Health : ನಿಮ್ಮ ಮಸಾಲೆಡಬ್ಬಿಯಲ್ಲಿಯೇ ಇದೆ ಪರಿಹಾರ!

Clove benefits : ಕೊಲೆಸ್ಟ್ರಾಲ್​ನಿಂದಾಗಿ ಹೃದಯಕ್ಕೆ ತೊಂದರೆಯಾಗುವ ಸಾಧ್ಯತೆ ಹೆಚ್ಚು. ರಕ್ತದಲ್ಲಿ ಟ್ರೈಗ್ಲಿಸರೈಡ್ ಪ್ರಮಾಣ ಹೆಚ್ಚಾದಾಗ ಅದನ್ನು ನಿಯಂತ್ರಿಸಲು ಲವಂಗ ಸೇವನೆ ಪ್ರಯೋಜನಕಾರಿ.

Health : ನಿಮ್ಮ ಮಸಾಲೆಡಬ್ಬಿಯಲ್ಲಿಯೇ ಇದೆ ಪರಿಹಾರ!
ಸೌಜನ್ಯ : ಅಂತರ್ಜಾಲ
Follow us
TV9 Web
| Updated By: ಶ್ರೀದೇವಿ ಕಳಸದ

Updated on: Jun 22, 2022 | 4:34 PM

Clove : ಯಾರ ಮನೆಯ ಮಸಾಲೆಡಬ್ಬಿಯಲ್ಲಿ ಲವಂಗವಿಲ್ಲ ಹೇಳಿ? ನಿತ್ಯದ ಆಹಾರ ಪದ್ಧತಿಯಲ್ಲಿ ಹಾಸುಹೊಕ್ಕಾಗಿರುವ ಲವಂಗದಿಂದ ನಮ್ಮ ಆರೋಗ್ಯಕ್ಕೆ ಬಹಳಷ್ಟು ಪ್ರಯೋಜನಕಾರಿ. ಇದರಲ್ಲಿರುವ ವಿಟಮಿನ್, ಖನಿಜ, ಅಯೋಡಿನ್, ಕ್ಯಾಲ್ಶಿಯಂ, ಪಾಸ್ಪರಸ್, ಕಬ್ಬಿಣದ ಅಂಶಗಳಿಂದಾಗಿ ರಕ್ತದ ಗ್ಲುಕೋಸ್​ ಮಟ್ಟವನ್ನು ನಿಯಂತ್ರಣದಲ್ಲಿಡುತ್ತದೆ. ಅಲ್ಲದೆ, ಇದು ಇನ್ಸುಲಿನ್ ರೂಪದಲ್ಲಿಯೂ ಕಾರ್ಯ ನಿರ್ವಹಿಸುತ್ತದೆ. ಹಾಗಾಗಿ ನಿಯಮಿತ ಪ್ರಮಾಣದಲ್ಲಿ ಲವಂಗವನ್ನು ತಿನ್ನುವುದರಿಂದ ಮಧುಮೇಹವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬಹುದಾಗಿದೆ. ಅದಕ್ಕಾಗಿ ಹತ್ತು ಗ್ರಾಂ ಲವಂಗಪುಡಿಯನ್ನು ಬಿಸಿನೀರಿಗೆ ಹಾಕಿ ಖಾಲೀ ಹೊಟ್ಟೆಯಲ್ಲಿ ಮುಂಜಾನೆಹೊತ್ತು ಕುಡಿಯಬಹುದು. ಇದರಿಂದ ಜೀರ್ಣಾಂಗ ವ್ಯವಸ್ಥೆಯು ಬಲಗೊಳ್ಳುವುದರೊಂದಿಗೆ ಗ್ಯಾಸ್ಟ್ರಿಕ್, ಎಸಿಡಿಟಿ ಸಮಸ್ಯೆಗಳು ದೂರವಾಗುತ್ತವೆ. ಅಕಸ್ಮಾತ್ ಲವಂಗವನ್ನು ನೇರ ತಿನ್ನುವುದಾದರೆ ಅದನ್ನು ಚೆನ್ನಾಗಿ ಅಗಿದು ರಸವನ್ನು ನುಂಗಬೇಕು. ದಿನಕ್ಕೆ ಎರಡು ಬಾರಿ ಮಾಡುವುದರಿಂದ ಲಾಲಾರಸ ವೃದ್ಧಿಸಿ ಜೀರ್ಣಶಕ್ತಿಯು ಉತ್ತಮಗೊಳ್ಳುತ್ತದೆ.

ಕೊಲೆಸ್ಟ್ರಾಲ್​ನಿಂದಾಗಿ ಹೃದಯಕ್ಕೆ ತೊಂದರೆಯಾಗುವ ಸಾಧ್ಯತೆ ಹೆಚ್ಚು. ರಕ್ತದಲ್ಲಿ ಟ್ರೈಗ್ಲಿಸರೈಡ್ ಪ್ರಮಾಣ ಹೆಚ್ಚಾದಾಗ ಅದನ್ನು ನಿಯಂತ್ರಿಸಲು ಲವಂಗ ಸೇವನೆ ಪ್ರಯೋಜನಕಾರಿ. ಊಟದ ನಂತರ ಒಂದು ಲವಂಗ ತಿಂದು ಬಿಸಿನೀರು ಕುಡಿಯಬಹುದು. ಇದರಿಂದ ಸೊಂಟದಲ್ಲಿ ಶೇಖರಣೆಯಾದ ಕೊಬ್ಬು ಕಡಿಮೆಯಾಗುತ್ತದೆ. ಇನ್ನು ಹಲ್ಲುನೋವಿಗೆ ಲವಂಗದೆಣ್ಣೆ ಹಚ್ಚಬಹುದು. ಇದು ಬಾಯಿಯ ದುರ್ವಾಸನೆಯನ್ನೂ ಹೋಗಲಾಡಿಸುತ್ತದೆ. ಹಲ್ಲು ಮತ್ತು ವಸಡುಗಳನ್ನು ದೃಢವಾಗಿಡುತ್ತದೆ. ಇದಕ್ಕಾಗಿ ದಿನವೂ ನಾಲ್ಕೈದು ಲವಂಗವನ್ನು ಕುದಿಸಿದ ನೀರನ್ನು ಬಾಯಿ ಮುಕ್ಕಳಿಸಬಹುದು.

ಇದನ್ನೂ ಓದಿ : Clove water: ಲವಂಗ ನೀರನ್ನು ಪ್ರತಿದಿನ ಕುಡಿಯುವುದರಿಂದ ದೇಹಕ್ಕಾಗುವ ಪ್ರಯೋಜನಗಳೇನು ಗೊತ್ತಾ..! ಇಲ್ಲಿದೆ ಮಾಹಿತಿ

ಇದನ್ನೂ ಓದಿ
Image
ಆಗಾಗ ಅರುಂಧತಿ : ನನ್ನ ಶ್ರೀಮಂತ ತಂದೆತಾಯಿಯ ನೆರಳು ಸೋಕದಷ್ಟು ಸ್ವತಂತ್ರಳಾಬೇಕು
Image
ಆಗಾಗ ಅರುಂಧತಿ: ಕಟಕರೊಟ್ಟಿ ಬೆಳ್ಳುಳ್ಳಿ ಖಾರ ಮತ್ತು ಬ್ಲ್ಯಾಕ್​ ಟೀ ಹಂಬಲ
Image
ಆಗಾಗ ಅರುಂಧತಿ: ಮಗುವನ್ನು ಚಿವುಟುವವನು ಅವನೇ, ತೊಟ್ಟಿಲನ್ನು ತೂಗುವವನೂ ಅವನೇ
Image
ಆಗಾಗ ಅರುಂಧತಿ: ಫೋನ್​ ಸಂಭಾಷಣೆಗೆ ತನ್ನ ಹೆಂಡತಿ ಸಾಕ್ಷಿಯಾಗಿದ್ದಾಳೆ ಎಂದು ಆ ಲಂಪಟನಿಗೆ ತಿಳಿದಿಲ್ಲ!

ನೆಗಡಿ, ಕಫದಿಂದ ಬಳಲುವಾಗ ನಾಲ್ಕೈದು ಲವಂಗ, ಎರಡು ಮೂರು ಕಾಳುಮೆಣಸು, ಹತ್ತು ತುಳಸಿ ಎಲೆಯೊಂದಿಗೆ ಚೂರು ಶುಂಠಿ ಸೇರಿಸಿ ನೀರಿನಲ್ಲಿ ಕುದಿಸಬೇಕು. ನಂತರ ಶೋಧಿಸಿ ತೆಗೆದ ನೀರಿಗೆ ಜೇನು ಸೇರಿಸಿ ಕುಡಿಯಬಹುದು. ಸಂಧಿವಾತದಿಂದ ಬಳಲುವವರಿಗೂ ಇದು ಉತ್ತಮ ಪರಿಹಾರ. ಮುಷ್ಟಿಯಷ್ಟು ಲವಂಗವನ್ನು ಹುರಿದು ಬಿಸಿ ಇರುವಾಗಲೇ ಒಂದು ಹತ್ತಿಬಟ್ಟೆಯಲ್ಲಿ ಅವುಗಳನ್ನು ಕಟ್ಟಿ, ನೋವಿದ್ದಲ್ಲಿ ಶಾಖ ಕೊಟ್ಟುಕೊಳ್ಳಿ.

ಇದನ್ನೂ ಓದಿ : Clove Health Benefits: ಲವಂಗದ ಆರೋಗ್ಯಕರ ಪ್ರಯೋಜನದ ಬಗ್ಗೆ ನೀವು ತಿಳಿದರೆ ನಿತ್ಯವೂ ಇದನ್ನು ಸೇವಿಸುತ್ತಿರಾ

ಥಣ್ಣಗಾಗುತ್ತಿದ್ದಂತೆ ಮತ್ತೆ ಲವಂಗಗಳನ್ನು ಬಿಸಿ ಮಾಡಿ. ಇದನ್ನು ಸುಮಾರು ಹತ್ತು ನಿಮಿಷಗಳ ತನಕ ಪುನರಾವರ್ತನೆ ಮಾಡಿ. ಇಲ್ಲವೇ ಲವಂಗದೆಣ್ಣೆಯನ್ನೂ ನೋವಿದ್ದಲ್ಲಿ ಹಚ್ಚಿ ಮಸಾಜ್ ಮಾಡಿಕೊಳ್ಳಬಹುದು. ಹದವಾದ ಬಿಸಿನೀರಿಗೆ ಲವಂಗದೆಣ್ಣೆ ಹಾಕಿ ಸ್ನಾನ ಮಾಡಿದರೆ ಆಯಾಸ, ಮೈನೋವು ಕಡಿಮೆಯಾಗುತ್ತದೆ. ಗಂಟಲುನೋವಿಗೂ ಇದು ಉತ್ತಮ ಔಷಧಿ. ಒಂದು ಚಮಚ ಜೇನುತುಪ್ಪದಲ್ಲಿ ಒಂದು ಲವಂಗವನ್ನು ರಾತ್ರಿ ನೆನೆಹಾಕಿ ಬೆಳಗ್ಗೆ ಆ ಜೇನುತುಪ್ಪ ತಿನ್ನಬೇಕು. ಇನ್ನು