿಂದ ಕ್ರೀಡಾ ಕ್ಷೇತ್ರದವರಿಗಿದು ಅಚ್ಚುಮೆಚ್ಚು. ಎಲೆಕ್ಟ್ರೋಲೈಟ್​ಗಳಂತೆಯೇ ಇದು ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸುತ್ತದೆ ಎಂಬುದನ್ನು ಅನೇಕ ಸಂಶೋಧನೆಗಳು ದೃಢಪಡಿಸಿವೆ.

ಹೃದಯದ ಆರೋಗ್ಯಕ್ಕೆ ಎಳನೀರು ಅತ್ಯಂತ ಪ್ರಯೋಜಕಾರಿ ಎನ್ನುವುದು ಅಧ್ಯಯನದಿಂದ ದೃಢಪಟ್ಟಿದೆ. ಎಳನೀರಿನೊಂದಿಗೆ ಮೌಬಿ (ಮರದ ತೊಗಟೆಯಿಂದ ಸಂಸ್ಕರಿಸಿದ ಪಾನೀಯ) ಮಿಶ್ರಣ ಸೇವಿಸಿದರೆ ರಕ್ತದೊತ್ತಡ ನಿಯಂತ್ರಣದಲ್ಲಿರುತ್ತದೆ. ಮಧುಮೇಹಿಗಳಲ್ಲಿ ಎಳನೀರು ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ಕಡಿಮೆ ಮಾಡುತ್ತದೆ. ಹೈಪರ್​ಗ್ಲೆಸೀಮಿಯಾವನ್ನೂ ಇದು ನಿಯಂತ್ರಿಸುತ್ತದೆ. ಆಲ್ಝೈಮರ್ ರೋಗಿಗಳಿಗೂ ಇದು ಪ್ರಯೋಜಕಾರಿ.

ಎಳೆನೀರಿನೊಂದಿಗೆ ಇವುಗಳನ್ನೆಲ್ಲಾ ಬೆರೆಸಿ ಸೇವಿಸಬಹುದು  

ಇದನ್ನೂ ಓದಿ
Image
ಆಗಾಗ ಅರುಂಧತಿ : ನನ್ನ ಶ್ರೀಮಂತ ತಂದೆತಾಯಿಯ ನೆರಳು ಸೋಕದಷ್ಟು ಸ್ವತಂತ್ರಳಾಬೇಕು
Image
ಆಗಾಗ ಅರುಂಧತಿ: ಕಟಕರೊಟ್ಟಿ ಬೆಳ್ಳುಳ್ಳಿ ಖಾರ ಮತ್ತು ಬ್ಲ್ಯಾಕ್​ ಟೀ ಹಂಬಲ
Image
ಆಗಾಗ ಅರುಂಧತಿ: ಮಗುವನ್ನು ಚಿವುಟುವವನು ಅವನೇ, ತೊಟ್ಟಿಲನ್ನು ತೂಗುವವನೂ ಅವನೇ
Image
ಆಗಾಗ ಅರುಂಧತಿ: ಫೋನ್​ ಸಂಭಾಷಣೆಗೆ ತನ್ನ ಹೆಂಡತಿ ಸಾಕ್ಷಿಯಾಗಿದ್ದಾಳೆ ಎಂದು ಆ ಲಂಪಟನಿಗೆ ತಿಳಿದಿಲ್ಲ!

ನಿಯಮಿತವಾಗಿ ವ್ಯಾಯಾಮ ಮಾಡುವವರು ಎಲೆಕ್ಟ್ರೋಲೈಟ್ಸ್​ ಗೆ ಪರ್ಯಾಯವಾಗಿ ಈ ಪಾನಿಯವನ್ನು ಸೇವಿಸಬಹುದು. ಇದರಲ್ಲಿ ಹೇರಳವಾಗಿ ಜೀವಸತ್ವಗಳು ಖನಿಜಗಳು ಲಭ್ಯ. ಬೇಸಿಗೆಯಲ್ಲಿ ಬಾಯಾರಿಕೆ ತಣಿಸಿದರೆ, ಚಳಿಗಾಲದಲ್ಲಿ ದೇಹವರು ಶುಷ್ಕವಾಗದಂತೆ ಕಾಪಾಡುತ್ತದೆ. ನಿಂಬೆಹಣ್ಣು ಸಿ ವಿಟಮಿನ್ ಹೊಂದಿದೆ. ಹಾಗಾಗಿ ಕ್ಯಾನ್ಸರ್​ ಜೀವಕೋಶಗಳು ಬೆಳೆಯದಂತೆ ಇದು ತಡೆಯುತ್ತದೆ.

ಇದನ್ನೂ ಓದಿ : Health: ಒಳಾಂಗಣ ವಾಯುಮಾಲಿನ್ಯದಿಂದಾಗಿ ಭಾರತೀಯರ ಜೀವಿತಾವಧಿಯಲ್ಲಿ ಐದು ವರ್ಷ ಕಡಿತಗೊಳ್ಳುತ್ತಿದೆ

ಸಂಧಿವಾತಕ್ಕೂ ಇದು ಉತ್ತಮ ಔಷಧಿ. ಇನ್ನು ಶುಂಠಿಯಲ್ಲಿ ಪೊಟ್ಯಾಶಿಯಮ್, ಮ್ಯಾಗ್ನೀಷಿಯಂ, ಮ್ಯಾಂಗನೀಸ್ ಸಮೃದ್ಧವಾಗಿವೆ. ಜೀರ್ಣಾಂಗವ್ಯೂಹದ ತೊಂದರೆ ನಿವಾರಿಸುವಲ್ಲಿ ಶುಂಠಿ ಪರಿಣಾಮಕಾರಿ. ಇದನ್ನೂ ಎಳನೀರಿನೊಂದಿಗೆ ಸೇವಿಸಬಹುದು. ಹಾಗೆಯೇ ಪಾದರಲವಣವು ರಕ್ತದೊತ್ತಡವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಎಳನೀರಿಗೆ ಬೆರೆಸಿ ಕುಡಿಯಬಹುದು. ಹಾಗೆಯೇ ಜೇನುತುಪ್ಪದೊಂದಿಗೆ ಬೆರೆಸಿ ಕುಡಿಯುವುದರಿಂದ ಜೀರ್ಣಾಂಗ ಬಲಗೊಳ್ಳುತ್ತದೆ.

ಇದನ್ನೂ ಓದಿ :  Health : ನಿಮ್ಮ ಮಸಾಲೆಡಬ್ಬಿಯಲ್ಲಿಯೇ ಇದೆ ಪರಿಹಾರ!

ತೆಂಗನ್ನು ತೋಟದಲ್ಲಿ ಅಲ್ಲದೆ ಮನೆಯಂಗಳದಲ್ಲ ಒಂದಾದರೂ ಬೆಳೆಯಬಹುದು. ಜಾಗವಿಲ್ಲದಿದ್ದಲ್ಲಿ ಅಂಗಡಿಗಳಲ್ಲಿ ಖರೀದಿಸಬಹುದು. ಅದೂ ಸಾಧ್ಯವಿಲ್ಲವೆಂದರೆ ಟೆಟ್ರಾಪ್ಯಾಕ್​ಗಳಲ್ಲಿಯೂ ಎಳನೀರು ಇಂದು ಲಭ್ಯ. ಪ್ರತೀದಿನ ಎಳನೀರು ಸೇವಿಸುವುದರಿಂದ ರೋಗಪ್ರತಿರೋಧಕ ಶಕ್ತಿ ಹೆಚ್ಚುತ್ತದೆ. ಹಾಗಾಗಿ ಬಣ್ಣ, ರುಚಿ, ತಂಪು ಎಂದೆಲ್ಲ ಮಾರುಹೋಗದೆ ಪ್ರಕೃತಿ ನೀಡಿದ ಈ ಪಾನೀಯವನ್ನು ಕುಡಿಯುವುದು ಎಲ್ಲ ರೀತಿಯಿಂದಲೂ ಒಳ್ಳೆಯದು.

Published On - 6:41 pm, Wed, 22 June 22

ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಹೊಸ ಹಾನರ್ ಸ್ಮಾರ್ಟ್​ಫೋನ್​ನಲ್ಲಿದೆ 108 ಮೆಗಾಪಿಕ್ಸೆಲ್ ಸಖತ್ ಎಐ ಕ್ಯಾಮೆರಾ
ಹೊಸ ಹಾನರ್ ಸ್ಮಾರ್ಟ್​ಫೋನ್​ನಲ್ಲಿದೆ 108 ಮೆಗಾಪಿಕ್ಸೆಲ್ ಸಖತ್ ಎಐ ಕ್ಯಾಮೆರಾ
ಮುನಿರತ್ನ ವಿರುದ್ಧದ ಪ್ರಕರಣಗಳ ತನಿಖೆಗೆ SIT ರಚಿಸಿ: ಸಿಎಂಗೆ ಮನವಿ
ಮುನಿರತ್ನ ವಿರುದ್ಧದ ಪ್ರಕರಣಗಳ ತನಿಖೆಗೆ SIT ರಚಿಸಿ: ಸಿಎಂಗೆ ಮನವಿ
ಕಾಡಿಗೆ ಹೋಗುವ ದಾರಿ ಗೊತ್ತು ಅಂತ ಅರಣ್ಯ ಸಿಬ್ಬಂದಿ ಮೇಲೆ ತಿರುಗಿ ಬಿದ್ದ ಆನೆ
ಕಾಡಿಗೆ ಹೋಗುವ ದಾರಿ ಗೊತ್ತು ಅಂತ ಅರಣ್ಯ ಸಿಬ್ಬಂದಿ ಮೇಲೆ ತಿರುಗಿ ಬಿದ್ದ ಆನೆ
ರೈಲಿನಡಿ ಬೀಳಲಿದ್ದ ಮಹಿಳೆ ಸ್ವಲ್ಪದರಲ್ಲೇ ಬಚಾವ್
ರೈಲಿನಡಿ ಬೀಳಲಿದ್ದ ಮಹಿಳೆ ಸ್ವಲ್ಪದರಲ್ಲೇ ಬಚಾವ್