Health and Beauty : ಈ ಕಾಫಿ ಅಂದ್ರೆ ಬರೀ ಕುಡಿಯೋದಕ್ಕಷ್ಟೇ ಅಲ್ಲ

Coffee and Beauty : ತ್ವಚೆಯ ಆರೋಗ್ಯಕ್ಕೆ ಕಾಫಿಯನ್ನು ಹೇಗೆ ಬಳಸುವುದು? ಕಾಫಿ ಹೇಗೆ ತ್ವಚೆಯನ್ನು ಕಾಂತಿಯಕ್ತ, ನಯಗೊಳಿಸುತ್ತದೆ? ಅದನ್ನು ಬಳಸುವ ವಿಧಾನವೇನು? 

Health and Beauty : ಈ ಕಾಫಿ ಅಂದ್ರೆ ಬರೀ ಕುಡಿಯೋದಕ್ಕಷ್ಟೇ ಅಲ್ಲ
ಸೌಜನ್ಯ : ಅಂತರ್ಜಾಲ
Follow us
TV9 Web
| Updated By: ಶ್ರೀದೇವಿ ಕಳಸದ

Updated on:Jun 13, 2022 | 5:35 PM

Coffee and Beauty : ಬೆಳಗ್ಗೆದ್ದ ತಕ್ಷಣ ಕೈಯಲ್ಲಿ ಕಾಫಿ ಕಪ್​ ಇಲ್ಲದಿದ್ದರೆ ತಲೆಯೂ ಓಡುವುದಿಲ್ಲ ದೇಹವೂ. ಹೀಗೆ ನಮ್ಮಲ್ಲಿ ಅನೇಕರಿಗೆ ದಿನ ಆರಂಭವಾಗುವುದೇ ಕಾಫಿಯಿಂದ. ಮನಸ್ಸು ದೇಹ ಜಾಗೃತಗೊಳ್ಳಲು ಬೇಕಾದಂಥ ರಾಸಾಯನಿಕ ಅಂಶಗಳು ಅದರಲ್ಲಿ ಅಡಕಗೊಂಡಿವೆ ಎಂಬ ಸತ್ಯ ಅನೇಕ ವರ್ಷಗಳ ಹಿಂದೆಯೇ ಸಾಬೀತಾಗಿದೆ. ಆದರೆ ಇತ್ತೀಚಿನ ವರ್ಷಗಳಲ್ಲಿ ತ್ವಚೆಯನ್ನು ಆರೋಗ್ಯವಾಗಿಡುವ ಅಂಶಗಳು ಕಾಫಿಪುಡಿಯಲ್ಲೂ ಇವೆ ಎನ್ನುವುದು ಹೆಚ್ಚು ಪ್ರಚಲಿತವಾಗುತ್ತಿದೆ. ಒಂದು ಕಪ್ ಕಾಫೀ ಹೇಗೆ ನಮ್ಮ ಶಕ್ತಿಯನ್ನು ಎಷ್ಟು ಬೇಗ ಹೆಚ್ಚಿಸುತ್ತದೆಯೋ ಅಷ್ಟೇ ಪರಿಣಾಮಕಾರಿಯಾಗಿ ತ್ವಚೆಯ ಸೌಂದರ್ಯಕ್ಕೂ ಕಾರಣವಾಗುತ್ತದೆ. ಇದರಲ್ಲಿ ರೋಗನಿರೋಧಕ ಅಂಶಗಳಿವೆ ಎಂದು ಸೌಂದರ್ಯ ತಜ್ಞರು ಪ್ರಮಾಣೀಕರಿಸಿದ್ದಾರೆ. ಆದರೆ ಅದನ್ನು ಹೇಗೆ ಉಪಯೋಗಿಸಬೇಕು? ಕ್ರಮ ಹೇಗೆ? ಅಡ್ಡಪರಿಣಾಮಗಳು ಉಂಟಾಗದಂತೆ ಹೇಗೆ ಎಚ್ಚರವಹಿಸಬೇಕು? ಎನ್ನುವುದನ್ನು ಇಲ್ಲಿ ತಿಳಿದುಕೊಳ್ಳಬಹುದು.

ಕಾಫಿಪುಡಿ ಅತ್ಯುತ್ತಮ ಸ್ಕ್ರಬ್. ಹೊಸ ಜೀವಕೋಶಗಳ ಉತ್ಪತ್ತಿಗೆ ಸಹಾಯ ಮಾಡುತ್ತದೆ. ನಿರ್ಜೀವ ಜೀವಕೋಶಗಳಗಳು ನಾಶಗೊಂಡಾಗ ಸಹಜವಾಗಿಯೇ ತ್ವಚೆ ಬಿಗಿಗೊಂಡು ಹೊಳಪಿನಿಂದ ಕೂಡುತ್ತದೆ. ಕಾಫಿ ಮಾಸ್ಕ್​ ರಕ್ತದ ಪರಿಚಲನೆಯನ್ನು ಹೆಚ್ಚಿಸುತ್ತದೆ. ಹೀಗಿದ್ದಾಗ ರಕ್ತನಾಳಗಳು ಬಿಗಿಗೊಂಡು ಚರ್ಮ ಕಾಂತಿಯುತವಾಗಿ ಪ್ರಕಾಶಮಾನವಾಗಿ ಕಂಗೊಳಿಸುತ್ತದೆ. ಸುಕ್ಕು, ಮೊಡವೆಗಳು ಮಾಯವಾಗುತ್ತವೆ. ಕಣ್ಣಿನ ಸುತ್ತ ಉಂಟಾಗುವ ಡಾರ್ಕ್​ ಸರ್ಕಲ್ ಹೋಗಲಾಡಿಸುವಲ್ಲಿಯೂ ಇದು ಪ್ರಯೋಜನಕಾರಿ. ತ್ವಚೆ ಹೆಚ್ಚು ಹೊತ್ತು ತೇವವಾಗಿಡುವಲ್ಲಿ ಇದು ಸಹಾಯಕಾರಿ.

ಇದನ್ನೂ ಓದಿ : Health: ನಿಮ್ಮ ‘ಓಟ’ ಸರಿಯಾದ ದಿಕ್ಕಿನಲ್ಲಿ ಸಾಗಿದೆಯೇ? ಪರೀಕ್ಷಿಸಿಕೊಳ್ಳಿ

ಇದನ್ನೂ ಓದಿ
Image
ಆಗಾಗ ಅರುಂಧತಿ : ನನ್ನ ಶ್ರೀಮಂತ ತಂದೆತಾಯಿಯ ನೆರಳು ಸೋಕದಷ್ಟು ಸ್ವತಂತ್ರಳಾಬೇಕು
Image
ಆಗಾಗ ಅರುಂಧತಿ: ಕಟಕರೊಟ್ಟಿ ಬೆಳ್ಳುಳ್ಳಿ ಖಾರ ಮತ್ತು ಬ್ಲ್ಯಾಕ್​ ಟೀ ಹಂಬಲ
Image
ಆಗಾಗ ಅರುಂಧತಿ: ಮಗುವನ್ನು ಚಿವುಟುವವನು ಅವನೇ, ತೊಟ್ಟಿಲನ್ನು ತೂಗುವವನೂ ಅವನೇ
Image
ಆಗಾಗ ಅರುಂಧತಿ: ಫೋನ್​ ಸಂಭಾಷಣೆಗೆ ತನ್ನ ಹೆಂಡತಿ ಸಾಕ್ಷಿಯಾಗಿದ್ದಾಳೆ ಎಂದು ಆ ಲಂಪಟನಿಗೆ ತಿಳಿದಿಲ್ಲ!

ಕಾಫಿ ಫೇಸ್ ಮಾಸ್ಕ್ ಒಂದು ಬಟ್ಟಲಿನಲ್ಲಿ ಎರಡು ಚಮಚ ಕಾಫಿ ಮತ್ತು ಎರಡು ಚಮಚ ಅಲೋವೆರಾ ಜೆಲ್ ಸೇರಿಸಿ ಪೇಸ್ಟ್​ ಮಾಡಿಟ್ಟುಕೊಳ್ಳಿ. ಅದನ್ನು ಮುಖಕ್ಕೆ ಹಚ್ಚಿಕೊಂಡು 20ರಿಂದ 30 ನಿಮಿಷಗಳ ನಂತರ ತಣ್ಣೀರಲ್ಲಿ ಮುಖ ತೊಳೆಯಿರಿ.

ಕಾಫಿ ಫೇಸ್ ಸ್ಕ್ರಬ್ ಒಂದು ಚಮಚ ಆಲಿವ್ ಎಣ್ಣೆ, ಎರಡು ಚಮಚ ಕಾಫಿಪುಡಿ ಮಿಶ್ರಣ ಮಾಡಿ. ತಯಾರಾದ ಸ್ಕ್ರಬ್ ಅನ್ನು ಮುಖ,  ಕುತ್ತಿಗೆಯ ಮೇಲೆ ಹಚ್ಚಿರಿ. 5 ನಿಮಿಷಗಳ ಕಾಲ ವೃತ್ತಾಕಾರದಲ್ಲಿ ಮಸಾಜ್ ಮಾಡಿ. 30 ನಿಮಿಷಗಳ ನಂತರ  ಬೆಚ್ಚಗಿನ ನೀರಿನಿಂದ ತೊಳೆಯಿರಿ.

ಇದನ್ನೂ ಓದಿ : World Blood Donor Day 2022 : ನಿಮ್ಮ ರಕ್ತದ ಗುಂಪಿನ ಮೂಲಕ ನಿಮ್ಮ ವ್ಯಕ್ತಿತ್ವ ತಿಳಿಯಿರಿ

ಡಾರ್ಕ್​ ಸರ್ಕಲ್​ ಹೋಗಲಾಡಿಸಲು ಅರ್ಧ ಚಮಚ ಕಾಫಿಪುಡಿಗೆ ಅರ್ಧ ಚಮಚ ಆಲೀವ್ ಎಣ್ಣೆ ಮಿಶ್ರಣ ಮಾಡಿ ದಪ್ಪ ಪೇಸ್ಟ್​ ಅನ್ನು ನಿಧಾನವಾಗಿ ಕಣ್ಣಕೆಳಗಿರುವ ಕಪ್ಪು ವೃತ್ತಕ್ಕೆ ಹಚ್ಚಿ. ಸುಮಾರು 10 ನಿಮಿಷಗಳ ನಂತರ ತಣ್ಣೀರಿನಿಂದ ತೊಳೆಯಿರಿ.

ಕಾಫಿ ಬಾಡಿ ಸ್ಕ್ರಬ್ ಕಾಲು ಕಪ್ ತಾಜಾ ಕಾಫಿಪುಡಿ, ಕಾಲು ಕಪ್​ ಬ್ರೌನ್ ಶುಗರ್ ಮತ್ತು ಸ್ವಲ್ಪ ನಿಂಬೆರಸ ಸೇರಿಸಿ. ಬೇಕಿದ್ದಲ್ಲಿ ನೀರನ್ನೂ ಸೇರಿಸಿ. ಈ ಪೇಸ್ಟ್​ ಅನ್ನು ದೇಹಕ್ಕೆ ಸ್ಕ್ರಬ್​ನಂತೆ ಬಳಸಲು ವೃತ್ತಾಕಾರದಲ್ಲಿ ಮೃದುವಾಗಿ ಬೆರಳುಗಳ ಮೂಲಕ ಮಸಾಜ್ ಮಾಡಿ. 5-10 ನಿಮಿಷಗಳ ನಂತರ ತೊಳೆದು, ಒರೆಸಿ, ಮಾಯಿಶ್ಚರೈಸರ್ ಹಚ್ಚಿ.

Published On - 5:31 pm, Mon, 13 June 22

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ