ಆಲೂಗಡ್ಡೆ ಇದ್ದಕಡೆ ಆರೋಗ್ಯ ಇರುವುದಿಲ್ಲ ಎನ್ನುವವರೇ ಹೆಚ್ಚು! ಆದರೆ ಆಲೂಗಡ್ಡೆ ಆರೋಗ್ಯಕ್ಕೆ ಪೂರಕವಾಗಿದೆ! ತಿಳಿದುಕೊಳ್ಳಿ

ಆಲೂಗಡ್ಡೆಯಲ್ಲಿ Choline ಎಂಬ ವಿಶಿಷ್ಟ ರಾಸಾಯನಿಕ ಇದ್ದು ಇದು ದೇಹದ ಮಾಂಸಖಂಡಗಳು ಸದೃಢವಾಗಿ ಬೆಳೆಯಲು ಸಹಾಯ ಮಾಡುತ್ತದೆ. ಅಲ್ಲದೆ ಹಲವು ಮಾನಸಿಕ ತೊಂದರೆ, mood fluctuations ಹೋಗಲಾಡಿಸಿ ಜ್ಞಾಪಕ ಶಕ್ತಿ ಹೆಚ್ಚಿಸುತ್ತದೆ. ಸಿಪ್ಪೆ ಸಮೇತ ಆಲೂಗಡ್ಡೆ ಬೇಯಿಸಿ, ನಂತರ ಸಿಪ್ಪೆ ತೆಗೆದು ಮಕ್ಕಳಿಗೆ ತಿನ್ನಿಸುವ ಪದ್ದತಿ ಇದೆ. ಇದರಿಂದ ಮಕ್ಕಳು ಸದೃಢವಾಗಿ ಬೆಳೆಯುತ್ತಾರೆ.

ಆಲೂಗಡ್ಡೆ ಇದ್ದಕಡೆ ಆರೋಗ್ಯ ಇರುವುದಿಲ್ಲ ಎನ್ನುವವರೇ ಹೆಚ್ಚು! ಆದರೆ ಆಲೂಗಡ್ಡೆ ಆರೋಗ್ಯಕ್ಕೆ ಪೂರಕವಾಗಿದೆ! ತಿಳಿದುಕೊಳ್ಳಿ
ಆಲೂಗಡ್ಡೆ ಇದ್ದಕಡೆ ಆರೋಗ್ಯ ಇರುವುದಿಲ್ಲ ಎನ್ನುವವರೇ ಹೆಚ್ಚು! ಆದರೆ ಆಲೂಗಡ್ಡೆ ಆರೋಗ್ಯಕ್ಕೆ ಪೂರಕವಾಗಿದೆ! ತಿಳಿದುಕೊಳ್ಳಿ
Follow us
TV9 Web
| Updated By: ಸಾಧು ಶ್ರೀನಾಥ್​

Updated on: Jun 28, 2022 | 6:06 AM

ನಮ್ಮ ದೇಶದಲ್ಲಿ ಗೋಧಿ ಮತ್ತು ಅಕ್ಕಿಯ ನಂತರ ಅತೀ ಹೆಚ್ಚಾಗಿ ಉಪಯೋಗಿಸಲ್ಪಡುತ್ತಿರುವ ಆಹಾರ ಪದಾರ್ಥವೆಂದರೆ ಆಲೂಗಡ್ಡೆ ಅಥವ ಬಟಾಟೆ. ಜೊತೆಗೆ ನಮ್ಮ ಆರೋಗ್ಯಕ್ಕೆ ಇದರ ಸೇವನೆ ಬಗ್ಗೆ ಇರುವ ಭಿನ್ನ ಅಭಿಪ್ರಾಯಗಳು ಸಹಾ ಹೆಚ್ಚು. ಆಲೂಗಡ್ಡೆ ವಾಯು ಪದಾರ್ಥ ಎಂಬುದರಿಂದ ಹಿಡಿದು ಬೊಜ್ಜು ಹೆಚ್ಚಾಗುತ್ತೆ, ಸಕ್ಕರೆ ಖಾಯಿಲೆಯವರು ತಿನ್ನಬಾರದು ಇತ್ಯಾದಿ.. ಇತ್ಯಾದಿ.. ಹಾಗಾದರೆ ನಿಜ ಯಾವುದು..? ವಿವರವಾಗಿ ತಿಳಿದುಕೊಳ್ಳೋಣ ಬನ್ನೀ.

ಆಲೂಗಡ್ಡೆ ನೆಲದಡಿ ಬಿಡುವ ಗಡ್ಡೆ. ಸಸ್ಯ ಶಾಸ್ತ್ರೀಯ ಹೆಸರು Solanum tuberosum ಹಾಗೂ ಕುಟುಂಬ Solanaceae. ಮೂಲ ಪೆರು ದೇಶದ ಕಾಡುಗಳಲ್ಲಿ ಸ್ವಾಭಾವಿಕವಾಗಿ ಬೆಳೆಯುತ್ತಿದ್ದ, ಸುಮಾರು 10,000 ವರ್ಷಗಳ ಇತಿಹಾಸವಿರುವ, ಇದು ಅಮೆರಿಕ ದೇಶಕ್ಕೆ ಬಂದು ನಂತರ ಇತರೆಡೆ ಪ್ರಚಾರಗೊಂಡಿತು. ಸದ್ಯ ವಿಶ್ವದಾದ್ಯಂತ 5,100 ಕ್ಕೂ ಹೆಚ್ಚು ಆಲೂಗಡ್ಡೆ ಪ್ರಭೇದಗಳಿವೆ.

ಆಲೂಗಡ್ಡೆಯಲ್ಲಿ ಅತೀ ಹೆಚ್ಚು ಪಿಷ್ಟ ( Carbohydrates ) ಇದೆ. ಹಾಗಾಗಿ ಆರೋಗ್ಯಕ್ಕೆ ಹಾನಿಕರ, ಸಕ್ಕರೆ ಖಾಯಿಲೆ ಇರುವವರು ತಿನ್ನಬಾರದು ಎಂಬುದು ಹೆಚ್ಚಿನ ಅಭಿಪ್ರಾಯ. ಆದರೆ ನಿಜವಾಗಿಯೂ ಇದರಲ್ಲಿರುವ Carbohydrates ಕೇವಲ 17 gms (ಅಕ್ಕಿಯಲ್ಲಿ 28 – 35 gms ಹಾಗೂ ಗೋದಿಯಲ್ಲಿ 18 gms ) ಈಗ ಯಾವುದು ಉತ್ತಮ ನೀವೇ ನಿರ್ದರಿಸಿ. ಆಲೂಗಡ್ಡೆಯಲ್ಲಿರುವ Cholesterol – 0% ಎಂದರೆ ನಿಮಗೆ ಆಶ್ಚರ್ಯವಾಗಬಹುದು. ಅಲ್ಲದೆ ರಕ್ತದೊತ್ತಡ ಹೆಚ್ಚಿಸುವ Sodium ಸಹಾ ಕೇವಲ 0%.

75 mg ನಷ್ಟು ಇರುವ Phosphorus ಹಾಗೂ ಸುಣ್ಣದ ಅಂಶ (Calcium) ನಮ್ಮ ದೇಹದ ಮೂಳೆಗಳು ಸದೃಢವಾಗಲು ಸಹಕಾರಿ. 544 mg ನಷ್ಟು ಇರುವ Potassium ನಮ್ಮ ರಕ್ತದಲ್ಲಿರುವ ಹೆಚ್ಚಿನ ಉಪ್ಪಿನಂಶವನ್ನು ಹೀರಿಕೊಂಡು ಅಧಿಕ ರಕ್ತದೊತ್ತಡ – BP – ತಗ್ಗಿಸಲು ಸಹಾಯಮಾಡುತ್ತದೆ.

ಆಲೂಗಡ್ಡೆಯಲ್ಲಿರುವ ಅಧಿಕ ನಾರಿನಂಶ (fibre) ದೇಹದಲ್ಲಿರುವ Cholesterol ಅನ್ನು ನಿಯಂತ್ರಣದಲ್ಲಿರುಸುತ್ತದೆ, ಮಲಬದ್ಧತೆ ನಿವಾರಿಸಿ ಜೀರ್ಣ ಶಕ್ತಿಯನ್ನು ಹೆಚ್ಚಿಸುತ್ತದೆ. ಈ ಮೊದಲೇ 0 % ಇರುವ cholesterol ಜೊತೆಗೆ Potassium, ವಿಟಮಿನ್ C, ಹಾಗೂ ವಿಟಮಿನ್ B -6 ಎಲ್ಲಾ ಸೇರಿ ನಮ್ಮ ಹೃದಯದ ಆರೋಗ್ಯ ಕಾಪಾಡಿಕೊಳ್ಳಲು ಸಹಾಯಕ.

Choline ಎಂಬ ವಿಶಿಷ್ಟ ರಾಸಾಯನಿಕ 57 mg ನಷ್ಟು ಇದ್ದು ಇದು ದೇಹದ ಮಾಂಸಖಂಡಗಳು ಸದೃಢವಾಗಿ ಬೆಳೆಯಲು ಸಹಾಯ ಮಾಡುತ್ತದೆ, ಅಲ್ಲದೆ ಹಲವು ಮಾನಸಿಕ ತೊಂದರೆ, mood fluctuations ಹೋಗಲಾಡಿಸಿ ಜ್ಞಾಪಕ ಶಕ್ತಿ ಹೆಚ್ಚಿಸುತ್ತದೆ. ಸಿಪ್ಪೆ ಸಮೇತ ಆಲೂಗಡ್ಡೆ ಬೇಯಿಸಿ, ನಂತರ ಸಿಪ್ಪೆ ತೆಗೆದು ಮಕ್ಕಳಿಗೆ ತಿನ್ನಿಸುವ ಪದ್ದತಿ ಇದೆ. ಇದರಿಂದ ಮಕ್ಕಳು ಸದೃಢವಾಗಿ ಬೆಳೆಯುತ್ತಾರೆ.

38 mg ಯಷ್ಟು ಇರುವ Folate ಅಂಶ ಕ್ಯಾನ್ಸರ್ ನಿವಾರಕವಾಗಿದ್ದು. ಜೀವ ಕಣಗಳು (Cells) ಕ್ಯಾನ್ಸರ್ ಕಣಗಳಾಗಿ ಬದಲಾಗದಂತೆ ತಡೆಯುತ್ತದೆ.

ಆಲೂಗಡ್ಡೆ ನಮ್ಮ ಚರ್ಮದ ಬಹುತೇಕ ತೊಂದರೆಗಳನ್ನು ನಿವಾರಿಸುತ್ತದೆ. ಇದರ ರಸ ತೆಗೆದು ನಿಯಮಿತವಾಗಿ ಹಚ್ಚಿಕೊಳ್ಳುತ್ತಿದ್ದರೆ ಚರ್ಮ ಸುಕ್ಕು ರಹಿತವಾಗುವುದು ಹಾಗು ಕಾಂತಿಯುತವಾಗುವುದು. ಹಳೆಯ ಕಲೆಗಳು, Sun burn ಕಲೆಗಳು, Pigmentation ನಿವಾರಿಸುವುದು. ಆಲೂಗಡ್ಡೆಯ fresh ಆದ ಸಿಪ್ಪೆಯನ್ನು ತೆಗೆದು ಹಚ್ಚಿದರೆ ಸುಟ್ಟ ಗಾಯ ಬೇಗ ವಾಸಿಯಾಗುತ್ತೆ ಮತ್ತು ಕಲೆ ಇಲ್ಲದ ಹೊಸ ಚರ್ಮ ಬರುತ್ತೆ.

ಅತ್ಯಂತ ಪ್ರಮುಖವಾಗಿ ಆಲೂಗೆಡ್ಡೆಯಲ್ಲಿ Alpha Lipoic acid ಎಂಬ ಮತ್ತೊಂದು ವಿಶಿಷ್ಟವಾದ ರಾಸಾಯನಿಕವಿದ್ದು ಇದು ರಕ್ತದಲ್ಲಿರುವ ಹೆಚ್ಚಿನ ಸಕ್ಕರೆ (Glucose ಅಂಶವನ್ನು ಹಾಗೆಯೇ ಬಿಡದೆ, ಅಂದರೆ blood sugar ಜಾಸ್ತಿಯಾಗಲು ಬಿಡದೆ ) ಶಕ್ತಿಯನ್ನಾಗಿ ಪರಿವರ್ತಿಸುತ್ತದೆ. ಹಾಗಾಗಿ ಸಕ್ಕರೆ ಖಾಯಿಲೆ (Diabetes) ಇರುವವರು ಆಲೂಗಡ್ಡೆ ಸೇವಿಸಲು ಯಾವುದೇ ತೊಂದರೆಯಿಲ್ಲ.

ಮತ್ತೊಂದು ತಪ್ಪದೆ ಎಲ್ಲರೂ ತಿಳಿದುಕೊಳ್ಳಬೇಕಾದ ಮುಖ್ಯ ವಿಷಯವೆಂದರೆ ಆಲೂಗಡ್ಡೆಯಲ್ಲಿ ಒಟ್ಟಾರೆ 3 ಪದರಗಳಿದ್ದು ಅವು, ಹೊರ ಸಿಪ್ಪೆ, ಒಳ ಸಿಪ್ಪೆ ಮತ್ತು ಒಳಗಿನ ನೀರಿನಂಶ ಹೆಚ್ಚಿರುವ ಬರೀ ಪಿಷ್ಟವಿರುವ (Corbohydrates) ಭಾಗ. ( ಒಮ್ಮೆ ಆಲೂಗಡ್ಡೆಯನ್ನು ಬೇಯಿಸಿ, ಅದರ ಮಧ್ಯ ಭಾಗ ಕತ್ತರಿಸಿ ಗಮನಿಸಿ, ಗೊತ್ತಾಗುತ್ತದೆ)

ಹೊರ ಸಿಪ್ಪೆಯನ್ನು ತೆಗೆದು ಹಾಕಿಬಿಟ್ಟರೆ ಆಲೂಗಡ್ಡೆಯ ಪ್ರಮುಖ ಅಂಶಗಳನ್ನು ನಾಶ ಮಾಡಿ ಕೇವಲ Carbohydrates ಸೇವಿಸಿದಂತೆ. ಜೊತೆಗೆ ಹೆಚ್ಚಿನ ತಾಪಮಾನದಲ್ಲಿ ಅಂದರೆ ಎಣ್ಣೆಯಲ್ಲಿ ಆಲೂಗೆಡ್ಡೆಯನ್ನು ಕರಿದರೆ ( deep fry ಮಾಡಿದರೆ ) ಅದರಿಂದ ಆಲೂಗಡ್ಡೆಯಲ್ಲಿರುವ ಎಲ್ಲಾ ಪೌಷ್ಟಿಕಗಳೂ ನಾಶವಾಗುವುದು. ಆದ್ದರಿಂದ ಆದಷ್ಟು ಆಲೂಗೆಡ್ಡೆಯನ್ನು ಚೆನ್ನಾಗಿ ತೊಳೆದು, ಸಿಪ್ಪೆ ಸಮೇತ ಬೇಯಿಸಿ ನಂತರ ಬೇಕಾದರೆ ಸಿಪ್ಪೆ ತೆಗೆದು ಸೇವಿಸಬಹುದು.ಇನ್ನುಮುಂದೆ ಧೈರ್ಯವಾಗಿ ಆಲೂಗಡ್ಡೆ ತಿನ್ನಿ. ಆಲೂಗಡ್ಡೆ ಉಪಯೋಗಿಸುವುದರಿಂದ ದಪ್ಪ ಆಗಲ್ಲ-ಶುಗರ್ ಬರಲ್ಲ! (ಚಿತ್ರ, ಲೇಖನ : ಮಂಜುನಾಥ್ ಪ್ರಸಾದ್)

ಖರ್ಗೆ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ: ಕಲಬುರಗಿಯಲ್ಲಿ ಜನಸಾಗರ
ಖರ್ಗೆ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ: ಕಲಬುರಗಿಯಲ್ಲಿ ಜನಸಾಗರ
ವಕ್ಫ್ ವಿರುದ್ಧ ಹೋರಾಟದ ರೂವಾರಿ ಯತ್ನಾಳ್ ಹೆಸರು ಪ್ರಸ್ತಾಪಿಸದ ವಿಜಯೇಂದ್ರ
ವಕ್ಫ್ ವಿರುದ್ಧ ಹೋರಾಟದ ರೂವಾರಿ ಯತ್ನಾಳ್ ಹೆಸರು ಪ್ರಸ್ತಾಪಿಸದ ವಿಜಯೇಂದ್ರ
ಹರಿದು ಚಿಂದಿಯಾಗಿರುವ ಈ ಶರ್ಟ್​​​ ಬೆಲೆ 2.14 ಲಕ್ಷ ರೂ.
ಹರಿದು ಚಿಂದಿಯಾಗಿರುವ ಈ ಶರ್ಟ್​​​ ಬೆಲೆ 2.14 ಲಕ್ಷ ರೂ.
ಪ್ರತಿಭಟನೆ ಮಾಡಿ ನ್ಯಾಯ ಕೇಳುವವರಿಗೆ ಎಳನೀರು, ಕಾಫಿಯೇ? ಕುಮಾರಸ್ವಾಮಿ
ಪ್ರತಿಭಟನೆ ಮಾಡಿ ನ್ಯಾಯ ಕೇಳುವವರಿಗೆ ಎಳನೀರು, ಕಾಫಿಯೇ? ಕುಮಾರಸ್ವಾಮಿ
ಸಚಿನ್ ಕುಟುಂಬಕ್ಕೆ ರಾಜ್ಯ ಸರ್ಕಾರದ ಮೇಲೆ ನಂಬಿಕೆ ಇಲ್ಲ: ಆರ್ ಅಶೋಕ
ಸಚಿನ್ ಕುಟುಂಬಕ್ಕೆ ರಾಜ್ಯ ಸರ್ಕಾರದ ಮೇಲೆ ನಂಬಿಕೆ ಇಲ್ಲ: ಆರ್ ಅಶೋಕ
ಆದರೆ ಕಾಂಗ್ರೆಸ್ ಕಾರ್ಯಕರ್ತರ ಪಾನೀಯಗಳು ಯಾರಿಗಾಗಿ? ಕನ್ನಡಿಗರ ಪ್ರಶ್ನೆ
ಆದರೆ ಕಾಂಗ್ರೆಸ್ ಕಾರ್ಯಕರ್ತರ ಪಾನೀಯಗಳು ಯಾರಿಗಾಗಿ? ಕನ್ನಡಿಗರ ಪ್ರಶ್ನೆ
ಕಲಬುರಗಿಯ ಮುಖ್ಯರಸ್ತೆಯಲ್ಲಿ ಸಂಚಾರ ನಿಷೇಧಿಸಿ ಪೊಲೀಸ್ ಕಮೀಶನರ್ ಆದೇಶ
ಕಲಬುರಗಿಯ ಮುಖ್ಯರಸ್ತೆಯಲ್ಲಿ ಸಂಚಾರ ನಿಷೇಧಿಸಿ ಪೊಲೀಸ್ ಕಮೀಶನರ್ ಆದೇಶ
ಮೊದಲ ಓವರ್​ನಲ್ಲೇ ಸ್ಟಾರ್ಕ್ ಬೆಂಡೆತ್ತಿ ದಾಖಲೆ ಬರೆದ ಯಶಸ್ವಿ ಜೈಸ್ವಾಲ್
ಮೊದಲ ಓವರ್​ನಲ್ಲೇ ಸ್ಟಾರ್ಕ್ ಬೆಂಡೆತ್ತಿ ದಾಖಲೆ ಬರೆದ ಯಶಸ್ವಿ ಜೈಸ್ವಾಲ್
ಹತ್ಯೆ ಹಿಂದಿನ ಉದ್ದೇಶ ಇನ್ನೂ ಗೊತ್ತಾಗಿಲ್ಲವೆಂದ ಚಿಕ್ಕಬಳ್ಳಾಪುರ ಎಸ್​ಪಿ
ಹತ್ಯೆ ಹಿಂದಿನ ಉದ್ದೇಶ ಇನ್ನೂ ಗೊತ್ತಾಗಿಲ್ಲವೆಂದ ಚಿಕ್ಕಬಳ್ಳಾಪುರ ಎಸ್​ಪಿ
ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ
ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ